‘‘ಮುತಂಗ 19/2’’ ಕೇರಳದ ಭೂಹೋರಾಟದಲ್ಲೊಂದು ಮೈಲಿಗಲ್ಲು

ಭಾಗ -1
ಕೇರಳದ 3.64 ಲಕ್ಷ ಆದಿವಾಸಿಗಳ ಪಾಲಿಗೆ ವಯನಾಡ್‌ನ ಮುತಂಗದಲ್ಲಿ 2003ರ ಫೆಬ್ರವರಿ 19ರಂದು ನಡೆದ ಘಟನೆ ಯಾವುದೇ ಸರಕಾರಿ ಭಯೋತ್ಪಾದನೆಗಿಂತ ಕಡಿಮೆಯಾಗಿರಲಿಲ್ಲ. ಬೃಹತ್ ಮಟ್ಟದಲ್ಲಿ ಹಿಂಸಾಚಾರ ಭುಗಿಲೆದ್ದ ಪರಿಣಾಮವಾಗಿ ಆದಿವಾಸಿಗಳು ಮಾನವೀಯ ಘನತೆಯೇ ಇಲ್ಲದ ಮಾನವರಾಗಿ ಉಳಿದರು. ತಮ್ಮದೇ ಸ್ಥಳೀಯ ನಿಶ್ಶಸ್ತ್ರ ಜನರ ಮೇಲೆ ನಡೆಸಿದ ಹಿಂಸಾಚಾರದ ಪರಿಣಾಮವಾಗಿ ಮುತಂಗ ಅಂತಾರಾಷ್ಟ್ರೀಯವಾಗಿ ಗಮನ ಸೆಳೆಯಿತು.
ಕೇರಳದ ಆದಿವಾಸಿ ಭೂ ಹೋರಾಟದಲ್ಲಿ ಮುತಂಗ ಹೋರಾಟ ಒಂದು ಮೈಲಿಗಲ್ಲಾಗಿದೆ. ಮುತಂಗ ಘಟನೆ ನಡೆದು ಹದಿನಾಲ್ಕು ವರ್ಷಗಳ ನಂತರವೂ ಅದು ಕೇರಳದಲ್ಲಿ ಜನಹೋರಾಟಕ್ಕೊಂದು ಪಾಠವಾಗಿ ಉಳಿದಿದೆ. ಆದಿವಾಸಿ ಗೋತ್ರಾ ಮಹಾ ಸಭಾದಿಂದ ಆರಂಭಿಸಲಾದ ಆದಿವಾಸಿ ಭೂಚಳವಳಿ ಇಂದು ಎರಡು ಗುಂಪುಗಳ ಮಧ್ಯೆ ವಿಭಜನೆಯಾಗಿದೆ. 1990ರ ಮುತಂಗ ಹೋರಾಟದ ಪ್ರಭಾವಿ ನಾಯಕಿ ಸಿಕೆ ಜಾನು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಜೊತೆ ಕೈಜೋಡಿಸಿದ್ದರೆ ಮತ್ತೋರ್ವ ಪ್ರಮುಖ ನಾಯಕ ಎಂ. ಗೀತಾನಂದನ್ ಸಿಕೆ ಜಾನು ಅವರ ರಾಜಕೀಯ ದ್ರೋಹಕ್ಕೆ ಸವಾಲೆಸೆದಿದ್ದಾರೆ.
ಆದರೆ ಆದಿವಾಸಿ ಭೂಹೋರಾಟದಲ್ಲಿ ರಾಜ್ಯ ಮತ್ತು ಆದಿವಾಸಿ ಜಮೀನಿನಲ್ಲಿ ನೆಲೆಸಿರುವ ದ್ರೋಹಿಗಳ ದೀರ್ಘ ಇತಿಹಾಸವೇ ಇದೆ. ಈ ಹೋರಾಟಕ್ಕೆ ಮುಖ್ಯ ಕಾರಣವೆಂದರೆ ರಾಜ್ಯ ಸರಕಾರದ ಅಭಿವೃದ್ಧಿ ಕೆಲಸಗಳ ಹೊರತಾಗಿ ಅದಿವಾಸಿಯೇತರರು ಆದಿವಾಸಿ ಜಮೀನಿನಲ್ಲಿ ನೆಲೆಸಿದ್ದು. ಇದರ ಪರಿಣಾಮವಾಗಿ ಕೇರಳದ ಜನಸಂಖ್ಯೆಯಲ್ಲಿ ಕೇವಲ ಶೇ. 1.10 ಮಾತ್ರ ಇರುವ ಅಲ್ಪಸಂಖ್ಯಾತರಾಗಿದ್ದರೂ ಆದಿವಾಸಿ ಗಳು ಒಗ್ಗಟ್ಟಾಗುವಂತೆ ಒತ್ತಡ ಏರ್ಪಟ್ಟಿತು. ಭೂ ಅತಿಕ್ರಮದ ಪರಿಣಾಮವಾಗಿ ನಾಲ್ಕನೆ ಮೂರು ಭಾಗದಷ್ಟು ಆದಿವಾಸಿಗಳು ಭೂಹೀನರಾದರು ಮತ್ತವರ ಸಾಮಾಜಿಕ ಪರಿಸ್ಥಿತಿ ರಾಜ್ಯದ ಸರಾಸರಿಗಿಂತ ಬಹಳಷ್ಟು ಕೆಳಮಟ್ಟದಲ್ಲಿದೆ.
ಮುತಂಗ ಹೋರಾಟ
ಕೇರಳದ 3.64 ಲಕ್ಷ ಆದಿವಾಸಿಗಳ ಪಾಲಿಗೆ ವಯನಾಡ್‌ನ ಮುತಂಗದಲ್ಲಿ 2003ರ ಫೆಬ್ರವರಿ 19ರಂದು ನಡೆದ ಘಟನೆ ಯಾವುದೇ ಸರಕಾರಿ ಭಯೋತ್ಪಾದನೆಗಿಂತ ಕಡಿಮೆಯಾಗಿರಲಿಲ್ಲ. ಬೃಹತ್ ಮಟ್ಟದಲ್ಲಿ ಹಿಂಸಾಚಾರ ಭುಗಿಲೆದ್ದ ಪರಿಣಾಮವಾಗಿ ಆದಿವಾಸಿಗಳು ಮಾನವೀಯ ಘನತೆಯೇ ಇಲ್ಲದ ಮಾನವರಾಗಿ ಉಳಿದರು. ತಮ್ಮದೇ ಸ್ಥಳೀಯ ನಿಶ್ಶಸ್ತ್ರ ಜನರ ಮೇಲೆ ನಡೆಸಿದ ಹಿಂಸಾಚಾರದ ಪರಿಣಾಮವಾಗಿ ಮುತಂಗ ಅಂತಾರಾಷ್ಟ್ರೀಯವಾಗಿ ಗಮನ ಸೆಳೆಯಿತು. ಅದೂ ಕೂಡಾ ವಿಶ್ವ ಸ್ಥಳೀಯ ಜನರ ಅಂತಾರಾಷ್ಟ್ರೀಯ ದಶಮಾನದ (1995-2004) ಅಂತಿಮ ಸುತ್ತಿಗೆ ಕೇವಲ ಕೆಲವು ತಿಂಗಳಷ್ಟೇ ಬಾಕಿಯುಳಿದಿರುವ ಸಮಯದಲ್ಲಿ. ಆದಿವಾಸಿಗಳ ಪಾಲಿಗೆ ಕಳೆದು ಹೋಗುತ್ತಿದ್ದ ದಶಮಾನ ಕೇವಲ ಟೊಳ್ಳು ಭರವಸೆಗಳು ಮತ್ತು ಮೋಸದಿಂದ ಕೂಡಿತ್ತು ಹಾಗೂ ನಂಬಿಕೆ ಮತ್ತು ಹತಾಶೆಗಳು ಹಿಂಸಾತ್ಮಕ ಅನುಪಾತಗಳ ಊಹೆಯಲ್ಲೇ ಕೊನೆಗೊಂಡಿತು. ಕೇರಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆದಿವಾಸಿಗಳು ಪೊಲೀಸರ ಗುಂಡಿಗೆ ಮತ್ತು ಹಿಂಸಾಚಾರಕ್ಕೆ ಗುರಿಯಾದರು ಮತ್ತು ಇದರ ಪರಿಣಾಮವಾಗಿ ಹಲವು ಸಾವುನೋವುಗಳು ಮತ್ತು ವಿನಾಶಗಳು ಸಂಭವಿಸಿದವು. ಆದಿವಾಸಿಗಳ ವಿರುದ್ಧ ಕಾರ್ಯಾಚರಣೆ ನಡೆಯುತ್ತ್ತಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಯಾಕೆ ಆ ಪ್ರದೇಶಕ್ಕೆ ತೆರಳಲು ಅವಕಾಶ ನೀಡಲಿಲ್ಲ ಎಂಬ ಪ್ರಶ್ನೆಗಳೂ ಎದ್ದವು. ಸುಮಾರು 18 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ವೇಳೆ ಪೊಲೀಸರು ಸಂಪೂರ್ಣವಾಗಿ ಆ ಪ್ರದೇಶವನ್ನು ಸುತ್ತುವರಿದಿದ್ದರು ಹಾಗಾಗಿ ಅಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಅರಣ್ಯ ಪ್ರದೇಶದ ಒಳಗೆಯೇ ಪೊಲೀಸರು ಹುಚ್ಚಾಟ ಮೆರೆದ ಪರಿಣಾಮವಾಗಿ ಘಟನೆಯ ಕ್ರೂರತೆಯ ಸಾಕ್ಷಿಯನ್ನು ಅಳಿಸಿ ಹಾಕಿರಬಹುದು ಎಂದು ಹಲವು ಆದಿವಾಸಿಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು ನಂಬುತ್ತಾರೆ.
2001ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ 2003ರ ಜನವರಿಯಲ್ಲಿ ಸಿಕೆ ಜಾನು ಮತ್ತು ಎಂ. ಗೀತಾನಂದನ್ ನೇತೃತ್ವದ ಎಜಿಎಂಎಸ್‌ನ ನೂರಾರು ಆದಿವಾಸಿಗಳು ಮುತಂಗ ಅರಣ್ಯಭೂಮಿಯನ್ನು ಆಕ್ರಮಿಸಿ ಪ್ರತಿಭಟಿಸಿದರು. ಸರಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸಿದ ನಂತರವೇ ಅರಣ್ಯ ಪ್ರದೇಶವನ್ನು ತೆರವುಗೊಳಿಸುವುದಾಗಿ ಎಜಿಎಂಎಸ್ ಮೊದಲೇ ಸ್ಪಷ್ಟಪಡಿಸಿತ್ತು. ಜಮೀನು ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯನ್ನು ಕೇವಲ ಮುಖ್ಯಮಂತ್ರಿ ಜೊತೆ ಮಾತ್ರ ನಡೆಸಲಾಗುವುದು ಎಂದೂ ಮುಖಂಡರು ತಿಳಿಸಿದ್ದರು. ಅರಣ್ಯ ಪ್ರದೇಶದಲ್ಲಿ ಗುಡಿಸಲು ಮತ್ತು ಇತರ ವಸತಿಗಳನ್ನು ನಿರ್ಮಿಸಿದ ಆದಿವಾಸಿಗಳು ಅಲ್ಲೇ ಕೃಷಿ ಕಾಯಕ ಆರಂಭಿಸುವುದಾಗಿ ಘೋಷಿಸಿದರು. ಆದರೆ ಅರಣ್ಯ ಅತಿಕ್ರಮಿಸಿದ ವಾರಗಳ ನಂತರವೂ ಸರಕಾರ ಮಾತ್ರ ಮೌನವಾಗಿರಲು ನಿರ್ಧರಿಸಿತು. ವಾಸ್ತವದಲ್ಲಿ ಸರಕಾರದಿಂದ ಜಮೀನು ವಿಷಯದ ಬಗ್ಗೆ ಮಾತುಕತೆ ನಡೆಸಲು ಆಹ್ವಾನ ಬರಬಹುದು ಎಂದು ಆದಿವಾಸಿ ನಾಯಕರು ನಿರೀಕ್ಷಿಸಿದ್ದರು. ಆದರೆ ಮುತಂಗ ಕಾರ್ಯಾಚರಣೆಗೆ ಕೆಲವು ದಿನಗಳ ಮೊದಲು ಸೇರಿದ ರಾಜ್ಯ ಸಂಪುಟವು ಸದ್ಯ ಚರ್ಚೆಗೆ ಸರಿಯಾದ ಸಮಯವಲ್ಲದ ಕಾರಣ ಜಮೀನು ವಿಷಯದಲ್ಲಿ ತಕ್ಷಣ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿರುವ ನಿರ್ಧಾರಕ್ಕೆ ಬಂತು. ಇದು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗಿರುವ ಸರಕಾರ ಮಾಡಿರುವ ಅತ್ಯಂತ ಘೋರ ನಿರ್ಲಕ್ಷ್ಯ ಎಂದು ಪರಿಗಣಿಸಲಾಗಿದೆ.
ಪೊಲೀಸ್ ಗುಂಡು ಹಾರಾಟಕ್ಕೆ ಮತ್ತು ನಂತರ ನಡೆದ ಕ್ರೂರ ಹಿಂಸಾತ್ಮಕ ಕಾರ್ಯಾಚರಣೆಗೆ ಕಾರಣವಾದ ಸಂದರ್ಭವನ್ನು 1975ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಆದಿವಾಸಿಗಳ ಜಮೀನು ಹಸ್ತಾಂತರ ಕಾಯ್ದೆಯನ್ನು ರೂಪಿಸಿದ ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಆದಿವಾಸಿಗಳ ಪಾಲಿನಲ್ಲಿ ಪಾಲಕ್ಕಾಡ್, ವಯನಾಡ್, ಇಡುಕ್ಕಿ, ಪಟ್ಟನಂತಿಟ್ಟ, ಕೊಲ್ಲಂ ಮತ್ತು ತಿರುವನಂತಪುರಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶಗಳಿದ್ದವು. ಈ ಜಮೀನನ್ನು ನಿಧಾನವಾಗಿ ಆದಿವಾಸಿ ಯೇತರರು ಅತಿಕ್ರಮಿಸುತ್ತಿದ್ದರು ಮತ್ತು ಸರಕಾರಗಳು ಈ ಅತಿಕ್ರಮಣ ಪ್ರಕ್ರಿಯೆಯನ್ನು ಕೇವಲ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದವು. ಬಯಲು ಪ್ರದೇಶಗಳಲ್ಲಿ ಜಮೀನಿನ ಒತ್ತಡ ಹೆಚ್ಚಾದಾಗ ಆದಿವಾಸಿಯೇತರ ನಿವಾಸಿಗಳು ಮುಂದೆ ಜಮೀನಿನ ಅತಿಕ್ರಮಣದಲ್ಲಿ ತೊಡಗಿಕೊಂಡರು. 1975ರ ಕಾಯ್ದೆ ಆದಿವಾಸಿಗಳಿಗೆ ಅವರ ಜಮೀನನ್ನು ವಾಪಸ್ ನೀಡುವ ಭರವಸೆಯನ್ನು ನೀಡಿತು. ಆದರೆ ಎಲ್ಲಾ ನಿರೀಕ್ಷೆಗಳು ಅಲ್ಪಾಯುವಾಗಿದ್ದವು. 1975ರ ನಂತರ ಬಂದ ಎಲ್ಲಾ ಸರಕಾರಗಳು ಈ ಮಸೂದೆಯನ್ನು, ಅಲ್ಲಿ ನೆಲೆನಿಂತವರ ಒತ್ತಡಕ್ಕೆ ಒಳಗಾಗಿ, ಅನುಷ್ಠಾನಕ್ಕೆ ತರಲು ಹಿಂದೇಟು ಹಾಕಿದವು. ಇದೇ ವೇಳೆ ರಾಜ್ಯ ಸರಕಾರ ಅರ್ಧ ಮನಸ್ಸಿನಿಂದ ಪ್ರತ್ಯೇಕಿತ ಜಮೀನನ್ನು ಮರಳಿ ಪಡೆಯಲು ನಿಯಮವನ್ನು ರೂಪಿಸಿತು. ಆದರೆ ಇದರಿಂದ ಏನೂ ನಡೆಯಲಿಲ್ಲ. ಬದಲಾಗಿ ಸರಕಾರ 1975ರ ಕಾಯ್ದೆಯ ನಿಬಂಧನೆಗಳನ್ನು ಕಡಿತಗೊಳಿಸಲು ಇತರ ಕ್ರಮಗಳ ಜೊತೆ ಮುಂದುವರಿಯಿತು. ಇದು ಆದಿವಾಸಿ ಚಳವಳಿಯ ಹಿನ್ನೆಲೆಯಾಗಿದೆ.
ಅಂದಾಜಿನ ಪ್ರಕಾರ ಕೇರಳದಲ್ಲಿ 3.64 ಲಕ್ಷ ಆದಿವಾಸಿ ಜನರಿದ್ದಾರೆ (ಸುಮಾರು 70,000 ಕುಟುಂಬಗಳು). ಇವುಗಳಲ್ಲಿ 45,000ಕ್ಕೂ ಅಧಿಕ ಕುಟುಂಬಗಳು ಜಮೀನು ಹೊಂದಿಲ್ಲ. 1999ರ ಕಾಯ್ದೆಯ ನಿಬಂಧನೆಗಳ ಪ್ರಕಾರ ಕೇವಲ 4,500 ಅರ್ಜಿಗಳಿದ್ದವು ಅಂದರೆ ಇದರರ್ಥ ಬಹುತೇಕ ಜಮೀನು ರಹಿತ ಆದಿವಾಸಿಗಳು ಈ ಹೊಸ ಕಾನೂನಿನ ಪರಿಧಿಯಲ್ಲಿ ಬರುವುದಿಲ್ಲ. ವಾಸ್ತವದಲ್ಲಿ ಈ ಜಮೀನು ರಹಿತ ಆದಿವಾಸಿಗಳಲ್ಲಿ ಹಸಿವಿನಿಂದ ಮೃತಪಟ್ಟ ಪ್ರಕರಣಗಳು ವರದಿಯಾಗಿದ್ದವು. ಉದಾಹರಣೆಗೆ 2001ರ ಆಗಸ್ಟ್‌ನಲ್ಲಿ ಆದಿವಾಸಿಗಳು ಪ್ರತಿಭಟನೆಯನ್ನು ನಡೆಸಿದಾಗ ಕೆಲವೇ ವಾರಗಳ ಅಂತರದಲ್ಲಿ ಕನಿಷ್ಠ 32 ಆದಿವಾಸಿಗಳು ಹಸಿವಿನಿಂದ ಮೃತಪಟ್ಟಿದ್ದರು. ಈ ಪ್ರತಿಭಟನೆಯು ಆ ವರ್ಷದ ಓಣಂ ಸಮಯದಲ್ಲೇ ನಡೆದಿದ್ದು ಇದೇ ಸಮಯದಲ್ಲಿ ರಾಜ್ಯದಲ್ಲಿ ಹಸಿವಿನಿಂದ ಉಂಟಾದ ಸಾವಿನ ಬಗ್ಗೆ ವರದಿಗಳು ಬಂದಿದ್ದವು. ಆದಿವಾಸಿ-ದಲಿತ ಹೋರಾಟ ಸಮಿತಿಯ ನೇತೃತ್ವದಲ್ಲಿ ನೂರಾರು ಆದಿವಾಸಿಗಳು ಅರಣ್ಯ ಮತ್ತು ಗುಡ್ಡ ಪ್ರದೇಶಗಳಿಂದ ರಾಜ್ಯದ ರಾಜಧಾನಿಗೆ ಆಗಮಿಸಿ ಮುಖ್ಯಮಂತ್ರಿಯ ಅಧಿಕೃತ ಮನೆಯ ಮುಂದೆ ಗುಡಿಸಲು ಗಳನ್ನು ನಿರ್ಮಿಸಿದರು. 45,000 ಜಮೀನು ರಹಿತ ಆದಿವಾಸಿ ಕುಟುಂಬಗಳಿಗೆ ತಲಾ ಐದು ಎಕರೆಯಂತೆ ಕೃಷಿಯೋಗ್ಯ ಭೂಮಿಯನ್ನು ನೀಡಬೇಕೆಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು. ಈ ಹಂತದಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಜಮೀನಿನಲ್ಲಿ ನೆಲೆನಿಂತಿರುವ ರೈತರ ವ್ಯವಹಾರದಲ್ಲಿ ಸಮಾನ ಉದ್ದೇಶ ಹೊಂದಿರುವ ಪರಿಣಾಮವಾಗಿ ತಮ್ಮಿಂದ ಕಸಿದುಕೊಳ್ಳಲಾಗಿರುವ ಜಮೀನನ್ನು ಅಲ್ಲಿ ನೆಲೆಯಾಗಿರುವ ರೈತರಿಂದ ಹಿಂಪಡೆಯುವ ಪ್ರಯತ್ನಗಳು ವಿರೋಧಗಳನ್ನು ಹುಟ್ಟುಹಾಕಬಹುದು ಎಂದು ಆದಿವಾಸಿ ನಾಯಕರಿಗೆ ಅರಿವಾಗಿತ್ತು. ಎಲ್ಲಾ ಸರಕಾರಗಳು ಆದಿವಾಸಿಗಳು ಮತ್ತು ನೆಲೆಯಾದ ರೈತರ ಮಧ್ಯೆ ಸಂಘರ್ಷ ಉಂಟಾಗಬಹುದು ಎಂಬುದನ್ನು ಬೊಟ್ಟು ಮಾಡುತ್ತಾ ಜಮೀನು ಹಿಂಪಡೆವ ವಿಷಯದಲ್ಲಿ ಕಣ್ಣಾಮುಚ್ಚಾಲೆಯಾಟ ಆಡುತ್ತಿದ್ದಾರೆ ಎಂಬುದನ್ನು ಆದಿವಾಸಿ ನಾಯಕರೇ ಕಂಡುಕೊಂಡಿದ್ದರು. ಇದೇ ವೇಳೆ ಅವರು ಸುಲಭದಲ್ಲಿ ಹಂಚಿಕೆ ಮಾಡಬಹುದಾಗಿದ್ದ 11 ಲಕ್ಷ ಎಕರೆ ಭೂಮಿಯನ್ನು ಗುರುತಿಸಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭೂರಹಿತ ಆದಿವಾಸಿಗಳಿಗೆ ರಾಜ್ಯದಲ್ಲಿ ಸರಕಾರ ನೀಡಬೇಕಾಗಿದ್ದ ಜಮೀನು ಮೂರು ಲಕ್ಷ ಎಕರೆಗಿಂತಲೂ ಕಡಿಮೆ.
ಹಿಂದೆ ಉಂಟಾಗಿದ್ದ ಕಹಿ ಅನುಭವದ ಹಿನ್ನೆಲೆಯಲ್ಲಿ, ಎಲ್ಲರಿಗೂ ಭೂಮಿ ಎಂಬ ಆದಿವಾಸಿಗಳ ಬೇಡಿಕೆ ಬೃಹತ್ ಮಟ್ಟದಲ್ಲಿ ಆದಿವಾಸಿ ಜಮೀನನ್ನು ಅಕ್ರಮವಾಗಿ ಆದಿವಾಸಿಯೇತರರಿಗೆ ನೀಡುವ ಅಪಾಯ ಸೃಷ್ಟಿಸಬಹುದು ಎಂದು ಹಲವರು ವಾದಿಸಿದ್ದರು. ಈ ಸಮಯದಲ್ಲಿ ಆದಿವಾಸಿಗಳು ಈ ಚಳವಳಿಯನ್ನು ಮುನ್ನಡೆಸಲು ಆದಿವಾಸಿ ದಲಿತ ಸಮರ ಸಮಿತಿಯನ್ನು ರಚಿಸಲು ನಿರ್ಧರಿಸಿತು. ಸಮಿತಿಯು ಕೇರಳದ 34 ಬುಡಕಟ್ಟು ಸಮುದಾಯಗಳನ್ನು ಪ್ರತಿ ನಿಧಿಸುವ ನಾಯಕರ ಮಂಡಳಿಯನ್ನು ರಚಿಸಿತು. ಇದು ಆದಿವಾಸಿ ಗೋತ್ರಾ ಮಹಾಸಭಾವನ್ನು ರಚಿಸಲು ಹೇತುವಾಯಿತು. ಹಾಗಾಗಿ 2001ರ ಅಕ್ಟೋಬರ್ 3ರಂದು ಮಹಾಸಭೆ ಅಸ್ತಿತ್ವಕ್ಕೆ ಬಂತು. ಎಜಿಎಂಎಸ್ ಕೇವಲ ಆದಿವಾಸಿ ಸಮುದಾಯಗಳಿಂದ ಮಾತ್ರವಲ್ಲ ನಾಗರಿಕ ಸಮಾಜದಿಂದಲೂ ಬೆಂಬಲವನ್ನು ಬಯಸಿತು. ಈ ಹೋರಾಟವು ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಕಾಲ ನಡೆಯಿತು. ಈ ಹಿನ್ನೆಲೆಯಲ್ಲಿ ಸಿಕೆ ಜಾನು ಆಮರಣಾಂತ ಉಪವಾಸ ನಡೆಸುವುದಾಗಿ ಘೋಷಿಸಿದರು. ಸಾರ್ವಜನಿಕವಾಗಿ ಸಾಕಷ್ಟು ಟೀಕೆಯನ್ನು ಎದುರಿಸಿದ ಸರಕಾರ ಅಂತಿಮವಾಗಿ ಆದಿವಾಸಿ ನಾಯಕರ ಜೊತೆಗೆ ಮಾತುಕತೆಗೆ ನಿರ್ಧರಿಸಿತು.
ಕೃಪೆ: countercurrents.org