Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಈನಿಯಡ್ ಮಹಾಕಾವ್ಯ : ರೋಮ್ ಸಾಮ್ರಾಟರ...

ಈನಿಯಡ್ ಮಹಾಕಾವ್ಯ : ರೋಮ್ ಸಾಮ್ರಾಟರ ವೈಭವೀಕರಣ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ21 Feb 2017 11:43 PM IST
share
ಈನಿಯಡ್ ಮಹಾಕಾವ್ಯ : ರೋಮ್ ಸಾಮ್ರಾಟರ ವೈಭವೀಕರಣ

ಮಹಾಕಾವ್ಯ ರೂಪಕಗಳ ಮೂಲಕ ಒಂದು ನೆಲದ ಕಾಲದ ಹರಿವಿನ ಆಳ ಅಗಲಗಳನ್ನು ಹೇಳುತ್ತದೆ. ಅದನ್ನು ಬರೆದವನು ಒಬ್ಬ ಮಹಾಕವಿಯೇ ಆಗಿದ್ದರೂ, ಅವನು ಹುಟ್ಟುವ ಮೊದಲೇ ಆ ಕಾವ್ಯ ಅಲ್ಲಿನ ಜಲ, ನೆಲ, ಗಾಳಿ, ಬೆಳಕಿನಲ್ಲಿ ಚಲಿಸಿಕೊಂಡೇ ಇತ್ತು. ಮಹಾಕವಿ ಅದನ್ನು ತನ್ನ ಬೊಗಸೆಯಲ್ಲಿ ಸಂಗ್ರಹಿಸುವ ಕೆಲಸವನ್ನಷ್ಟೇ ಮಾಡುತ್ತಾನೆ. 

ಭಾರತದ ಎರಡು ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣವನ್ನೂ ನಾವು ಈ ನೆಲೆಯಲ್ಲೇ ನೋಡುತ್ತಾ ಬಂದಿದ್ದೇವೆ. ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯ ತೆರೆದಿಡುವ ಗ್ರೀಕ್ ಕಾಲಘಟ್ಟದ ನಾಗರಿಕತೆಯ ಹರವು, ಇಡೀ ವಿಶ್ವವನ್ನು ಪೋಷಿಸುತ್ತಾ ಬಂದಿದೆ ಎನ್ನುವುದನ್ನು ಗಮನಿಸಬೇಕು. ವಿಶ್ವ ಕಾವ್ಯಗಳನ್ನು ಓದುವುದೆಂದರೆ, ನಮ್ಮನ್ನು ನಾವು ವಿಶ್ವಕ್ಕೆ ತೆರೆದುಕೊಳ್ಳುವುದು ಎಂದು ಅರ್ಥ. ಇನ್ನೊಂದರ್ಥದಲ್ಲಿ ಆ ಓದಿನ ಹರಿವಲ್ಲಿ ಸಾಗಿ ಪುರಾತನರಾಗುವುದು.

ಈ ನಿಟ್ಟಿನಲ್ಲಿ ಪ್ರೊ. ಕೆ. ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ಅನುವಾದಿಸಿರುವ ಮಹಾಕವಿ ವರ್ಜಿಲನ ಕಾವ್ಯ ಈನಿಯಡ್ ಒಂದು ಗಮನಾರ್ಹ ಪ್ರಯತ್ನ. ಇಲಿಯಡ್ ಎಂದರೆ ಇಲಿಯಮ್ ಅಥವಾ ಟ್ರಾಯ್ ನಗರದ ಕಥೆ ಎಂಬುದು ಹೇಗೋ ಹಾಗೆ, ‘ಈನಿಯಡ್’ ಎಂದರೆ ಈನಿಯಸ್‌ನ ಕಥೆ ಎಂದರ್ಥ. ಈ ಕಾವ್ಯದ ನಾಯಕ ಈನಿಯಸ್. ರೋಮ್ ಸಾಮ್ರಾಟರ ಮೂಲ ಮತ್ತು ಬೆಳವಣಿಗೆಯನ್ನು ಗುರುತಿಸಿ ಅದರ ವೈಭವೀಕರಣವೂ ಈನಿಯಡ್ ಮಹಾ ಕಾವ್ಯದಲ್ಲಿ ಕಾಣಿಸುತ್ತದೆ.

ಈನಿಯಡ್ ಕಾವ್ಯದ ಕಥೆ ಅತೀ ಸಂಕ್ಷಿಪ್ತವಾಗಿ ಹೀಗಿದೆ; ಟ್ರಾಯ್ ನಗರದ ಅಗ್ನಿಪ್ರಳಯ (ಕ್ರಿ. ಪೂ. ಸುಮಾರು 1184)ದಿಂದ ತಪ್ಪಿಸಿಕೊಂಡು ಟ್ರೋಜನ್ ವೀರ ಈನಿಯಸ್‌ನು ತನ್ನಂತೆ ಬದುಕುಳಿದ ಇತರ ಟ್ರೋಜನರನ್ನು ಒಳಗೊಂಡು ಇಪ್ಪತ್ತು ಹಡಗುಗಳಲ್ಲಿ ಸಮುದ್ರಯಾನ ಕೈಗೊಳ್ಳುತ್ತಾನೆ. ಪ್ರಯಾಣ ಕಾಲದಲ್ಲಿ ನಾನಾ ಕಷ್ಟ ಪರಂಪರೆಗಳಿಗೆ ಸಿಕ್ಕಿ ಕೊನೆಗೆ ಇಟಲಿ ದೇಶವನ್ನು ತಲುಪಿ, ಅಲ್ಲಿಯ ಸ್ಥಳೀಯರೊಂದಿಗೆ ಯುದ್ಧ ಮಾಡಿ ಗೆದ್ದು, ಅಲ್ಲೊಂದು ನಗರವನ್ನು ಕಟ್ಟಿ ನೆಲೆ ನಿಂತು, ದೊರೆಯಾಗಿ ಆಳುತ್ತಾನೆ.

ಅವನ ವಂಶದಲ್ಲಿ ಕಾಲಾಂತರದಲ್ಲಿ ಜನಿಸಿದ ರೋಮುಲಸ್ ಮತ್ತು ರೀಮಸ್ ಎಂಬ ಅವಳಿ ಸೋದರರ ಪೈಕಿ ರೋಮುಲಸನು ರೋಮ್ ನಗರವನ್ನು ಕಟ್ಟಿ ರೋಮ್ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾನೆ ಎಂಬುದು ಕಾವ್ಯದಲ್ಲಿ ಸೂಚ್ಯವಾಗಿ ಬಂದಿದೆ. ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯವನ್ನು ಮಾದರಿಯಾಗಿಟ್ಟು ವರ್ಜಿಲನು ಈ ಕಾವ್ಯವನ್ನು ಬರೆದಿದ್ದಾನೆ. ಒಟ್ಟು 12 ಅಧ್ಯಾಯಗಳಲ್ಲಿ ಕಾವ್ಯ ಅಡಕವಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಸುಮಾರು 300 ಪುಟಗಳ ಅನುವಾದಿತ ಕೃತಿಯ ಮುಖಬೆಲೆ 150 ರೂ.
 

share
-ಕಾರುಣ್ಯಾ
-ಕಾರುಣ್ಯಾ
Next Story
X