Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ನೆಲದ ಕವಿ : ಜಂಬಣ್ಣ ಅಮರಚಿಂತ

ನೆಲದ ಕವಿ : ಜಂಬಣ್ಣ ಅಮರಚಿಂತ

ಕುಮಾರ್ ಬುರಡಿಕಟ್ಟಿಕುಮಾರ್ ಬುರಡಿಕಟ್ಟಿ18 Feb 2017 11:15 PM IST
share
ನೆಲದ ಕವಿ : ಜಂಬಣ್ಣ ಅಮರಚಿಂತ

ಅಮರಚಿಂತರು ಕೇವಲ ಬರಹಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡ ಪ್ರತಿಭೆಯಲ್ಲ. ಶೋಷಣೆಯ ವಿರುದ್ಧ ಎಲ್ಲೇ ದನಿಯೆದ್ದರೂ ಅಲ್ಲಿ ಅವರು ಹಾಜರಾಗುತ್ತಿದ್ದರು. ದಲಿತರ ಮೇಲಿನ, ದಮನಿತರ ಮೇಲಿನ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಡಿದರು. ಊಳಿಗಮಾನ್ಯ ಭೂಮಾಲಕರ ಶೋಷಣೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಅವರದ್ದು ನಿರಂತರ ಸಮರವಾಗಿತು

ನೆಲದ ಕವಿ ಜಂಬಣ್ಣ ಅಮರಚಿಂತ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಸುಮಾರು 8 ವರ್ಷಗಳ ಹಿಂದೆ ದಾಳಿಮಾಡಿದ ಪಾರ್ಶ್ವವಾಯು ಅವರನ್ನು ಬಹುತೇಕ ಗೃಹಬಂಧನದಲ್ಲಿಟ್ಟಿತ್ತು. ಆಗಾಗ ಹೈದರಾಬಾದ್‌ನ ಇದೇ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತಿದ್ದರು. ಇತ್ತೀಚೆಗಂತೂ ಅವರು ಗಾಲಿಜುರ್ಚಿಯಲ್ಲೇ ಬದುಕು ಸಾಗಿಸುತ್ತಿದ್ದರು. ಮೊನ್ನೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಬೆಳಗ್ಗೆ ಇಹಲೋಕವನ್ನು ತ್ಯಜಿಸಿದರು.

1945ರ ಎಪ್ರಿಲ್ 7ರಂದು ಜನಿಸಿದ ಅಮರಚಿಂತರು ಮೂವತ್ತೈದು ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು. ಮೊದಲು ಪ್ರಥಮ ದರ್ಜೆ ಗುಮಾಸ್ತರಾಗಿ ಇಲಾಖೆ ಸೇರಿದ ಅವರು ನಂತರದ ದಿನಗಳಲ್ಲಿ ಭಡ್ತಿ ಪಡೆದು ಆರೋಗ್ಯ ನಿರೀಕ್ಷಕರಾಗಿ ಕೆಲಸ ಮಾಡಿದರು. ಮೂಲತಃ ಆಂಧ್ರಪ್ರದೇಶದವರಾದ ಅಮರಚಿಂತರು ಸುಮಾರು 130 ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ರಾಯಚೂರಿಗೆ ಬಂದು ರಸ್ತೆ ಬದಿಯಲ್ಲಿ ಸಣ್ಣದೊಂದು ಟೆಂಟ್ ಹೊಟೇಲ್ ಇಟ್ಟು ಬದುಕು ಕಟ್ಟಿಕೊಂಡವರು. ಅಮರಚಿಂತರು ಅಪ್ಪ ತಮ್ಮ ಮಡಿವಾಳ ಸಮುದಾಯದ ಪಾರಂಪರಿಕ ವೃತ್ತಿಯಾದ ಬಟ್ಟೆತೊಳೆಯುವ, ಇಸ್ತ್ರಿ ಮಾಡುವ ಕಾಯಕವನ್ನು ಮುಂದುವರಿಸಿದರು.

ಬಯಲಾಟದ ಕಲಾವಿದರೂ ಆಗಿದ್ದ ಅಮರಚಿಂತರ ಅಜ್ಜ ಲಕ್ಷ್ಮಯ್ಯನವರು ಅಮರಚಿಂತರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ. ಬಾಲ್ಯದ ದಿನಗಳಲ್ಲಿ ಸಾಹಿತ್ಯದ ಕಡೆ ಆಕರ್ಷಣೆಗೊಳ್ಳಲು ತಾತನೇ ಕಾರಣ ಎಂದು ಹಲವು ಬಾರಿ ಅಮರಚಿಂತರು ಹೇಳಿದ್ದುಂಟು. ನಿಧಾನವಾಗಿ ಕವಿತೆ ಬರೆಯಲು ಪ್ರಾರಂಭಿಸಿದ ಅವರು ಮುಂದಿನ ದಿನಗಳಲ್ಲಿ ತಳಸಮುದಾಯದ ನೋವನ್ನು ಅಭಿವ್ಯಕ್ತಿಸುವ ಕನ್ನಡದ ಬಹುಮುಖ್ಯ ಸಂವೇದನಾಶೀಲ ಬರಹಗಾರರಾಗಿ ಹೊರಹೊಮ್ಮಿದರು. ತುಳಿತಕ್ಕೊಳಗಾದ ಸಮುದಾಯಗಳ ಬದುಕೇ ಅವರ ಸಾಹಿತ್ಯದ ಮೂಲದ್ರವ್ಯವಾಗಿತ್ತು. ಅವರ ಬರಹಗಳು ಉಳ್ಳವರ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಕೆಂಡಕಾರುತ್ತಿದ್ದವು.

1970ರ ದಶಕದ ಕೊನೆಯ ಹೊತ್ತಿಗೆ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ನಡೆಯುತ್ತಿದ್ದಾಗ ಅಮರಚಿಂತರು ಸಹಜವಾಗಿ ತಳಸಮುದಾಯಗಳ ನೋವು ನಲಿವುಗಳ ಬಗ್ಗೆ ಬರೆಯುತ್ತಿದ್ದ ಎಡಪಂಥೀಯ ವಿಚಾರಧಾರೆಯ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಈ ಧ್ರುವೀಕರಣ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿತು.

ಸಮ್ಮೇಳನದಲ್ಲಿ ಚೆನ್ನಣ್ಣ ವಾಲೀಕರಾರರು ಸೂಚಿಸಿದ ದಲಿತ ಸಾಹಿತ್ಯದ ಚರ್ಚೆಗೆ ಅವಕಾಶ ಕೊಡದಿದ್ದರೂ ‘‘ಒಂದು ಶತಮಾನದ ಕಣ್ಣು ತೆರೆಸಿದ ಕವಿ’’ ಎಂ. ಗೋಪಾಲಕೃಷ್ಣ ಅಡಿಗರು ಸಮ್ಮೇಳನದ ಸರ್ವಾಧ್ಯಕ್ಷರಾಗಲು ಒಪ್ಪಿಕೊಂಡಾಗ ಬರಗೂರು ರಾಮಚಂದ್ರಪ್ಪ, ಚೆನ್ನಣ್ಣ ವಾಲೀಕಾರ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಚಂದ್ರಶೇಖರ ಪಾಟೀಲ ಬಂಡಾಯವೆದ್ದಾಗ ಅಮರಚಿಂತರು ಸಹಜವಾಗಿ ಈ ಬಂಡಾಯ ಗುಂಪಿನಲ್ಲಿದ್ದರು.

ಕೊನೆಗೆ ಅತ್ತ ಧರ್ಮಸ್ಥಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಿದರೆ ಅದೇ ದಿನ ಇತ್ತ ಬೆಂಗಳೂರಿನಲ್ಲಿ ಈ ಬಂಡಾಯ ಬರಹಗಾರರು ಮೊದಲ ಬಂಡಾಯ ಸಾಹಿತ್ಯ ಸಂಘಟನೆಯನ್ನು ಸಂಘಟಿಸಿದರು. ‘‘ಖಡ್ಗವಾಗಲಿ ಕಾವ್ಯ: ಜನರ ನೋವಿಗೆ ಮಿಡಿವ ಪ್ರಾಣಮಿತ್ರ’’ ಎಂಬ ಘೋಷಣೆಯೊಂದಿಗೆ ಪ್ರಾರಂಭವಾದ ಈ ಬಂಡಾಯ ಚಳವಳಿಯನ್ನು ಹೈದರಾಬಾದ್ ಕರ್ನಾಟಕದಲ್ಲಿ ಮುನ್ನಡೆಸಿ ಗಟ್ಟಿಗೊಳಿಸಿದ ಚೆನ್ನಣ್ಣ ವಾಲೀಕಾರ, ಬಸವರಾಜ ಸಬರದ, ಬೋಲುಬಂಡೆಪ್ಪ, ಚೆನ್ನಬಸಪ್ಪ ಬೆಟ್ಟದೂರು, ಅಲ್ಲಮಪ್ರಭು ಬೆಟ್ಟದೂರು, ವೀರನಗೌಡ ನೀರಮಾನ್ವಿ, ರಾಜಶೇಖರ ನೀರಮಾನ್ವಿ, ಚಂದ್ರಕಾಂತ ಕುಸನೂರು ಮಂತಾದ ಬರಹಗಾರರ ತಂಡದಲ್ಲಿ ಅಮರಚಿಂತರೂ ಮುಂಚೂಣಿಯಲ್ಲಿದ್ದರು.

ಅಮರಚಿಂತರು ಕೇವಲ ಬರಹಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡ ಪ್ರತಿಭೆಯಲ್ಲ. ಶೋಷಣೆಯ ವಿರುದ್ಧ ಎಲ್ಲೇ ದನಿಯೆದ್ದರೂ ಅಲ್ಲಿ ಅವರು ಹಾಜರಾಗುತ್ತಿದ್ದರು. ದಲಿತರ ಮೇಲಿನ, ದಮನಿತರ ಮೇಲಿನ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಡಿದರು. ಊಳಿಗಮಾನ್ಯ ಭೂಮಾಲಕರ ಶೋಷಣೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಅವರದ್ದು ನಿರಂತರ ಸಮರವಾಗಿತ್ತು.

ಅಮರಚಿಂತರು ತಮ್ಮ ಬರವಣಿಗೆಯಲ್ಲಿ ದಮನಿತರ ದನಿಯಾದ ಸಾರ ಮತ್ತು ಓದುಗಸ್ನೇಹಿಯಾದ ರೂಪಗಳಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಕನ್ನಡದಲ್ಲಿ ಘಝಲ್ ಬರವಣಿಗೆಗಳಿಗೆ ಹೊಸ ಮಜಲನ್ನು ಸೃಷ್ಟಿಸಿದ ಕೆಲವೇ ಬರಹಗಾರರಲ್ಲಿ ಅಮರಚಿಂತರು ಪ್ರಮುಖರು. ‘‘ಮುಂಜಾವಿನ ಕೊರಳು’’, ‘‘ಅಧೋಜಗತ್ತಿನ ಅಕಾವ್ಯ’’, ‘‘ಮಣ್ಣಲ್ಲಿ ಬಿರಿದ ಅಕ್ಷರ’’, ‘‘ಅಮರಚಿಂತ ಕಾವ್ಯ’’, ‘‘ಪದಗಳು ನಡೆದಾಡುತ್ತಿವೆ ಪಾದಗಳಾಗಿ’’ ಮುಳ್ಳಿನ ಬಾಯಲ್ಲಿ ಹೂ ನಾಲಿಗೆ’’, ಬೋಧಿಯ ವೃಕ್ಷದಲ್ಲಿ ಬಾಧೆಯ ಪರಿಮಳ’’, ಹರಿವ ನದಿಗೆ ಮೈಯೆಲ್ಲ ಕಾಲು’’ ಮುಂತಾದವುಗಳು ಅವರ ಕವನ ಸಂಕಲನಗಳು.

ಅವರು ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ತೊಂಬತ್ತರ ದಶಕದ ಕೊನೆಯಲ್ಲಿ ಬರೆದ ‘‘ಕುರುಮಯ್ಯ ಮತ್ತು ಅಂಕುಶದೊಡ್ಡಿ’’ ಕಾದಂಬರಿಯು ಕೊರವ ಸಮುದಾಯದ ದಾರುಣ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತದೆ. ಕಷ್ಟಬಂದಾಗ ಸ್ವಂತ ಹೆಂಡತಿಯನ್ನೇ ಮಾರುವ ಅನಿಷ್ಟ ಪದ್ಧತಿಯ ಮೇಲೆ ಅಮರಚಿಂತರು ಈ ಕಾದಂಬರಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಅವರ ‘‘ಬೂಟುಗಾಲಿನ ಸದ್ದು’’ ಕಾದಂಬರಿಯು ದೇಶವು ಸ್ವಾತಂತ್ರ್ಯ ಪಡೆಯುತ್ತಿದ್ದ ಸಂದರ್ಭದಲ್ಲಿ ಹೈದರಾಬಾದ್‌ನ ನಿಜಾಮನ ರಜಾಕಾರರು (ನಿಜಾಮನ ಖಾಸಗಿ ಮಿಲಿಷಿಯ) ಹೈದರಾಬಾದ್ ಕರ್ನಾಟಕದ ಜನರ ಮೇಲೆ ಹರಿಬಿಟ್ಟಿದ್ದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.

ಅಮರಚಿಂತರು ತಮ್ಮ ಹರಿತವಾದ ಭಾಷಾಪ್ರಯೋಗ ಮತ್ತು ಅಭಿವ್ಯಕ್ತಿಗಳಿಗೆ ಹೆಸರುವಾಸಿಯಾದವರು. ತಮ್ಮನ್ನು ಯಾವಾಗಲೂ ‘‘ಬೇಟೆಯೊಂದಿಗೆ ಗುರುತಿಸಿಕೊಂಡಿದ್ದರೇ ಹೊರತು ಬೇಟೆಗಾರನೊಂದಿಗೆ ಅಲ್ಲ’’. ‘‘ರಕ್ತಸಿಕ್ತ ಖಡ್ಗ ನಿಮ್ಮ ಒರೆಯಲ್ಲಿ, ಹಂತಕರು ಯಾರೆಂದು ಮತ್ತೆ ಕೇಳುವಿರಿ; ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ, ಬೆಳೆಯಾಕ ಬರಲಿಲ್ಲವೆಂದು ಮತ್ತೆ ಕೇಳುವಿರಿ’’ ಎಂದು ನೇರವಾಗಿ ಪ್ರಶ್ನಿಸುವ ಪ್ರವೃತ್ತಿಯನ್ನು ಅಮರಚಿಂತರು ಮೈಗೂಡಿಸಿಕೊಂಡಿದ್ದರು.

‘‘ಹುಟ್ಟು ಕುರುಡರ ಓಣಿಯಲ್ಲಿ ಚಾಳೀಸು ಮಾರಿದವನು’’ ಎಂದು ಗಾಂಧಿಯನ್ನು ಕರೆದಿದ್ದರು. ‘‘ರೊಟ್ಟಿ ಭೂಮಿಗಿಂತ ಮಿಗಿಲು, ಅದರ ಎತ್ತರ ಎವರೆಸ್ಟಿಗೂ ದಿಗಿಲು’’ ಎಂದು ಹಸಿವು ಮತ್ತು ಅನ್ನದ ಹಿರಿಮೆಯನ್ನು ಎತ್ತಿಹಿಡಿದಿದ್ದರು. ‘‘ಬೆಂಕಿಗೆ ಸುಡದ ಮನೆಗಳು ಹಿಮದಲ್ಲಿ ಸುಟ್ಟವು; ಎಣ್ಣೆಯಲ್ಲಿ ಸುಡದ ಮನೆಗಳು ರಕ್ತದಲ್ಲಿ ಸುಟ್ಟವು’’ ಎಂದು ಅವರು ಬಡವರ ಮೇಲಿನ ಹಿಂಸೆಯನ್ನು ಕುರಿತು ಹೇಳಿದ್ದರು.

1994ರಲ್ಲಿ ತಾರಾಸು ಪ್ರಶಸ್ತಿ ಮತ್ತು ಆರ್ಯಭಟ ಪ್ರಶಸ್ತಿಗಳು, 1997ರಲ್ಲಿ ಕಾಯಕ ಸಮ್ಮಾನ್ ಪ್ರಶಸ್ತಿ, 2002ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2012ರಲ್ಲಿ ಕನ್ನಡ ನಾಡು ಸಾಹಿತ್ಯ ಪ್ರಶಸ್ತಿಗಳಿಂದ ಸನ್ಮಾನಿತರಾದ ಅಮರಚಿಂತರು 1997ರಲ್ಲಿ ನಡೆದ 4ನೆ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. 2006ರ ಡಿಸೆಂಬರ್ 2, 3 ಮತ್ತು 4ರಂದು ರಾಯಚೂರಿನಲ್ಲಿ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾದಾಗ ಅಮರಚಿಂತರೇ ಸರ್ವಾಧ್ಯಕ್ಷರಾಗಬೇಕೆಂದು ಸಾಹಿತ್ಯ ವಲಯದಲ್ಲಿ ದೊಡ್ಡ ಆಗ್ರಹ ಕೇಳಿಬಂದಿತ್ತು.

ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಅಧಿಕೃತವಾಗಿ ತೀರ್ಮಾನ ತೆಗೆದುಕೊಳ್ಳುವ ಮೊದಲೇ ಅಮರಚಿಂತರು ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೋಡಬೇಕೆಂದು ಬಯಸುವ ಎಲ್ಲಾ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಲೇ ಅನಾರೋಗ್ಯದ ಕಾರಣವೊಡ್ಡಿ ಆ ಜವಾಬ್ದಾರಿಯನ್ನು ನಿರ್ವಹಿಸಲು ತಮಗೆ ಆಗುವುದಿಲ್ಲ ಎಂದು ನಯವಾಗಿ ನಿರಾಕರಿಸಿದರು.

ಬಂಡಾಯ ಸಾಹಿತ್ಯ ಚಟುವಟಿಕೆಗಳಲ್ಲಿ ಅವರ ಒಡನಾಡಿಯೇ ಆದ ಬರಗೂರು ರಾಮಚಂದ್ರಪ್ಪನವರನ್ನು ಆ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಮಾಡುವ ಮೂಲಕ ಸಾಹಿತ್ಯ ಪರಿಷತ್ತು ಅಮರಚಿಂತರ ಭಾವನೆಗಳಿಗೆ ನ್ಯಾಯವೊದಗಿಸಿತು. ಯಾವುದೇ ಕನ್ನಡ ಸಾಹಿತಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವುದು ಒಂದು ಅವಿಸ್ಮರಣೀಯ ಕ್ಷಣ. ಆದರೆ, ಅಂತಹ ದೊಡ್ಡ ಗೌರವವನ್ನು ನೈಜ ಕಾರಣಗಳಿಗಾಗಿ ಪ್ರಾಮಾಣಿಕವಾಗಿ ನಿರಾಕರಿಸಿದ ಅಮರಚಿಂತರದ್ದು ನಿಜಕ್ಕೂ ದೊಡ್ಡಗುಣ.

share
ಕುಮಾರ್ ಬುರಡಿಕಟ್ಟಿ
ಕುಮಾರ್ ಬುರಡಿಕಟ್ಟಿ
Next Story
X