Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕಪ್ಪತಗಿರಿಯೆಂಬ ಚಿನ್ನದ ಬೆರಗೂ ಮೈನಿಂಗ್...

ಕಪ್ಪತಗಿರಿಯೆಂಬ ಚಿನ್ನದ ಬೆರಗೂ ಮೈನಿಂಗ್ ಲಾಬಿಯೂ...

ಮಂಜುನಾಥ ನರಗುಂದಮಂಜುನಾಥ ನರಗುಂದ2 March 2017 6:31 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕಪ್ಪತಗಿರಿಯೆಂಬ ಚಿನ್ನದ ಬೆರಗೂ ಮೈನಿಂಗ್ ಲಾಬಿಯೂ...

ಭಾಗ-1

ಇಂದು ಸಂಪೂರ್ಣ ಅಪಾಯದಂಚಿಗೆ ಸಿಲುಕಿರುವ ಕಪ್ಪತ್ತಗುಡ್ಡವನ್ನು ನಾವು ರಕ್ಷಿಸಬೇಕಿದೆ. ಇಂತಹ ಅಪಾಯವನ್ನು ನಾವು ಈಗಾಗಲೇ ಕುದುರೆಮುಖ ಕಬ್ಬಿಣದ ಗಣಿಗಾರಿಕೆಯಿಂದಾಗಿ ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ಮಾನವ ನಿರ್ಮಿತ ಮರುಭೂಮಿಯ ಮೂಲಕ ಕಂಡಿದ್ದೇವೆ. ಇಂತಹ ಸರಣಿಗತ ಅನುಭವಗಳು ನಮ್ಮ ಕಣ್ಣ ಮುಂದಿದ್ದರೂ ಸರಕಾರಗಳು ಪಾಠ ಕಲಿಯದೇ ಇರುವುದು ದುರಂತದ ಸಂಗತಿ.

ದಾರಿಗುಂಟ ಗುಡ್ಡದ ತಲೆನೆತ್ತಿ ಸೀಳಿ ನಿಂತಿರುವ ಫ್ಯಾನುಗಳ ಸಾಲು, ನೀರಿನ ಒಂದೂ ಕುರುಹು ಕಾಣದೆ ಇರುವ ಒಣ ಭೂಮಿಗಳು, ಮೇವಿಗಾಗಿ ದಿನವಿಡೀ ಗುಡ್ಡವನ್ನೆಲ್ಲಾ ಅರಸುವ ದನಕರುಗಳು, ದಿನಗೂಲಿ ಕೆಲಸಕ್ಕಾಗಿ ಪಟ್ಟಣದತ್ತ ಗುಳೆ ಹೊರಟ ಲಂಬಾಣಿಗಳು...

ಈ ಚಿತ್ರಣ ನನಗೆ ಕಂಡಿದ್ದು ನಾನು ಇತ್ತೀಚೆಗೆ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ನನ್ನೂರು ಬೆಳವಣಿಕಿಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದ್ದರೂ ನಾನು ಈವರೆಗೂ ಕಪ್ಪತಗಿರಿಯನ್ನು ಹತ್ತಿರ ದಿಂದ ಕಾಣಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ನಾನು ಭೇಟಿ ನೀಡಲು ಬಲವಾದ ಕಾರಣವೆಂದರೆ ಪ್ರಚಲಿತವಾಗಿ ಈ ಪ್ರದೇಶದ ಕುರಿತ ಹಲವು ವಿಷಯಗಳ ಸುದ್ದಿಯಿಂದಾಗಿ. ಅದರಲ್ಲೂ ಮುಖ್ಯವಾಗಿ ಚಿನ್ನ ಮತ್ತು ಕಬ್ಬಿಣದ ಗಣಿಗಾರಿಕೆ, ಕಾಡ್ಗಿಚ್ಚು, ಮೀಸಲು ಅರಣ್ಯ ಪ್ರದೇಶದ ಸ್ಥಾನಮಾನ ಹಿಂದೆೆಗೆದುಕೊಳ್ಳುವಿಕೆ, ಭೂ ಆಕ್ರಮಣಗಳಂತಹ ವಿಷಯಗಳು ಕಂಗೆಡಿಸಿದ್ದರಿಂದಾಗಿ ಈ ಭೇಟಿಯನ್ನು ನಿಶ್ಚಿತಗೊಳಿಸಿದ್ದವು. ಇಂತಹ ಎಲ್ಲ ಹಿನ್ನೆಲೆಗಳೊಂದಿಗೆ ಪ್ರಯಾಣ ಹೊರಟ ನನಗೆ ಹಾದಿಯುದ್ದಕ್ಕೂ ಸಹಪ್ರಯಾಣಿಕರೊಂದಿಗಿನ ಮಾತುಗಳ ಮೂಲಕ ಅಲ್ಪಸ್ವಲ್ಪ ಮನದಟ್ಟಾದವು. ಆದರೆ, ಇವುಗಳೆಲ್ಲದರ ಬಗ್ಗೆ ಸಂಪೂರ್ಣ ಚಿತ್ರಣ ದೊರೆತದ್ದು ಮಾತ್ರ ದೋಣಿ ತಾಂಡಾ ಎಂಬ ಲಂಬಾಣಿ ಸಮುದಾಯವೇ ಬಹುತೇಕರಿರುವ ಪ್ರದೇಶಕ್ಕೆ ಬಂದಿಳಿದಾಗ. ಇಲ್ಲಿ ಪರಿಚಿತನಾದ ಹಣುಮಂತಪ್ಪ ಲಮಾಣಿ ಎನ್ನುವ ಪದವಿ ವಿದ್ಯಾರ್ಥಿ ಅತ್ತ ಗದುಗಿನಲ್ಲಿ ನಡೆದ ಉಪವಾಸ ಸತ್ಯಾಗ್ರಹಕ್ಕೂ, ಇಂದು ಕಪ್ಪತಗಿರಿಯ ತಪ್ಪಲಿನಲ್ಲಿ ನಡೆಯುತ್ತಿರುವ ಹಲವು ವಿದ್ಯಾಮಾನಗಳಿಗೆ ಸಾಕ್ಷಿಯಾಗಿದ್ದ. ಅವನ ಹತ್ತಿರ ಮೀಸಲು ಅರಣ್ಯದ ಸ್ಥಾನಮಾನ, ಗಣಿಗಾರಿಕೆ ಹಾಗೂ ಈ ಪ್ರದೇಶದ ಜನರ ಜೀವನಮಟ್ಟವನ್ನು ಕುರಿತು ವಿಚಾರಿಸುತ್ತಾ ಹೊರಟಾಗ ಕೆಲವು ಸಂಗತಿಗಳು ಅಚ್ಚರಿ ತಂದರೂ, ಅದು ವಾಸ್ತವವೆನ್ನುವುದು ಅಷ್ಟೇ ಸತ್ಯದ ಸಂಗತಿ.

ಈ ಕಪ್ಪತಗುಡ್ಡದ ಸುತ್ತಮುತ್ತಲ ಪ್ರದೇಶದಲ್ಲಿ ವ್ಯವಸಾಯ ಮಾಡಲಾಗುತ್ತಿದ್ದು, ಇದರ ಭೂಹಕ್ಕಿನ ಕುರಿತು ಕೇಳಿದಾಗ, ‘‘ಅರಣ್ಯ ಇಲಾಖೆಯ ಜಮೀನಾಗಿರುವುದರಿಂದ ಇಲ್ಲಿ ಯಾವುದೇ ರೀತಿಯ ಖಾಯಂ ಭೂ ಹಕ್ಕನ್ನು ಇಲ್ಲಿನ ಬಹುತೇಕ ಜನರಿಗೆ ನೀಡಿಲ್ಲ’’ ಎನ್ನುವುದು ಅವನ ಉತ್ತರವಾಗಿತ್ತು. ಅಲ್ಲದೆ, ಅಲ್ಲಿನ ತಾಂಡಾದ ಹಿರಿಯ ನಾಗರಿಕರ ಅಭಿಪ್ರಾಯ ಸಂಗ್ರಹದ ಸಂದರ್ಭದಲ್ಲಿ ನಾಗೇಶ ಚವ್ಹಾಣರು ಮಾತನಾಡುತ್ತಾ ‘‘ತಲೆಮಾರುಗಳಿಂದ ನಾವು ಈ ಭೂ ಪ್ರದೇಶದಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಆದ್ದರಿಂದ ನಮಗೆ ಭೂ ಹಕ್ಕುಪತ್ರ ಕೊಟ್ಟ ನಂತರ ಅದನ್ನು ಮೀಸಲು ಪ್ರದೇಶವೆಂದು ಘೋಷಿಸಲಿ. ಇಲ್ಲವಾದರೆ ಯಥಾಸ್ಥಿತಿಯನ್ನೇ ಮುಂದುವರಿಸಲಿ’’ ಎಂಬುದು ಅವರ ಅಭಿಪ್ರಾಯ. ಇನ್ನು ಇಲ್ಲಿನ ಗಣಿಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಿಳಿದಾಗ ‘‘ಅದಕ್ಕೆ ನಮ್ಮಿಂದ ಖಂಡಿತ ವಿರೋಧವಿದೆ. ಆದರೆ, ಇದು ಸರಕಾರ ತೀರ್ಮಾನ ಮಾಡಬೇಕಾದ ವಿಚಾರ. ಈ ಮೊದಲು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸುವಾಗ ಇಲ್ಲಿನ ಜನರನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ, ಈ ಬಾರಿ ಈಗಾಗಲೇ ನಮ್ಮ ನಿಲುವನ್ನು ಜನವರಿ 16 ರಂದು ಡಂಬಳದ ತೋಂಟದಾರ್ಯ ಮಠದಲ್ಲಿ ಜರಗಿದ ಸಭೆಯಲ್ಲಿ ಸರಕಾರಕ್ಕೆ ತಿಳಿಸಿದ್ದೇವೆ. ಆದ್ದರಿಂದ, ಸರಕಾರ ಜನಪರವಾದ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ’’ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಇದಕ್ಕೆಲ್ಲ ಪೂರಕವೆಂಬಂತೆ ಕಪ್ಪತಗಿರಿಯ ಗ್ವಾಲಿಗೇರ ಮಠದ ಪ್ರದೇಶದಲ್ಲಿರುವ ಹೆಸರು ಹೇಳಲಿಚ್ಛಿಸದ ಮಹಿಳೆಯನ್ನು ಈ ವಿಷಯಗಳ ಕುರಿತಾಗಿ ಕೇಳಿದಾಗ ಹೇಳಿದ್ದಿಷ್ಟು ‘‘ಅಣ್ಣಾರ... ಸರಕಾರದವರು ಗುಡ್ಡಕ್ಕೆನ ಬೇಲಿ ಹಾಕ್ತಾರ್ ಸರಿ. ಆದ್ರ ನಮ್ಮ ಜನಾ ತಲಾಂತರದಿಂದ ನಾಂವ ಗುಡ್ಡದ ಮ್ಯಾಲನ ಅವಲಂಬಿಸಿದ್ದೀವಿ. ಹಿಂಗಾದ್ರ ನಮ್ಮವು ದನಕರ ಎಲ್ಲಿ ಹೋಗಬೇಕ? ಅದಕ್ ಮೆಂವ ಎಲ್ಲಿಂದ್ ತರ್ಬೇಕ? ನೀವೇನ್ ಸಿಟಿಯಾಗ್ ಗ್ಯಾಸು, ಸಿಲಿಂಡರ್ ಅಂತ ಅಡಿಗೆ ಮಾಡ್ತೀರಿ.. ನಮಗ್ ಈಗೂ ಗುಡ್ಡದ ಕಟ್ಟಿಗೆ ಕುಳ್ಳನ ಬೇಕ ಬದಕಾಕ...’’ ಎಂದರು. ಇನ್ನು ಇಲ್ಲಿನ ಗಣಿಗಾರಿಕೆಯ ಬಗ್ಗೆ ವಿಚಾರಿಸಿದಾಗ ‘‘ಅದನ್ ಬಂದ್ ಮಾಡಬಹುದ್ರಿ.. ಅದೆಲ್ಲ ಸರಕಾರದ ಕೈಯ್ಯಿಗ್ ಐತಿ’’ ಎನ್ನುವುದು ಅವರ ಉತ್ತರವಾಗಿತ್ತು. ಇಲ್ಲಿನ ಬಹುತೇಕರ ಅಭಿಪ್ರಾಯಗಳು ತಲೆತಲಾಂತರದಿಂದ ಮಾಡಿಕೊಂಡು ಬಂದಿರುವ ಕೃಷಿ ಭೂಮಿಯು ಮೀಸಲು ಅರಣ್ಯ ಪ್ರದೇಶದ ಸ್ಥಾನಮಾನದಿಂದಾಗಿ ಕೈ ತಪ್ಪಿಹೋದೀತೆಂಬ ಆತಂಕವನ್ನೇ ವ್ಯಕ್ತಪಡಿಸಿದವು. ಈ ಅಭಿಪ್ರಾಯಗಳೊಂದಿಗೆ ನಾನು ಕಪ್ಪತಗಿರಿ ತಪ್ಪಲಿನಲ್ಲಿ ಸಾಗುವಾಗ ಎದುರಾದ ಕಡಕೋಳ, ಅತ್ತಿಕಟ್ಟಿ, ಚಿಕ್ಕಒಡ್ದಟ್ಟಿ, ಜಲಗೇರಿ, ದೋಣಿ ಗ್ರಾಮಗಳು ಹಾಗೂ ಲಂಬಾಣಿ ತಾಂಡಾಗಳ ಜನರಿಗೆ ಈ ಗುಡ್ಡದೊಂದಿಗೆ ಶತಮಾನಗಳ ಭಾವನಾತ್ಮಕ ಜೀವನ ಸಂಬಂಧವಿದೆ ಎಂಬುದು ಸ್ಪಷ್ಟವಾಗಿತ್ತು.

ಇಂದು ಇವರಿಗೆ ಮೀಸಲು ಅರಣ್ಯ ಪ್ರದೇಶವೆಂಬ ತಂತಿಬೇಲಿ ಒಂದುಕಡೆಯಾದರೆ, ಇನ್ನೊಂದೆಡೆಗೆ ಗಣಿಗಾರಿಕೆಯ ಗುಮ್ಮವು ಕಾಡುತ್ತಿದೆ. ಈ ರೀತಿಯ ಒಳ ಬೇಗುದಿಯ ಜೀವನ ನಡೆಸುವ ಸ್ಥಿತಿ ಈ ಜನರದ್ದಾಗಿದೆ. ಇಂತಹ ಹಲವು ಗೊಂದಲಗಳ ನಡುವೆಯೂ ಪರಿಸರ ಸಂರಕ್ಷಣೆಯನ್ನು ಮಾಡಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ನಾವೆಲ್ಲಾ ಇದ್ದೇವೆ. ಇಂತಹ ಸಂದಿಗ್ಧತೆಗಳು ಇಂದು ಹಲವು ಅನಿವಾರ್ಯತೆಗಳನ್ನು ಸೃಷ್ಟಿಸಿದೆ. ಆದ್ದರಿಂದ ಇಂದು ಸಂಪೂರ್ಣ ಅಪಾಯದಂಚಿಗೆ ಸಿಲುಕಿರುವ ಕಪ್ಪತಗುಡ್ಡವನ್ನು ನಾವು ರಕ್ಷಿಸಬೇಕಿದೆ. ಇಂತಹ ಅಪಾಯವನ್ನು ನಾವು ಈಗಾಗಲೇ ಕುದುರೆಮುಖ ಕಬ್ಬಿಣದ ಗಣಿಗಾರಿಕೆಯಿಂದಾಗಿ ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ಮಾನವ ನಿರ್ಮಿತ ಮರುಭೂಮಿಯ ಮೂಲಕ ಕಂಡಿದ್ದೇವೆ. ಇಂತಹ ಸರಣಿಗತ ಅನುಭವಗಳು ನಮ್ಮ ಕಣ್ಣ ಮುಂದಿದ್ದರೂ ಸರಕಾರಗಳು ಪಾಠ ಕಲಿಯದೇ ಇರುವುದು ದುರಂತದ ಸಂಗತಿ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಮಂಜುನಾಥ ನರಗುಂದ
ಮಂಜುನಾಥ ನರಗುಂದ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X