Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಫೆಬ್ರವರಿ 25ರ ಬಂದ್ : ಕೆಲವು...

ಫೆಬ್ರವರಿ 25ರ ಬಂದ್ : ಕೆಲವು ಅನಿಸಿಕೆಗಳು

-ಸುರೇಶ್ ಭಟ್ ಬಾಕ್ರಬೈಲ್-ಸುರೇಶ್ ಭಟ್ ಬಾಕ್ರಬೈಲ್26 Feb 2017 11:57 PM IST
share
ಫೆಬ್ರವರಿ 25ರ ಬಂದ್ : ಕೆಲವು ಅನಿಸಿಕೆಗಳು

ಇದೇ ಫೆಬ್ರವರಿ 25ರಂದು ಸಿಪಿಐ (ಎಂ) ವತಿಯಿಂದ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ಸೌಹಾರ್ದ ರ್ಯಾಲಿಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರ ಆಯೋಜಿಸಿದ್ದ ಬಂದ್ ಹೆಚ್ಚುಕಮ್ಮಿ ಯಶಸ್ವಿಯಾದಂತೆ ಕಾಣುತ್ತದೆ. ಇದಕ್ಕಿರುವ ಹಲವು ಕಾರಣಗಳ ಪೈಕಿ ಪ್ರಮುಖವಾಗಿರುವುದೆಂದರೆ (1)ಚಡ್ಡಿಗಳ ಹಿಂಸಾಚಾರದ ದಾಖಲೆ (2)ಖಾಸಗಿ ಸಾರಿಗೆ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಗಳ ಕೇಸರೀಕರಣ. ಮಂಗಳೂರು ನಗರವೂ ಸೇರಿದಂತೆ ಇಡೀ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಭಾರೀ ಪ್ರಾಬಲ್ಯ ಹಾಗೂ ಪ್ರಭಾವ ಹೊಂದಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇಲ್ಲಿ ಕಳೆದ ಹಲವು ದಶಕಗಳಿಂದ ಸರಕಾರಿ ಬಸ್ಸುಗಳ ಪ್ರಾರಂಭಕ್ಕೆ ಅಡ್ಡಿ ಒಡ್ಡುವುದರೊಂದಿಗೆ ಮಂಗಳೂರು ಬೆಂಗಳೂರು ರೈಲು ಸೇವೆ ವಿಚಾರದಲ್ಲೂ ಸಾಧ್ಯವಾದಷ್ಟೂ ಅಡ್ಡಿ, ಅಡಚಣೆಗಳನ್ನು ತಂದೊಡ್ಡಿದಂಥ ಈ ಬಸ್ ಮಾಫಿಯ ಅದೆಷ್ಟು ಪ್ರಭಾವಶಾಲಿಯಾಗಿದೆ ಎಂದು ನೀವೇ ಊಹಿಸಬಹುದು. ಇಲ್ಲಿನ ಖಾಸಗಿ ಬಸ್ಸು ವ್ಯವಸ್ಥೆಗೆ ಸ್ವಲ್ಪವಾದರೂ ಸಾಮಾಜಿಕ ಜವಾಬ್ದಾರಿ ಇಲ್ಲ ಎನ್ನುವುದಂತೂ ಹಲವು ವರ್ಷಗಳಿಂದ ಸಾಬೀತಾಗಿದೆ.

ಇವರಿಗೆ ದಿನಕೂಲಿ ಕಾರ್ಮಿಕರು ಒಂದು ದಿನದ ವೇತನ ಕಳೆದುಕೊಳ್ಳುವ ಬಗ್ಗೆ, ಬಸ್ಸು ಸೇವೆಯ ಮೇಲೇ ಹೊಂದಿಕೊಂಡಿರುವ ಇತರ ಶ್ರಮಿಕ ವರ್ಗಗಳ ಬಗ್ಗೆ, ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ನೆಲೆಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ ಸಂವಿಧಾನಬಾಹಿರವೂ, ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವೂ ಆದ ಈ ಬಂದ್‌ಗೆ ಬೆಂಬಲ ನೀಡುತ್ತಿರಲಿಲ್ಲ. ಇಲ್ಲಿ ಬಸ್ಸುಗಳೆಂದರೆ ಮುಂಬೈನ ಸಬರ್ಬನ್ ರೈಲು ಇದ್ದ ಹಾಗೆ. ಜಿಲ್ಲೆಯ ಮತ್ತು ಮಂಗಳೂರು ನಗರದ ನರನಾಡಿಯಂತಿರುವ ಈ ಸೇವೆ ನಿಂತುಹೋದಲ್ಲಿ ಬಂದ್ ಆಚರಿಸುವುದು ಸುಲಭ ಎನ್ನುವುದು ಸಂಘಿಗಳಿಗೆ ಚೆನ್ನಾಗಿ ಗೊತ್ತು. ಅಂತೆಯೇ ಖಾಸಗಿ ಬಸ್ಸುಗಳು ಫೆಬ್ರವರಿ 25ರಂದು ಸಂಚರಿಸದಿರುವುದು ಸಂಘಿಗಳ ಕಾನೂನುಬಾಹಿರ ಬಂದ್‌ಗೆ ಪರೋಕ್ಷ ಬೆಂಬಲ ನೀಡಿದಂತಾಗಿದೆ. ಇಲ್ಲಿಯ ತನಕ ಸಾರ್ವಜನಿಕರಿಗೆ ಉಪಯುಕ್ತವಿರುವ ಸೀಸನ್ ಟಿಕೆಟ್ ಮುಂತಾದ ಯಾವುದೇ ಸೇವೆಗಳನ್ನು ಒದಗಿಸಿರದ ಇವರು ತಾವಿರುವುದು ಸಂಘ ಪರಿವಾರದ ಸೇವೆಗಾಗಿ ಎಂದಾದರೆ ನಾಳೆಯಿಂದ ಸಾರ್ವಜನಿಕರನ್ನು ಕೊಂಡೊಯ್ಯುವುದನ್ನು ನಿಲ್ಲಿಸಿ ಬರೀ ಚಡ್ಡಿಗಳನ್ನು ಸಾಗಿಸುವುದೊಳಿತು. ಸಾರ್ವಜನಿಕರಿಗೆ ಅಗತ್ಯವಿರುವಷ್ಟು ಸರಕಾರಿ ಬಸ್ಸುಗಳನ್ನು ಆಡಳಿತ ಒದಗಿಸಲಿ.

ಇನ್ನು ಇಲ್ಲಿನ ರಿಕ್ಷಾ ಚಾಲಕ, ಮಾಲಕರ ಸಂಘಗಳಲ್ಲಿ ಹೆಚ್ಚಿನವು ಸಂಘ ಪರಿವಾರಕ್ಕೆ ಒಲವು ತೋರುವಂಥವು ಎಂಬುದು ದೊಡ್ಡ ರಹಸ್ಯವೇನೂ ಅಲ್ಲ. ಮತ್ತೊಂದು ಸಂಗತಿ ಏನೆಂದರೆ ಮಂಗಳೂರಿನ ಮೂರು ದೊಡ್ಡ ಮಾಲ್‌ಗಳ ಭದ್ರತಾ ವ್ಯವಸ್ಥೆ ಚಡ್ಡಿ ಸಂಘಟನೆಗಳ ಕೈಯಲ್ಲಿದೆ. ಆ ಮಾಲ್‌ಗಳ ಮ್ಯಾನೇಜರುಗಳು ಮಳಿಗೆ ಮಾಲಕರಿಗೆ ತಮ್ಮ ಮಳಿಗೆಗಳನ್ನು ಫೆಬ್ರವರಿ 25ರಂದು ತೆರೆಯದಂತೆ 24ರಂದೇ ಹೇಳಿದ್ದರೆಂದು ತಿಳಿದುಬಂದಿದೆ. ದೊಡ್ಡ ಗುಪ್ತಚರ ಜಾಲವನ್ನೂ ಹಿಂದಿನ ಅನುಭವಗಳ ಹೇರಳ ದಾಖಲೆಗಳನ್ನೂ ಹೊಂದಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳಿಗೆ ಇದೆಲ್ಲದರ ಮಾಹಿತಿ ಇರಲಿಲ್ಲವೆಂದು ಹೇಳಬಹುದೇ? ಹೀಗಿರುವಾಗ ಅವರು ಸೂಕ್ತ ಪೊಲೀಸ್ ಭದ್ರತೆ ಒದಗಿಸಿ ‘‘ನೀವೆಲ್ಲ ಬೀದಿಗಿಳಿಯಲೇಬೇಕು’’ ಎಂದು ಬಸ್ಸು, ಆಟೊಗಳಿಗೆ ತಾಕೀತು ಮಾಡಬೇಕಾಗಿತ್ತು. ಚಡ್ಡಿ ಸಂಘಟನೆಗಳ ಕಿಡಿಗೇಡಿಗಳನ್ನೆಲ್ಲ ಬಂಧಿಸಬೇಕಾಗಿತ್ತು. ಇದನ್ನು ಮಾಡುವ ಬದಲು ಇಷ್ಟು ಸಾವಿರ ಸಿಬ್ಬಂದಿ ತರಿಸಿದ್ದೇವೆ, ಅಷ್ಟು ಬಂದೋಬಸ್ತ್ ಮಾಡಿದ್ದೇವೆ, ಕಿಡಿಗೇಡಿಗಳಿಂದ ಮುಚ್ಚಳಿಕೆ ಬರೆಸಿಕೊಂಡಿದ್ದೇವೆ ಎಂದು ಮುಂತಾದ ಹೇಳಿಕೆಗಳನ್ನು ನೀಡಿರುವುದೆಲ್ಲ ಬರೀ ನಾಟಕ ಎಂದೇ ತೋರುತ್ತದೆ.

ಇಲ್ಲಿನ ಪೊಲೀಸ್ ವ್ಯವಸ್ಥೆ ಕೇಸರೀಕರಣಕ್ಕೆ ತುತ್ತಾಗಿರುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಜಿಲ್ಲಾ ಪೊಲೀಸ್ ವೆಬ್‌ಸೈಟಿನಲ್ಲಿ ಆರೆಸ್ಸೆಸ್‌ನ ಜಾಹೀರಾತು ಸೇರಿದಂತೆ ಹಲವಾರು ನಿದರ್ಶನಗಳಿವೆ. ಇದಲ್ಲದೆ ಜಿಲ್ಲೆಯ ಶೇ.60ರಷ್ಟು ಪೊಲೀಸರು ಚಡ್ಡ್ಡಿಗಳೆಂದು ಖುದ್ದು ಬಿಜೆಪಿ ಎಂಎಲ್ಸಿ ಗಣೇಶ್ ಕಾರ್ಣಿಕ್ ಎಂಬವರು ಕೋಬ್ರಾಪೋಸ್ಟ್‌ನ ಕುಟುಕುಕಾರ್ಯಾಚರಣೆಯಲ್ಲಿ ಹೇಳಿದ್ದಾರೆ. ಇದೆಲ್ಲ ನೂರು ಪ್ರತಿಶತ ಸತ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವಂಥ ಘಟನೆಯೊಂದು ಇತ್ತೀಚಡ್ಡಿೆ ಸುಮಾರು ಒಂದು ತಿಂಗಳ ಹಿಂದೆ ನಡೆದಿದೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಹೆಸರಿನ ಸಂಘ ಪರಿವಾರದ ಸಂಘಟನೆಯೊಂದು ಓರ್ವ ನಿವೃತ್ತ ಪೊಲೀಸ್ ಅಧಿಕಾರಿ ಇರುವಂಥ ಒಂದು ಎನ್‌ಜಿವೊ ಹೆಸರಿನಲ್ಲಿ ಮಂಗಳೂರಿನ ಸ್ಟಾರ್ ಹೊಟೇಲ್ ಒಂದರಲ್ಲಿ ಜನವರಿ 9ರಂದು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಭಯೋತ್ಪಾದಕ ಕೃತ್ಯಗಳ ಆರೋಪಿ ಆರೆಸ್ಸೆಸ್‌ನ ಇಂದ್ರೇಶ್ ಕುಮಾರ್ ಎಂಬಾತನೂ ಬಂದಿದ್ದ.

ಆ ಸಂದರ್ಭದಲ್ಲಿ ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳೇ ಮುಂಚೂಣಿ ವಹಿಸಿಕೊಂಡು ಮಂಗಳೂರಿನ ಅನೇಕ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು! ಕಾಲಕಾಲಕ್ಕೆ ಇತ್ತೀಚಿನ ಗುಪ್ತಚರ ವರದಿಗಳನ್ನು ಪಡೆಯುವ ಹಿರಿಯ ಅಧಿಕಾರಿಗಳಿಗೆ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ಬಗ್ಗೆ ಪೂರ್ವಮಾಹಿತಿ ಇರಲಿಲ್ಲವೆಂದರೆ ಅದನ್ನು ನಂಬುವುದಾದರೂ ಹೇಗೆ? ಇವರ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗಿರುವ ಹೇಳಿಕೆಗಳು, ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ರೀತಿಯಲ್ಲಿರುವ ವರ್ತನೆಗಳಿಗೆ ಬಹುಶಃ ಸದ್ಯ ಅಧಿಕಾರದಲ್ಲಿ ಇರುವವರನ್ನೂ ಜೊತೆಜೊತೆಗೇ ಮುಂದೆ ಅಧಿಕಾರಕ್ಕೆ ಬರಬಹುದಾದವರನ್ನೂ ಓಲೈಸದೆ ಗತ್ಯಂತರವಿಲ್ಲ ಎಂಬ ಪರಿಸ್ಥಿತಿಯೇ ಕಾರಣವೇ? ತನ್ನ ಅಧಿಕಾರಾವಧಿಯ ಕೊನೆಯ ಹಂತಕ್ಕೆ ಬಂದು ತಲುಪಿರುವ ರಾಜ್ಯದ ಕಾಂಗ್ರೆಸ್ ಸರಕಾರಕ್ಕೂ ಕರಾವಳಿ ಜಿಲ್ಲೆಗಳನ್ನು ಸಂಘ ಪರಿವಾರದ ಕಪಿಮುಷ್ಟಿಯಿಂದ ಮುಕ್ತಗೊಳಿಸುವ ಇರಾದೆ ಇರುವಂತೆ ತೋರುತ್ತಿಲ್ಲ. ಹೀಗಿರುವಾಗ ಮುಂದೆ ಎಂತೆಂತಹ ಅನಾಹುತಗಳು ಕಾದಿವೆಯೋ ಯಾರು ಬಲ್ಲರು!

share
-ಸುರೇಶ್ ಭಟ್ ಬಾಕ್ರಬೈಲ್
-ಸುರೇಶ್ ಭಟ್ ಬಾಕ್ರಬೈಲ್
Next Story
X