Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಭಿವೃದ್ಧಿ ದರದ ಅಂದಾಜುಗಳು ಎಷ್ಟು ಸರಿ?

ಅಭಿವೃದ್ಧಿ ದರದ ಅಂದಾಜುಗಳು ಎಷ್ಟು ಸರಿ?

ವಾರ್ತಾಭಾರತಿವಾರ್ತಾಭಾರತಿ20 March 2017 6:42 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಭಿವೃದ್ಧಿ ದರದ ಅಂದಾಜುಗಳು ಎಷ್ಟು ಸರಿ?

ಭಾರತದ ಆರ್ಥಿಕತೆ ಮುಗ್ಗರಿಸುತ್ತಿದೆ. ಆದರೆ ಬದಲೀ ಸತ್ಯಗಳು ಮಾತ್ರ ನೋಟು ನಿಷೇಧದ ನಂತರವೂ ಅಭಿವೃದ್ಧಿ ದರ ಹೆಚ್ಚಾಗುತ್ತಿದೆಯೆಂದು ಹೇಳುತ್ತಿವೆ.

ಕೇಂದ್ರೀಯ ಅಂಕಿಅಂಶ ಕಚೇರಿಯು (ಸೆಂಟ್ರಲ್ ಸ್ಟಾಸ್ಟಿಕಲ್ ಆಫೀಸ್-ಸಿಎಸ್‌ಒ) ತನ್ನ ಎರಡನೆ ಮುಂದಂದಾಜಿನ (ಅಡ್ವಾನ್ಸ್ಡ್ ಎಸ್ಟಿಮೇಟ್ಸ್) ವರದಿಯಲ್ಲಿ 2016ರ ಅಕ್ಟೋಬರ್-ಡಿಸೆಂಬರ್ ಅವಧಿಯ ಮೂರನೆ ತ್ರೈಮಾಸಿಕದಲ್ಲಿ ಭಾರತದ ಒಟ್ಟಾರೆ ಆಂತರಿಕ ಉತ್ಪತ್ತಿ -ಜಿ.ಡಿ.ಪಿ)ಯು ಶೇ.7ರ ಗತಿಯಲ್ಲಿ ಅಭಿವೃದ್ಧಿ ಹೊಂದಿದೆಯೆಂದು ಅಂದಾಜು ಮಾಡಿದೆ. ನೋಟು ನಿಷೇಧದ ಪ್ರಭಾವದಿಂದ ಆರ್ಥಿಕತೆ ತತ್ತರಿಸುತ್ತಿರುವಾಗ ಈ ಅಂದಾಜು ಎಲ್ಲರ ನಿರೀಕ್ಷೆಗೂ ವ್ಯತಿರಿಕ್ತವಾಗಿದೆ. ಈ ಎರಡನೆ ಮುಂದಂದಾಜು 2016-17ರ ಪೂರ್ಣಾವಧಿಯ ಅಭಿವೃದ್ಧಿಯ ದರದ ಅಂದಾಜನ್ನು ಸಹ ನೀಡಿದೆ. ತನ್ನ ಮೊದಲ ಮುಂದಂದಾಜಿನ ಊಹೆಯಾದ ಶೆ.7.1ರ ಅಭಿವೃದ್ಧಿ ದರದ ಪ್ರಮಾಣವನ್ನೇ ಎರಡನೆ ಮುಂದಂದಾಜಿನಲ್ಲೂ ಅದು ಪುನರುಚ್ಚರಿಸಿದೆ. ಇದು 2015-16ರ ಅಭಿವೃದ್ಧಿ ದರವಾದ ಶೇ.7.6ಕ್ಕೆ ಹೋಲಿಸಿದರೆ ಶೇ. 0.5ರಷ್ಟು ಕಡಿಮೆ. ಇದು ಸಿಎಸ್‌ಒ ಕಚೇರಿಯು ಅಭಿವೃದ್ಧಿ ದರದ ಪೂರ್ಣ ಮುಂದಂದಾಜು ಮಾಡುವಾಗ ಮತ್ತು ಹಂಗಾಮಿ ಅಂದಾಜು ಮಾಡುವಾಗ ಅನುಸರಿಸುವ ಪದ್ಧತಿಗಳ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ.

ಭಾರತದ ಮುಖ್ಯ ಅಂಕಿಅಂಶ ಅಧಿಕಾರಿ ಟಿ.ಸಿ. ಅನಂತ್ ಅವರು ಅಭಿವೃದ್ಧಿಯ ದರದ ಇತ್ತೀಚಿನ ಉಹಂದಾಜಿನ ಹಿನ್ನೆಲೆಯಲ್ಲಿ ಆರ್ಥಿಕತೆಯ ಮೇಲೆ ನೋಟು ನಿಷೇಧದ ಕ್ರಮಗಳಿಂದ ಆಗಿರುವ ಪರಿಣಾಮದ ಕುರಿತು ತಾವು ಯಾವುದೇ ಟಿಪ್ಪಣಿ ಮಾಡಲು ಬಯಸುವುದಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಹಾಗಿದ್ದರೂ ಕೇಂದ್ರ ಸರಕಾರದ ವಕ್ತಾರರು ಇದನ್ನೇ ಅತ್ಯುತ್ಸಾಹದಿಂದ ಬಳಸಿಕೊಳ್ಳುತ್ತಾ ನೋಟು ನಿಷೇಧದಿಂದ ಆರ್ಥಿಕತೆಯ ಮೇಲೆ ವ್ಯಗ್ರ ಪರಿಣಾಮವಾಯಿಗಿದೆಯೆಂಬ ವಿಶ್ಲೇಷಣೆ ಉತ್ಪ್ರೇಕ್ಷೆಯಿಂದ ಕೂಡಿತ್ತೆಂದು ಪ್ರಚಾರ ಮಾಡುತ್ತಿರುವುದು ಮಾತ್ರವಲ್ಲದೆ ನೋಟು ನಿಷೇಧವು ಆರ್ಥಿಕತೆಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಿಲ್ಲವೆಂದೂ ಹೇಳಿಕೊಳ್ಳುತ್ತಿದ್ದಾರೆ. ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಈ ಅಭಿವೃದ್ಧಿ ದರದ ಊಹಂದಾಜನ್ನು ಉತ್ತರ ಪ್ರದೇಶದ ಚುನಾವಣಾ ಪ್ರಚಾರಗಳಲ್ಲೂ ಬಳಸಿಕೊಂಡರು. ಸಿಎಸ್‌ಒ ಕಚೇರಿಯು ಅಭಿವೃದ್ಧಿಯ ಬಗ್ಗೆ ಎರಡು ರೀತಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಮಾರುಕಟ್ಟೆ ದರದಲ್ಲಿ ಲೆಕ್ಕಹಾಕಿ ಅಂದಾಜು ಮಾಡುವ ಒಟ್ಟಾರೆ ಆಂತರಿಕ ಅಭಿವೃದ್ಧಿ (ಜಿಡಿಪಿ). ಮತ್ತೊಂದು ಮೂಲಭೂತ ದರದಲ್ಲಿ (ಅಂದರೆ ತೆರಿಗೆ ಅಥವಾ ರಿಯಾಯತಿಗಳನ್ನು ಸೇರಿಸದೆ ಬರಿ ಮೌಲ್ಯದ ಸೇರ್ಪಡೆಯ ಲೆಕ್ಕ- ಅನು) ಲೆಕ್ಕಹಾಕುವ ಒಟ್ಟಾರೆ ಮೌಲ್ಯ ಸೇರ್ಪಡೆ (ಗ್ರಾಸ್ ವ್ಯಾಲ್ಯೂ ಆ್ಯಡೆಡ್- ಜಿವಿಎ)ಯ ಅಂಕಿಅಂಶಗಳು. 2016-17ರ ಸಾಲಿನಲ್ಲಿ ಈ ಜಿವಿಎ ಶೇ.6.7ರಷ್ಟು ಅಭಿವೃದ್ಧಿ ಕಂಡಿದೆ. ಇದು 2015-16ರ ಜಿವಿಎ ಅಭಿವೃದ್ಧಿ ದರಕ್ಕೆ ಹೋಲಿಸಿದಲ್ಲಿ ಶೇ.1.1ರಷ್ಟು ಇಳಿಕೆ. ಅಂದರೆ ಅಂದಾಜು 1.15ಲಕ್ಷ ಕೋಟಿಯಷ್ಟು ಇಳಿಕೆ. ಈ ಅಂಕಿಅಂಶವು ನೋಟು ನಿಷೇಧದ ತರುವಾಯದಲ್ಲಿ ಕುಟುಂಬವಾರು ಮತ್ತು ಅಸಂಘಟಿತ ಕ್ಷೇತ್ರಗಳಲ್ಲಿ ಸಂಭವಿಸಿರುವ- ಆದಾಯ, ಉದ್ಯೋಗ ಮತ್ತು ಕೊಳ್ಳುವ ಶಕ್ತಿಗಳ- ಕುಸಿತವನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತದೆ.

ಮೂಲಭೂತ ದರಗಳಲ್ಲಿ ಲೆಕ್ಕ ಹಾಕುವ ಜಿವಿಎ ಪದ್ಧತಿಯು ಪರೋಕ್ಷ ತೆರಿಗೆಯ ಲೆಕ್ಕಾಚಾರವನ್ನು ಒಳಗೊಳ್ಳುವುದಿಲ್ಲ. ಇದು ಈ ಹಿಂದೆ ಆರ್ಥಿಕತೆಯ ನಿಜವಾದ ಅಭಿವೃದ್ಧಿ ದರವನ್ನು ಅಂದಾಜು ಮಾಡಲು ಬಳಸುತ್ತಿದ್ದ ಪದ್ಧತಿಯ ರೀತಿ ಉತ್ಪಾದನೆಯನ್ನು ಆಗಗೊಳಿಸುವ ಘಟಕಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಜಿಡಿಪಿ ದರವನ್ನು ಅಂದಾಜು ಮಾಡುತ್ತದೆ. ವಾಸ್ತವವಾಗಿ ಈ ಪದ್ಧತಿಯು ದೃಢವಾದ ಅರ್ಥಶಾಸ್ತ್ರೀಯ ನೆಲೆಗಟ್ಟಿನ ಮೇಲೆ ನಿಂತುಕೊಂಡಿದೆ. ಸ್ಪಷ್ಟವಾಗಿ ಗೋಚರವಾಗುವ ವಿಷಯವೆಂದರೆ ಸಿಎಸ್‌ಒ ಕಚೇರಿಯು ಅಭಿವೃದ್ಧಿ ದರವನ್ನು ಲೆಕ್ಕಾಚಾರ ಮಾಡುವಾಗ ಪರೋಕ್ಷ ತೆರಿಗೆಯನ್ನೂ ಲೆಕ್ಕಾಚಾರಕ್ಕೆ ಪರಿಗಣಿಸಿದೆ. ಇದು ವಾಸ್ತವದಲ್ಲಿ ಒಂದೇ ಲೆಕ್ಕವನ್ನು ಎರಡೆರಡು ಬಾರಿ ಪರಿಗಣಿಸುವ ಡಬಲ್ ಅಕೌಂಟಿಂಗ್ ದೋಷವಾಗಿದೆ. ಏಕೆಂದರೆ ಪರೋಕ್ಷ ತೆರಿಗೆಯು ಸಾರಾಂಶದಲ್ಲಿ ಹೆಚ್ಚಿನ ವೆಚ್ಚಕ್ಕೆ ದಾರಿಮಾಡಿಕೊಟ್ಟು ಹೆಚ್ಚಿನ ಮೌಲ್ಯ ವರ್ಧನೆಯ ಲೆಕ್ಕವನ್ನು ತೋರಿಸುತ್ತದೆ. ಈ ತಪ್ಪುಲೆಕ್ಕಾಚಾರದಿಂದಾಗಿಯೇ ಸಿಎಸ್‌ಒ ವಾಸ್ತವಕ್ಕಿಂತ ಹೆಚ್ಚಿನ ಅಭಿವೃದ್ಧಿ ದರವನ್ನು ತೋರಿಸಲು ಸಾಧ್ಯವಾಗಿದೆ.

 ಮೂಲಭೂತ ದರಗಳಲ್ಲಿ ಶೇ.6.7ರಷ್ಟು ಜಿವಿಎ ಅಭಿವೃದ್ಧಿ ಆಗಿರುವುದೂ ಸಹ ಸತತ ಎರಡು ವರ್ಷಗಳ ಬರದ ನಂತರದಲ್ಲಿ ಕೃಷಿ ಉತ್ಪಾದನೆಯ ಅಭಿವೃದ್ಧಿ ಶೇ.0.3ರಿಂದ ಶೇ.4.4ಕ್ಕೆ ಏರಿರುವುದರಿಂದ ಮತ್ತು ಸಾರ್ವಜನಿಕ ವೆಚ್ಚವೂ, ವಿಶೇಷವಾಗಿ ಸರಕಾರಿ ನೌಕರರ ಸಂಬಳದ ಹೆಚ್ಚಳದಿಂದಾಗಿ, ಶೇ.6.9ರಿಂದ ಶೇ.11.2ಕ್ಕೆ ಏರಿರುವುದರಿಂದ. ರಾಜಸ್ವ (ರೆವೆನ್ಯೂ) ವೆಚ್ಚದಲ್ಲಿ ಹೆಚ್ಚಳವಾಗಿರುವುದು ಪರೋಕ್ಷ ತೆರಿಗೆಯಲ್ಲಿ ಸಾಪೇಕ್ಷ ಹೆಚ್ಚಳವಾಗಿರುವುದರಿಂದ ಮತ್ತು ಎರಡು ಬಾರಿ ಪೂರಕ ವೆಚ್ಚದ ಬೇಡಿಕೆಗಳನ್ನು ಸಂಸತ್ತು ಅನುಮೋದಿಸಿದ್ದರಿಂದ. ಇವು ವಾರ್ಷಿಕ ಅಂಕಿಅಂಶಗಳಾಗಿದ್ದು 2016-17ರ ಮೂರನೆ ತ್ರೈಮಾಸಿಕದಲ್ಲೂ ಕೃಷಿ ಮತ್ತು ಸಾರ್ವಜನಿಕ ವೆಚ್ಚಗಳು ಗಣನೀಯ ಹೆಚ್ಚಳವನ್ನೇ ತೋರಿಸಿದ್ದವು. ಅದೇನೇ ಇದ್ದರೂ ವಾರ್ಷಿಕ ಆದಾಯದ ಲೆಕ್ಕಾಚಾರದಲ್ಲಿ ಇತರ ಪ್ರಮುಖ ಕ್ಷೇತ್ರಗಳ ವಾರ್ಷಿಕ ಅಭಿವೃದ್ಧಿ ದರವು ಗಣನೀಯ ಕುಸಿತವನ್ನೇ ದಾಖಲಿಸಿವೆ. ಕೃಷಿ, ಸಾರ್ವಜನಿಕ ವೆಚ್ಚದ ಜೊತೆಗೆ ವಿದ್ಯುತ್ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಐದು ಕ್ಷೇತ್ರಗಳ ಅಭಿವೃದ್ಧಿ ದರ 2015-16ರಲ್ಲಿ 9.8ರಷ್ಟಿದ್ದದ್ದು 2016-17ರಲ್ಲಿ ಶೇ.6.4ಕ್ಕೆ ಕುಸಿದಿದೆ. ಅದೇ ರೀತಿ 2016-17ರ ಮೂರನೆ ತ್ರೈಮಾಸಿಕದಲ್ಲಿ ಈ ಎಲ್ಲಾ ಐದು ಕ್ಷೇತ್ರಗಳ ಅಭಿವೃದ್ಧಿ ದರ ಕಳೆದ ವರ್ಷದ ಅರ್ಧದಷ್ಟಕ್ಕೆ ಎಂದರೆ ಶೇ. 10ರಿಂದ ಶೇ.5.7ಕ್ಕೆ ಇಳಿದಿದೆ. ರಾಷ್ಟ್ರೀಯ ಆದಾಯದಲ್ಲಿ ಆಗಿರುವ ಈ ಭಾರೀ ನಷ್ಟವು ನೇರವಾಗಿ ನೋಟು ನಿಷೇಧದ ಪರಿಣಾಮಗಳ ಪ್ರಭಾವವೇ ಆಗಿದೆ. ಈ ಎಲ್ಲಾ ಐದು ಕ್ಷೇತ್ರಗಳ ಅಭಿವೃದ್ಧಿಯ ಬಗೆಗಿನ ಮೂರನೆ ತ್ರೈಮಾಸಿಕದ ಅಂದಾಜು ಮತ್ತು ಒಟ್ಟಾರೆಯಾಗಿ ಇಡೀ ವರ್ಷದ ಅಭಿವೃದ್ಧಿ ದರ ಅಂದಾಜುಗಳು ಮಾತ್ರ ಉತ್ಪಾದನಾ ಮತ್ತು ಹಣಕಾಸೇತರ ಕ್ಷೇತ್ರಗಳಲ್ಲಿನ ಅಸಂಘಟಿತ ವಲಯಗಳ ಅಭಿವೃದ್ಧಿ ಅಂದಾಜುಗಳನ್ನೂ ಒಳಗೊಂಡಿರುತ್ತದೆ. ಈ ಅಸಂಘಟಿತ ವಲಯದ ಅಭಿವೃದ್ಧಿಯ ಲೆಕ್ಕಾಚಾರಗಳಿಗೆ ಪರಿಣಾಮಕಾರಿ ಶ್ರಾಮಿಕ ಹೂಡಿಕೆ (ಎಫೆಕ್ಟೀವ್ ಲೇಬರ್ ಇನ್ಪುಟ್) ಪದ್ಧತಿಯನ್ನು ಆಧರಿಸಿ ಲೆಕ್ಕಿಸಲಾದ 2011-12ರ ಅಂದಾಜನ್ನು ಹೋಲಿಕೆ ಪ್ರಮಾಣವನ್ನಾಗಿ ಬಳಸಲಾಗುತ್ತಿತ್ತು.

ಕೃಪೆ: Economic and Political Weekly

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X