Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಇಸಾರ್‌ರ ಮೇರು ಸಾಧನೆ

ಇಸಾರ್‌ರ ಮೇರು ಸಾಧನೆ

ಉರ್ದುವಿನಲ್ಲಿ ಪರ್ಷಿಯನ್ ಕಾವ್ಯಲೋಕದ ಅನಾವರಣ

ವಿಖಾರ್ ಅಹ್ಮದ್ ಸಈದ್ವಿಖಾರ್ ಅಹ್ಮದ್ ಸಈದ್31 March 2017 6:28 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಇಸಾರ್‌ರ ಮೇರು ಸಾಧನೆ

ತಾನೊಬ್ಬ ಕಾಡಿನಲ್ಲೇ ಬೆಳೆದ ವ್ಯಕ್ತಿಯೆಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಇಸಾರ್, ‘‘ನನ್ನ ಅರಣ್ಯ ಯಾತ್ರೆಯಲ್ಲಿ ನನಗೆ ಪರ್ಷಿಯನ್ ಕವನಸಾಹಿತ್ಯವೇ ಸಂಗಾತಿಯಾಯಿತು. ಭಾಷೆ ಹಾಗೂ ಕವನದ ಮೇಲಿನ ಪ್ರೀತಿಯಿಂದ ನಾನು ಈ ಭಾಷಾಂತರ ಕೈಂಕರ್ಯವನ್ನು ಯಾವ ನಿರೀಕ್ಷೆಯೂ ಇಲ್ಲದೆ ಮಾಡುತ್ತಿದ್ದೇನೆ’’ ಎಂದು ಹೇಳುತ್ತಾರೆ. ಇಸಾರ್‌ರಂತಹ ಉದಾತ್ತ ಪ್ರತಿಭೆ ಮೂಲೆಗುಂಪಾಗಿರುವುದು ಭಾರತದಲ್ಲಿ ಉರ್ದು ಭಾಷೆಯ ಶೋಚನೀಯ ಸ್ಥಿತಿಗೆ ಸಾಕ್ಷಿಯಾಗಿದೆ. ಸರಕಾರದ ಸೀಮಿತ ಪ್ರೋತ್ಸಾಹ ಹಾಗೂ ವೃತ್ತಿಪರ ಅವಕಾಶಗಳ ಕೊರತೆಯಿಂದಾಗಿ ಉರ್ದು ಭಾಷೆಯು ಭಾರತದಲ್ಲಿ ಅವನತಿಯ ಹಾದಿಯಲ್ಲಿ ಸಾಗುತ್ತಿದೆ.

ಬೆಂಗಳೂರಿನ ನಾಗರಥ್ ಪೇಟೆಯ ಜನದಟ್ಟಣೆಯಿಂದ ಕೂಡಿದ ಓಣಿಗಳಲ್ಲಿ ಈ ಆಧುನಿಕ ನಗರದ ಅಂತರಾತ್ಮ ಅಡಗಿದೆಯೇನೊ. ಈ ಪರಿಸರದಲ್ಲಿ ವಾಸವಾಗಿರುವ 95 ವರ್ಷ ವಯಸ್ಸಿನ ವಯೋವೃದ್ಧರೊಬ್ಬರ ಬದುಕಿನ ಏಕೈಕ ಧ್ಯೇಯವೆಂದರೆ, ಪರ್ಷಿಯನ್ ಕವಿಗಳ ಮಹಾನ್ ಕೃತಿಗಳನ್ನು ಉರ್ದುವಿಗೆ ಭಾಷಾಂತರಿಸುವುದಾಗಿದೆ. ಸೈಯದ್ ಅಹ್ಮದ್ ಇಸಾರ್ ಅವರ ಮನೆಯನ್ನು ಗುರುತಿಸುವುದು ಅಷ್ಟೇನೂ ಸುಲಭವಲ್ಲ. ಅವರ ಮನೆಯಿರುವ ನಾಗರಥ್ ಪೇಟೆಯ ಕಿರಿದಾದ ಓಣಿಗಳಲ್ಲಿ ಸಾಗುವಾಗ ನಮಗೆ ದಾರಿತಪ್ಪುವ ಸಾಧ್ಯತೆಯೂ ಇದೆ. ಆದಾಗ್ಯೂ, ನಾವು ಹೇಗಾದರೂ ಮಾಡಿ ಅವರ ಮನೆಯನ್ನು ಗುರುತಿಸಿದೆವು. ಒಂದನೆ ಮಹಡಿಯಲ್ಲಿರುವ ಇಸಾರ್ ಅವರ ಮನೆಗೆ ತಲುಪಲು ಮೆಟ್ಟಿಲು ಹತ್ತುತ್ತಿದ್ದಂತೆಯೇ, ಖುದ್ದಾಗಿ ಅವರೇ ಬಂದು ನಮ್ಮನ್ನು ಸ್ವಾಗತಿಸಿದರು. ತನ್ನ ವಯಸ್ಸಿಗಿಂತ ತುಂಬಾ ಕಿರಿಯರಂತೆ ಅವರು ಕಾಣುತ್ತಿದ್ದರು. ಇಸಾರ್ ಅವರ ಸಂಗ್ರಹದಲ್ಲಿರುವ ಉರ್ದು ಹಾಗೂ ಪರ್ಷಿಯನ್ ಪುಸ್ತಕಕೃತಿಗಳು ಅವರಿಗಿಂತಲೂ ತುಂಬಾ ಹಳೆಯವು. ಅವುಗಳನ್ನವರು ತನ್ನ ಮನೆಯ ಕಪಾಟುಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದಾರೆ. ಪ್ಲೇಟೋ ಅವರ ‘ರಿಪಬ್ಲಿಕ್’ ಕೃತಿಯ ಉರ್ದು ಭಾಷಾಂತರದ ಕೃತಿಯ ಜೊತೆಗೆ ಪವಿತ್ರ ಕುರ್‌ಆನ್ ಬಗೆಗಿನ ಹಲವು ವಿವರಣಾತ್ಮಕ ಕೃತಿಗಳು ಕೂಡಾ ಇಲ್ಲಿವೆ. ಮುನ್ಶಿ ನವಲ್ ಕಿಶೋರ್ ಪ್ರಕಟಿಸಿದ 19ನೆ ಶತಮಾನದ ಪರ್ಷಿಯನ್ ನಿಘಂಟುಗಳು ಗಾಂಭೀರ್ಯದೊಂದಿಗೆ ವಿರಾಜಮಾನವಾಗಿವೆ. ಇಸಾರ್ ಅವರ ಗ್ರಂಥಸಂಗ್ರಹವನ್ನು ನೋಡುತ್ತಿದ್ದಂತೆಯೇ ಭೂತ ಹಾಗೂ ವರ್ತಮಾನ ಕಾಲಗಳೆರಡೂ ತೆರೆದುಕೊಂಡಂತಾಗಿ ವಿದ್ಯುತ್‌ಸಂಚಾರವಾದ ಅನುಭವ ಮೂಡಿಸುತ್ತದೆ. ಕಿಟಕಿಯ ಸನಿಹದಲ್ಲೇ ಇರುವ ಇಸಾರ್ ಅವರ ಮೇಜಿನ ಮೇಲೆ ಬೀಳುವ ಮುಂಜಾವಿನ ಸೂರ್ಯನ ಎಳೆಬಿಸಿಲು, ಆಗ ಈಗಾಗಲೇ ನಿರ್ಗಮಿಸಲಾಂಭಿಸಿರುವ ಬೆಂಗಳೂರಿನ ಚಳಿಯಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಅವರ ಮೇಜಿನುದ್ದಕ್ಕೂ ಕೈಬರಹದ ಟಿಪ್ಪಣಿಗಳನ್ನೊಳಗೊಂಡ ನೋಟ್‌ಪುಸ್ತಕಗಳು ಚದುರಿಬಿದ್ದಿದ್ದವು. ದೂರದಲ್ಲಿ ನೋಡಿದರೆ ಈ ಟಿಪ್ಪಣಿಗಳು ಗೀಚಿದ ಬರಹಗಳ ಹಾಗೆ ಕಾಣುವುದಾದರೂ, ಹತ್ತಿರದಿಂದ ಕಣ್ಣು ಹಾಯಿಸಿದರೆ ಅವು ಉರ್ದು ಕವಿತೆಗಳೆಂದು ಸ್ಪಷ್ಟವಾಗುತ್ತದೆ.

 ಅಂದಹಾಗೆ ಇಸಾರ್ ಜನಿಸಿದ್ದು 1922ರಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು 1948ರಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಗೊಂಡರು. ಅರಣ್ಯಾಧಿಕಾರಿಯಾಗಿ ತನ್ನ 32 ವರ್ಷಗಳ ಸೇವಾವಧಿಯಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 1954ರಿಂದ 1956ರ ಮಧ್ಯೆ ಎರಡು ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಾಗಿದ್ದು ಅವರು ವಾಶಿಂಗ್ಟನ್ ವಿವಿಯಲ್ಲಿ ಅರಣ್ಯಶಾಸ್ತ್ರ ಅಧ್ಯಯನ ಮಾಡಿದ್ದರು. ತನ್ನ ವೃತ್ತಿ ಜೀವನದ ಆರಂಭದಲ್ಲಿ ಅವರು ಆನೆಗಳನ್ನು ಸೆರೆಹಿಡಿಯುವ ಖೆಡ್ಡಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ವಹಿಸಿದ್ದರು. ಕರ್ನಾಟಕದ ಮುಖ್ಯ ವನ್ಯಜೀವಿ ಪಾಲಕ ವಾರ್ಡನ್ ಅಧಿಕಾರಿಯಾಗಿ 1980ರಲ್ಲಿ ನಿವೃತ್ತಿಗೊಂಡ ಬಳಿಕ ಅವರು ಪರ್ಷಿಯನ್ ಕವನಗಳನ್ನು ಉರ್ದುವಿಗೆ ಭಾಷಾಂತರಿಸುವ ಕಾರ್ಯದಲ್ಲಿ ಅವಿರತವಾಗಿ ತನ್ನನ್ನು ತೊಡಗಿಸಿಕೊಂಡರು. ‘‘ನಾನು ಸಾಗರದ ಸಮೀಪದ ಅರಣ್ಯದಲ್ಲಿ ಸೇವೆಯಲ್ಲಿದ್ದಾಗ ಮೊತ್ತ ಮೊದಲ ಬಾರಿಗೆ ಪರ್ಷಿಯನ್ ಕವನವನ್ನು ಉರ್ದುವಿಗೆ ಭಾಷಾಂತರಿಸಿದೆ. ಅದೊಂದು ಉಮರ್ ಖಯ್ಯಾಮ್ ಅವರ ಚೌಪದಿ (ನಾಲ್ಕು ಸಾಲುಗಳ ಕವನ)ಯಾಗಿತ್ತು.’’ ಎನ್ನುವ ಇಸಾರ್ ಅವರು 1980ರ ಆರಂಭದಲ್ಲಿ ಯ್ಯಾಮ್, ಸಾದಿ ಹಾಗೂ ಹಾಫೀಝ್ ಅವರಂತಹ ಎರಡನೆ ಶತಮಾನದ ಮಹಾನ್ ಕವಿಗಳ ಕವನಗಳನ್ನು ಭಾಷಾಂತರಿಸತೊಡಗಿದರು. ಆದರೆ (ಅಲ್ಲಮಾ) ಮುಹಮ್ಮದ್ ಇಕ್ಬಾಲ್ ಅವರ ಪರ್ಷಿಯನ್ ಕವನಗಳ ಭಾಷಾಂತರ ದಲ್ಲಿ ಆಸಕ್ತರಾದ ಕಾರಣ, ಆ ಕಾರ್ಯವು ಅಪೂರ್ಣವಾಗಿಯೇ ಉಳಿದವು.

 ಅಳವಾದ ತತ್ವಜ್ಞಾನದಿಂದ ಕೂಡಿದ ಇಕ್ಬಾಲ್ ಅವರ ಕವನಗಳನ್ನು ಭಾಷಾಂತರಿಸುವುದು, ಅದರಲ್ಲೂ 60ರ ವಯಸ್ಸು ದಾಟಿರುವ ಯಾರಿಗಾದರೂ ಒಂದು ಸವಾಲಿನ ಕೆಲಸವಾಗಿತ್ತು. ಆದರೆ ಇಸಾರ್ ಸಂಪೂರ್ಣವಾಗಿ ಆ ಕೆಲಸದಲ್ಲೇ ತಲ್ಲೀನರಾಗಿಬಿಟ್ಟರು. ಇಕ್ಬಾಲ್ ಅವರ ಕವನಗಳ ಎಲ್ಲಾ ಏಳು ಸಂಪುಟಗಳ ಭಾಷಾಂತರವನ್ನು 1992ರಲ್ಲಿ ಪೂರ್ಣಗೊಳಿಸಿದರು. ಇಕ್ಬಾಲ್ ಅವರ ‘ಪಯಾಮೆ ಮಶ್ರಿಕ್’(ಪೂರ್ವದ ಸಂದೇಶ)ನ ಅನುವಾದ 1997ರಲ್ಲಿ ಪ್ರಕಟಗೊಂಡಿದ್ದು, ತರುವಾಯ ಅದರ ಉಳಿದ ಸಂಪುಟಗಳು ಬಿಡುಗಡೆಯಾದವು. ಇಕ್ಬಾಲ್ ಅವರ ಕವನಗಳಲ್ಲಿ ಅಂತರ್ಗತವಾಗಿರುವ ತತ್ವಶಾಸ್ತ್ರದ ಸಾರ ಹಾಗೂ ಲಯಬದ್ಧತೆಯನ್ನು ತನ್ನ ಭಾಷಾಂತರಗಳಲ್ಲಿ ಉಳಿಸಿಕೊಳ್ಳುವಲ್ಲಿ ಇಸಾರ್ ಸಫಲರಾಗಿದ್ದಾರೆಂದು ವಿಮರ್ಶಕರು ಶ್ಲಾಘಿಸಿದ್ದಾರೆ. ಇಕ್ಬಾಲ್ ಅವರ ಪುತ್ರ ಜಾವೇದ್ ಇಕ್ಬಾಲ್, ಖ್ಯಾತ ಉರ್ದು ಲೇಖಕ ಶಂಸುರ್ರಹ್ಮಾನ್ ಫಾರೂಕಿ, ಮೈಸೂರಿನ ಖ್ಯಾತ ಇತಿಹಾಸ ತಜ್ಞ ಪ್ರೊ.ಬಿ. ಶೇಖ್ ಅಲಿ ಸೇರಿದಂತೆ ಹಲವರು ಇಸಾರ್ ಅವರ ಈ ಮಹಾನ್ ಭಾಷಾಂತರ ಕಾರ್ಯವನ್ನು ಮೆಚ್ಚಿದ್ದಾರೆ. ಜಪಾನಿನ ಉಸಾಕಾ ವಿವಿಯ ಉರ್ದು ವಿದ್ವಾಂಸ ಟಿ. ಮತ್ಸುಮಾರಾ ಅವರು ಇಕ್ಬಾಲ್ ಕೃತಿಗಳನ್ನು ಜಪಾನಿ ಭಾಷೆಗೆ ಅನುವಾದಿಸಲು ಇಸಾರ್ ಅವರ ಭಾಷಾಂತರ ಕೃತಿಗಳನ್ನೇ ನೆಚ್ಚಿಕೊಂಡಿದ್ದರು.

 ಇಕ್ಬಾಲ್ ಕೃತಿಗಳ ಭಾಷಾಂತರಗಳು ಇಸಾರ್ ಅವರನ್ನು ಪರ್ಷಿಯನ್ ಹಾಗೂ ಉರ್ದು ವಿದ್ವಾಂಸರ ಬಳಗದಲ್ಲೂ ಜನಪ್ರಿಯಗೊಳಿಸಿದೆ. ಒಂದು ರೀತಿಯಲ್ಲಿ ಅವರನ್ನು ಈಗಾಗಲೇ ಉರ್ದು ಸಾಹಿತ್ಯ ವಲಯದಲ್ಲಿ ಅಜರಾಮರಗೊಳಿಸಿದೆ. ಇಸಾರ್ ಸಾಧನೆ ಇಷ್ಟಕ್ಕೆ ಮುಗಿದಿಲ್ಲ. ಕಳೆದ ಮೂರು ದಶಕಗಳಿಂದ ಅವರು 13ನೆ ಶತಮಾನದ ಪರ್ಷಿಯನ್ ಸೂಫಿ ಕವಿ ಜಲಾಲುದ್ದೀನ್ ಮುಹಮ್ಮದ್ ರೂಮಿ ಅವರ ಕೃತಿಗಳನ್ನು ಭಾಷಾಂತರಿಸುವ ಮಹೋನ್ನತ ಕಾರ್ಯದಲ್ಲಿ ಅವಿರತವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ರೂಮಿಯ ಅಸಾಧಾರಣ ಕೃತಿಯೆನಿಸಿರುವ ‘ಮಸ್ನವಿ’ ಆರು ಸಂಪುಟಗಳ ಸುದೀರ್ಘ ಕಾವ್ಯವಾಗಿದ್ದು 25 ಸಾವಿರಕ್ಕೂ ಅಧಿಕ ಸಾಲುಗಳನ್ನು ಹೊಂದಿದೆ. ಈ ಅದ್ಭುತ ಕಾವ್ಯವನ್ನು ಉರ್ದುವಿಗೆ ಭಾಷಾಂತರಿಸಿರುವ ಇಸಾರ್ ಮೂಲ ಕೃತಿಯಲ್ಲಿನ ಅಂತಃಸತ್ವ ಹಾಗೂ ಕಾವ್ಯಾತ್ಮಕ ಛಂದೋಗತಿಯನ್ನು ಉಳಿಸಿಕೊಂಡಿದ್ದಾರೆ.

ದೀರ್ಘಾವಧಿಯಿಂದ ಭಾಷಾಂತರ ಕಾರ್ಯದಲ್ಲೇ ತನ್ನನ್ನು ಮುಡಿಪಾಗಿಟ್ಟುಕೊಂಡು, ಸಾವಿರಾರು ಪುಟಗಳಷ್ಟು ಅನುವಾದ ಮಾಡಿದ್ದರೂ, ಸೈಯದ್ ಅಹ್ಮದ್ ಇಸಾರ್ ಅವರ ಹೆಸರು ಇನ್ನೂ ಬಹಳಷ್ಟು ಮಂದಿಗೆ ತಿಳಿದಿಲ್ಲವೆಂಬುದು ಅಚ್ಚರಿಯೇ ಸರಿ. ಸ್ವತಃ ಕವಿಯೂ ಆಗಿರುವ ಅವರ ಸ್ವರಚಿತ ಗಝಲ್‌ಗಳ ಸಂಕಲನ ‘ತರಾನಾ ವಾ ತರಂಗ್’ 1999ರಲ್ಲಿ ಪ್ರಕಟವಾಗಿತ್ತು. ಕರ್ನಾಟಕ ಹಾಗೂ ಉತ್ತರಪ್ರದೇಶದ ಉರ್ದು ಅಕಾಡಮಿಗಳು ಅವರನ್ನು ಸನ್ಮಾನಿಸಿದ್ದು ಬಿಟ್ಟರೆ, ಅದರಾಚೆಗೆ ಯಾರೂ ಕೂಡಾ ಇಸಾರ್‌ರ ಸಾಧನೆಗಳನ್ನು ಪುರಸ್ಕರಿಸಿದ್ದು ತೀರಾ ವಿರಳ. ಎಲೆಮರೆಕಾಯಿಯಂತೆ ತನ್ನ ಪಾಡಿಗೆ ತಾನಿರುವ ಅವರ ಜಾಯಮಾನವೇ ಭಾಗಶಃ ಇದಕ್ಕೆ ಕಾರಣವೆನ್ನಬಹುದು. ಈ ಸಂದರ್ಶನದುದ್ದಕ್ಕೂ ಅವರ ಬದುಕು ಹಾಗೂ ಅವರ ಭಾಷಾಂತರಿತ ಕೃತಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಅವರನ್ನು ತುಂಬಾ ಕಾಡಿದೆವು. ತಾನೊಬ್ಬ ಕಾಡಿನಲ್ಲೇ ಬೆಳೆದ ವ್ಯಕ್ತಿಯೆಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಇಸಾರ್, ‘‘ನನ್ನ ಅರಣ್ಯ ಯಾತ್ರೆಯಲ್ಲಿ ನನಗೆ ಪರ್ಷಿಯನ್ ಕವನಸಾಹಿತ್ಯವೇ ಸಂಗಾತಿಯಾಯಿತು. ಭಾಷೆ ಹಾಗೂ ಕವನದ ಮೇಲಿನ ಪ್ರೀತಿಯಿಂದ ನಾನು ಈ ಭಾಷಾಂತರ ಕೈಂಕರ್ಯವನ್ನು ಯಾವ ನಿರೀಕ್ಷೆಯೂ ಇಲ್ಲದೆ ಮಾಡುತ್ತಿದ್ದೇನೆ’’ ಎಂದು ಹೇಳುತ್ತಾರೆ. ಇಸಾರ್‌ರಂತಹ ಉದಾತ್ತ ಪ್ರತಿಭೆ ಮೂಲೆಗುಂಪಾಗಿರುವುದು ಭಾರತದಲ್ಲಿ ಉರ್ದು ಭಾಷೆಯ ಶೋಚನೀಯ ಸ್ಥಿತಿಗೆ ಸಾಕ್ಷಿಯಾಗಿದೆ. ಸರಕಾರದ ಸೀಮಿತ ಪ್ರೋತ್ಸಾಹ ಹಾಗೂ ವೃತ್ತಿಪರ ಅವಕಾಶಗಳ ಕೊರತೆಯಿಂದಾಗಿ ಉರ್ದು ಭಾಷೆಯು ಭಾರತದಲ್ಲಿ ಅವನತಿಯ ಹಾದಿಯಲ್ಲಿ ಸಾಗುತ್ತಿದೆ.

ಆದರೆ ಇಂತಹ ವಿಸ್ತೃತವಾದ ವಿಷಯಗಳ ಬಗ್ಗೆ ಚರ್ಚಿಸಲು ಇಸಾರ್ ಅತೀವ ಆಸಕ್ತಿಯನ್ನು ಹೊಂದಿಲ್ಲವೆಂಬಂತೆ ಕಾಣುತ್ತದೆ.ಅವರೇನಿದ್ದರೂ ತನ್ನ ಮೇರು ಸಾಧನೆಯಾಗಲಿರುವ ‘ಮಸ್ನವಿ’ಯ ಅನುವಾದಿತ ಕೃತಿಯ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸಂದರ್ಶನದ ಬಳಿಕ ಮನೆಬಾಗಿಲವರೆಗೂ ಬಂದು ಅವರು ನಮಗೆ ವಿದಾಯ ಕೋರಿದರು. ಇದರ ಜೊತೆಗೆ ಅವರು ತನ್ನನ್ನು ಭೇಟಿಯಾಗಲು ಬರುವ ಮುದ್ರಕನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. 11 ವರ್ಷದ ಬಾಲಕನಾಗಿದ್ದಾಗ, ತಾನು ಕೇಳಿದ್ದ ರೂಮಿಯ ಕವನದ ಸಾಲೊಂದನ್ನು ಇಸಾರ್ ಈ ಸಂದರ್ಭದಲ್ಲಿ ನಮ್ಮ ಬಳಿ ಉದ್ಧರಿಸಿದರು. ‘‘ದೇಹವು ಆತ್ಮದಿಂದ ವೇಗವನ್ನು ಪಡೆದುಕೊಳ್ಳುತ್ತದೆ. ಆದರೂ ಆತ್ಮ ನಿಮಗೆ ಕಾಣಿಸದು/ ಆದರೆ ದೇಹವು ಪಡೆಯುವ ವೇಗದಿಂದ ಆತ್ಮವನ್ನು ಅರಿಯಿರಿ’’. ಶೀಘ್ರದಲ್ಲೇ ಪ್ರಕಟವಾಗಲಿರುವ ಇಸಾರ್ ಅವರ ‘ಮಸ್ನವಿ’ ಭಾಷಾಂತರ ಕೃತಿಯಲ್ಲಿ, ಇಂತಹ ಸಾವಿರಾರು ರಮ್ಯವಾದ ಕವನ ಸಾಲುಗಳನ್ನು ಉರ್ದುವಿನಲ್ಲಿ ಕೇಳಲಿರುವುದನ್ನು ಕಲ್ಪಿಸಿಯೇ ಮೈಮನ ಪುಳಕಿತಗೊಳ್ಳುತ್ತದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಿಖಾರ್ ಅಹ್ಮದ್ ಸಈದ್
ವಿಖಾರ್ ಅಹ್ಮದ್ ಸಈದ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X