ಹುತಾತ್ಮರ ದಿನದ ಬಗ್ಗೆ ಒಂದಿಷ್ಟು:

ಇಂದು ಹುತಾತ್ಮರ ದಿನ. ನಮ್ಮ ದೇಶಕ್ಕೆ ಸಂಬಂಧಿಸಿದಂತೆ ಕ್ರಾಂತಿ ಎಂಬ ಪದ ಕೇಳಿದಾಕ್ಷಣ ನೆನಪಿಗೆ ಬರುವ ಮೂರು ಹೆಸರುಗಳು ಭಗತ್ ಸಿಂಗ್, ಸುಖದೇವ್ ಹಾಗೂ ರಾಜ್ ಗುರು. 1931ರ ಈ ದಿನದಂದು ಅವರನ್ನು ಗಲ್ಲಿಗೇರಿಸಲಾಯಿತು. ಅಂದಿನಿಂದ ಈ ದಿನವನ್ನು ದೇಶಾದ್ಯಂತ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
ಆದರೆ, ನಮ್ಮ ದೇಶದಲ್ಲಿ ಇನ್ನೂ ಕೆಲವು ದಿನಗಳನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಅವುಗಳಲ್ಲಿ ಗಾಂಧೀಜಿಯವರ ಹತ್ಯೆಯಾದ ಜನವರಿ 30 (ಈ ದಿನವನ್ನು ಸರ್ವೋದಯ ದಿನ ಎಂದೂ ಕರೆಯುತ್ತಾರೆ)ಮುಖ್ಯವಾದುದು. ಉಳಿದಂತೆ ಅಕ್ಟೋಬರ್ 21ಕ್ಕೆ ಪೊಲೀಸ್ ಹುತಾತ್ಮರ ದಿನವೂ ಆಚರಣೆಯಲ್ಲಿದೆ. ಹಾಗೆಯೇ ಒರಿಸ್ಸಾದಲ್ಲಿ ನವೆಂಬರ್ 17ನ್ನು ಲಾಲಾ ಲಜಪತ್ ರಾಯ್‌ರ ನಿಧನದ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
ಅಂದಹಾಗೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ವಿಭಿನ್ನ ದಿನಗಳಂದು ಹುತಾತ್ಮರ ದಿನವನ್ನು ಆಚರಿಸುತ್ತಾರೆ. ಸ್ವಾತಂತ್ರ್ಯದ ಪೂರ್ವದಲ್ಲಿ ಪಾಕಿಸ್ತಾನವೂ ಅವಿಭಜಿತ ಭಾರತವಾದ್ದರಿಂದ ಭಗತ್ ಸಿಂಗ್‌ರ ಅಂತಿಮ ದಿನವನ್ನು ಅಲ್ಲಿಯೂ ಹುತಾತ್ಮರ ದಿನವನ್ನಾಗಿ ಅಚರಿಸುತ್ತಾರೆ ಎಂದು ಅಂದುಕೊಂಡರೆ ತಪ್ಟು. ಅಲ್ಲಿನ ದೇಶಸೇವೆಯಲ್ಲಿ ಮಡಿದ ಯೋಧರ ಸ್ಮರಣಾರ್ಥ ಎಪ್ರಿಲ್ 30ರಂದು ಹುತಾತ್ಮರ ದಿನವಿದೆ.