Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ವಿಶ್ವರಂಗ ಭೂಮಿ ದಿನ ಮತ್ತು ಇಂದಿನ...

ವಿಶ್ವರಂಗ ಭೂಮಿ ದಿನ ಮತ್ತು ಇಂದಿನ ರಂಗಭೂಮಿ

ವಾರ್ತಾಭಾರತಿವಾರ್ತಾಭಾರತಿ26 March 2017 11:57 PM IST
share
ವಿಶ್ವರಂಗ ಭೂಮಿ ದಿನ  ಮತ್ತು ಇಂದಿನ ರಂಗಭೂಮಿ

ಇಂದಿನ ಜಾಗತೀಕರಣ ಸಂದರ್ಭದಲ್ಲಿ ಸಾಮಾಜಿಕ, ಸಾಂಸ್ಕತಿಕ ಹಾಗೂ ರಾಜಕೀಯ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿ ತೋರುತ್ತಿಲ್ಲ. ಜನತಂತ್ರವೇ ತಪ್ಪುದಾರಿಗೆ ಸಾಗುತ್ತಿದೆ. ಈ ಸಂದರ್ಭದಲ್ಲಿ ‘ರಂಗ ಭೂಮಿ’ ಜವಾಬ್ದಾರಿ ಹೆಚ್ಚಾಗಿದೆ. ನಿರಂತರ ಕಲಿಯುವಿಕೆಯನ್ನು ಒತ್ತಾಯಿಸುವ ಕಲಾ ಪ್ರಕಾರ ಇದಾಗಿದೆ, ಅಲ್ಲದೆ ಒಂದು ಸ್ವಸ್ಥ ಸಮಾಜ, ಸ್ವಸ್ಥ ಪರಿಸರವನ್ನು ಹಾಗೂ ಸ್ವಸ್ಥ ಮನಸ್ಸು ನಿರ್ಮಾಣದಲ್ಲಿ ರಂಗ ಭೂಮಿಯ ಪಾತ್ರ ಮಹತ್ವದ್ದಾಗಿದೆ.

ನಾಟಕದ ಉದ್ದೇಶ ಮನೋರಂಜನೆಯಾಗಿದ್ದರೂ, ಈ ಮಾಧ್ಯಮ ಗಂಭೀರ ವಿಚಾರಗಳತ್ತ ಪ್ರೇಕ್ಷಕರ ಗಮನ ಸೆಳೆದು ಅವರನ್ನು ಚಿಂತನಾಶೀಲರನ್ನಾಗಿ ಮಾಡಿ, ಅರಿವು ನೀಡಿ, ಸಂಪೂರ್ಣ ವ್ಯಕ್ತಿತ್ವ ವಿಕಾಸ ಮಾಡುವ ಕಲಾ ಪ್ರಕಾರ. ಅಲ್ಲದೆ ನಾವು ಓದು ಬರಹದ ಮೂಲಕ ಪಡೆದ ಜ್ಞಾನಕ್ಕೆ ಒಂದು ಉದ್ದೇಶವನ್ನು ಗುರುತಿಸಿ ಅದನ್ನು ಚಟುವಟಿಕೆಯಾಗಿ ಪರಿವರ್ತಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇಂದು ರಂಗ ಭೂಮಿಯ ಅಗತ್ಯ ಕಂಡುಬರುತ್ತಿದೆ. ಶಿಕ್ಷಣ ಕ್ಷೇತ್ರ, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ, ವಿಜ್ಞಾನ ಕ್ಷೇತ್ರ,ಆರೋಗ್ಯ, ನೈರ್ಮಲ್ಯ, ಸಹಬಾಳ್ವೆ, ಕೋಮುಸೌಹಾದರ್, ಕುಟುಂಬ ಯೋಜನೆ, ಹದಿಹರೆಯದ ಸಮಸ್ಯೆ, ಸಾಕ್ಷರತೆ, ವಯಸ್ಕರ ಶಿಕ್ಷಣ ಹೀಗೆ ಪಟ್ಟಿ ಬೆಳೆಯುತ್ತದೆ.

ಮಾಹಿತಿ ಜ್ಞಾನ ಶಿಕ್ಷಣದ ಒಂದು ಅಂಶವಾಗಿದ್ದರೂ ಸಹ ಅದೇ ಎಲ್ಲವು ಅಲ್ಲ, ಒಂದು ಮಗುವಿನ ಜನ್ಮ ಜನ್ಯವಾದ ಎಲ್ಲ ಶಕ್ತಿ ಸಾಮರ್ಥ್ಯಗಳು ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಇರಬಹುದಾದ ಹಿಂಜರಿಕೆ, ಕೀಳರಿಮೆ, ಸಂಕೋಚ, ಭಯದಂತಹ ದೌರ್ಬಲ್ಯಗಳನ್ನು ನಿವಾರಿಸಿ, ಏಕಾಗ್ರತೆ, ಶಿಸ್ತು, ಕ್ರಿಯಾತ್ಮಕತೆ, ಮೌಲಿಕಗುಣ, ಆದರ್ಶವ್ಯಕ್ತಿತ್ವ, ರಚನಾತ್ಮಕತೆ, ಕಲ್ಪನಾಶೀಲತೆ, ಕೌಶಲ್ಯವೃದ್ಧಿಗೆ, ಉಚ್ಚಾರ ಸ್ಪಷ್ಟತೆಗೆ ಆತ್ಮ ಸ್ಥೈರ್ಯ ಹೆಚ್ಚಲು, ಮನೋ ಆನಂದ ಪಡೆಯಲು ರಂಗಭೂಮಿ ಅಗತ್ಯ ಕೆಲಸ ಮಾಡುತ್ತಿದೆ.

ಆದರೆ ‘ವಿಶ್ವರಂಗ ಭೂಮಿ’ ದಿನದ ಈ ಸಂದರ್ಭದಲ್ಲಿ ಇಂತಹ ರಂಗ ಭೂಮಿ ವಲಯ ಎತ್ತ ಸಾಗುತ್ತಿದೆ ಎಂಬ ಅರಿವು ಹಾಗೂ ಚಿಂತನೆ ಅಗತ್ಯ. ರಂಗ ಭೂಮಿ ಮೂಲತಃ ನಟರ ಮಾಧ್ಯಮ. ಇಲ್ಲಿ ನಟ-ಕಲಾವಿದರೇ ಮುಖ್ಯ ಎನ್ನುತ್ತೆವೆ ಆದರೆ ಪ್ರಚಲಿತ ಕರ್ನಾಟಕ ರಂಗಭೂಮಿ ಕ್ಷೇತ್ರವನ್ನು ಗಮನಿಸಿದಾಗ, ರಂಗ ಭೂಮಿಯ ಮೂಲ ಆಶಯಗಳಿಗೆ ಎಲ್ಲೆಡೆ ಪೆಟ್ಟಾಗುತ್ತಿದೆ. ಹೀಗಾಗಿ ರಂಗ ಚಳವಳಿ ಕುಂಠಿತವಾಗುತ್ತಿದೆಯೇನೋ ಎಂದು ಅನಿಸುತ್ತಿದೆ. ಕಾರಣ ಇಲ್ಲಿ ಹೊಂದಾಣಿಕೆ ಕೊರತೆ ಇದೆ. ಸಹೃದಯತೆ ಕ್ಷೀಣಿಸಿ, ವ್ಯಕ್ತಿಗತ ವಿಜೃಂಭಣೆ ಹೆಚ್ಚಾಗುವ ಲಕ್ಷಣ ಎಲ್ಲಡೆ ಕಾಣುತ್ತಿದ್ದೇವೆ. ಗುಂಪನ್ನೇ ಆಶ್ರಯಿಸುವ ರಂಗಭೂಮಿಗೆ ರಂಗ ವಿರೋಧಿಯಾಗಿ ‘’ಏಕ ವ್ಯಕ್ತಿ ರಂಗ ಪ್ರಯೋಗ’’ಗಳು ಹೆಚ್ಚಾಗುತ್ತಿವೆ. ಟೀಮ್‌ವರ್ಕ್‌ನಲ್ಲೂ ಸಹಕಾರದ ಕೊರತೆ, ತಾಲೀಮಿಗೆ ಕಲಾವಿದರು ಶಿಸ್ತಿನಿಂದ ಬರುತ್ತಿಲ್ಲ. ಆದರಲ್ಲೂ ರಂಗ ವಿಮರ್ಶೆ ಇನ್ನು ಶೈಕ್ಷಣಿಕ ಪಠ್ಯವಾಗಿ ದೊರಕುತ್ತಿಲ್ಲ, ರಂಗ ಭೂಮಿಯ ಪ್ರಕಾರಗಳು ಗಟ್ಟಿಗೊಳ್ಳುತ್ತಿಲ್ಲ. ರಂಗಭಾಷೆ, ರಂಗ ಸೌಂದರ್ಯದ ನಿಟ್ಟಿನಲ್ಲಿ ಕೆಲಸಗಳು ಆಗದಿರುವುದು ದುರದೃಷ್ಟಕರ.

ನಾಟಕ ಸದಾ ಚಲನಶೀಲವಾದುದು, ನಾಟಕವೇ ಒಂದು ಅನುಭವವಾಗಿದೆ. ಹಾಗಾಗಿಯೇ ಭರತ ತನ್ನ ನಾಟ್ಯ ಶಾಸ್ತ್ರದಲ್ಲಿ ‘ಜೀವನವೇ ನಾಟಕ ಎಂದಿದ್ದಾನೆ. ಒಂದು ನಾಟಕದ ಜೀವಾಳ ನಟ-ನಟಿಯರು ಇವರ ಅಭಿನಯ, ಸಂಭಾಷಣೆ, ಚಲನವಲನ ಮತ್ತು ಆಂಗಿಕಗಳು ಇವೆಲ್ಲವು ಔಚಿತ್ಯ ಪೂರ್ಣವಾಗಿರಬೇಕು. ಎಲ್ಲರೂ ತಮ್ಮ ಪಾತ್ರಗಳನ್ನು ಅರ್ಥ ಮಾಡಿಕೊಂಡು, ಕತೆಯನ್ನು, ನಾಟಕದಲ್ಲಿನ ಸನ್ನಿವೇಶವನ್ನು, ಪಾತ್ರಗಳ ನಡುವೆ ಪರಸ್ಪರ ನಡೆಯುವ ವೃತ್ತಿ ವ್ಯಾಪಾರವನ್ನು ಅರಿತು ನಟಿಸಬೇಕಾದ್ದು ಪ್ರತಿಯೊಬ್ಬ ನಟನ ಸವಾಲು, ಪಾತ್ರಗಳ ಪರಸ್ಪರ ಒಡನಾಟಕ್ಕೆ, ಪಾತ್ರಧಾರಿಗಳಲ್ಲಿ ಪರಸ್ಪರ ಹೊಂದಾಣಿಕೆಯು ಅಗತ್ಯ. ಇದು ಇಂದು ಅಪರೂಪವಾಗುತ್ತಿದೆ. ಒಬ್ಬರನೊಬ್ಬರು ನಟರಾಗಿ, ಪಾತ್ರಗಳಾಗಿ ಅಷ್ಟೇ ಅಲ್ಲದೆ ನಾಟಕದ ಹೊರಗೂ ಸಾಮಾಜಿಕ ಜೀವನದಲ್ಲೂ ಸ್ನೇಹಿತರಾಗಿ, ಬಂಧುಗಳಾಗಿ ಅರ್ಥಮಾಡಿಕೊಂಡು ಬದುಕುವ ಹೃದಯವಂತಿಕೆ ಅಗತ್ಯ, ಸಹನಟರೊಂದಿಗೂ ಸಂವಹನೆ, ಸ್ಪಂದನೆ ಅಗತ್ಯ. ಹೀಗಾದಾಗಲೇ ರಂಗ ಭೂಮಿ ಗಟ್ಟಿಗೊಳ್ಳಲು ಸಾಧ್ಯ. ಒಂದು ನಾಟಕ ಪ್ರಯೋಗವಾಗುವಾಗ, ನಿರ್ದೇಶಕನು 3ನೆ ಬೆಲ್ಲಾಗುತ್ತಿದ್ದಂತೆ ಹಿನ್ನೆಲೆಗೆ ಸರಿಯುತ್ತಾನೆ. ಹಾಗೆ ಕೃತಿಗೆ ಕಾರಣನಾದ ನಾಟಕಕಾರ ಬಹು ಮುಖ್ಯನಾದರೂ ಅವನೂ ಸಹ ಪ್ರದರ್ಶನದ ವೇಳೆ ಹಿನ್ನೆಲೆಗೆ ಸರಿಯುತ್ತಾನೆ. ನಾಟಕ ಪ್ರಯೋಗ (ರಂಗಕೃತಿ) ಮುಗಿದಂತೆ ನಾಟಕಕಾರನ ಅಸ್ತಿತ್ವವೇ ಹೋಗಿ ಅವನ ನಾಟಕ ಕೃತಿ ಮಾತ್ರ ಉಳಿಯುವುದು. ಕೃತಿಯಲ್ಲಿ ನಟರ ಮೂಲಕ ಹೊರ ಹೊಮ್ಮುವ ಆಶಯಗಳಿಗೆ, ಅರ್ಥಗಳಿಗೆ ವೈಚಾರಿಕತೆಗೆ, ಧೋರಣೆಗೆ, ಶೈಲಿಗೆ ಹೊಂದಿಕೊಳ್ಳಬೇಕು ಆದರೆ ದುರದೃಷ್ಟ ನಟ ಪ್ರಧಾನವಾಗಬೇಕಾದ ರಂಗ ಭೂಮಿಯಲ್ಲಿ, ಇಂದು ನಿರ್ದೇಶಕ, ನಾಟಕಕಾರ ಪ್ರಧಾನವಾಗುತ್ತಿದ್ದಾನೆ. ಈ ಧೋರಣೆ ಬದಲಾಗಬೇಕು. ಇನ್ನು ಸಾಹಿತ್ಯವನ್ನೂ ಒಳಗೊಂಡಂತೆ ಎಲ್ಲ ಸೌಂದರ್ಯ ಶಾಸ್ತ್ರಗಳ ಮೀಮಾಂಸೆಯ ಪರಿಕಲ್ಪನೆಗಳನ್ನು ನೀಡಿದ್ದು ನಾಟ್ಯಶಾಸ್ತ್ರವೇ, ಸಾಹಿತ್ಯವನ್ನು ನಾಟ್ಯ ಶಾಸ್ತ್ರದ ರಸ ಧ್ವನಿ ಮುಂತಾದ ಮೀಮಾಂಸೆಯಲ್ಲಿ ನೋಡಲಾಗುತ್ತಿದೆ. ಆದರೆ ರಂಗ ಭೂಮಿಯಲ್ಲಿ ಇನ್ನು ಸೌಂದರ್ಯ ಮೀಮಾಂಸೆ (Esthtics) ಬೆಳೆಯಬೇಕಾಗಿದೆ. 

‘ರಂಗವಿಮರ್ಶೆ’ ಗಮನಿಸಿದಾಗ, ಸಾಹಿತ್ಯ ವಲಯದಲ್ಲಿ ಸಾಹಿತಿಗಳು ವಿಮರ್ಶೆಯಿಂದ ಜನಮಾನಸದಲ್ಲಿ ನಿಲ್ಲುವಂತೆ ಒಬ್ಬ ಪ್ರಭುದ್ಧ ಕಲಾವಿದ ನಿಲ್ಲಲಾಗುತ್ತಿಲ್ಲ, ಸಾಹಿತ್ಯಕ್ಕೆ ಅಕ್ಷರ ರೂಪ ಕಟ್ಟಿಕೊಡಬಹುದು, ರಂಗ ಭೂಮಿಯಲ್ಲಿ ಅನುಭವವೇ ಆಧಾರ. ಒಬ್ಬ ನಟನ ಪ್ರತಿಭೆಯನ್ನು ನೋಡಿ ಅನುಭವಿಸುವ ತಾಜಾತನ ಬರವಣಿಗೆಯಲ್ಲಿ ಮೂಡಿಸುವುದು ಬಹುತೇಕ ಕಷ್ಟವಾಗುತ್ತಿದೆ. ಹೀಗಾಗಿಯೇ ನಮ್ಮ ನಡುವೆ ಬದುಕಿದ್ದ ಮೇರುನಟರಾದ ಗುರುಮೂರ್ತಪ್ಪ, ಕಂದಗಲ್ ಹನುಮಂತರಾಯ, ವರದಾಚಾರ್ಯ, ಗುಬ್ಬಿವೀರಣ್ಣ, ನಾಗೇಶರಾಯ, ಮಹಮದ್ ಪೀರ್, ಹಿರಣ್ಣಯ್ಯ ಅವರಂತಹ ನಟನಾ ಪ್ರತಿಭೆಗಳನ್ನು ದಾಖಲಿಸುವಲ್ಲಿಯೂ ಅಕ್ಷರ ರೂಪ ಎಡವುತ್ತಿದೆ. ರಂಗ ಭೂಮಿಯ ಪ್ರತಿಯೊಂದು ಪ್ರಕಾರದಲ್ಲೂ ಕೌಶಲ್ಯಗಳಿಸಿದಂತವರು ‘’ವಿಮರ್ಶೆ’’ ಮಾಡುವಂತಾಗಬೇಕು. ಅಲದೆ ರಂಗ ವಿಮರ್ಶೆಯು ಒಂದು ಶೈಕ್ಷಣಿಕ ಪಠ್ಯವಾಗಬೇಕು. ಶಿಕ್ಷಣದಲ್ಲಿ ರಂಗಭೂಮಿ ಪಠ್ಯ ಸಹ ಜಾರಿಗೆ ಬರಬೇಕು ಎಂದು ಈ ವಿಶ್ವ ರಂಗ ಭೂಮಿ ದಿನದಂದು ಜವಾಬ್ದಾರಿ ಇರುವ ರಂಗ ಮನಸ್ಸುಗಳು ಈ ಬಗ್ಗೆ ಚಿಂತಿಸಬೇಕಾಗಿದೆ ಮತ್ತು ಒತ್ತಾಯಿಸಬೇಕಾಗಿದೆ.

-ಡಾ .ಎ.ಆರ್.ಗೋವಿಂದಸ್ವಾಮಿ ನಟ, ರಂಗತಜ್ಞ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X