ಬಾಬರಿ ಮಸೀದಿ : ಮರೀಚಿಕೆಯಾದ ನ್ಯಾಯ?
ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರಂಥ ನಾಯಕರು ಈಗಾಗಲೇ, ಮುಸ್ಲಿಮರು ತಮ್ಮ ಪಟ್ಟು ಬಿಡದಿದ್ದರೆ, ಉಭಯ ಸದನಗಳಲ್ಲಿ ಬಿಜೆಪಿಗೆ ಸಂಪೂರ್ಣ ಬಲ ಬಂದ ತಕ್ಷಣ ಈ ಸಂಬಂಧ ಮಸೂದೆ ಮಂಡಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ. ಇದು ಖಂಡಿತವಾಗಿಯೂ ಅನೈತಿಕ ಬೆದರಿಕೆ. ಈಗಾಗಲೇ ಹಲವು ಮಸೀದಿಗಳನ್ನು ನ್ಯಾಯಾಲಯದ ಹೊರಗೆ ಸಂಧಾನ ಮಾತುಕತೆ ಮೂಲಕ ದೇವಾಲಯವಾಗಿ ಪರಿವರ್ತಿಸಬೇಕು ಎಂಬ ಹಕ್ಕುಪ್ರತಿಪಾದನೆ ನಡೆಯುತ್ತಿದೆ.
ಸುದೀರ್ಘ ಕಾಯುವಿಕೆ ಬಳಿಕ, ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಸಲಹೆ ಮಾಡಿದ್ದಾರೆ. ಈ ವಿಚಾರದಲ್ಲಿ ಸ್ವತಃ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದಾರೆ. ಈ ನಡೆಯನ್ನು ಆರೆಸ್ಸೆಸ್ ಕೂಟ ಸ್ವಾಗತಿಸಿದ್ದರೆ, ಹಲವು ಮುಸ್ಲಿಂ ಮತ್ತು ಇತರ ಸಂಘಟನೆಗಳು, ‘‘ನಾವು ನ್ಯಾಯಕ್ಕಾಗಿ ಮೊರೆ ಹೋಗಿದ್ದೇ ವಿನಃ ಸಂಧಾನಸೂತ್ರಕ್ಕಲ್ಲ’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ.
ಇದು 2010ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ನೀಡಿದ್ದ ತೀರ್ಪಿಗೆ ಅನುಗುಣವಾಗಿದೆ. ವಿವಾದಿತ ಭೂಮಿಯನ್ನು ಮೂರು ಭಾಗವಾಗಿ ವಿಂಗಡಿಸಬೇಕು ಎಂದು ಮೂವರು ನ್ಯಾಯಾಧೀಶರ ಪೀಠ ಹೇಳಿತ್ತು. ಇದು ವಿವಾದದ ಭಾಗವಾಗಿರುವ ರಾಮ ಲಲ್ಲಾ ವಿರಾಜಮಾನ, ನಿರ್ಮೋಹಿ ಅಖಾಡಾ ಹಾಗೂ ಸುನ್ನಿ ವಕ್‌ಬೋರ್ಡ್ ಹೀಗೆ ಮೂರೂ ಪಕ್ಷಗಳ ನಡುವೆ ಸಮತೋಲನ ತರುವ ಪ್ರಯತ್ನವಾಗಿತ್ತು. ಇದರ ಅನ್ವಯ ಭೂಮಿಯ ಶೀರ್ಷಿಕೆಯನ್ನು ಮೂರು ಭಾಗವಾಗಿ ವಿಂಗಡಿಸಲು ಉದ್ದೇಶಿಸಲಾಗಿತ್ತು. ಮೂರನ್ನೂ ಪ್ರತ್ಯೇಕವಾಗಿ ಹಂಚಿಕೆ ಮಾಡಲು ನಿರ್ಧರಿಸಿತ್ತು. ಹಿಂದೂಗಳು ಮಸೀದಿಯ ಕೇಂದ್ರ ಗೋಪುರದ ಕೆಳಗಿನ ಸ್ಥಳವನ್ನು ರಾಮನ ಜನ್ಮಸ್ಥಳ ಎಂದು ಬಲವಾಗಿ ನಂಬಿರುವ ಕಾರಣದಿಂದ, ಈ ಸ್ಥಳವನ್ನು ಹಿಂದೂಗಳಿಗೆ ಹಂಚಬೇಕು ಎಂದು ಅಭಿಪ್ರಾಯಪಟ್ಟಿತ್ತು. ಇದನ್ನು ಸ್ವಾಗತಿಸಿದ ಆರೆಸ್ಸೆಸ್ ಮುಖ್ಯಸ್ಥರು, ರಾಮಮಂದಿರ ನಿರ್ಮಾಣಕ್ಕೆ ಹಾದಿ ಸುಗಮವಾಗಿದೆ. ಎಲ್ಲರೂ ಈ ರಾಷ್ಟ್ರೀಯ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಕೋರಿದ್ದರು.
ಆದರೆ ವಿಸ್ತೃತ ವರ್ಗಕ್ಕೆ ಈ ತೀರ್ಪು ಆಘಾತ ಅಥವಾ ನಿರಾಶೆ ತಂದಿತ್ತು. ಬಾಬರಿ ಮಸೀದಿ ಈ ಸ್ಥಳದಲ್ಲಿ ಸುಮಾರು 500 ವರ್ಷಗಳಿಂದ ಅಸ್ತಿತ್ವದಲ್ಲಿತ್ತು ಮತ್ತು ಇದು ಸುನ್ನಿ ವಕ್ ಮಂಡಳಿಯ ಅೀನದಲ್ಲಿತ್ತು. ಈ ವಿವಾದಿತ ನಿರ್ಮಾಣ 19ನೆ ಶತಮಾನದಲ್ಲಿ ಆಗಿತ್ತು. 1885ರಲ್ಲಿ ನ್ಯಾಯಾಲಯ, ಮಸೀದಿಯ ಹೊರಗಿನ ವೇದಿಕೆಯಲ್ಲಿ ತಾತ್ಕಾಲಿಕ ಡೇರೆ ನಿರ್ಮಿಸಲು ಕೂಡಾ ಅವಕಾಶ ನೀಡಿರಲಿಲ್ಲ. 1949ರಲ್ಲಿ ರಾಮ ಲಲ್ಲಾ ಮೂರ್ತಿಯನ್ನು ಬಲಾತ್ಕಾರವಾಗಿ ಪ್ರತಿಷ್ಠಾಪಿಸಲಾಯಿತು. ಆದರೆ ಅದು ಕೂಡಾ ವ್ಯತಿರಿಕ್ತ ಪರಿಣಾಮ ಬೀರಿತು. ದೊಡ್ಡ ಪಿತೂರಿಯ ಅಂಗವಾಗಿ ಇಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರ ಸೂಚನೆಗೆ ಕೂಡಾ ಅಂದಿನ ಉತ್ತರ ಪ್ರದೇಶ ಸರಕಾರ ಬದ್ಧವಾಗಿರಲಿಲ್ಲ. ಮಸೀದಿಯ ಗೇಟುಗಳನ್ನು ಮುಚ್ಚಲಾಯಿತು. 1986ರಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಯವರು, ಬಲಪಂಥೀಯ ಬಣಗಳ ತೀವ್ರ ಒತ್ತಡದಿಂದಾಗಿ ಈ ಮಸೀದಿಯ ದ್ವಾರವನ್ನು ತೆರೆಸಿದರು. ಅದುವರೆಗೂ ರಾಮಮಂದಿರಕ್ಕಾಗಿ ಹೋರಾಡುತ್ತಿದ್ದ ವಿಶ್ವಹಿಂದೂ ಪರಿಷತ್‌ನಿಂದ ಈ ವಿವಾದವನ್ನು ಲಾಲ್‌ಕೃಷ್ಣ ಅಡ್ವಾಣಿ ಕೈಗೆತ್ತಿಕೊಂಡರು. ಬಿಜೆಪಿ ಅಧ್ಯಕ್ಷರಾಗಿದ್ದ ಅಡ್ವಾಣಿ ಈ ವಿಷಯ ಕೈಗೆತ್ತಿಕೊಳ್ಳುತ್ತಿದ್ದಂತೆ ಇದರ ರಾಜಕೀಯ ಪರಿಣಾಮಗಳು ಆಳವಾಗತೊಡಗಿತು. ಹಿಂದೂ ಮತಬ್ಯಾಂಕ್ ಕ್ರೋಡೀಕರಣಕ್ಕೆ ಇದನ್ನು ಧ್ರುವೀಕರಣ ಅಸವನ್ನಾಗಿ ಬಳಸಿಕೊಳ್ಳಲಾಯಿತು. ಮಂಡಲ್ ಆಯೋಗದ ವರದಿಯ ಅನುಷ್ಠಾನದ ಬಳಿಕ, ರಥಯಾತ್ರೆಯ ಅನ್ವಯ ಧ್ರುವೀಕರಣಕ್ಕೆ ಯೋಜನೆ ರೂಪಿಸಲಾಯಿತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ವಿರೋಸಿದ ಶಕ್ತಿಗಳು, ದೊಡ್ಡ ಪ್ರಮಾಣದಲ್ಲಿ ರಾಮಮಂದಿರ ಹೆಸರಿನಲ್ಲಿ ಸಂಘಟಿತವಾದವು.
ಮಂಡಲ್ ಆಯೋಗದ ವರದಿಗೆ ಬಿಜೆಪಿ ನೇರವಾಗಿ ವಿರೋಧ ವ್ಯಕ್ತಪಡಿಸದಿದ್ದರೂ, ರಾಮಮಂದಿರ ವಿವಾದದ ಹೆಸರಿನಲ್ಲಿ ಈ ವಿವಾದವನ್ನು ಪರಿವರ್ತಿಸಿತು. ಈ ಕಾರಣಕ್ಕಾಗಿಯೇ ‘ಮಂಡಲ ವರ್ಸಸ್ ಕಮಂಡಲ’ ಎಂಬ ಘೋಷಣೆ ಹುಟ್ಟಿಕೊಂಡಿತು.
ಪ್ರಶಾಂತವಾಗಿದ್ದ ಸಮಾಜದಲ್ಲಿ ಸೂಕ್ಷ್ಮ ಎಳೆಯನ್ನು ಕಿತ್ತುಹಾಕಲು ಇದು ಕಾರಣವಾಯಿತು. ಬಾಬರಿ ಮಸೀದಿಯ ಧ್ವಂಸದ ಹಿನ್ನೆಲೆಯಲ್ಲಿ ಈ ಆಂದೋಲನವನ್ನು ಮತ್ತಷ್ಟು ಸಂಘಟಿಸಲಾಯಿತು. ಈ ಧ್ವಂಸ ಪಿತೂರಿಯಲ್ಲಿ ಆರೆಸ್ಸೆಸ್ ಗುಂಪು ದೊಡ್ಡ ಸಂಖ್ಯೆಯ ಜನರನ್ನು ಕ್ರೋಡೀಕರಿಸಿದರೆ, ನರಸಿಂಹರಾವ್ ಸರಕಾರ ಇದರ ಜತೆ ಕೈಜೋಡಿಸಿತು. ಸ್ಥಳೀಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಾಗ, ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್‌ಸಿಂಗ್, ಮಸೀದಿಯನ್ನು ಸಂರಕ್ಷಿಸುವುದಾಗಿ ಸುಪ್ರೀಂಕೋರ್ಟ್ ಗೆ ಭರವಸೆ ನೀಡಿಯೂ, ಬಾಬರಿ ಮಸೀದಿ ಧ್ವಂಸ ಮಾಡುವ ಉದ್ದೇಶದಿಂದ ಕರಸೇವಕರ ದೊಡ್ಡ ಅವೇಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟರು. ಮಸೀದಿ ಧ್ವಂಸಗೊಳ್ಳುವವರೆಗೂ ತಮ್ಮ ಪೂಜಾ ಕೊಠಡಿಯಲ್ಲೇ ಬಂದಿಯಾದ ನರಸಿಂಹರಾವ್ ಕೊನೆಗೆ ಅದೇ ಸ್ಥಳದಲ್ಲಿ ಮಸೀದಿ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಬಿಜೆಪಿ ನೇತೃತ್ವದ ಪ್ರಾಚ್ಯಶಾಸ ಕರಸೇವಕರು, ಮಸೀದಿಯ ಕೆಳಗೆ ಇದ್ದ ಅವಶೇಷಗಳು ರಾಮಮಂದಿರದ ಪಳೆಯುಳಿಕೆಗಳು ಎಂದು ಸಾಬೀತುಮಾಡುವ ಪ್ರಯತ್ನ ಮಾಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆದರೆ ಪ್ರಾಚ್ಯಶಾಸೀಯವಾಗಿ ಇದನ್ನು ಸಾಬೀತುಪಡಿಸಲಾಗಲಿಲ್ಲ. ಇದು ರಾಮಮಂದಿರದ ಅವಶೇಷಗಳು ಎಂದು ಸಾಬೀತುಪಡಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ, ಹಿಂದೂ ನಂಬಿಕೆ ಆಧಾರದಲ್ಲಿ ಹಿಂದೂ ಸಂಘಟನೆಗಳಿಗೆ ವಿವಾದಿತ ಭಾಗದ ಮೂರನೆ ಎರಡರಷ್ಟು ಭೂಮಿಯನ್ನು ಹಂಚಿಕೆ ಮಾಡುವಂತೆ ಹೈಕೋರ್ಟ್ ಪೀಠ ಸಲಹೆ ಮಾಡಿತು. ಮಸೀದಿ ಧ್ವಂಸ ಪ್ರಕರಣ, ಅತ್ಯಂತ ಸುವ್ಯವಸ್ಥಿತವಾಗಿ ನಿರ್ವಹಿಸಿದ ಭಾರತದ ಘನಘೋರ ಅಪರಾಧವಾಗಿದ್ದರೂ, ಇದನ್ನು ಧ್ವಂಸಗೊಳಿಸಿದವರಿಗೆ ಇದುವರೆಗೂ ಶಿಕ್ಷೆಯಾಗಿಲ್ಲ.
ಲಿಬರ್ಹಾನ್ ಆಯೋಗ, ಈ ರಹಸ್ಯ ಪಿತೂರಿಯ ಸ್ವರೂಪವನ್ನು ವಿವರಿಸಿದೆಯಾದರೂ, ದುರದೃಷ್ಟವೆಂದರೆ, ಅದು ತನ್ನ ವರದಿ ಸಲ್ಲಿಸಲು ಸುದೀರ್ಘ ಅವ ತೆಗೆದುಕೊಂಡಿತು. ಗಾಯಕ್ಕೆ ಉಪ್ಪು ಸವರಿದಂತೆ, ರಾಷ್ಟ್ರದ ವಿರುದ್ಧದ ಈ ಅಪರಾಧದ ಬಳಿಕ ಅಡ್ವಾಣಿ ಮತ್ತಷ್ಟು ಬಲ ಪಡೆದುಕೊಂಡರು. ಈ ಧ್ವಂಸದ ಬಳಿಕ ಮುಸ್ಲಿಮರ ವಿರುದ್ಧ ಅದರಲ್ಲೂ ಮುಖ್ಯವಾಗಿ ಮುಂಬೈ, ಭೋಪಾಲ್ ಮತ್ತು ಸೂರತ್‌ನಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯಿತು, ಇದಕ್ಕೆ ಕಾರಣರಾದವರನ್ನು ಆರೋಪಮುಕ್ತಗೊಳಿಸಲಾಯಿತು ಅಥವಾ ತೀರಾ ಕಡಿಮೆ ಪ್ರಮಾಣದ ಶಿಕ್ಷೆ ವಿಸಲಾಯಿತು.
ಭೂಮಿಯ ಶೀರ್ಷಿಕೆಯ ಮಾಲಕತ್ವಕ್ಕೆ ಸಂಬಂಸಿದ ವಿಚಾರ, ವಾಸ್ತವವಾಗಿ ಸಮಸ್ಯೆಯ ಕೇಂದ್ರ ಬಿಂದು. ಹೈಕೋರ್ಟ್ ಹಿಂದೂಗಳ ನಂಬಿಕೆಯನ್ನು ಮುಖ್ಯ ಆಧಾರವಾಗಿ ಪರಿಗಣಿಸಿತೇ ವಿನಃ ಭೂಮಿಯ ಮಾಲಕತ್ವದ ಶೀರ್ಷಿಕೆ ಬಗೆಗಿನ ದಾಖಲೆಗಳನ್ನು ಪರಿಗಣಿಸಲಿಲ್ಲ. ದೇಶದ ಅತ್ಯುನ್ನತ ಕಾನೂನು ಸಂಸ್ಥೆಯಾದ ಸುಪ್ರೀಂಕೋರ್ಟ್ ಕೂಡಾ ಇದನ್ನು ಸಂಪೂರ್ಣ ಕಾನೂನು ದೃಷ್ಟಿಕೋನದಿಂದ ನೋಡುವ ಮೂಲಕ ಇದುವರೆಗೆ ಆಗಿರುವ ತಪ್ಪನ್ನು ಸರಿಪಡಿಸಬೇಕಿತ್ತು. ಇದು ಪ್ರಕರಣ ದಾಖಲಿಸುವ ಏಕೈಕ ಕಾನೂನು ಆಯಾಮವಾಗಬೇಕಿತ್ತು. ಆದರೆ ನ್ಯಾಯಾಲಯದ ಹೊರಗೆ ಸಂಧಾನಕ್ಕೆ ಕರೆ ನೀಡುವ ಮೂಲಕ ಕಾನೂನಾತ್ಮಕ ಅಂಶಗಳನ್ನು ಕಡೆಗಣಿಸಿದೆ ಎನ್ನಬಹುದು. ನ್ಯಾಯಾಲಯದ ಹೊರಗಿನ ಸಂಧಾನ ವಿಚಾರದಲ್ಲಿ, ಈಗಾಗಲೇ ಹಿಂದೂ ಸಂಘಟನೆಗಳು, ರಾಮಮಮಂದಿರ ಸ್ಥಳವನ್ನು ಮುಸ್ಲಿಮರು ಬಿಟ್ಟುಬಿಡಬೇಕು ಎಂದು ಆಗ್ರಹಿಸಿವೆ. ಅವರಿಗೆ ಮಸೀದಿಗೆ ಇನ್ನೊಂದು ಸೂಕ್ತವಾದ ಜಾಗ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ ಸಂಧಾನ ಮಾತುಕತೆಯ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಸಮತೋಲನ ಸಾಸಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.
ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರಂಥ ನಾಯಕರು ಈಗಾಗಲೇ, ಮುಸ್ಲಿಮರು ತಮ್ಮ ಪಟ್ಟು ಬಿಡದಿದ್ದರೆ, ಉಭಯ ಸದನಗಳಲ್ಲಿ ಬಿಜೆಪಿಗೆ ಸಂಪೂರ್ಣ ಬಲ ಬಂದ ತಕ್ಷಣ ಈ ಸಂಬಂಧ ಮಸೂದೆ ಮಂಡಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ. ಇದು ಖಂಡಿತವಾಗಿಯೂ ಅನೈತಿಕ ಬೆದರಿಕೆ. ಈಗಾಗಲೇ ಹಲವು ಮಸೀದಿಗಳನ್ನು ನ್ಯಾಯಾಲಯದ ಹೊರಗೆ ಸಂಧಾನ ಮಾತುಕತೆ ಮೂಲಕ ದೇವಾಲಯವಾಗಿ ಪರಿವರ್ತಿಸಬೇಕು ಎಂಬ ಹಕ್ಕುಪ್ರತಿಪಾದನೆ ನಡೆಯುತ್ತಿದೆ. ನ್ಯಾಯಾಲಯದ ಹೊರಗಿನ ಸಂಧಾನ ಮಾತುಕತೆಯಲ್ಲಿ ಹಿಂದೂಪರ ಸಂಘಟನೆಗಳು ಪ್ರಾಬಲ್ಯ ಹೊಂದಿದ್ದು, ಮುಸ್ಲಿಮರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದು ಖಂಡಿತವಾಗಿಯೂ ನಮ್ಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ. ಈ ಹಿನ್ನೆಲೆಯಲ್ಲಿ ಇತರ ಮಸೀದಿಗಳ ಪರಿವರ್ತನೆಯ ಹಕ್ಕುಪ್ರತಿಪಾದನೆ, ಅನಕೃತ ಹಾಗೂ ಅಲ್ಪಸಂಖ್ಯಾತರನ್ನು ಬೆದರಿಸುವ ಕ್ರಮವಾಗಿದ್ದು, ಇದನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳಿಗೆ ತಡೆ ಒಡ್ಡಬೇಕಾಗಿದೆ.