Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಾಷೆಯನ್ನು ಮೀರಿ ಹೃದಯ ಮುಟ್ಟುವ ಕಥೆಗಳು

ಭಾಷೆಯನ್ನು ಮೀರಿ ಹೃದಯ ಮುಟ್ಟುವ ಕಥೆಗಳು

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ22 Feb 2017 11:30 PM IST
share
ಭಾಷೆಯನ್ನು ಮೀರಿ ಹೃದಯ ಮುಟ್ಟುವ ಕಥೆಗಳು

ಅನುವಾದವೆನ್ನುವುದು ಎರಡು ಭಾಷೆಯ ಪರಸ್ಪರ ಕೊಡುಕೊಳ್ಳುವಿಕೆ ಮಾತ್ರವಲ್ಲ, ಆ ಮೂಲಕ ಎರಡು ಸಂಸ್ಕೃತಿಗಳೂ ಸೌಹಾರ್ದವಾಗಿ ಬೆಸೆದು ಕೊಳ್ಳುತ್ತದೆ. ಹತ್ತು ಹಲವು ಪ್ರಾದೇಶಿಕ ಭಾಷೆಗಳ ಮೂಲಕ ಸಂರಚನೆಗೊಂಡಿರುವ ಭಾರತೀಯ ಸಮಾಜದಲ್ಲಿ ಅನುವಾದಕರ ಹೊಣೆಗಾರಿಕೆ ಬಹುದೊಡ್ಡದು.

ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಹೊರತಂದಿರುವ ವಿವಿಧ ಭಾಷೆಗಳ ಅನುವಾದಿತ ಕತೆಗಳ ಸಂಗ್ರಹ ‘ಘನವು ಎಂಬುದು’ ತನ್ನದೇ ವೈವಿಧ್ಯತೆಗಳ ಮೂಲಕ ಗಮನ ಸೆಳೆಯುತ್ತದೆ. ಕತೆಗಾರರಾದ ಅಬ್ಬಾಸ್ ಮೇಲಿನ ಮನಿ ಈ ಕೃತಿಯ ಸಂಪಾದಕರಾಗಿದ್ದಾರೆ.

ಅನುವಾದ ಎಂಬುದು ಮಕ್ಕಿಕಾ ಮಕ್ಕಿ ಕ್ರಿಯೆಯಲ್ಲ. ಬಿಎಂಶ್ರೀ ಅವರು ಹೇಳಿದಂತೆ ‘‘ಇವಳ ಸೊಬಗನವಳಿಗಿಟ್ಟು ನೋಡುವ, ಅವಳ ತೊಡುಗೆ ಇವಳಿಗಿಟ್ಟು ಹಾಡುವ ಪ್ರೀತಿಯ ಕಾತರದ್ದು.’’ ಸೃಜನಶೀಲ ಮನಸ್ಸೊಂದು ಒಳಿತಾಗಿರುವುದನ್ನು ಅನುವಾದದ ಪ್ರಕ್ರಿಯೆಯ ಮೂಲಕ ಸಾರ್ವತ್ರಿಕಗೊಳಿಸುವಲ್ಲಿ ಸಹಜವಾಗಿಯೇ ತುಡಿಯುತ್ತದೆ. ಇದು ಭಾವ ಭಾಷೆಗಳ ಅಸ್ಮಿತೆ ಎನ್ನುವ ನಂಬಿಕೆಯೊಂದಿಗೆ ಸಂಪಾದಕರು ಪ್ರತೀ ಅನುವಾದದ ಕುರಿತು ಜಾಗರೂಕತೆವಹಿಸಿದ್ದಾರೆ. ಇಲ್ಲಿರುವ ಎಲ್ಲ ಕತೆಗಳು ತನ್ನ ಮೂಲ ಭಾಷೆಯ ಸೂಕ್ಷ್ಮತೆಗೆ ಧಕ್ಕೆ ಮಾಡದೆಯೇ ಕನ್ನಡಕ್ಕಿಳಿದಿರುವುದು ಕೃತಿಯ ಹೆಗ್ಗಳಿಕೆ.

ಇಲ್ಲಿರುವ ಕತೆಗಳು ಕೇವಲ ಭಾರತೀಯ ಭಾಷೆಗೆ ಸೀಮಿತವಾದುದಲ್ಲ. ಬಂಗಾಳಿಯ ರವೀಂದ್ರನಾಥ ಠಾಗೋರ್, ಮರಾಠಿಯ ಇರಾವತಿ ಕರ್ವೆ, ಮಲಯಾಳಂನ ಮಾನಸಿ, ಉರ್ದುವಿನ ಇಸ್ಮತ್ ಚುಗ್ತಾಯ್, ರಷ್ಯನ್ ಲೇಖಕ ಲಿಯೋ ಟಾಲ್‌ಸ್ಟಾಯ್ ಹಾಗೆಯೇ ವೈಕ್ಕಂ ಮುಹಮ್ಮದ್ ಬಶೀರ್, ಶರಣಕುಮಾರ ಲಿಂಬಾಳೆ....ಹೀಗೆ ಹೆಸರುಗಳು ಮುಂದು ವರಿಯುತ್ತವೆ.

ಜಗತ್ತಿನ ಎಲ್ಲ ಭಾಷೆಗಳ ಗಡಿಗಳನ್ನು ಮೀರಿ ಮನುಷ್ಯ ಮನಸ್ಸುಗಳು ಈ ಕೃತಿಯಲ್ಲಿ ಒಂದಾಗಿವೆ. ಜಮೀನ್ದಾರಿ ಪದ್ಧತಿಯ ಕರಾಳ ಮುಖವನ್ನು ತೋರಿಸುವ ರವೀಂದ್ರ ನಾಥ ಟಾಗೋರರ ‘ಎರಡು ಬೀೆ ಜಮೀನು’, ಭೂಮಿಯ ದಾಹದ ಪರಿಯನ್ನು ಹೇಳುತ್ತಲೇ ಹೇಗೆ ಅದು ಆತನನ್ನು ದುರಂತಕ್ಕೆ ತಳ್ಳುತ್ತದೆ ಎಂದು ಹೇಳುವ ಲಿಯೋ ಟಾಲ್‌ಸ್ಟಾಯ್ ಅವರ ‘ಮನುಷ್ಯನಿಗೆ ಅದೆಷ್ಟು ಭೂಮಿ ಬೇಕು?’, ಪ್ರಕೃತಿಯನ್ನು ಕಳೆದುಕೊಂಡ ಮನುಷ್ಯನ ತಲ್ಲಣಗಳನ್ನು ಹೇಳುವ ತಮಿಳಿನ ಡಾ. ವೈರಮುತ್ತು ಅವರ ಕತೆ ‘ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು...’, ಜಾತಿಮತ ಭೇದಗಳಾಚೆಗೆ ಮನುಷ್ಯ ಸಂಬಂಧವನ್ನು ಪ್ರತಿಪಾದಿಸುವ ತಮಿಳಿನ ನಾಂಜಿಲ್ ನಾಡನ್‌ರವರ ‘ಖಾನ್‌ಸಾಹೇಬ್..’ ಒಂದಕ್ಕಿಂತ ಒಂದು ಹೃದಯಸ್ಪರ್ಶಿ ಕತೆಗಳು ಇಲ್ಲಿವೆ. ಎಲ್ಲವೂ ಪರಸ್ಪರ ಸಂವಾದಿಸುತ್ತವೆ. ಇಲ್ಲಿ ಒಟ್ಟು 35 ಬೇರೆ ಬೇರೆ ಭಾಷೆಗಳ ಕಥೆಗಳನ್ನು ನಾವು ಕಾಣಬಹುದು.

430 ಪುಟಗಳನ್ನು ಹೊಂದಿ ರುವ ಕೃತಿಯ ಮುಖಬೆಲೆ 200 ರೂಪಾಯಿ.
 

share
ಕಾರುಣ್ಯಾ
ಕಾರುಣ್ಯಾ
Next Story
X