ಆರೋಗ್ಯ ಕ್ಷೇತ್ರ: ಸರಕಾರಿ-ಖಾಸಗಿ ಸಹಭಾಗಿತ್ವ ಮಾರಕ?

2012ರಲ್ಲಿ ಸಂಜಯ ಬಸು ಹಾಗೂ ಇತರರು ನಡೆಸಿದ ಒಂದು ಅಧ್ಯಯನದ ಪ್ರಕಾರ, ಮಧ್ಯಮ ಆದಾಯದ ದೇಶಗಳಲ್ಲಿ ಖಾಸಗಿ ಆರೋಗ್ಯ ಕ್ಷೇತ್ರವು ವಾಸ್ತವವಾಗಿ ಸಾರ್ವತ್ರಿಕತೆಯನ್ನು ಕಡೆಗಣಿಸಿದ್ದು, ಅಧಿಕ ಆದಾಯದ ಗುಂಪಿಗಷ್ಟೇ ಗಮನ ಹರಿಸುತ್ತಿದೆ. ಇಷ್ಟಲ್ಲದೆ ಅಧಿಕ ವೆಚ್ಚದಲ್ಲಿ ಕಳಪೆ ಗುಣಮಟ್ಟದ ಸೇವೆಯನ್ನು ನೀಡುವ ಅಪಾಯವಿದ್ದು, ದಕ್ಷತೆಯ ಮಟ್ಟ ಕೂಡಾ ಕಳಪೆ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ.
ಸಹಭಾಗಿತ್ವ ಅಥವಾ ಸರಕಾರಿ- ಖಾಸಗಿ ಸಹಭಾಗಿತ್ವ (ಪಿಪಿಪಿ) ಭಾರತದ ಆರೋಗ್ಯ ಕ್ಷೇತ್ರಕ್ಕೂ ವ್ಯಾಪಿಸಿದೆ. ಹೊಸ ರಾಷ್ಟ್ರೀಯ ಆರೋಗ್ಯ ನೀತಿ (ಎನ್‌ಎಚ್‌ಪಿ)ಯು ಖಾಸಗಿ ವಲಯದ ವಿಸ್ತೃತ ಪಾತ್ರದತ್ತ ಕೇಂದ್ರೀಕರಿಸಿದೆ. ಇದು ಲಾಭದ ಉದ್ದೇಶ ಹೊಂದಿರದ ಖಾಸಗಿ- ಸರಕಾರಿ ಪಾಲುದಾರಿಕೆಯನ್ನು ಮತ್ತು ಆರೋಗ್ಯ ವ್ಯವಸ್ಥೆಯ ಅಂತರವನ್ನು ತುಂಬುವ ಅಲ್ಪಾವಧಿ ಕ್ರಮವಾಗಿ ಪ್ರಮುಖ ಖರೀದಿ ಗುತ್ತಿಗೆಯನ್ನು ಖಾಸಗಿ ವಲಯದ ಸಂಘ-ಸಂಸ್ಥೆಗಳಿಗೆ ನೀಡುತ್ತದೆ. ಆದರೆ ಈ ಅಲ್ಪಾವಧಿ ಎಂದರೆ ಎಷ್ಟು ಸಮಯದ ವರೆಗೆ ಎನ್ನುವುದನ್ನು ಇದು ನಿರ್ದಿಷ್ಟಪಡಿಸಿಲ್ಲ.
ಪಿಪಿಪಿ ವಿಧಾನದಲ್ಲಿ ಸರಕಾರಿ ವಲಯವು ಖಾಸಗಿ ವಲಯದ ಸೇವೆಗಳನ್ನು ಪಡೆಯುತ್ತದೆ. ಕಳೆದ 15 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದ ಉದ್ದಗಲಕ್ಕೂ ಖಾಸಗಿ ವಲಯ ವಿಸ್ತರಿಸಿದೆ. ಹೊಸ ಆರೋಗ್ಯ ನೀತಿಯ ಅನ್ವಯ ಪಿಪಿಪಿ ವ್ಯವಸ್ಥೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ರಮವಾಗಿ ಲಾಭರಹಿತ ಹಾಗೂ ಲಾಭದ ಉದ್ದೇಶದ ಸೇವೆಯನ್ನು ನೀಡಲಾಗುತ್ತದೆ. ಕೌಶಲ ಮತ್ತು ಸಾಮರ್ಥ್ಯ ಅಭಿವೃದ್ಧಿ, ಮಾನಸಿಕ ಆರೋಗ್ಯ ಹಾಗೂ ವಿಕೋಪ ನಿರ್ವಹಣೆ ಕ್ಷೇತ್ರಗಳಲ್ಲೂ ಇವು ಕಾರ್ಯ ನಿರ್ವಹಿಸಲಿದೆ. ನಗರ ಪ್ರದೇಶದ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಸರಕಾರಿ- ಖಾಸಗಿ ಸಹಭಾಗಿತ್ವದಲ್ಲಿ ನೀಡಲಾಗುವ ಬಳಕೆದಾರರ ಶುಲ್ಕ ಜಾರಿಗೆ ಬರಲಿದೆ. ಇದು ಮಧ್ಯಮವರ್ಗವನ್ನು ಸಮಾನ ಸಮೂಹ ಎಂದು ಪರಿಗಣಿಸುತ್ತದೆ ಹಾಗೂ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಪರಿಗಣಿಸುತ್ತದೆ, ಪಿಪಿಪಿ ವ್ಯವಸ್ಥೆಯೊಳಗೆ ಕೂಡಾ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ, ಸ್ವಯಂ ಸೇವೆ ಹಾಗೂ ದಯಾಪರ ಸೇವೆಗಳು ಗ್ರಾಮೀಣ ಹಾಗೂ ಸೌಲಭ್ಯ ವಂಚಿತ ಪ್ರದೇಶಗಳ ಜನರಿಗೆ ಲಭ್ಯವಿದ್ದು, ಇದನ್ನು ಹೊಸ ಅನುಶೋಧನೆ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಸರಕಾರ ಆರೋಗ್ಯ ಕ್ಷೇತ್ರಕ್ಕೆ ನೀಡುವ ಹಣಕಾಸು ಅನುದಾನವನ್ನು ಹೆಚ್ಚಿಸುವ ಜವಾಬ್ದಾರಿ ಕಡಿಮೆಯಾಗಲಿದೆ. ಸಮುದಾಯ ಆಧರಿತ ದತ್ತಿ ಸಂಸ್ಥೆಗಳು ಸರಕಾರದ ಜತೆ ಒಪ್ಪಂದ ಮಾಡಿಕೊಂಡು ಸ್ವಯಂ ಸ್ಫೂರ್ತಿಯಿಂದ ಸೇವೆ ನೀಡುವ ವ್ಯವಸ್ಥೆಯನ್ನು ಆರಂಭಿಸಲೂ ಅವಕಾಶವಿದೆ.
ಬಜೆಟ್ ಅನುದಾನ, ಆರೋಗ್ಯ ಸೇವೆಯಲ್ಲಿ ಹೆಚ್ಚುತ್ತಿರುವ ಅಂತರ ಹಾಗೂ ಆರೋಗ್ಯ ಸೇವಾದಾರರನ್ನು ಹೊಂದಿರದ ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವುದು ಪ್ರಮುಖವಾಗಿ ಪಿಪಿಪಿ ವಿಧಾನ ಅಳವಡಿಸಿಕೊಳ್ಳುವ ಹಾಗೂ ವಿಸ್ತರಿಸುವುದರ ಹಿಂದಿನ ತಾರ್ಕಿಕತೆ. ಆದರೆ 2017ರ ರಾಷ್ಟ್ರೀಯ ಆರೋಗ್ಯ ನೀತಿ ಮಾತ್ರ ಖಾಸಗಿ ಪಾಲುದಾರಿಕೆ ಬಗ್ಗೆ ವಿಭಿನ್ನ ಸಮರ್ಥನೆಯನ್ನು ಹೊಂದಿದೆ. ಆದ್ದರಿಂದ ಸಾಮಾಜಿಕ ಪ್ರಾಬಲ್ಯವು ಸಾಮಾಜಿಕ ಸೇರ್ಪಡೆ ಹಾಗೂ ಸುಸ್ಥಿರತೆಗೆ ಅಡ್ಡ ಬರುವುದಿಲ್ಲ. ಸರಕಾರ ಕಳೆದ 25 ವರ್ಷಗಳಿಂದ ನೀಡುತ್ತಾ ಬರುತ್ತಿರುವ ಸೌಲಭ್ಯಕ್ಕೆ ಪ್ರತಿಯಾಗಿ ಖಾಸಗಿ ಆರೋಗ್ಯ ಉದ್ಯಮ ಕೂಡಾ ತನ್ನ ಕಡ್ಡಾಯ ಹೊಣೆಗಾರಿಕೆಯನ್ನು ಪೂರೈಸಬೇಕು. ಆದಾಗ್ಯೂ ಸಹಭಾಗಿತ್ವಕ್ಕೆ ಇರುವ ಮುಖ್ಯ ಸಮರ್ಥನೆ ಎಂದರೆ ಅದರ ಮಿತವ್ಯಯದ ಅಂಶಕ್ಕೆ ಸಂಬಂಧಿಸಿದ್ದು.
ವಾಸ್ತವ ನೆಲೆ
ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಬಿಹಾರದಂಥ ಹಲವು ರಾಜ್ಯಗಳಲ್ಲಿ, ಹಲವು ಬಗೆಯ ಸೇವೆಯನ್ನು ಈಗಾಗಲೇ ಹೊರಗುತ್ತಿಗೆ ಮತ್ತು ಗುತ್ತಿಗೆ ಮೂಲಕ ಪಿಪಿಪಿ ವಲಯಕ್ಕೆ ವಹಿಸಲಾಗಿದೆ. ಪಿಪಿಪಿ ವಲಯ ನೀಡುವ ಸೇವೆಗಳಲ್ಲಿ ಡಯಾಗ್ನೋಸ್ಟಿಕ್ ಸೇವೆಗಳಾದ ಡಿಜಿಟಲೀಕೃತ ರೇಡಿಯಾಲಜಿ, ಸಿಟಿ ಸ್ಕ್ಯಾನ್, ಎಂಆರ್‌ಐ, ಪೆಥಾಲಜಿ, ಜೀವರಸಾಯನಶಾಸ್ತ್ರ, ಡಯಾಲಿಸಿಸ್ ಸೇವೆ, ಬೆಂಬಲಿತ ಸೇವೆಗಳಾದ ಆಹಾರ, ಭದ್ರತೆ ಹಾಗೂ ತ್ಯಾಜ್ಯ ಸಂಗ್ರಹ ಸೇರಿವೆ. ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಕಣ್ಣುಪೊರೆ ಶಸ್ತ್ರಚಿಕಿತ್ಸೆಯಂಥ ಶಸ್ತ್ರಚಿಕಿತ್ಸೆಗಳು ಹಾಗೂ ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ನಿರ್ವಹಿಸುವಂಥ ಸೇವೆಗಳನ್ನೂ ಒದಗಿಸಲಾಗುತ್ತಿದೆ. ಸಹಭಾಗಿತ್ವದಡಿ ಸೇವಾ ವಲಯವನ್ನು ವ್ಯಾಪಕವಾಗಿ ಸ್ಥಳೀಯ ಘಟಕಗಳಿಂದ ಹಿಡಿದು ರಾಷ್ಟ್ರಮಟ್ಟದವರೆಗಿನ ಕಂಪೆನಿಗಳಿಗೂ ನೀಡಲಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳಾದ ಸೀಮನ್ಸ್, ಅಪೋಲೊ ಎನ್ಸೋಕೇರ್ ಹಾಗೂ ಜಿಇ ಹೆಲ್ತ್‌ಕೇರ್‌ನಂಥ ಸಂಸ್ಥೆಗಳೂ ಅವಕಾಶ ಪಡೆದಿವೆ. ಆದ್ದರಿಂದ ಪ್ರಾಥಮಿಕ, ಎರಡನೆ ಹಾಗೂ ಮೂರನೆ ಹಂತದ ಸರಕಾರಿ ಆಸ್ಪತ್ರೆಗಳಲ್ಲಿ ಬಹಳಷ್ಟು ಸೇವೆಗಳನ್ನು ಸರಕಾರ ನೇರವಾಗಿ ನೀಡುವುದಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಖರೀದಿದಾರ ಹಾಗೂ ಸೇವಾ ನೀಡಿಕೆದಾರ ಎಂಬುದಾಗಿ ಛಿದ್ರವಾಗಿದ್ದು, ಇದು ಆರೋಗ್ಯ ವಿಮಾ ಕಂಪೆನಿಗಳ ಸೇವೆ ಬಲಗೊಳ್ಳಲು ಅನುಕೂಲಕರ ವಾತಾವರಣ ಕಲ್ಪಿಸಲಿದೆ.
ಸಾರ್ವಜನಿಕ ಆರೋಗ್ಯ ವಲಯದೊಳಗೆಯೇ ಖಾಸಗಿ ಸೇವಾದಾರರನ್ನು ಪರಿಚಯಿಸಿರುವ ಕ್ರಮವು ಕಾನೂನಾತ್ಮಕ ಆಧಾರದ ಬದಲಾವಣೆಗೆ ಕಾರಣವಾಗಿದ್ದು, ಸಮಾನತೆ, ಆರೋಗ್ಯ ಸೇವೆಯ ವೆಚ್ಚ, ಗುಣಮಟ್ಟ ಹಾಗೂ ಆರೋಗ್ಯ ಹಕ್ಕು ಮತ್ತಿತರ ಮಾರುಕಟ್ಟೆ ಸಂಬಂಧಿ ಕಳಕಳಿಗೆ ಕಾರಣವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ವಿಸ್ತೃತವಾದ ಪಿಪಿಪಿ ಯೋಜನೆಗಳು ಅವುಗಳು ನೀಡುವ ವೈವಿಧ್ಯಮಯ ಸೇವೆಗಳು, ಅವುಗಳ ಪಾತ್ರ ಹಾಗೂ ಗುತ್ತಿಗೆ ಒಪ್ಪಂದದಡಿ ಬರುವ ಖಾಸಗಿ ಸಂಸ್ಥೆಗಳ ಸಂಖ್ಯೆ ಮತ್ತಿತರ ವೈವಿಧ್ಯಮಯ ಕಾರಣಗಳಿಂದಾಗಿ ಹಾಲಿ ಇರುವ ಆರೋಗ್ಯ ವ್ಯವಸ್ಥೆಗೆ ಹೋಲಿಸಿದರೆ ಅತ್ಯಂತ ಸಂಕೀರ್ಣ ವ್ಯವಸ್ಥೆ ರೂಪುಗೊಂಡಂತಾಗಿದೆ. ಪಿಪಿಪಿ ಸಂರಚನೆಯ ಒಟ್ಟಾರೆ ಸಂಕೀರ್ಣತೆ ಹಾಗೂ ಹಲವು ಸೇವಾದಾರ ಕಂಪೆನಿಗಳಿಂದಾಗಿ ಇವುಗಳ ನಿಯಂತ್ರಣ ಹಾಗೂ ಮೇಲುಸ್ತುವಾರಿ ಕಠಿಣವಾಗಲಿದೆ. ಇದರ ಜತೆಗೆ ಆಡಳಿತಾತ್ಮಕ ವೆಚ್ಚ ಕೂಡಾ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ.
ಸ್ಥಳೀಯ ಮಟ್ಟದಲ್ಲಿ ಪಿಪಿಪಿ ಆಧರಿತ ಸೇವೆಗಳ ನಿರಂತರ ಮೇಲ್ವಿಚಾರಣೆ ತೀರಾ ದುರ್ಬಲವಾಗಿದೆ. ರಾಯಚೂರಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಕಾರ್ಯನಿರ್ವಹಣೆ ಮತ್ತು ವ್ಯವಸ್ಥಾಪನೆಗೆ ಅಪೋಲೊ ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಂಡಿದ್ದು, ಇದನ್ನು ಎಲ್ಲ ಮೂರನೆ ಹಂತದ ಆಸ್ಪತ್ರೆಗಳ ಪಿಪಿಪಿ ಯೋಜನೆಗಳಿಗೆ ಮಾದರಿ ಎಂದು ಹಿಂದಿನ ಯೋಜನಾ ಆಯೋಗ ಶಿಫಾರಸು ಮಾಡಿತ್ತು. ಇದು ಅಸ್ತಿತ್ವಕ್ಕೆ ಬಂದು ಹತ್ತು ವರ್ಷಗಳ ಬಳಿಕ ಎಂದರೆ 2012ರಲ್ಲಿ ಮೌಲ್ಯಮಾಪನ ಮಾಡಿದಾಗ, ಇದರಲ್ಲಿ ಹಲವು ಲೋಪಗಳು ಕಂಡುಬಂದಿದ್ದು, ಅಂತಿಮವಾಗಿ ಅಪೋಲೊ ಈ ಒಪ್ಪಂದದಿಂದ ಹಿಂದೆ ಸರಿಯಿತು.

ಹೊರಗುತ್ತಿಗೆ ನೀಡುವ ಕಾರಣದಿಂದ ಪಿಪಿಪಿ ವ್ಯವಸ್ಥೆಯಲ್ಲಿ ಗುತ್ತಿಗೆಯಡಿ ಕೆಲಸ ಮಾಡುವ ಕಾರ್ಮಿಕರು ಕಡಿಮೆ ವೇತನ, ಕೆಲಸ ಮಾಡುವ ವಾತಾವರಣ ಕಳಪೆಯಾಗಿರುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಖಾಸಗಿ ಗುತ್ತಿಗೆದಾರರು ನೇಮಕ ಮಾಡಿಕೊಂಡಿರುವ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಸರಕಾರಿ ಆರೋಗ್ಯ ವಲಯದ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಆಹಾರ ಸೇವೆ ಅಥವಾ ನೈರ್ಮಲ್ಯ ಕಾರ್ಮಿಕರ ಸುರಕ್ಷಾ ಕ್ರಮಗಳಂಥ ಗುಣಮಟ್ಟ ನಿಯಂತ್ರಣ ಅಂಶಗಳ ಬಗ್ಗೆ ಖಾಸಗಿಯವರು ಗಮನ ಹರಿಸಿರುವುದಿಲ್ಲ. ಈ ಎಲ್ಲ ಅಂಶಗಳು ರೋಗಿಗಳಿಗೆ ನೀಡುವ ಸೇವೆಯ ಗುಣಮಟ್ಟದ ಮೇಲೆ ಹಾಗೂ ಕಾರ್ಮಿಕರ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಸರಕಾರಿ ಮಟ್ಟದಲ್ಲಿ ಪಿಪಿಪಿ ಬಗ್ಗೆ ಸೂಕ್ತ ಮಾಹಿತಿಗಳಿಲ್ಲ. ಪಶ್ಚಿಮ ಬಂಗಾಳ, ದಿಲ್ಲಿ, ಛತ್ತೀಸ್‌ಗಡ, ಕರ್ನಾಟಕ ಹಾಗೂ ಬಿಹಾರದಲ್ಲಿ ನಡೆದ ಪಿಪಿಪಿ ಹಾಗೂ ಹೊರಗುತ್ತಿಗೆ ಸೇವೆಗಳ ಬಗೆಗಿನ ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ ಬಹಳಷ್ಟು ಖಾಸಗಿ ಕಂಪೆನಿಗಳು ಈ ಬಗೆಗಿನ ಮಾಹಿತಿಯನ್ನು ವ್ಯವಹಾರ ಗೌಪ್ಯತೆ ನೆಪದಲ್ಲಿ ಮುಚ್ಚಿಡುತ್ತವೆ. ಎಲ್ಲ ರೋಗಿಗಳ ದಾಖಲೆಯನ್ನು ಡಿಜಿಟಲೀಕರಣ ವ್ಯವಸ್ಥೆಯಡಿ ಕಾಯ್ದಿರಿಸಲು ಹೊಸ ಆರೋಗ್ಯ ನೀತಿಯು ಒತ್ತು ನೀಡಿದ್ದರೂ, ಪಿಪಿಪಿ ಹಾಗೂ ಹೊರಗುತ್ತಿಗೆ ವ್ಯವಸ್ಥೆಯಡಿ ಸೇವೆ ನೀಡುವ ಖಾಸಗಿ ಕಂಪೆನಿಗಳ ರೋಗಿಗಳ ದಾಖಲೆಯು ಸಾರ್ವಜನಿಕ ಡೊಮೈನ್‌ಗಳಲ್ಲಿ ಉಪಯುಕ್ತ ಮೌಲಿಕ ಮಾಹಿತಿಯಾಗುವ ಬದಲು ಸರಕು ಎನಿಸಿಕೊಳ್ಳುತ್ತದೆ.
ಖಾಸಗಿ ವಲಯ ದಕ್ಷತೆ, ಹೊಣೆಗಾರಿಕೆ ಹಾಗೂ ಸುಸ್ಥಿರತೆ ಅಧಿಕ ಎಂಬ ವಾದದ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರೀಯ ಆರೋಗ್ಯ ನೀತಿಯು ಖಾಸಗಿ ವಲಯಕ್ಕೆ ಒತ್ತು ನೀಡಿದೆ. 2012ರಲ್ಲಿ ಸಂಜಯ ಬಸು ಹಾಗೂ ಇತರರು ನಡೆಸಿದ ಒಂದು ಅಧ್ಯಯನದ ಪ್ರಕಾರ, ಮಧ್ಯಮ ಆದಾಯದ ದೇಶಗಳಲ್ಲಿ ಖಾಸಗಿ ಆರೋಗ್ಯ ಕ್ಷೇತ್ರವು ವಾಸ್ತವವಾಗಿ ಸಾರ್ವತ್ರಿಕತೆಯನ್ನು ಕಡೆಗಣಿಸಿದ್ದು, ಅಧಿಕ ಆದಾಯದ ಗುಂಪಿಗಷ್ಟೇ ಗಮನ ಹರಿಸುತ್ತಿದೆ. ಇಷ್ಟಲ್ಲದೆ ಅಧಿಕ ವೆಚ್ಚದಲ್ಲಿ ಕಳಪೆ ಗುಣಮಟ್ಟದ ಸೇವೆಯನ್ನು ನೀಡುವ ಅಪಾಯವಿದ್ದು, ದಕ್ಷತೆಯ ಮಟ್ಟ ಕೂಡಾ ಕಳಪೆ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ. ಸಾರ್ವಜನಿಕ ವಲಯವು ಆತಿಥ್ಯ ಹಾಗೂ ಸಮಯಪಾಲನೆ ವಿಚಾರದಲ್ಲಿ ಗಣನೀಯವಾಗಿ ಹಿಂದಿದೆ ಎನ್ನುವುದೂ ಅಧ್ಯಯನದಿಂದ ತಿಳಿದುಬಂದಿದೆ. ಆರೋಗ್ಯ ಕ್ಷೇತ್ರವನ್ನು ಖಾಸಗಿಗೆ ವರ್ಗಾಯಿಸುವುದು ಆಡಳಿತಾತ್ಮಕ ಹಾಗೂ ವಹಿವಾಟು ವೆಚ್ಚವನ್ನು ಅಧಿಕಗೊಳಿಸುತ್ತದೆ ಎನ್ನುವುದು ಅಮೆರಿಕದ ಅನುಭವದಿಂದ ದೃಢಪಟ್ಟಿದೆ.
ವರ್ಗಾಂತರ
ವಾಸ್ತವವಾಗಿ ಸರಕಾರವು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಸಂಬಂಧಿತ ಸೇವೆಗಳಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಪಿಪಿಪಿಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದೆ. ಸಂಪನ್ಮೂಲ ಕ್ರೋಡೀಕರಿಸುವ, ವಿನ್ಯಾಸ, ನಿರ್ಮಾಣ ಹಾಗೂ ಆರೋಗ್ಯ ಸೇವೆಗಳ ನಿರ್ವಹಣೆ ಸೇವೆ ನೀಡಿಕೆ ಕಂಪೆನಿಗಳ ಗುಂಪು, ಬ್ಯಾಂಕ್ ಹಾಗೂ ಬಿಲ್ಡರ್‌ಗಳ ಮೂಲಕ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುತ್ತಿದೆ. ಸರಕಾರಿ ವಲಯದ ಪ್ರಾಧಿಕಾರವಾದ ವಿಶೇಷ ಉದ್ದೇಶದ ಸಂಸ್ಥೆಯ ಮೂಲಕ ಇದನ್ನು ನಿರ್ವಹಿಸುತ್ತಿದೆ. ಕಳೆದ ವರ್ಷ ಉತ್ತರ ಪ್ರದೇಶ ಸರಕಾರವು, ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಟೆಂಡರ್ ಆಹ್ವಾನಿಸಿ, ಪ್ರಾಥಮಿಕ ಆರೋಗ್ಯ ಕ್ಷೇತ್ರವನ್ನು ಗೇಟ್ಸ್ ಫೌಂಡೇಷನ್ ಮೂಲಕ ನಿರ್ವಹಿಸಲು ಹೊರಗುತ್ತಿಗೆ ನೀಡಲು ನಿರ್ಧರಿಸಿದೆ. ಖಾಸಗಿ ಹೂಡಿಕೆಯ ಪಾತ್ರ ಮಹತ್ವದ್ದು ಎಂದು ಒಂದು ವರ್ಗ ವಾದಿಸಿದರೆ, ಖಾಸಗಿ ವಲಯ ಕ್ರೋಡೀಕರಿಸಿದ ಸಂಪನ್ಮೂಲದ ವೆಚ್ಚವೂ ಅಧಿಕ ಎನ್ನುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಸಾಲ ನೀಡುವ ಸಂಸ್ಥೆಗಳು, ಖಾಸಗಿ ವಲಯಕ್ಕೆ ನೀಡುವ ಸಾಲದಲ್ಲಿ ಹೆಚ್ಚಿನ ಅಪಾಯದ ಅಂಶ ಒಳಗೊಂಡಿರುತ್ತದೆ ಎಂದು ಪರಿಗಣಿಸುತ್ತವೆ. ಅಮೆರಿಕದ ಅನುಭವದಿಂದ ತಿಳಿದುಬರುವಂತೆ, ಇಂಥ ಆಸ್ಪತ್ರೆಗಳು ಖಾಸಗಿ ಷೇರುದಾರರು ಹಾಗೂ ಬ್ಯಾಂಕುಗಳಿಗೆ ಹೊಣೆಗಾರಿಕೆ ಹೊಂದಿರುವುದರಿಂದ, ಸಾಲ ಮರುಪಾವತಿ ವೆಚ್ಚ ಅಧಿಕವಾಗುತ್ತದೆ.
ಸಮಗ್ರ ಹಾಗೂ ಸಾರ್ವತ್ರಿಕ ಆರೋಗ್ಯ ಸುರಕ್ಷೆಯನ್ನು ನೀಡುವಲ್ಲಿ ಪಿಪಿಪಿ ಯಾವುದೇ ಆಶ್ವಾಸನೆ ಕೊಡುವ ಸ್ಥಿತಿಯಲ್ಲಿಲ್ಲ ಹಾಗೂ ಇದನ್ನು ಖಾಸಗಿ ವಲಯದ ವಿಸ್ತರಣೆಯ ಮಾರ್ಗವಾಗಿ ಅನುಸರಿಸುತ್ತವೆ. 2017ರ ರಾಷ್ಟ್ರೀಯ ಆರೋಗ್ಯ ನೀತಿ ಮುಂದಿನ ಎಂಟು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಹೆಚ್ಚಿಸಲು ಉದ್ದೇಶಿಸಿದ್ದರೂ, ಪ್ರಸ್ತುತ ಇರುವ ವಾರ್ಷಿಕ ಅನುದಾನ, ಸರಕಾರಿ ವಲಯಕ್ಕೆ ಉತ್ತೇಜನ ನೀಡಲು ಸಾಕಾಗುವ ಮಟ್ಟದಲ್ಲಿಲ್ಲ. ಇದಲ್ಲದೇ ಗುತ್ತಿಗೆ ಹಾಗೂ ಸೇವೆಗಳ ಖರೀದಿಯ ಮೂಲಕ ಪಿಪಿಪಿ ಯೋಜನೆಗಳಿಂದಾಗುವ ಹೊಸ ಹೆಚ್ಚುವರಿ ವೆಚ್ಚವನ್ನು ಕಲ್ಪಿಸಿಕೊಳ್ಳಲು ವಿಫಲವಾಗಿದೆ.
ಕೃಪೆ: thewire.in







