Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಆಧುನಿಕ ಭಾರತದ ಶಿಕ್ಷಣದ ಹರಿಕಾರ...

ಆಧುನಿಕ ಭಾರತದ ಶಿಕ್ಷಣದ ಹರಿಕಾರ ಮಹಾತ್ಮಜ್ಯೋತಿ ಬಾಫುಲೆ

ಮಹದೇವ, ಕಮಾರ್ ಮಣಗಳ್ಳಿಮಹದೇವ, ಕಮಾರ್ ಮಣಗಳ್ಳಿ19 Feb 2017 11:43 PM IST
share
ಆಧುನಿಕ ಭಾರತದ ಶಿಕ್ಷಣದ ಹರಿಕಾರ ಮಹಾತ್ಮಜ್ಯೋತಿ ಬಾಫುಲೆ

ಮಹಾತ್ಮಫುಲೆಯವರು ಹುಟ್ಟಿದ ಸಮಯದಲ್ಲಿ ಭಾರತದ ಸಾಕ್ಷರತಾ ಪ್ರಮಾಣ ಕೇವಲ ಶೇ.2 ಮಾತ್ರ. ಶೂದ್ರರಾದ ಕಾರಣ ಫುಲೆಯವರನ್ನು ಬ್ರಾಹ್ಮಣರು ಶಾಲೆಗೆ ಸೇರಿಸಿಕೊಳ್ಳಲಿಲ್ಲ. ಆಗ ಭಾರತದಲ್ಲಿದ್ದ ಕ್ರೈಸ್ತ ಮಿಷನರಿಯ ಪಾದ್ರಿಯೊಬ್ಬರು ಶಾಲೆಗೆ ಸೇರಿಸಿಕೊಂಡರು. ತಕ್ಷಣ ಪುರೋಹಿತನೊಬ್ಬ ತಂದೆಗೆ ದೂರು ಹೇಳಿ ಸುಮ್ಮನೆ ಶಾಲೆಗೆ ಸೇರಿಸಿ ಯಾಕೆ ಹಾಳು ಮಾಡುತ್ತೀರಾ? ಹೆಚ್ಚು ಓದಿದರೆ ಹೊಲಗದ್ದೆ ನೋಡಿಕೊಳ್ಳುವವರ್ಯಾರು? ಓದಿದರೆ ಕೇಡು ನಿಮಗೆ. ಎಂದು ಹೆದರಿಸಿದರು. ಆಗ ಶಿಕ್ಷಕರಾಗಿದ್ದ ಲೆಗಿಟ್ ಎಂಬವರು ಇವರ ತಂದೆಗೆ ಶಿಕ್ಷಣದ ಮಹತ್ವ ತಿಳಿಸಿ ಫುಲೆಯವರನ್ನು ಶಾಲೆಗೆ ಸೇರಿಸಿಕೊಳ್ಳುತ್ತಾರೆ.

ವೈದಿಕರ ಮನುಸ್ಮತಿ ರಚನೆಯಾದದ್ದು ಕ್ರಿ.ಪೂ.185ರಲ್ಲಿ. ಅದನ್ನು ರಚಿಸಿದ್ದು ಸುಮತಿ ಭಾರ್ಗವನೆಂಬ ವೈದಿಕ ಎನ್ನಲಾಗಿದೆ. ಮನುಸ್ಮತಿಯ 10ನೆ ಅಧ್ಯಾಯ ಪುರುಷಸೂಕ್ತದ ಪ್ರಕಾರ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನನ್ನು, ಭುಜದಿಂದ ಕ್ಷತ್ರಿಯನನ್ನು, ತೊಡೆಯಿಂದ ವೈಶ್ಯನನ್ನು, ಪಾದದಿಂದ ಶೂದ್ರನನ್ನು ಸೃಷ್ಟಿಸಿದನು ಎಂದಿದೆ. ಅಲ್ಲದೆ ಭಾರತದಲ್ಲಿ ಮೊಟ್ಟಮೊದಲು ಉದ್ಯೋಗ ಆಧಾರಿತ ಮೀಸಲಾತಿ ಜಾರಿಗೊಳಿಸಿತು.

ವಿದ್ಯೆ ಕಲಿಯುವುದು, ಕಲಿಸುವುದು, ಆಸ್ತಿ, ಅಧಿಕಾರ ಹೊಂದುವುದು ಬ್ರಾಹ್ಮಣರಿಗೆ ಶೇ.100ರಷ್ಟು ಮೀಸಲಾತಿ. ಬ್ರಾಹ್ಮಣರ ಆದೇಶದಂತೆ ರಾಜ್ಯಭಾರ ನಡೆಸಿ, ಅವರಿಗೆ ಧನಕನಕ, ವಸ್ತ್ರ ಆಹಾರ ನೀಡಿ ಸಲಹುವುದು ಕ್ಷತ್ರಿಯರಿಗೆ ಶೇ.100 ಮೀಸಲಾತಿ. ಬ್ರಾಹ್ಮಣ ಮತ್ತು ಕ್ಷತ್ರಿಯರಿಗೆ ಗುಲಾಮರಾಗಿದ್ದು ಇವರಿಬ್ಬರ ಆದೇಶದಂತೆ ವ್ಯಾಪಾರ ಮಾಡಿ ಬಂದ ಲಾಭವನ್ನು ಇಬ್ಬರಿಗೂ ಹಂಚುತ್ತಾ ಬದುಕುವ ಶೇ.100 ಮೀಸಲಾತಿ ವೈಶ್ಯರದ್ದು.

ಈ ಮೂರು ವರ್ಗದವರಿಗೆ ಮಾತ್ರ ವಿದ್ಯೆ, ಆಸ್ತಿ, ಅಧಿಕಾರ ಹೊಂದುವ ಹಕ್ಕು ಶೇ.100ರಷ್ಟು ಮೀಸಲಾತಿ ಇತ್ತು. ಇವರ ಜನಸಂಖ್ಯೆ ದೇಶದ ಜನಸಂಖ್ಯೆಯ ಕೇವಲ ಶೇ.10ರಷ್ಟು ಮಾತ್ರ. ಉಳಿದ 90ರಷ್ಟು ಶೂದ್ರರು ಮತ್ತು ಅಸ್ಪಶ್ಯರ ಗತಿಯೇನಾಗಿತ್ತು. ಮನುಸ್ಮತಿಯ ಪ್ರಕಾರ ಮೇಲಿನ 3 ವರ್ಗಗಳ ಜನರಿಗೆ ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವಾಗಿತ್ತು.

ಶೂದ್ರರು ವಿದ್ಯೆ ಕಲಿಯುವಂತಿಲ್ಲ. ಆಸ್ತಿ ಹೊಂದುವಂತಿಲ್ಲ. ಅಧಿಕಾರ ಪಡೆಯುವಂತಿಲ್ಲ. ಆಕಸ್ಮಿಕವಾಗಿ ವಿದ್ಯೆ ಆಲಿಸಿ ಕಿವಿಗೆ ಕಾದ ಸೀಸ ಹಾಕುವುದು, ವಿದ್ಯೆ ಉಚ್ಚರಿಸಿದರೆ ನಾಲಿಗೆ ಕತ್ತರಿಸಬೇಕು ಎಂಬ ಕ್ರೂರ ಕಾನೂನು ಜಾರಿಯಲ್ಲಿದ್ದವು. ಎಲ್ಲಿಯವರೆಗೆ ಎಂದರೆ ಭಾರತಕ್ಕೆ ಬ್ರಿಟಿಷರು ಬಂದು 1835ರಲ್ಲಿ ಸಾರ್ವತ್ರಿಕ ಶಿಕ್ಷಣ ಪದ್ಧತಿ ಜಾರಿಗೆ ತರುವವರೆಗೆ ಈ ಮನುಸ್ಮತಿ ಜಾರಿಯಲ್ಲಿತ್ತು.

ಹಾಗಾದರೆ 2000 ವರ್ಷಗಳ ಕಾಲ ಈ ದೇಶವನ್ನು ಆಳಿದ ವಿವಿಧ ರಾಜಮನೆತನಗಳು ಶೂದ್ರ ಅಸ್ಪಶ್ಯರಿಗೆ ಏನು ಮಾಡಿದವು? ಯಾವ ಬದಲಾವಣೆ ತಂದವು? ಇದಕ್ಕೆ ಉತ್ತರ ಇಲ್ಲ ಎಂದಷ್ಟೆ ಹೇಳಬಹುದು. 2000 ವರ್ಷಗಳ ಕಾಲ ಶೂದ್ರ ಹಾಗೂ ಅಸ್ಪಶ್ಯರನ್ನು ಎಲ್ಲರೂ ಗುಲಾಮರಾಗಿ ಇಟ್ಟಿದ್ದರು. 2000 ವರ್ಷಗಳ ಕಾಲವನ್ನು ಭಾರತದ ಅಂಧಕಾರದಯುಗ ಎನ್ನುತ್ತಿದ್ದರು. ಹಾಗಾದರೆ ಭಾರತದ ಬಹುಸಂಖ್ಯಾತರಿಗೆ ಬೆಳಕಿನ ಯುಗ ತಂದವರ್ಯಾರು? ಬೇರೆ ಯಾರು ಅಲ್ಲ ಅವರೆ ಭಾರತದ ಮಹಾತ್ಮ ಜ್ಯೋತಿಬಾಫುಲೆಯವರು.

ಜ್ಯೋತಿಬಾಫುಲೆಯವರು ಕ್ರಿ.ಶ.1827 ಫೆಬ್ರವರಿ 20ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ಕಟುಗುನ ಎಂಬ ಹಳ್ಳಿಯಲ್ಲಿ ಹಿಂದುಳಿದ ಪೂಲ್‌ಮಾಲಿ ಹೂಕಟ್ಟುವ ಜಾತಿಯ ಗೋವಿಂದರಾವ್ ಮತ್ತು ಚಿಮಣಾಬಾಯಿ ಎಂಬವರ ಮಗನಾಗಿ ಜನಿಸಿದರು. ಮಹಾತ್ಮಫುಲೆಯವರು ಹುಟ್ಟಿದ ಸಮಯದಲ್ಲಿ ಭಾರತದ ಸಾಕ್ಷರತಾ ಪ್ರಮಾಣ ಕೇವಲ ಶೇ.2 ಮಾತ್ರ. ಶೂದ್ರರಾದ ಕಾರಣ ಫುಲೆಯವರನ್ನು ಬ್ರಾಹ್ಮಣರು ಶಾಲೆಗೆ ಸೇರಿಸಿಕೊಳ್ಳಲಿಲ್ಲ.

ಆಗ ಭಾರತದಲ್ಲಿದ್ದ ಕ್ರೈಸ್ತ ಮಿಷನರಿಯ ಪಾದ್ರಿಯೊಬ್ಬರು ಶಾಲೆಗೆ ಸೇರಿಸಿಕೊಂಡರು. ತಕ್ಷಣ ಪುರೋಹಿತನೊಬ್ಬ ತಂದೆಗೆ ದೂರು ಹೇಳಿ ಸುಮ್ಮನೆ ಶಾಲೆಗೆ ಸೇರಿಸಿ ಯಾಕೆ ಹಾಳು ಮಾಡುತ್ತೀರಾ? ಹೆಚ್ಚು ಓದಿದರೆ ಹೊಲಗದ್ದೆ ನೋಡಿಕೊಳ್ಳುವವರ್ಯಾರು? ಓದಿದರೆ ಕೇಡು ನಿಮಗೆ. ಎಂದು ಹೆದರಿಸಿದರು. ಆಗ ಶಿಕ್ಷಕರಾಗಿದ್ದ ಲೆಗಿಟ್ ಎಂಬವರು ಇವರ ತಂದೆಗೆ ಶಿಕ್ಷಣದ ಮಹತ್ವ ತಿಳಿಸಿ ಫುಲೆಯವರನ್ನು ಶಾಲೆಗೆ ಸೇರಿಸಿಕೊಳ್ಳುತ್ತಾರೆ. 1841ರಲ್ಲಿ ಇಂಟರ್ ಮೀಡಿಯೇಟ್ ಪಾಸಾಗುತ್ತಾರೆ. ನಂತರ ಸಾವಿತ್ರಿಬಾಯಿುಲೆಯವರನ್ನು ವಿವಾಹವಾಗುತ್ತಾರೆ.

ಇದೇ ವೇಳೆ ಜ್ಯೋತಿಬಾರವರ ಜೀವನದಲ್ಲಿ ಒಂದು ಅವಮಾನಕರ ಘಟನೆ ನಡೆಯುತ್ತದೆ. ಬ್ರಾಹ್ಮಣ ಸ್ನೇಹಿತನೊಬ್ಬನ ಮದುವೆಯ ಮೆರವಣಿಗೆಯ ದಿಬ್ಬಣದಲ್ಲಿ ಫುಲೆಯವರು ಖುಷಿಯಿಂದ ಭಾಗವಹಿಸಿರುತ್ತಾರೆ. ಬ್ರಾಹ್ಮಣರ ಜೊತೆ ಶೂದ್ರನೊಬ್ಬ ಸೇರಿಕೊಂಡು ಸರಿಸಮನಾಗಿ ನಡೆಯುತ್ತಿರುವುದನ್ನು ಗಮನಿಸಿದ ಬ್ರಾಹ್ಮಣರು ಕೆಂಡಾಮಂಡಲರಾಗುತ್ತಾರೆ.

ಎಲ್ಲಾ ಕೆಳಜಾತಿ ಶೂದ್ರ ನೀನೆಲ್ಲಿ, ಶ್ರೇಷ್ಟರಾದ ನಾವೆಲ್ಲಿ. ಜಾತಿ ಕುಲ ಗೋತ್ರ ಕೆಡಿಸೋಕೆ ನಮ್ಮ ಜಾತಿ ಬರುವಷ್ಟು ಧೈರ್ಯ ಬಂತೇನೋ ನಿನಗೆ ಎಂದು ಹೀಯಾಳಿಸಿ ಮೆರವಣಿಗೆಯಿಂದ ದರದರನೆ ಎಳೆದುಕೊಂಡು ಹೊರದಬ್ಬುತ್ತಾರೆ. ಅಪಾರ ಅವಮಾನದಿಂದ ಕುಗ್ಗಿಹೋದ ಜ್ಯೋತಿಬಾರವರು ನದಿಯ ತೀರದಲ್ಲಿ ಕುಳಿತು ಕೆಲವು ಅಸ್ಪಶ್ಯ ಮಹಿಳೆಯರನ್ನು ನೋಡುತ್ತಾರೆ. ತನಗೆ ಮದುವೆಯಿಂದ ಹೊರಹಾಕಿದಕ್ಕೆ ಅವಮಾನ ಆಗುತ್ತಿದೆ. ಆದರೆ ಈ ಜನರನ್ನು ಊರಿನಿಂದ ಆಚೆ ಹಾಕಿ ನಾಯಿ ಹಂದಿಗಳಿಗಿಂತಲೂ ಕೀಳಾಗಿ, ಅಸಹ್ಯವಾಗಿ ಕಂಡರೂ ಈ ಜನರು ಅದ್ಯಾವ ಪರಿವೆಯೇ ಇಲ್ಲದೆ ಸ್ವಾಭಿಮಾನ ರಹಿತರಾಗಿ ಪ್ರಾಣಿಗಳಂತೆ ಜೀವಿಸುತ್ತಿದ್ದಾರಲ್ಲ!

ನನಗೆ ವಿದ್ಯೆ ಇರುವ ಕಾರಣ ನನಗಾದ ಅವಮಾನ ನನ್ನನ್ನು ಬಾಧೆಗೊಳಪಡಿಸಿತು. ಶೂದ್ರಾತಿ ಶೂದ್ರರಿಗೆ ವಿದ್ಯೆ ಇಲ್ಲದ ಕಾರಣ ಪಶುಗಳಂತೆ ನೋವು ನುಂಗಿಕೊಂಡು ಬದುಕುತ್ತಿದ್ದಾರೆ.

ಶಿಕ್ಷಣವಿಲ್ಲದೆ ಬುದ್ಧಿ ನಾಶವಾಯಿತು. ಬುದ್ಧಿ ಇಲ್ಲದೆ ನೈತಿಕತೆ ನಾಶವಾಯಿತು. ನೈತಿಕತೆ ಇಲ್ಲದೆ ಕ್ರಿಯಾಶೀಲತೆ ನಾಶವಾಯಿತು. ಕ್ರಿಯಾಶೀಲತೆ ಇಲ್ಲದೆ ಸಂಪತ್ತು ನಾಶವಾಯಿತು. ಸಂಪತ್ತು ಇಲ್ಲದೆ ಶೂದ್ರಾತಿಶೂದ್ರರು ಸರ್ವನಾಶವಾದರು ಎಂದು ಹೇಳಿ ಶೂದ್ರಾತಿಶೂದ್ರರಿಗೆ ಶಿಕ್ಷಣ ನೀಡಲು ತಮ್ಮ ಜೀವಮಾನವನ್ನು ಮೀಸಲಿಡುತ್ತಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದ ತೆರೆದಂತೆ ಎಂಬ ಘೋಷಣೆ ನೀಡಿದರು.

ಅಲ್ಲದೆ 1848ರಲ್ಲಿ ಶೂದ್ರಾತಿ ಶೂದ್ರರ ಹೆಣ್ಣು ಮಕ್ಕಳಿಗೆ ಪ್ರಥಮ ಶಾಲೆೆ ಪ್ರಾರಂಭಿಸುತ್ತಾರೆ. ಇದರಿಂದ ಕೋಪಗೊಂಡ ಬ್ರಾಹ್ಮಣರು, ಜ್ಯೋತಿಬಾಫುಲೆ ಕುಟುಂಬಕ್ಕೆ ಬಹಿಷ್ಕಾರ ಹಾಕಿದರು. ಮನೆ, ಆಸ್ತಿ ಕಳೆದುಕೊಂಡು, ಸ್ನೇಹಿತರಿಂದ ಸಾಲ ಪಡೆದು 1851ರಲ್ಲಿ ಮತ್ತೆ ಹೊಸ ಶಾಲೆ ತೆರೆದರು. ವಿದ್ಯಾರ್ಥಿಗಳು ಹೆಚ್ಚಾದರು. ಹೆಣ್ಣು ಮಕ್ಕಳು ಶಾಲೆಗೆ ಬಾರದ ಕಾರಣ ತಮ್ಮ ಪತ್ನಿಗೆ ಶಿಕ್ಷಕ ತರಬೇತಿ ನೀಡಿ ಶಿಕ್ಷಕಿಯನ್ನಾಗಿ ಮಾಡಿದರು. ಆಧುನಿಕ ಭಾರತದಲ್ಲಿ ಶೂದ್ರರಿಗೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಿದ ಮೊದಲ ವಿದ್ಯಾದೇವತೆ ಸಾವಿತ್ರಿ ಬಾಫುಲೆ.

1848ರಿಂದ 1852ರ ಅವಧಿಯಲ್ಲಿ ಪೂನಾ ಭಾಗದಲ್ಲಿ 18 ಶಾಲೆಗಳನ್ನು ತೆರೆದರು. ವೈದಿಕರಿಂದ ಸಾಕಷ್ಟು ಹಿಂಸೆಗಳನ್ನು ಅನುಭವಿಸಿದರು. ಈ ಸಾಧನೆ ಇಡೀ ಮಹಾರಾಷ್ಟ್ರದಾದ್ಯಂತ ಮನೆ ಮಾತಾಗುತ್ತದೆ. ಜ್ಯೋತಿಬಾರವರು ಶೂದ್ರಾತಿ ಶೂದ್ರರ ವಿನೋಚನೆಗೆ ದುಡಿದು ಇತಿಹಾಸದಲ್ಲಿ ಮಹಾಪುರುಷರಾಗುತ್ತಾರೆ. ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ 11 ಮೇ, 1888ರಲ್ಲಿ ಬಾಂಬೆಯ ಕೋಳಿವಾಡ ಎಂಬ ಸ್ಥಳದಲ್ಲಿ 20 ಸಾವಿರ ಜನರು ಒಂಡೆಡೆ ಸೇರಿ ಅಭಿನಂದನೆ ಸಲ್ಲಿಸಿ ಆನಂದಭಾಷ್ಪ ಸುರಿಸುತ್ತಾ ಕೊಂಡಾಡಿ ಮಹಾತ್ಮ ಎಂಬ ಬಿರುದನ್ನು ಜನರೇ ನೀಡಿದರು. ಇವರು 1890ರಲ್ಲಿ ನಿಧನರಾದರು.

 ಅನುಕೂಲಸ್ಥರಾಗಿದ್ದ ಫುಲೆಯವರು ಇತರ ಮೂಢ ಶೂದ್ರರಂತೆ ಆರಾಮವಾಗಿ ಬದುಕಿದ್ದರೆ 100 ವರ್ಷ ಇರುತ್ತಿದ್ದರೇನೋ. ವೈದಿಕ ವ್ಯವಸ್ಥೆಯ ವಿರುದ್ಧ ಶೂದ್ರರ ಪರವಾಗಿ ನಿರಂತರ ಹೋರಾಡಿದ ಫಲವಾಗಿ 63ನೆ ವರ್ಷಕ್ಕೆ ಆರೋಗ್ಯ ಕೆಟ್ಟು ಇಹಲೋಕ ತ್ಯಜಿಸಿದರು. ಈ ಮಹಾತ್ಮನ ಬದುಕಿನಂತೆ ಶೂದ್ರಾತಿಶೂದ್ರರು ಕೆಲವು ವರ್ಷ ಬದುಕಿದರೂ ಸಾಕು, ಜನ್ಮ ಸಾರ್ಥಕವಾಗುತ್ತದೆ. ಶೂದ್ರರಿಗೆ ಶಿಕ್ಷಣ ನೀಡಿದ ಮಹಾತ್ಮನನ್ನು ಶೂದ್ರರೆ ಮರೆತಿರುವುದು ದುರಂತ. ಬನ್ನಿ ಅವರನ್ನು ಸ್ಮರಿಸೋಣ.

ಮಹಾತ್ಮ ಫುಲೆಯವರಿಂದಲೇ ಭಾರತದ ಶೇ.98ರಷ್ಟು ಜನರು ವಿದ್ಯೆ ಕಲಿಯಲು ಸಾಧ್ಯವಾಯಿತು. ಮಹಾತ್ಮ ಜ್ಯೋತಿ ಬಾಫುಲೆ ಹುಟ್ಟಿದ ದಿನವನ್ನು ಶಿಕ್ಷಣ ದಿನವಾಗಿ ಆಚರಿಸಬೇಕಾಗಿದೆ.

ಮಹಾತ್ಮ ಜ್ಯೋತಿ ಬಾಫುಲೆಯವರ ಸಾಧನೆಗಳು

1. 1864ರಲ್ಲಿ ಹೆಣ್ಣು ಮಕ್ಕಳಿಗಾಗಿ ಅಬಲಾಶ್ರಮ ತೆರೆದರು.

2. 1866ರಲ್ಲಿ ಪ್ರಥಮವಾಗಿ ವಿಧವಾ ವಿವಾಹ ನಡೆಸಿದರು.

3. ಪ್ರಾಣಿಗಳಲ್ಲಿ ಮಾನವನೇ ಶ್ರೇಷ್ಠ. ಮಾನವರಲ್ಲಿ ಮಹಿಳೆಯೇ ಶ್ರೇಷ್ಠ ಎಂದು ಪ್ರತಿಪಾದಿಸಿದರು.

4. 1868 ಬರಗಾಲವಿದ್ದಾಗ, ಅಸ್ಪಶ್ಯರಿಗೆ ನೀರು ಸಿಗದೆ ಇದ್ದಾಗ, ತಮ್ಮ ಬಾವಿಯ ನೀರನ್ನು ಬಳಸಲು ಅನುಮತಿ ನೀಡಿದರು.

5. ಗುಲಾಮಗಿರಿ, ರೈತನ ಚಾಟಿ ಸತ್‌ಸಾರ, ಸಾರ್ವಜನಿಕ ಸತ್ಯಧರ್ಮ, ಬ್ರಾಹ್ಮಣಾಂಚೆ ಕಸಬೆ ಎಂಬ ಪುಸ್ತಕಗಳನ್ನು ಹೊರತಂದರು.

6. 1873ರಲ್ಲಿ ಸತ್ಯ ಶೋಧಕ ಸಮಾಜ ಸ್ಥಾಪಿಸಿದರು.

7. ಸತ್ಯಮೇವ ಜಯತೆ ಎಂಬ ಘೋಷಣೆ ನೀಡಿದವರು ಮಹಾತ್ಮ ಫುಲೆಯವರು.

8. 1882 ರಲ್ಲಿ ಹಂಟರ್ ಆಯೋಗದ ಮುಂದೆ ಪ್ರತೀ ಗ್ರಾಮದಲ್ಲಿ ಶಾಲೆ ತೆರೆಯಬೇಕು. ಶೂದ್ರರಿಗೆ ಹಾಗೂ ಅಸ್ಪಶ್ಯರಿಗೆ ವಿದ್ಯಾರ್ಥಿವೇತನ ನೀಡಬೇಕು. ಹಾಸ್ಟೆಲ್ ತೆರೆಯಬೇಕು ಎಂದು ಮನವಿ ಮಾಡಿದರು.

9. ಶೂದ್ರರಿಗೆ ಜಮೀನು ನೀಡಬೇಕು. ಸಾರ್ವಜನಿಕ ಸೇವೆಗಳಿಗೆ ಶೂದ್ರರನ್ನು ನೇಮಿಸಿಕೊಳ್ಳುವ ಬೇಡಿಕೆ ಸಲ್ಲಿಸಿದರು.

share
ಮಹದೇವ, ಕಮಾರ್ ಮಣಗಳ್ಳಿ
ಮಹದೇವ, ಕಮಾರ್ ಮಣಗಳ್ಳಿ
Next Story
X