ಡಾ. ವೀಣಾ ಮಜುಂದಾರ್
ಈ ದಿನ ಹುಟ್ಟಿದವರು

ಡಾ. ವೀಣಾ ಮಜುಂದಾರ್ ಶಿಕ್ಷಣ ತಜ್ಞೆ, ಮಹಿಳಾವಾದಿ. ಕೋಲ್ಕತಾದಲ್ಲಿ 1927ರ ಈ ದಿನದಂದು ಹುಟ್ಟಿದ ಇವರು ಬನಾರಸ್ ಹಿಂದೂ ವಿವಿ, ಕಲ್ಕತ್ತಾ ವಿವಿಯಲ್ಲಿ ಅಧ್ಯಯನ ನಡೆಸಿದವರು. 1962ರಲ್ಲಿ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿವಿಯಿಂದ ಡಾಕ್ಟರೆಟ್ ಪಡೆದವರು. ಭಾರತದಲ್ಲಿ ಮಹಿಳಾ ಶಿಕ್ಷಣದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು. ಭಾರತೀಯ ಮಹಿಳೆಯರ ಬಗ್ಗೆ 1974ರಲ್ಲಿ ನಡೆದ ಮೊದಲ ಅಧ್ಯಯನ ಸಮಿತಿಯಲ್ಲಿ ಕಾರ್ಯದರ್ಶಿ ಆಗಿದ್ದವರು. ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ ಸ್ಥಾಪಕ ನಿರ್ದೇಶಕಿಯಾಗಿದ್ದರು. 2013ರ ಮೇ 30ರಂದು ನಿಧನರಾದರು.
Next Story





