Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ವೀರಪ್ಪನ್ ಬೇಟೆಯ ನೆನಪುಗಳು

ವೀರಪ್ಪನ್ ಬೇಟೆಯ ನೆನಪುಗಳು

ವಾರ್ತಾಭಾರತಿವಾರ್ತಾಭಾರತಿ2 April 2017 11:59 PM IST
share
ವೀರಪ್ಪನ್ ಬೇಟೆಯ ನೆನಪುಗಳು

ವಿಜಯ್‌ಕುಮಾರ್ ಈ ಕೃತಿಯಲ್ಲಿನ ಕೆಲವು ಸನ್ನಿವೇಶಗಳನ್ನು ವೀರಪ್ಪನ್‌ನ ದೃಷ್ಟಿಕೋನದಿಂದಲೂ ನೋಡಲು ಬಯಸಿದ್ದಾರೆ. ಅತ್ಯಂತ ಬರ್ಬರವಾದ ಗೆಡ್ಡಸಾಲ್ ಹತ್ಯಾಕಾಂಡದ ವರ್ಣನೆಯನ್ನು ಅವರು ವೀರಪ್ಪನ್‌ನ 'ಧ್ವನಿ'ಯಲ್ಲೇ ಬರೆದಿದ್ದಾರೆ. ಮಾಹಿತಿದಾರರ ಹೆಸರುಗಳನ್ನು ತಿಳಿಸುವಂತೆ ದನಗಾಹಿಯೊಬ್ಬನಿಗೆ ಬೆದರಿಕೆ ಹಾಕುವುದು, ಅವರನ್ನು ಪತ್ತೆಹಚ್ಚಿದ ಬಳಿಕ ರೋಷತಪ್ತನಾಗುವುದು, ಇವೆಲ್ಲವೂ ಆತನ ಮಾತುಗಳಲ್ಲೇ ಮೂಡಿಬಂದಿವೆ.

ತನ್ನ ಭದ್ರಕೋಟೆಯಾದ ತಮಿಳುನಾಡಿನ ದಟ್ಟಾರಣ್ಯದಿಂದ ಹೊರಗೆ ಕಾಲಿಟ್ಟ ವೀರಪ್ಪನ್, ಮುಂದೆರಗಲಿರುವ ಅಪಾಯದ ಅರಿವಿಲ್ಲದೆ, ಆ್ಯಂಬುಲೆನ್ಸ್‌ನ್ನು ಏರಿದ್ದ... ಇಷ್ಟಕ್ಕೂ ಈ ಆ್ಯಂಬುಲೆನ್ಸ್‌ನ ಏರ್ಪಾಡು ಮಾಡಿದವರು ವೀರಪ್ಪನ್‌ನ ಗ್ಯಾಂಗ್‌ನಲ್ಲಿ ತಮ್ಮ ಗೂಢಚಾರನನ್ನು ನುಸುಳಿಸಿದ್ದ ತಮಿಳುನಾಡು ಎಸ್‌ಟಿಎಫ್‌ನ ಬೇಹುಗಾರಿಕಾ ದಳದ ಪೊಲೀಸರು. ತನ್ನ ಕಣ್ಣಿನ ಚಿಕಿತ್ಸೆಗಾಗಿ ವೀರಪ್ಪನ್, ಆಸ್ಪತ್ರೆಯೊಂದನ್ನು ಸಂದರ್ಶಿಸ ಬಯಸುತ್ತಿದ್ದಾನೆಂಬ ವಿಷಯ ಅವರಿಗೆ ಈ ಗೂಢಚಾರನ ಮೂಲಕ ತಿಳಿದುಬಂದಿತ್ತು.

ದೇಶದ ಅತ್ಯಂತ ಕುಖ್ಯಾತ ಡಕಾಯಿತನಿಗಾಗಿ ದಶಕಗಳ ಕಾಲ ನಡೆಯುತ್ತಿದ್ದ ನರಬೇಟೆಯು ಆನಂತರದ ಕೇವಲ 20 ನಿಮಿಷಗಳಲ್ಲಿ ಅಂತ್ಯಗೊಂಡಿತು. ಆತನನ್ನು ಸೆರೆಹಿಡಿಯಲೆಂದೇ ರಚನೆಯಾಗಿದ್ದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯು ಆ್ಯಂಬುಲೆನ್ಸ್ ಮೇಲೆ 338 ಬುಲೆಟ್‌ಗಳ ಸುರಿಮಳೆಗೈಯಿತು. ಅವುಗಳಲ್ಲಿ ಮೂರು, 52 ವರ್ಷದ ಕಾಡುಗಳ್ಳನ ದೇಹದ ಒಳಹೊಕ್ಕವು.

 ಆ ರಾತ್ರಿ 11: 00 ಗಂಟೆಗೆ, ವೀರಪ್ಪನ್ ಕುರಿತ ಪೊಲೀಸ್ ಫೈಲ್‌ನ್ನು ಕ್ಲೋಸ್ ಮಾಡಲಾಯಿತು. 'ಆಪರೇಶನ್ ಕುಕೂನ್' ಯಶಸ್ವಿಯಾಗಿತ್ತು.

ನಿವೃತ್ತ ಪೊಲೀಸ್ ಅಧಿಕಾರಿ ಕೆ.ವಿಜಯ್‌ಕುಮಾರ್ ಅವರ ನೂತನ ಆಂಗ್ಲ ಕೃತಿ, 'ವೀರಪ್ಪನ್: ಚೇಸಿಂಗ್ ದಿ ಬ್ರಿಗಾಂಡ್' ಕೊನೆಗೊಳ್ಳುವುದು ಹೀಗೆ. ಆಪರೇಶನ್ ಕುಕೂನ್ ಕಾರ್ಯಾಚರಣೆಯ ಕೊನೆಯ ಸೆಕೆಂಡ್‌ವರೆಗಿನ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿರುವ ಈ ಕೃತಿಯು ಅಂತ್ಯದಲ್ಲಿ '' ಕೂಸೆ ಮುನಿಸ್ವಾಮಿ ವೀರಪ್ಪನ್‌ನ ಫೈಲ್‌ನ್ನು ಮುಚ್ಚಲಾಗಿದೆ' ಎಂದು ಸಮಾಧಾನದ ನಿಟ್ಟುಸಿರೆಳೆದಂತೆ ಬರೆದಿದ್ದಾರೆ. ''ಒಂದು ವೇಳೆ ವೀರಪ್ಪನ್ ಅಂದು ಬಾರದೆ ಇದ್ದಲ್ಲಿ, ಏನಾಗಬಹುದಿತ್ತೆಂದು ನನಗೆ ತಿಳಿದಿಲ್ಲ. ಒಂದು ವೇಳೆ ಹಾಗಾಗಿದ್ದಲ್ಲಿ, ಅದು ಕೂಡಾ ನಮ್ಮ ಸರಣಿ ವೈಫಲ್ಯಗಳಲ್ಲಿ ಇನ್ನೊಂದಾಗಿರುತ್ತಿತ್ತು'' ಎಂದು ಕುಮಾರ್ ಹೇಳುತ್ತಾರೆ. ಸಾಮಾನ್ಯವಾಗಿ ಯಾವತ್ತೂ ಕಟ್ಟೆಚ್ಚರದಿಂದಿರುತ್ತಿದ್ದ ವೀರಪ್ಪನ್ ಅಂದು ಮಾತ್ರ ಎಂದಿನಂತಿರಲಿಲ್ಲ ಎಂದು ವಿಜಯ್ ಭಾವಿಸಿದ್ದಾರೆ.

ತಮಿಳುನಾಡು ಎಸ್‌ಟಿಎಫ್‌ನ ವರಿಷ್ಠರಾಗಿದ್ದ ವಿಜಯ್‌ಕುಮಾರ್, ಆಪರೇಷನ್ ಕುಕೂನ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ 2001ರಲ್ಲಿ ಅವರಿಗೆ ಈ ಹೊಣೆಯನ್ನು ವಹಿಸಿದ್ದರು. ಇದಕ್ಕೂ ಮೊದಲು ವಿಜಯ್‌ಕುಮಾರ್ ರಾಜೀವ್‌ಗಾಂಧಿ ಅವರಿಗಾಗಿನ ವಿಶೇಷ ರಕ್ಷಣಾ ತಂಡದ ಭಾಗವಾಗಿದ್ದರು ಹಾಗೂ ಕಾಶ್ಮೀರದಲ್ಲಿ ಗಡಿಭದ್ರತಾಪಡೆಯಲ್ಲೂ ಸೇವೆ ಸಲ್ಲಿಸಿದ್ದರು. ಪಕ್ಕಾ ಥ್ರಿಲ್ಲರ್ ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಈ ಕೃತಿಯು, ಎಸ್‌ಟಿಎಫ್ ಬಗ್ಗೆ ಪೂರ್ವಾಗ್ರಹ ಪೀಡಿತವಾದ ಒಲವನ್ನು ಹೊಂದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. 1990ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ರಚಿಸಿದ್ದ ಜಂಟಿ ಕಾರ್ಯಪಡೆ (ಎಸ್‌ಟಿಎಫ್)ಯ ರಚನೆಯಿಂದ ಹಿಡಿದು ವೀರಪ್ಪನ್ ಬೇಟೆಯ ಕುರಿತ ವಿವರಗಳನ್ನು ಅತ್ಯಂತ ಸ್ಪಷ್ಟತೆಯೊಂದಿಗೆ ಓದುಗರ ಮುಂದೆ ಅನಾವರಣಗೊಳಿಸುತ್ತದೆ. ಐಪಿಎಸ್ ಅಧಿಕಾರಿಯಾಗಿದ್ದ ಕೆ. ವಿಜಯ್‌ಕುಮಾರ್, 2004ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವೀರಪ್ಪನ್‌ನನ್ನು ಹತ್ಯೆಗೈದ ವಿಶೇಷ ಕಾರ್ಯಪಡೆಯ ವರಿಷ್ಠರಾಗಿದ್ದರು.

ಕುಮಾರ್ ಪುಸ್ತಕದ ನಿರೂಪಣಾ ಶೈಲಿಯು ಓದುಗರನ್ನು ಎಲ್ಲೂ ತಡೆಯದಂತೆ ಓದಿಸಿಕೊಂಡು ಹೋಗುತ್ತದೆ. ಈ ಕೃತಿಯಲ್ಲಿ ಹಲವಾರು ಎದೆ ಝಲ್ಲೆನಿಸುವಂತಹ ಸನ್ನಿವೇಶಗಳಿವೆ. ವೀರಪ್ಪನ್ ಗ್ಯಾಂಗ್ ಕಾಡಿನಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್‌ಗಳಿಂದ ಕ್ಷಣಕ್ಷಣವೂ ಅಪಾಯವನ್ನು ಎದುರಿಸುತ್ತಿದ್ದ ಎಸ್‌ಟಿಎಫ್‌ನ ಭಾಗವಾಗಿ ವಿಜಯ್ ಕುಮಾರ್ ಕಳೆದಂತಹ ದಿನಗಳು, ವೀರಪ್ಪನ್‌ನಿಂದ ಅಪಹೃತರಾದ ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್‌ಕುಮಾರ್ , ಸುಮಾರು 108 ದಿನಗಳ ಕಾಲ ಕಾಡುಗಳ್ಳನ ಒತ್ತೆಸೆರೆಯಲ್ಲಿದ್ದ ದಿನಗಳು, ವಿವಿಧ ಎಸ್‌ಟಿಎಫ್ ಕಾರ್ಯಾಚರಣೆಗಳ ಬಗ್ಗೆ ಕುಮಾರ್‌ರ ಪ್ರಶಂಸೆ ಇವೆಲ್ಲವೂ ಪುಸ್ತಕದಲ್ಲಿ ಹಾಸುಹೊಕ್ಕಾಗಿವೆ. ವೀರಪ್ಪನ್ ನಡೆಸಿದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಹತ್ಯೆಯ ಬಗ್ಗೆ ಅವರ ಆಕ್ರೋಶ ಇಡೀ ಕೃತಿಯುದ್ದಕ್ಕೂ ಎದ್ದುಕಾಣುತ್ತದೆ. ಅದರಲ್ಲೂ ವಿಶೇಷವಾಗಿ 1991ರಲ್ಲಿ ಹಿರಿಯ ಐಎಫ್‌ಎಸ್ ಅಧಿಕಾರಿ ಪಿ.ಶ್ರೀನಿವಾಸ್‌ನ ಹತ್ಯೆಯ ಘಟನೆಯನ್ನು ಅವರು ತೀವ್ರವಾದ ಭಾವಾವೇಷದೊಂದಿಗೆ ಬರೆದಿದ್ದಾರೆ. '' ಶ್ರೀನಿವಾಸ್‌ರ ರುಂಡವನ್ನು ಸುಮಾರು ಮೂರು ವರ್ಷಗಳವರೆಗೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ'' ಎಂದು ಕುಮಾರ್ ಬರೆದಿದ್ದಾರೆ.

ಈ ಕೃತಿಯು ಹಲವು ವಿಧದಲ್ಲಿ ವೀರಪ್ಪನ್ ಕುರಿತಾದ ವಾಸ್ತವ ಹಾಗೂ ಕಾಲ್ಪನಿಕ ಗ್ರಹಿಕೆಗಳನ್ನು ಜಾಲಾಡುವ ಪ್ರಯತ್ನವಾಗಿದೆ ಹಾಗೂ ಆತನ ಬೇಟೆಯ ಬಗ್ಗೆ ಕೆಲವರಿಗಷ್ಟೇ ತಿಳಿದಿರುವ ಸಂಗತಿಗಳ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನವಾಗಿದೆ. ಕುಮಾರ್ ಅವರ ಪುಸ್ತಕಕೃತಿಯು, ವೀರಪ್ಪನ್‌ನ ಸಾವಿನ ಬಳಿಕ ಎಸ್‌ಟಿಎಫ್ ಎದುರಿಸಿದ ಟೀಕೆಗಳಿಗೆ ಉತ್ತರ ನೀಡುವ ಪ್ರಯತ್ನವೆಂಬಂತೆ ಕಾಣುತ್ತದೆ. ಕಾಡುಗಳ್ಳನಿಗೆ ನ್ಯಾಯಾಲಯದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ಎಸ್‌ಟಿಎಫ್ ಅವಕಾಶ ನೀಡಲಿಲ್ಲವೆೆಂದು ಕೆಲವು ಮಾನವಹಕ್ಕು ಕಾರ್ಯಕರ್ತರು ಹಾಗೂ ಹಲವಾರು ಮಾಧ್ಯಮ ಸಂಘಟನೆಗಳು ಆಪಾದಿಸಿವೆ. ಪೊಲೀಸ್ ಕಸ್ಟಡಿಯಲ್ಲಿ ಆತನಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತೆಂಬ ಆರೋಪಗಳು ಕೇಳಿಬಂದಿದ್ದವು. ಮೃತ ವೀರಪ್ಪನ್‌ನ ಕಣ್ಣೊಂದು ಹೊರಬಂದಿದ್ದುದನ್ನು ಅವರು ತಮ್ಮ ಆರೋಪಕ್ಕೆ ಸಮರ್ಥನೆಯಾಗಿ ನೀಡುತ್ತಾರೆ. ಇಂತಹ ಆಪಾದನೆಗಳನ್ನು ದಶಕಗಳಿಂದ ಎದುರಿಸುತ್ತಾ ಬಂದಿರುವ ಎನ್.ಕೆ. ಸೆಂದಾಮರೈ ಕಣ್ಣನ್(ಕುಮಾರ್ ಅವರ ಸಹದ್ಯೋಗಿ ) ಅವರಂತಹ ಪೊಲೀಸ್ ಅಧಿಕಾರಿಗಳ ದೃಷ್ಟಿಯಲ್ಲಿ ಈ ಕೃತಿಯೊಂದು ಅಂತಿಮ ಅಧ್ಯಾಯವಾಗಿದೆ.'' ಪ್ರಚಲಿತದಲ್ಲಿರುವ ಕೆಲವು ಕಥೆಗಳು ನಿಜವಲ್ಲ. ನಿಜವಾಗಿ ಏನು ನಡೆದಿತ್ತೆಂಬುದನ್ನು ಕುಮಾರ್ ಬರೆದಿದ್ದಾರೆ'' ಎಂದು ಕಣ್ಣನ್ ಹೇಳಿದ್ದಾರೆ.

ಆದರೆ ಈ ವಾದವನ್ನು ಕೆಲವರು ಒಪ್ಪುವುದಿಲ್ಲ. ತಮಿಳು ಪತ್ರಿಕೆ 'ನಕ್ಕೀರನ್'ನ ಸಂಪಾದಕ ಹಾಗೂ ಪ್ರಕಾಶಕ ಆರ್.ಗೋಪಾಲ್, ತೆಹಲ್ಕಾ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ 'ವೀರಪ್ಪನ್ ಓರ್ವ ತನ್ನನ್ನು ತಾನೇ ತಿದ್ದಿಕೊಳ್ಳಲು ಬಯಸಿದ್ಧ ಕೊಲೆಗಾರ' ಎಂದು ಬಣ್ಣಿಸಿದ್ದರು. ವೀರಪ್ಪನ್‌ನನ್ನು ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು ಎಂದು ಆತ ನಂಬಿದ್ದರು. ವೀರಪ್ಪನ್ ವಿರುದ್ಧ ಸೇಡು ತೀರಿಸಲು ಪೊಲೀಸರು ಕಾಯುತ್ತಿದ್ದರೆಂದು ಗೋಪಾಲನ್ ಸಂದರ್ಶನದಲ್ಲಿ ಆರೋಪಿಸಿದ್ದರು.

ವೀರಪ್ಪನ್‌ನನ್ನು ಜೀವಂತವಾಗಿ ಸೆರೆಹಿಡಿಯಬಹುದಿತ್ತಲ್ಲವೆಂಬ ಪ್ರಶ್ನೆಗೆ ವಿಜಯ್‌ಕುಮಾರ್ ಅವರ ಉತ್ತರ ಹೀಗಿದೆ. '' ಒಂದು ವೇಳೆ ನಾವು ಅವರನ್ನು ಜೀವಂತವಾಗಿ ಹಿಡಿಯುತ್ತಿದ್ದರೆ, ಬಹುಶಃ ನಾವು ಆತನ ತಂತ್ರಗಾರಿಕೆಗಳ ಬಗ್ಗೆ ವಿಚಾರಣೆಯಿಂದ ಮಾಹಿತಿ ಪಡೆಯಬಹುದಿತ್ತು. ಆದರೆ ನಾವು ಆತನಿಗೆ ಶರಣಾಗಿ, ಕಾನೂನಿನ ಪ್ರಕಾರ ವಿಚಾರಣೆಯನ್ನು ಎದುರಿಸುವಂತೆ ಹಲವು ಬಾರಿ ಅವಕಾಶ ನೀಡಿದ್ದೇವು'' ಎಂದು ವಿಜಯ್‌ಕುಮಾರ್ ಹೇಳುತ್ತಾರೆ.

''ವೀರಪ್ಪನ್ ನಡೆದುಕೊಂಡು ಹೋಗುತ್ತಿದ್ದಾಗ ಜನರು ಆತನ ಕಾಲಿಗೆ ಬೀಳುತ್ತಿದ್ದರು. ಆತನ ಬಗ್ಗೆ ಅವರು ತುಂಬಾ ಭಯಭೀತರಾಗಿದ್ದರು. ಆದರೆ ಅವರ ಪಾಲಿಗೆ ವೀರಪ್ಪನ್ ಹೀರೋ ಕೂಡಾ ಆಗಿದ್ದ'' ಎಂಬುದನ್ನು ಕುಮಾರ್ ತನ್ನ ಕೃತಿಯಲ್ಲಿ ಒಪ್ಪಿಕೊಳ್ಳುತ್ತಾರೆ. ವೀರಪ್ಪನ್ ಮೂಢನಂಬಿಕೆಗಳಲ್ಲಿ ಅತಿಯಾದ ವಿಶ್ವಾಸವಿಟ್ಟಿದ್ದ. ಯಾರಾನ್ನಾದರೂ ಕೊಲ್ಲಬೇಕಿದ್ದರೆ ಆತ ಪಗಡೆಯಂತೆ ಕಲ್ಲುಗಳನ್ನು ಉರುಳಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳುತ್ತಿದ್ದ. 1994ರಲ್ಲಿ ವೀರಪ್ಪನ್ ಹಾಗೂ ಆತನ ತಂಡವು, ಪೊಲೀಸ್ ಮಾಹಿತಿದಾರರೆಂದು ಶಂಕಿಸಿ ಕೆಲವು ಪುರುಷರನ್ನು ಗುಂಡಿಟ್ಟಿ ಕೊಂದಿದ್ದರು ಹಾಗೂ ಅವರ ಶವಗಳ ತಲೆಗಳನ್ನು ತಲವಾರುಗಳಲ್ಲಿ ಕಡಿದು ಹಾಕಿದ್ದರು ಬಳಿಕ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದರು ಎಂದು ಕುಮಾರ್ ಬರೆಯುತ್ತಾರೆ.

ಈ ಕೃತಿಯನ್ನು ಮಾನವೀಯ ದೃಷ್ಟಿಕೋನದೊಂದಿಗೂ ಬರೆದಿರುವುದಾಗಿ ವಿಜಯ್ ಹೇಳಿಕೊಂಡಿದ್ದಾರೆ. '' ತಂದೆಯಾಗಿ, ತಂಡದ ನಾಯಕನಾಗಿ ವೀರಪ್ಪನ್ ಹೇಗಿದ್ದನೆಂಬ ಬಗ್ಗೆ ಹೇಳಲು ನಾನು ಬಯಸಿದ್ದೇನೆ'' ಎಂದವರು ಹೇಳುತ್ತಾರೆ.

 ಆದಾಗ್ಯೂ, ವಿಜಯ್‌ಕುಮಾರ್ ಈ ಕೃತಿಯಲ್ಲಿನ ಕೆಲವು ಸನ್ನಿವೇಶಗಳನ್ನು ವೀರಪ್ಪನ್‌ನ ದೃಷ್ಟಿಕೋನದಿಂದಲೂ ನೋಡಲು ಬಯಸಿದ್ದಾರೆ. ಅತ್ಯಂತ ಬರ್ಬರವಾದ ಗೆಡ್ಡಸಾಲ್ ಹತ್ಯಾಕಾಂಡದ ವರ್ಣನೆಯನ್ನು ಅವರು ವೀರಪ್ಪನ್‌ನ 'ಧ್ವನಿ'ಯಲ್ಲೇ ಬರೆದಿದ್ದಾರೆ. ಮಾಹಿತಿದಾರರ ಹೆಸರುಗಳನ್ನು ತಿಳಿಸುವಂತೆ ದನಗಾಹಿಯೊಬ್ಬನಿಗೆ ಬೆದರಿಕೆ ಹಾಕುವುದು, ಆನಂತರ ಅವರನ್ನು ಪತ್ತೆಹಚ್ಚಿದ ಬಳಿಕ ರೋಷತಪ್ತನಾಗುವುದು, ಇವೆಲ್ಲವೂ ಆತನ ಮಾತುಗಳಲ್ಲೇ ಮೂಡಿಬಂದಿವೆ. 'ಅಪರೇಷನ್ ಕುಕೂನ್' ಬಗ್ಗೆ ಬರೆಯುವಾಗಲೂ ಅವರು ಸಾವಿಗೆ ಕೆಲವೇ ಕ್ಷಣಗಳ ಮೊದಲು ವೀರಪ್ಪನ್ ಮುಂದೆ ಹಳೆಯ ನೆನಪುಗಳು ಸುಳಿದಾಡುವುದನ್ನು ಹಾಗೂ ತನ್ನ ಕೃತ್ಯಗಳಿಗಾಗಿ ಆತನ ವಿಷಾದಿಸುವುದನ್ನು ಬರೆದಿದ್ದಾರೆ.

ಆದಾಗ್ಯೂ ವೀರಪ್ಪನ್‌ನ ಆಹಾರದ ಅಭ್ಯಾಸಗಳನ್ನು, ಅತ್ಯಂತ ಕಷ್ಟಕರವಾದ ಹವಾಮಾನದಲ್ಲಿ ಅತ ಬದುಕುತ್ತಿದ್ದ ರೀತಿ, ಸ್ವಲ್ಪವೂ ಸುಳಿವು ದೊರೆಯದಂತೆ ಬಚ್ಚಿಟ್ಟುಕೊಳ್ಳುತ್ತಿದ್ದ ಆತನ ಸಾಮರ್ಥ್ಯ ಹಾಗೂ ಆತ ನಡೆಸುತ್ತಿದ್ದ ದಾಳಿಗಳ ಇತ್ಯಾದಿಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ತನಗೆ ಸಾಧ್ಯವಾಗಿಲ್ಲವೆಂದು ಕುಮಾರ್ ಸ್ಪಷ್ಟಪಡಿಸುತ್ತಾರೆ.

ಈ ಪುಸ್ತಕಕ್ಕಾಗಿ ಕುಮಾರ್ ಎಸ್‌ಟಿಎಫ್‌ನ ವಿವರಣೆಗಳನ್ನು ಮಾತ್ರವಲ್ಲದೆ ಅತ್ಯಂತ ಸೀಮಿತವಾದ ಪೊಲೀಸ್ ವರದಿಗಳನ್ನು ಮತ್ತು ವೌಖಿಕ ಕತೆಗಳನ್ನು ಅವಲಂಭಿಸಬೇಕಾಯಿತು. ಆದರೆ ವೀರಪ್ಪನ್ ಕುರಿತ ನೈಜ ಕತೆಯನ್ನು ಜೋಡಿಸಿ ಬರೆಯಲು ಮಾಧ್ಯಮಗಳ ವರದಿಗಳೆಲ್ಲವನ್ನೂ ನಂಬುವಂತಿಲ್ಲವೆಂದು ವಿಜಯ್‌ಕುಮಾರ್ ಹೇಳುತ್ತಾರೆ. '' ಮಾಧ್ಯಮದ ಒಂದು ಸಣ್ಣ ವರ್ಗವು ವೀರಪ್ಪನ್‌ನನ್ನು ವೈಭವೀಕರಿಸಿದ್ದವು. ಆತನನ್ನು ಸೆರೆಹಿಡಿಯಲು ಯಾಕೆ ಸಾಧ್ಯವಾಗುತ್ತಿಲ್ಲವೆಂದು ಎಂದು ನಿರಂತರವಾಗಿ ಪ್ರಶ್ನಿಸುವ ಮೂಲಕ ಮಾಧ್ಯಮಗಳು ಒಂದು ರೀತಿಯಲ್ಲಿ ಎಸ್‌ಟಿಎಫ್‌ನ ವಿಚಾರಣೆ ನಡೆಸುತ್ತಲೇ ಇದ್ದವು'' ಎಂದು ವಿಜಯ್‌ಕುಮಾರ್ ಮಾರ್ಮಿಕವಾಗಿ ಹೇಳುತ್ತಾರೆ.

-ವಿಸ್ಮಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X