Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕ್ರಿಕೆಟ್ ತಾರೆಯ ದೇಶಪ್ರೇಮ

ಕ್ರಿಕೆಟ್ ತಾರೆಯ ದೇಶಪ್ರೇಮ

ಯುದ್ಧ ಮತ್ತು ಸಾವು

ವಾರ್ತಾಭಾರತಿವಾರ್ತಾಭಾರತಿ5 March 2017 12:03 AM IST
share
ಕ್ರಿಕೆಟ್ ತಾರೆಯ ದೇಶಪ್ರೇಮ

ಒಂದು ಸಮಾಜದಲ್ಲಿ ಬೇರೆಲ್ಲಾ ನಾಗರಿಕರಂತೆಯೇ ಕ್ರೀಡಾಪಟುಗಳಿಗೂ ಸರಿ-ತಪ್ಪುಗಳ, ನ್ಯಾಯ- ಅನ್ಯಾಯಗಳನ್ನು ವಿವೇಚಿಸುವ ಪರಿಜ್ಞಾನ ಇರಬೇಕಾಗುತ್ತದೆ. ಆದರೆ ಹಿಂಸೆಯನ್ನು ಬೆಂಬಲಿಸುವ, ಯುದ್ಧವನ್ನು ಪ್ರಚೋದಿಸುವ ಬಲಿದಾನಗಳನ್ನು ವೈಭವೀಕರಿಸುವ ಕ್ರೀಡಾಪಟು ಎಂದಿಗೂ ಆರೋಗ್ಯಕರ ಮನಸ್ಸು ಹಾಗೂ ವ್ಯಕ್ತಿತ್ವ ಹೊಂದಿರಲಾರ.

ಭಾರತದ ಕ್ರಿಕೆಟ್‌ನ ಖ್ಯಾತ ಆಟಗಾರನಾಗಿದ್ದ ವೀರೇಂದ್ರ ಸೆಹ್ವಾಗ್ ಯುದ್ಧ ಮತ್ತು ಅದರಿಂದಾಗುವ ಸಾವುಗಳ ಬಗ್ಗೆ ತನ್ನ ಚಿಂತನೆಯೊಂದನ್ನು ಹೇಳಿಕೊಂಡಿದ್ದಾರೆ.

"Pakistan did not Kill my dad, war Killed him"

ದಿಲ್ಲಿಯ ವಿದ್ಯಾರ್ಥಿನಿ ಗುರ್‌ಮೆಹರ್ ಕೌರ್ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಮನ್‌ದೀಪ್ ಸಿಂಗ್‌ರ ಮಗಳು. 1999ರ ಕಾರ್ಗಿಲ್ ಯುದ್ಧದಲ್ಲಿ ಮನ್‌ದೀಪ್ ಕೊಲ್ಲಲ್ಪಟ್ಟರು. ಇದನ್ನು ನೆನೆದು ಕೌರ್ ಎಂಬ ಘೋಷಣೆ ಪ್ರದರ್ಶಿಸಿದ್ದರು. ಅದೀಗ ವಿವಾದಕ್ಕೆ ಕಾರಣವಾಗಿದೆ.

ಭಾರತ-ಪಾಕಿಸ್ತಾನದ ನಡುವಿನ ಕಹಿ ಸಂಬಂಧಗಳಿಗೆ ಆರು ದಶಕಗಳ ಇತಿಹಾಸವಿದೆ. ಇನ್ನು ಭಾರತ ಉಪಖಂಡದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಗೆ ಬ್ರಿಟಿಷರ ಆಳ್ವಿಕೆಯ ಅವಧಿಯನ್ನು ಸೇರಿಸಿ ಲೆಕ್ಕ ಹಿಡಿದರೆ ಒಂದೂವರೆ ಶತಮಾನದ ದುರಂತ ಗಾಥೆಯೇ ಇದೆ. ಕ್ರೀಡಾ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಇತ್ತೀಚಿನ ದಶಕಗಳಲ್ಲಿ ಭಾರತ-ಪಾಕಿಸ್ತಾನದ ನಡುವಿನ ಯಾವುದೇ ಕ್ರೀಡಾ ಈವೆಂಟ್‌ನ ಮುಖಾಬಿಲೆಯಾಗುವಲ್ಲಿ ಭಾರತ ತಂಡವನ್ನು ಬೆಂಬಲಿಸುವುದು ದೇಶಾಭಿಮಾನಿಗಳ (ಹಿಂದೂ ಅಭಿಮಾನ) ಕರ್ತವ್ಯವೆಂಬಂತೆ ಹೇರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ನ ಪ್ರತಿಕ್ರಿಯೆಯನ್ನು ಗಮನಿಸಬೇಕಿದೆ.

ಗುರ್‌ಮೆಹರ್ ಕೌರ್ ಕಾರ್ಗಿಲ್ ಯುದ್ಧ ತನ್ನನ್ನು ಅನಾಥಳನ್ನಾಗಿಸಿತು ಅಂದಾಗ ಈ ಸೆಹ್ವಾಗ್

'I did not Score Two Triple Centuries My bat did' -ಎಂದು ಟ್ವಿಟರ್‌ನಲ್ಲಿ ಒಂದು ಹೇಳಿಕೆ ನೀಡಿದ್ದಾರೆ. ಇದು ಗುರ್‌ಮೆಹರ್ ಕೌರ್‌ಳ ಯುದ್ಧವನ್ನು ವಿರೋಧಿಸುವ, ತನ್ನ ತಂದೆಯನ್ನು ಕಳೆದುಕೊಂಡ ನೋವಿನ ಮಾತಿಗೆ ಸೆಹ್ವಾಗ್ ನೀಡಿರುವ ವ್ಯಂಗ್ಯದ-ಕ್ರೂರ ಪ್ರತಿಕ್ರಿಯೆ.

ಈಗಿನ ಬಿಜೆಪಿ ಸರಕಾರ ಮುಂದೊಂದು ದಿನ ಪಾಕಿಸ್ತಾನದೊಂದಿಗೆ ನೇರ ಯುದ್ಧವನ್ನೇ ಸಾರಲಿ ಅಥವಾ ಸೈನಿಕ ಸಂಘರ್ಷಕ್ಕೆ ಮುಂದಾಗಲಿ ಅದನ್ನು ಬೆಂಬಲಿಸದಿರುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದ್ದೇ ಇದೆ.

ಇಲ್ಲಿ ಸೆಹ್ವಾಗರ ಅನಿಸಿಕೆ ಇಷ್ಟೆ.

ಕ್ಯಾಪ್ಟನ್ ಮನ್‌ದೀಪ್‌ರ ಸಾವಿಗೆ ಯುದ್ಧ ಕಾರಣವಲ್ಲ, ಪಾಕಿಸ್ತಾನ ಕಾರಣ ಎಂದು. ಬಹುತೇಕ ಇದು ರಾಜಕಾರಣಿಗಳು ಆಡಬಲ್ಲ ಮಾತುಗಳು.

ರಾಜಕೀಯ ಹಾಗೂ ಯುದ್ಧಗಳ ಸನ್ನಿವೇಶಗಳಲ್ಲಿ ಎಲ್ಲಾ ಕ್ರೀಡಾಪಟುಗಳು ವೀರೇಂದ್ರ ಸೆಹ್ವಾಗರಂತೆ ವಕ್ರವಾಗಿ ಯೋಚಿಸುವುದಿಲ್ಲ.

ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಮುಹಮ್ಮದ್ ಅಲಿ ಯಾನೆ ಕ್ಲಾಸಿಯಸ್ ಕ್ಲೇ ಇದಕ್ಕೊಂದು ಉದಾಹರಣೆಯಾಗಿದ್ದಾರೆ.

ಪುಟ್ಟ ವಿಯೆಟ್ನಾಂ ದೇಶದ ವಿರುದ್ಧ ಅಮೆರಿಕ ರಕ್ಕಸ ದಾಳಿ ನಡೆಸುತ್ತಿದ್ದಾಗ ಸ್ವತಃ ಅಮೆರಿಕನ್ ಪ್ರಜೆಯಾಗಿದ್ದ ಅಲಿ ಅದನ್ನು ವಿರೋಧಿಸಿದ್ದರು. ವಿಯೆಟ್ನಾಂ ವಿರುದ್ಧದ ಯುದ್ಧಕ್ಕೆ ಅಮೆರಿಕನ್ ಯುವಕರು ಕಡ್ಡಾಯವಾಗಿ ಮಿಲಿಟರಿ ಸೇರಬೇಕೆಂಬ ಕಾಯ್ದೆ ಇದ್ದಾಗಲೂ ಅದನ್ನು ವಿರೋಧಿಸಿ ಪ್ರಚಾರಾಂದೋಲನ ನಡೆಸಿದ್ದರು. ಈ ತಪ್ಪಿಗಾಗಿ ಅವರ ವಿರುದ್ಧ ವಿಚಾರಣೆ ನಡೆದು 5 ವರ್ಷ ಜೈಲು ಶಿಕ್ಷೆಯಾದಾಗಲೂ ಅಲಿ ವಿಚಲಿತರಾಗಲಿಲ್ಲ.

‘‘ಅಮೆರಿಕದಲ್ಲಿ ಕಪ್ಪುಜನ ಕಳೆದ 400 ವರ್ಷಗಳಿಂದ ಜೈಲಿನಲ್ಲೇ ಇದ್ದಾರೆ. ಈ ಐದು ವರ್ಷದ ಜೈಲೇನು ಬಿಡಿ, ದಮನದ ಬಲಿಪಶುಗಳು ನಾವು’’ ಅಂದಿದ್ದರು.

ಒಲಿಂಪಿಕ್ಸ್ ಚಾಂಪಿಯನ್ ಆದ ಮೇಲೂ ಅವರಿಗೆ ಬಿಳಿಯರ ಹೊಟೇಲ್‌ಗಳಲ್ಲಿ ಕರಿಯನೆಂಬ ಕಾರಣದಿಂದ ಟೇಬಲ್ ನೀಡುತ್ತಿರಲಿಲ್ಲ. ತನ್ನೊಳಗೆ ಜನಾಂಗೀಯ ತಾರತಮ್ಯ ಹೊಂದಿರುವ ದೇಶವೊಂದು ಯಾವುದೇ ಸಮಾಜದಲ್ಲಿ ಏಕಾಭಿಪ್ರಾಯ ರೂಪಿಸುವುದು ಅಸಾಧ್ಯ.

ಅಮೆರಿಕದಲ್ಲಿ ಆದದ್ದು ಅದೇನೆ.

ಅಲಿ ಕೇವಲ ಜನಾಂಗೀಯ ತಾರತಮ್ಯ ಅನುಭವಿಸಿದವನಾಗಿ ಈ ಯುದ್ಧ ವಿರೋಧಿ ನಿಲುವು ತಳೆದಿರಲಿಲ್ಲ. ಒರ್ವ ಕ್ರೀಡಾಪಟುವಾಗಿ ಅವರಿಗೆ ಅನ್ಯಾಯದ ಯುದ್ಧ, ದಮನಗಳ ವಿರುದ್ಧ ದನಿ ಎತ್ತುವ ಆರೋಗ್ಯಕರ ಮನಸ್ಥಿತಿ ಇತ್ತು.

20ನೆ ಶತಮಾನದ ಪೂರ್ವಾರ್ಧದಲ್ಲಿದ್ದ ಬ್ರಿಟಿಷ್ ಟೆನಿಸ್ ಆಟಗಾರ ಟೋನಿ ಮೋಟ್ರಾಂ (1920-2016) ಕೂಡ ಬ್ರಿಟನ್-ಜರ್ಮನಿಯ ವಿಶ್ವ ಮಹಾಯುದ್ಧದಂತಹ ಭೀಕರ ಸ್ಥಿತಿಯಲ್ಲಿ ನಾಝೀವಾದ ವಿರೋಧಿಸಿದ್ದರು. ಆದರೆ ಜರ್ಮನ್ ಕ್ರೀಡಾಪಟುಗಳ ಪರವಾದ ನಿಲುವು ತಳೆದಿದ್ದರು.

ಹಾಗೆ ನೋಡಿದರೆ ಕ್ರೀಡೆ ಹಾಗೂ ರಾಜಕೀಯಗಳನ್ನು ಒಂದರ ಉದ್ದೇಶಕ್ಕಾಗಿ ಮತ್ತೊಂದನ್ನು ಬಳಸುವ ಅಸಭ್ಯ ಪ್ರವೃತ್ತಿ ಮೊದಲಿನಿಂದಲೂ ಇದೆ.

ಫಾಕ್‌ಲ್ಯಾಂಡ್ ಯುದ್ಧದ ಕಾವಿನಲ್ಲಿ ಅರ್ಜೆಂಟೀನಾ-ಇಂಗ್ಲೆಂಡ್‌ನ ಫುಟ್‌ಬಾಲ್ ಟೀಂಗಳು ಯುದ್ಧ ನಡೆಸುವಂತೆಯೇ ಸೆಣಸುತ್ತಿದ್ದರು. ಜಪಾನಿನ ದೌರ್ಜನ್ಯಗಳ ಕಹಿ ನೆನಪಿನಲ್ಲಿ ಚೀನಿ ಕ್ರೀಡಾಪಟುಗಳು ಇವತ್ತಿಗೂ ಕೋಪೋದ್ರಿಕ್ತರಾಗಿಯೇ ಜಪಾನಿಯರನ್ನು ಆಟದ ಅಂಗಳದಲ್ಲಿ ಎದುರಾಗುತ್ತಿರುತ್ತಾರೆ. ಆದರೆ ಇವರ್ಯಾರೂ ಕೂಡ ಒಬ್ಬರ ಸಾವನ್ನು ಗೇಲಿ ಮಾಡುವಷ್ಟು ಅಪ್ರಬುದ್ಧರಲ್ಲ.

 ಇಷ್ಟಕ್ಕೂ ಸೆಹ್ವಾಗ್‌ರಲ್ಲೂ ನಮಗೊಂದು ವೈರುಧ್ಯ ಕಾಣಸಿಗುತ್ತಿದೆ.

ಪಾಕಿಸ್ತಾನದಿಂದ ಭಾರತಕ್ಕೆ ತೊಂದರೆಯಾಗುತ್ತಿದೆ. ಅದು ನಮ್ಮ ಶತ್ರು ದೇಶ, ಪಾಕ್ ನಮ್ಮ ಯೋಧರನ್ನು ಕೊಲ್ಲುತ್ತಿದೆ ಎಂಬುದು ಅವರ ಮಾತಿನ ಸಾರಾಂಶ.

ಇದು ಸಮರ್ಥನೀಯ ಎಂದಾದಲ್ಲಿ ಭಾರತದ ಕ್ರಿಕೆಟಿಗರು ಇಂಗ್ಲೆಂಡ್ ವಿರುದ್ಧವೂ ಅದೇ ನಿಲುವು ತಳೆಯುವುದಿಲ್ಲ ಏಕೆ?

ನಾಲ್ಕು ಶತಮಾನ ಕಾಲ ಭಾರತವನ್ನು ಆಳಿ, ದೌರ್ಜನ್ಯ, ದಬ್ಬಾಳಿಕೆ ಎಲ್ಲಾ ನಡೆಸಿದ ದೇಶ ಇಂಗ್ಲೆಂಡ್. ಹಾಗಿದ್ದಾಗಲೂ ಇವತ್ತಿನವರೆಗೂ ಒಬ್ಬ ಭಾರತೀಯ ಕ್ರಿಕೆಟಿಗನೂ ಇಂಗ್ಲೆಂಡ್ ವಿರುದ್ಧ ಎಂದೂ ಮಾತನಾಡಿಲ್ಲ. ಅದರ ಬದಲಾಗಿ ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಟೀಂಗಳಿಗೆ ಹೋಗಿ ಇವರು ಆಡುತ್ತಿರುತ್ತಾರೆ. ದೇಶಭಕ್ತ ಸೆಹ್ವಾಗನೂ ಅನೇಕ ವರ್ಷ ಕಾಲ ಇಂಗ್ಲೆಂಡ್‌ನ ಲಿಸಿಸ್ಟರ್ ಶೈರ್ ಟೀಂನಲ್ಲಿ ಹಣಕ್ಕಾಗಿ ಕೌಂಟಿ ಕ್ರಿಕೆಟ್ ಆಡುತ್ತಿದ್ದರು.

 ಇದೇ ಸೆಹ್ವಾಗ್ ಅಮೆರಿಕನ್ ಮಾಲಕತ್ವದ ಸೆರ್ಬೆರಸ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಕಂಪೆನಿಯ ‘ಫಿಲಾ’ ಬ್ರಾಂಡ್‌ನ ಪ್ರಚಾರ ರಾಯಭಾರಿ ಕೂಡಾ ಹೌದು.

ಫಿಲಾದಿಂದ ಮೂರು ಕೋಟಿ ರೂಪಾಯಿ ಪಡೆಯುವಾಗ ಪಾಪ ನಮ್ಮ ದೇಶಭಕ್ತ ಸೆಹ್ವಾಗ್‌ಗೆ ಅದೇ ಅಮೆರಿಕದ ಯೂನಿಯನ್ ಕಾರ್ಬೈಡ್ ಕಂಪೆನಿಯ ವಿಷಾನಿಲದಿಂದ ಭೂಪಾಲ್‌ನಲ್ಲಿ ಮೂವತ್ತು ಸಾವಿರ ಭಾರತೀಯರು ಸಾವನ್ನಪ್ಪಿದ ದುರ್ಘಟನೆ ಮರೆತು ಹೋಗಿರುತ್ತದೆ.

ಒಂದು ಸಮಾಜದಲ್ಲಿ ಬೇರೆಲ್ಲಾ ನಾಗರಿಕರಂತೆಯೇ ಕ್ರೀಡಾಪಟುಗಳಿಗೂ ಸರಿ-ತಪ್ಪುಗಳ, ನ್ಯಾಯ- ಅನ್ಯಾಯಗಳನ್ನು ವಿವೇಚಿಸುವ ಪರಿಜ್ಞಾನ ಇರಬೇಕಾಗುತ್ತದೆ. ಆದರೆ ಹಿಂಸೆಯನ್ನು ಬೆಂಬಲಿಸುವ, ಯುದ್ಧವನ್ನು ಪ್ರಚೋದಿಸುವ ಬಲಿದಾನಗಳನ್ನು ವೈಭವೀಕರಿಸುವ ಕ್ರೀಡಾಪಟು ಎಂದಿಗೂ ಆರೋಗ್ಯಕರ ಮನಸ್ಸು ಹಾಗೂ ವ್ಯಕ್ತಿತ್ವ ಹೊಂದಿರಲಾರ.

ವೀರೇಂದ್ರ ಸೆಹ್ವಾಗ್‌ನಂತಹ ಅಮಾನವೀಯ ವ್ಯಕ್ತಿಗಳಿಗೆ, ತಂದೆಯನ್ನು ಬಲಿ ತೆಗೆದುಕೊಂಡ ‘ಯುದ್ಧ’ದ ಬಗೆಗಿನ ಗುರ್‌ಮೆಹರ್ ಕೌರ್‌ಳ ನೋವು ಗೋಚರಿಸುವುದಿಲ್ಲ. ಯುದ್ಧದಲ್ಲಿ ಪೇರಿಸಲಾಗುವ ಹೆಣಗಳ ಸಾಲು ಕ್ರಿಕೆಟ್ ಮ್ಯಾಚ್‌ನಲ್ಲಿ ಪೇರಿಸುವ ರನ್‌ಗಳಂತಹದ್ದಲ್ಲ. ಯುದ್ಧ ಆಟವೂ ಅಲ್ಲ. ಯೋಧರ ಸಾವುಗಳು ರಂಜನೆಯಲ್ಲ, ಅದು ಓಟೂ ಅಲ್ಲ.

ಸೆಹ್ವಾಗ್ ತರದ ಕ್ರಿಕೆಟಿಗರು ಭಾರತೀಯ ಪುಢಾರಿಗಳ ಕೈಲಿರುವ ಒಂದು ಹರಿದ ಕ್ರಿಕೆಟ್ ಬಾಲ್ ತರ ನಮಗೆ ಕಾಣುತ್ತಾರೆ ಅಷ್ಟೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X