Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಎಟಿಎಂಗಳು ಹಠಾತ್ತನೆ ಖಾಲಿಯಾಗಿದ್ದು ಹೇಗೆ...

ಎಟಿಎಂಗಳು ಹಠಾತ್ತನೆ ಖಾಲಿಯಾಗಿದ್ದು ಹೇಗೆ ?

ವಿವೇಕ್ ಕೌಲ್ವಿವೇಕ್ ಕೌಲ್14 April 2017 6:32 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಎಟಿಎಂಗಳು ಹಠಾತ್ತನೆ ಖಾಲಿಯಾಗಿದ್ದು ಹೇಗೆ ?

ಎಟಿಎಂಗಳಲ್ಲಿ ಹಣವಿಲ್ಲದೆ ಜನರು ಪರದಾಡುತ್ತಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳು ಪುಂಖಾನುಪುಂಖವಾಗಿ ವರದಿಗಳನ್ನು ಮಾಡುತ್ತಿವೆ.

ಎ.10ರಂದು ಹೆಚ್ಚಿನ ಎಟಿಎಂಗಳಲ್ಲಿ ‘ನೋ ಕ್ಯಾಷ್’ ಫಲಕಗಳು ಬೆಂಗಳೂರಿಗರನ್ನು ಸ್ವಾಗತಿಸಿದ್ದವು ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದ್ದರೆ, ನೋಟು ರದ್ದತಿ ಅವಧಿಯ ಸಂಕಷ್ಟದ ದಿನಗಳು ಮುಂಬೈಗರಿಗೆ ಮತ್ತೆ ಎದುರಾಗಿವೆ. ಮಾ.31ರಂದು ಬ್ಯಾಂಕಿಂಗ್ ವಹಿವಾಟಿನ ವಾರ್ಷಿಕ ಮುಕ್ತಾಯದ 10 ದಿನಗಳ ಬಳಿಕ ಮಹಾನಗರದಾದ್ಯಂತ ಎಟಿಎಂಗಳು ಬರಿದಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ಬರೆದಿದೆ. ದೇಶದ ಇತರ ಭಾಗಗಳಲ್ಲಿಯೂ ಇದೇ ರೀತಿಯ ವರದಿಗಳು ದೈನಿಕಗಳಲ್ಲಿ ಪ್ರಕಟಗೊಂಡಿವೆ.

ನಿಜಕ್ಕೂ ಸಮಸ್ಯೆಯೊಂದಿದೆ ಮತ್ತು ಎಟಿಎಂಗಳಲ್ಲಿ ಕರೆನ್ಸಿ ನೋಟುಗಳ ಕೊರತೆಯಿದೆ ಎನ್ನುವುದನ್ನು ಈ ಪತ್ರಿಕಾ ವರದಿಗಳು ಸಾಬೀತುಗೊಳಿಸಿವೆ.

ಅಂದರೆ ಏನಾಗುತ್ತಿದೆ ಇಲ್ಲಿ? ಮಾ.31 ಬ್ಯಾಂಕುಗಳಿಗೆ ವಷಾಂತ್ಯವಾಗಿದ್ದರಿಂದ ಹಣದ ಕೊರತೆಯಾಗಿದೆ ಎನ್ನುವುದು ಈಗ ಕೇಳಿ ಬರುತ್ತಿರುವ ವಿವರಣೆಯಾಗಿದೆ. ಇದೊಂದು ಸ್ಪಷ್ಟ ಕಾರಣವಾಗಿರಬಹುದಾದರೂ ಇತರ ಕಾರಣಗಳೂ ಇವೆ. ವಿವರಣೆ ಇಲ್ಲಿದೆ.

2017,ಜನವರಿಯಿಂದ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆರ್‌ಬಿಐ ಮತ್ತು ಸರಕಾರದ ನೋಟು ಮುದ್ರಣಾಲಯಗಳು ನೋಟುಗಳನ್ನು ಮುದ್ರಿಸಿ ಬ್ಯಾಂಕುಗಳ ಮೂಲಕ ಹಣಕಾಸು ವ್ಯವಸ್ಥೆಯೊಳಗೆ ತಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು 2017, ಜ.6ರಿಂದ ಹೆಚ್ಚುತ್ತಲೇ ಸಾಗಿವೆ.

 ಆದರೆ ಅದು ಸಾಕಾಗುವುದೇ? 2017, ಜ.6ರಿಂದ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಪ್ರತೀ ವಾರ ಯಾವ ದರದಲ್ಲಿ ಹೆಚ್ಚುತ್ತಿತ್ತು ಅನ್ನುವುದನ್ನು ನಾವು ಪರಿಶೀಲಿಸಬೇಕಾಗುತ್ತದೆ. ಈ ದರವನ್ನು ಹೇಗೆ ಕಂಡುಕೊಳ್ಳಬಹುದು? 2017,ಜ.6ಕ್ಕೆ ಇದ್ದಂತೆ 8,98,017 ಕೋ.ರೂ.ಗಳ ನೋಟುಗಳು ಚಲಾವಣೆಯಲ್ಲಿದ್ದವು. ಇದು ಜ.13ಕ್ಕೆ 9,50,803 ಕೋ.ರೂ.ಗೇರಿತ್ತು. ಅಂದರೆ 52,786 ಕೋ.ರೂ. ಅಥವಾ ಶೇ.ಸುಮಾರು 5.9ರಷ್ಟು ನೋಟುಗಳು ಚಲಾವಣೆಯಲ್ಲಿ ಸೇರಿಕೊಂಡಿದ್ದವು. ಉಳಿದ ವಾರಗಳಿಗೂ ಈ ದರವನ್ನು ಲೆಕ್ಕ ಹಾಕಲಾಗಿದೆ.

2017, ಜ.6ರಿಂದ ಕರೆನ್ಸಿ ನೋಟುಗಳ ಚಲಾವಣೆ ವಾರದಿಂದ ವಾರಕ್ಕೆ ಹೆಚ್ಚುತ್ತಿತ್ತು. 2017, ಜ.13ಕ್ಕೆ ಕೊನೆಗೊಂಡ ವಾರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನೋಟುಗಳು ಅಂದರೆ ಶೇ.5.9ರಷ್ಟು ನೋಟುಗಳಷ್ಟು ಏರಿಕೆ ಚಲಾವಣೆಯಲ್ಲಿ ಕಂಡು ಬಂದಿದೆ. ನಂತರ ನಡುನಡುವೆ ಏರಿಕೆಯಿದ್ದರೂ ಒಟ್ಟಾರೆ ಪ್ರವೃತ್ತಿ ಇಳಿಕೆಯ ಹಾದಿಯಲ್ಲಿಯೇ ಸಾಗಿದೆ. ಮಾ.10ರಿಂದ ಮಾ.31ರವರೆಗೆ ಚಲಾವಣೆಯಲ್ಲಿಯ ಏರಿಕೆ ಇಳಿಮಖವಾಗುತ್ತಲೇ ಸಾಗಿದೆ.

ಮಾ.31ಕ್ಕೆ ಕೊನೆಗೊಂಡ ವಾರದಲ್ಲಿ ಚಲಾವಣೆಯಲ್ಲಿಯ ನೋಟುಗಳಲ್ಲಿ ಏರಿಕೆಯು ಜನವರಿಯಿಂದೀಚೆಗೆ ಕನಿಷ್ಠ ಮಟ್ಟದಲ್ಲಿ ಇದೆ (ಶೇ.1.7). ಏನಿದರ ಅರ್ಥ? ಆರ್‌ಬಿಐ ಈ ಹಿಂದಿನ ವೇಗದಲ್ಲಿ ಬ್ಯಾಂಕುಗಳಿಗೆ ನೋಟುಗಳನ್ನು ಪೂರೈಸುತ್ತಿಲ್ಲ ಎನ್ನುವುದು ಇದರ ಅರ್ಥ. ಆರ್‌ಬಿಐ ಮಟ್ಟದಲ್ಲಿಯೇ ಕರೆನ್ಸಿ ಬಿಡುಗಡೆ ದರ ಕಡಿಮೆಯಾಗಿದೆ. ಅಂದರೆ ಬ್ಯಾಂಕುಗಳು ಎಟಿಎಂಗಳಿಗೆ ತುಂಬಲು ಹಿಂದಿನಷ್ಟು ನಗದು ಹಣವನ್ನು ಹೊಂದಿಲ್ಲ.

ಎಟಿಎಂಗಳಲ್ಲಿ ಹಣದ ಕೊರತೆ ಏಕೆ ಎನ್ನುವುದನ್ನು ಇದು ವಿವರಿಸುತ್ತದೆ. ನೋಟು ಮುದ್ರಣ ಘಟಕಗಳು ಈ ಹಿಂದಿನಷ್ಟು ನೋಟುಗಳನ್ನು ಮುದ್ರಿಸುತ್ತಿಲ್ಲ ಎನ್ನುವುದನ್ನೂ ಇದು ಸೂಚಿಸುತ್ತದೆ. ಹೀಗೇಕಾಗುತ್ತಿದೆ ಎನ್ನುವುದನ್ನು ಆರ್‌ಬಿಐ ಮತ್ತು ಕೇಂದ್ರ ಸರಕಾರವೇ ವಿವರಿಸಲು ಸಾಧ್ಯ.

ಹಣಕಾಸು ವ್ಯವಸ್ಥೆಯಲ್ಲಿನ ಒಟ್ಟು ನಗದು ಪ್ರಮಾಣವನ್ನು ತಗ್ಗಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದ್ದರೆ ಅದು ಮೂರ್ಖತನದ ಕ್ರಮವಾಗುತ್ತದೆ. ಯಾವುದೇ ಆರ್ಥಿಕತೆಯಾದರೂ ಕಾರ್ಯ ನಿರ್ವಹಿಸಲು ನಿರ್ದಿಷ್ಟ ಪ್ರಮಾಣದ ಕರೆನ್ಸಿ ಅಗತ್ಯವಾಗುತ್ತದೆ. ಭಾರತೀಯ ಆರ್ಥಿಕತೆಯು ಸದ್ಯದ ಸ್ಥಿತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದನ್ನು ಹೊಂದಿಲ್ಲ. 2017,ಮಾ.31ಕ್ಕೆ ಇದ್ದಂತೆ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ನೋಟು ರದ್ದತಿಗಿಂತ ಮೊದಲಿದ್ದ ಪ್ರಮಾಣದ ಶೇ.74.3ರಷ್ಟಿತ್ತು. ನಾವು ನೋಟು ರದ್ದತಿಗಿಂತ ಮೊದಲಿದ್ದ ಪ್ರಮಾಣಕ್ಕೆ ವಾಪಸ್ ಮರಳದಿದ್ದರೆ ಕರೆನ್ಸಿ ನೋಟುಗಳ ಕೊರತೆ ಮುಂದುವರಿಯುವ ಸಾಧ್ಯತೆಯಿದೆ.

ನೋಟು ರದ್ದತಿಗೆ ಮುನ್ನ ಇದ್ದಷ್ಟು ನೋಟುಗಳನ್ನು ಮುದ್ರಿಸದಿರಲು ಮತ್ತು ಚಲಾವಣೆಗೆ ಬಿಡದಿರಲು ಸರಕಾರವು ನಿರ್ಧರಿಸಿದರೆ ಅದು ಆರ್ಥಿಕತೆಯಲ್ಲಿ ನಡೆಸಲಾಗುವ ಹಣಕಾಸು ವಹಿವಾಟುಗಳ ಒಟ್ಟು ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಬಹುಶಃ ಒಳ್ಳೆಯ ಸಂಗತಿಯಲ್ಲ.

ಎಟಿಎಂಗಳು ಖಾಲಿಯಾಗುತ್ತಿರುವುದು ನಗದು ಹಣಕ್ಕೆ ಹೆಚ್ಚಿನ ಬೇಡಿಕೆ ಮುಂದುವರಿದಿದೆ ಎನ್ನುವುದನ್ನು ಬೆಟ್ಟು ಮಾಡುತ್ತಿದೆ. ಸರಕಾರದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಜನರು ಒಗ್ಗಿಕೊಂಡಿಲ್ಲ ಎನ್ನುವುದನ್ನೂ ಇದು ವಿಷದಪಡಿಸುತ್ತಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಿವೇಕ್ ಕೌಲ್
ವಿವೇಕ್ ಕೌಲ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X