ಹಿಂದಿಯ ಹೇರಿಕೆ: ಭಾರತದ ವಿವಿಧತೆಯ ಮೇಲಿನ ಪ್ರಹಾರ

ಹಿಂದಿ ಭಾಷೆಗೆ ಉತ್ತೇಜನ ನೀಡಿಕೆಗೆ ಸಂಬಂಸಿ ಅಕೃತ ಭಾಷೆ ಕುರಿತ ಸಂಸದೀಯ ಸಮಿತಿ ಮಾಡಿರುವ ಹಲವಾರು ಶಿಾರಸುಗಳು ಜಾರಿಗೆ ಬಂದಲ್ಲಿ, ಹಿಂದಿಯೇತರ ಭಾಷಿಕರ ಉದ್ಯೋಗಾವಕಾಶಗಳಿಗೆ ಸಂಚಕಾರವುಂಟಾಗಲಿದೆೆ ಮಾತ್ರವಲ್ಲ ಅವರ ವಿರುದ್ಧ ತಾರತಮ್ಯಗಳಿಗೂ ಕಾರಣವಾಗಲಿದೆ.
ನರೇಂದ್ರ ಮೋದಿ ಆಡಳಿತದಲ್ಲಿ ಹಿಂದಿ ಹೇರಿಕೆಯ ವೇಗ ಹಾಗೂ ವ್ಯಾಪ್ತಿಯ ಬಗ್ಗೆ ಎಲ್ಲೆಡೆ ಕಳವಳ ವ್ಯಕ್ತವಾಗುತ್ತಿದೆ. ಭಾರತದ ಹಿಂದಿಯೇತರ ಭಾಷಿಕರಲ್ಲಿ ಈ ವಿಷಯವಾಗಿ ತೀವ್ರ ಅಸಮಾಧಾನ ಬೆಳೆಯುತ್ತಿದೆ. ಹಿಂದಿ ಹೇರಿಕೆ ಹಾಗೂ ಹಿಂದಿ ಭಾಷೆಗೆ ಉತ್ತೇಜನ ನೀಡಿಕೆಗೆ ಸಂಬಂಸಿ ಅಕೃತ ಭಾಷೆ ಕುರಿತ ಸಂಸದೀಯ ಸಮಿತಿಯ ಹಲವಾರು ಶಿಫಾರಸುಗಳಿಗೆ ರಾಷ್ಟ್ರಪತಿಯವರ ಅಂಗೀಕಾರದ ಮುದ್ರೆ ದೊರೆತಿರುವುದು, ವೈವಿಧ್ಯಮಯ ಭಾಷಾ ಸಂಸ್ಕೃತಿಯಿರುವ ಭಾರತದಲ್ಲಿ ರಾಜಕೀಯ ಸಂಘರ್ಷದ ವಾತಾವರಣವನ್ನು ನಿರ್ಮಿಸಿದೆ.
ಕೇಂದ್ರ ಸರಕಾರದಿಂದ ಹಿಂದಿಯ ಹೇರಿಕೆಯ ಪ್ರಯತ್ನವು ಭಾರತೀಯ ಒಕ್ಕೂಟದ ಇತಿಹಾಸದಷ್ಟೇ ಹಳೆಯದ್ದಾಗಿದೆ. 1965ರಲ್ಲಿ ತಮ್ಮ ಮೇಲೆ ಬಲವಂತದ ಹಿಂದಿ ಹೇರಿಕೆಯನ್ನು ಪ್ರತಿಭಟಿಸಿದ 200ಕ್ಕೂ ಅಕ ತಮಿಳರನ್ನು ಕೇಂದ್ರೀಯ ಪಡೆಗಳು ಹತ್ಯೆಗೈದಿದ್ದವು. ಆಗಿನಿಂದ ಹಿಂದಿ ಮೂಲಕ ಏಕರೂಪದ ಭಾಷೆಯನ್ನು ಹೇರಲು ಕೇಂದ್ರ ಸರಕಾರ ಸಾಗಿದ ದಾರಿಯಲ್ಲಿ ತಮಿಳುನಾಡು ಮುಳ್ಳಾಗಿ ಪರಿಣಮಿಸಿತು. ಈ ಸನ್ನಿವೇಶದಲ್ಲಿ ಕೇಂದ್ರ ಸರಕಾರವು ತಮಿಳುನಾಡನ್ನು ಹೊರಗಿನವನೆಂದು ಬಿಂಬಿಸಲು ಯತ್ನಿಸಿತಲ್ಲದೆ, ಹಿಂದಿ ಹೇರಿಕೆಯನ್ನು ಒಪ್ಪಿಕೊಂಡ ಉಳಿದವರು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದಾರೆಂಬ ಸೂಚನೆಯನ್ನು ನೀಡಿತು. ಆದರೆ ಈ ಸುಳ್ಳು ಈಗ ನುಚ್ಚುನೂರಾಗಿದೆ.
ಈಗ ಹಲವಾರು ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ರಾಜಕೀಯ ಹಾಗೂ ಸಾಮಾಜಿಕ ರಂಗಗಳೆರಡರಿಂದಲೂ ಬಲವಾದ ಕೂಗು ಕೇಳಿಬರುತ್ತಿದೆ. ತೃಣಮೂಲ ಕಾಂಗ್ರೆಸ್‌ನ ಬಂಗಾಳಿ ಭಾಷಿಕ ಸಂಸದ ಸೌಗತ ರಾಯ್, ತಮಿಳು ಮಾತೃಭಾಷೆಯ ಎಂ.ಕೆ.ಸ್ಟಾಲಿನ್, ಕರ್ನಾಟಕದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ತೆಲುಗು ಭಾಷಿಕ, ಲೋಕಸತ್ತಾ ಪಕ್ಷದ ಸಂಸದ ಜಯಪ್ರಕಾಶ್ ನಾರಾಯಣ್ ಹೀಗೆ ಹಲವಾರು ಮಂದಿ ಕಳೆದ ಒಂದು ವಾರದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯೆತ್ತಿದ್ದಾರೆ.
ದಿಲ್ಲಿ ಮೂಲದ ಇಂಗ್ಲಿಷ್ ದಿನಪತ್ರಿಕೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯು ಹಿಂದಿ ಹೇರಿಕೆ ಹಾಗೂ ಅದರ ಉತ್ತೇಜನಕ್ಕೆ ರಾಷ್ಟ್ರಪತಿ ಅನುಮೋದನೆ ನೀಡಿರುವುದರ ವಿರುದ್ಧ ತನ್ನ ಸಂಪಾದಕೀಯದಲ್ಲಿ ಆಕ್ರೋಶ ವ್ಯಕ್ತಡಿಸಿದೆ. ಕಳೆದ ಒಂದು ವಾರದಲ್ಲಿ ಒಡಿಶಾ, ತಮಿಳುನಾಡು, ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ನಾಗರಿಕ ಸಮಾಜ ಪ್ರತಿಭಟನೆ ನಡೆಸಿದೆ. ಬಲವಂತದ ಹಿಂದಿ ಹೇರಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ವಿರೋಧ ವ್ಯಕ್ತವಾಗಿದೆ. ಈ ಪ್ರತಿಭಟನೆಯು ಈಗ ಕೇವಲ ತಮಿಳುನಾಡು ಹಾಗೂ ಉಳಿದ ರಾಜ್ಯಗಳ ನಡುವಿನ ತಿಕ್ಕಾಟವಾಗಿ ಉಳಿದಿಲ್ಲ. ಹಿಂದಿಯ ಹೇರಿಕೆಯ ಮೇಲಿನ ವಿರೋಧವು ಭಾಷಾ ಗಡಿಗಳನ್ನೂ ಮೀರಿ ಭಾರತೀಯರನ್ನು ಒಂದುಗೂಡಿಸಿದೆ. ಇದೀಗ ಹಿಂದಿಯೇತರರು ಬಹುಸಂಖ್ಯಾತರಾಗಿರುವ ಭಾರತ ಒಕ್ಕೂಟದಲ್ಲಿ ಹಿಂದಿ ಹೇರಿಕೆ ವರ್ಸಸ್ ಹಿಂದಿಯೇತರರು ಎಂದಾಗಿ ಬಿಟ್ಟಿದೆ. ಇಲ್ಲಿ ನೆನಪಿಡಬೇಕಾದ ವಿಷಯವೊಂದಿದೆ. ಬಹುತೇಕ ಭಾರತೀಯ ಪೌರರಿಗೆ ಹಿಂದಿ ಭಾಷೆ ತಿಳಿದಿಲ್ಲ ಮಾತ್ರವಲ್ಲ ಆ ಭಾಷೆಯನ್ನು ತಿಳಿದುಕೊಳ್ಳಬೇಕೆಂಬ ಬೇಡಿಕೆಯನ್ನೂ ಅದು ವ್ಯಕ್ತಪಡಿಸಿಲ್ಲ. ರಾಷ್ಟ್ರಪತಿಯವರ ಅನುಮೋದನೆ ಪಡೆದ ಸಂಸದೀಯ ಸಮಿತಿಯ ಈ ಶಿಾರಸುಗಳ ಕುರಿತ ಸ್ಥೂಲ ನೋಟ ಇಲ್ಲಿದೆ.
ಧ್ವನಿ ಕಳೆದುಕೊಂಡವರು
ಗೌರವಾನ್ವಿತ ರಾಷ್ಟ್ರಪತಿ ಹಾಗೂ ಹಿಂದಿ ಓದುವ ಹಾಗೂ ಮಾತನಾಡುವ ಸಚಿವರು ಸೇರಿದಂತೆ ಎಲ್ಲ ಗಣ್ಯರೂ ತಮ್ಮ ಭಾಷಣ/ಹೇಳಿಕೆಯನ್ನು ಹಿಂದಿಯಲ್ಲೇ ನೀಡುವಂತೆ ಈ ಶಿಾರಸಿ ನಲ್ಲಿ ಕೋರಿರುವುದು ಅತ್ಯಂತ ಅಸಂಬದ್ಧವಾಗಿದೆ. ಈಗಾಗಲೇ, ಹಿಂದಿಯೇತರ ಭಾಷಿಕ ಸಂಸದರು, ಅನುಮತಿಯಿಲ್ಲದೆ ತಮ್ಮ ಹಿಂದಿಯೇತರ ಮಾತೃಭಾಷೆಯಲ್ಲಿ ಸಂಸತ್‌ನಲ್ಲಿ ಭಾಷಣ ಮಾಡುವ ಹಾಗಿಲ್ಲ. ಹಿಂದಿಯೇತರ ಬಹುಸಂಖ್ಯಾತ ಗಣರಾಜ್ಯವನ್ನು ಪ್ರತಿನಿಸುವ ಎಲ್ಲಾ ಸಚಿವರ ಮೇಲೂ ಈ ಆದೇಶವು ಬಲವಂತದಿಂದ ಹಿಂದಿಯನ್ನು ಹೇರಲು ಹೊರಟಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತವು ಬಹುಭಾಷಿಕ ಹಾಗೂ ಹಿಂದಿಯೇತರ ಬಹುಸಂಖ್ಯಾತರಿರುವ ರಾಷ್ಟ್ರವಾಗಿದ್ದರೂ, ಕೇಂದ್ರ ಸರಕಾರವು ಹಿಂದಿಯೇತರ ಜನರನ್ನು ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹಿಸತೊಡಗಿದೆ.
ಸಿಬಿಎಸ್‌ಇ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿ ಭಾಷೆಯನ್ನು ಹತ್ತನೆ ತರಗತಿಯವರೆಗೆ ಪಠ್ಯ ವಿಷಯ ವಾಗಿ ಬೋಸುವುದನ್ನು ಕಡ್ಡಾಯಗೊಳಿಸುವ ಶಿಾರಸನ್ನು ತಾತ್ವಿಕವಾಗಿ ಕೇಂದ್ರ ಸರಕಾರ ಸ್ವೀಕರಿಸಿದೆ. ಹೀಗೆ, ಹಿಂದಿಯೇತರ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಬಲವಂತದಿಂದ ಹಿಂದಿ ಕಲಿಯುವಂತೆ ಮಾಡುವುದಕ್ಕೆ ತಾತ್ವಿಕವಾದ ಸಮ್ಮತಿಯನ್ನು ನೀಡಲಾಗಿದೆ. ಕೇಂದ್ರೀಯ ಶಾಲಾ ಶಿಕ್ಷಣ ಮಂಡಳಿ ಹಾಗೂ ಕೇಂದ್ರೀಯ ವಿದ್ಯಾಲಯ ಸಂಘಟನೆಯು ಕೇಂದ್ರ ಮಾನವಸಂಪನ್ಮೂಲ ಇಲಾಖೆಯಿಂದ ಆರ್ಥಿಕ ನಿಯನ್ನು ಪಡೆಯುತ್ತದೆ. ಕೇಂದ್ರ ಸರಕಾರದ ಇತರ ಎಲ್ಲಾ ಇಲಾಖೆಗಳಂತೆ ಮಾನವಸಂಪನ್ಮೂಲಾಭಿವೃದ್ಧಿ ಇಲಾಖೆಗೂ ಹೆಚ್ಚಿನ ಆದಾಯವು ಹಿಂದಿಯೇತರ ರಾಜ್ಯಗಳಿಂದಲೇ ದೊರೆಯುತ್ತದೆ. ಹೀಗಾಗಿ, ಹಿಂದಿಯೇತರ ಭಾಷಿಕರು, ತಮ್ಮ ಮೇಲೆ ಹಿಂದಿ ಹೇರುವುದಕ್ಕೆ ತಾವಾಗಿಯೇ ಆರ್ಥಿಕ ನೆರವನ್ನು ನೀಡಿದಂತಾಗುತ್ತದೆ.
ಸಮಿತಿಯು 47ನೆ ಶಿಫಾರಸಿಗೆ ಅನುಮೋದನೆ ನೀಡುವ ಮೂಲಕ ಕೇಂದ್ರ ಸರಕಾರವು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ 10ನೆ ತರಗತಿಯವರೆಗೆ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿದೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಶೇ.20ಕ್ಕೂ ಕಡಿಮೆ ಮಂದಿ ಮಾತ್ರವೇ ಹಿಂದಿ ಮಾತನಾಡುತ್ತಿದ್ದು, ಬಂಗಾಳಿ ಭಾಷೆಯು ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ. ಆದರೆ ಅಂಡಮಾನ್ ಜನತೆಯ ಬಗ್ಗೆ ತಲೆಕೆಡಿಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಪುರುಸೊತ್ತಾದರೂ ಎಲ್ಲಿದೆ.
ಹಿಂದಿಯೇತರ ರಾಜ್ಯಗಳಲ್ಲಿ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಹಿಂದಿ ಭಾಷೆಯನ್ನು ಐಚ್ಛಿಕ ಭಾಷೆಯಾಗಿ ಬಳಸಲು ಅವಕಾಶ ನೀಡಬೇಕೆಂದು ಸಮಿತಿಯ 36ನೆ ಶಿಾರಸಿನಲ್ಲಿ ಸೂಚಿಸಲಾಗಿದೆ. ಆದಾಗ್ಯೂ ಹಿಂದಿ ರಾಜ್ಯಗಳಲ್ಲಿ ಕನ್ನಡ, ತಮಿಳು ಅಥವಾ ಬಂಗಾಳಿಯನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿಲ್ಲ. ಇದರಿಂದಾಗಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷಿಕರಿಗೆ ಉದ್ಯೋಗವಕಾಶಗಳು ವಿಸ್ತರಣೆಯಾಗಲಿವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಹಿಂದಿಯೇತರರಿಗೆ ಉದ್ಯೋಗವಕಾಶಗಳು ಕಡಿಮೆಯಾಗಲಿವೆ.
ಸಮಿತಿಯ 3,5,9,10,83,84 ಹಾಗೂ 99ನೆ ಶಿಫಾರಸುಗಳು ನಿರ್ದಿಷ್ಟವಾಗಿ ಹಿಂದಿ ಭಾಷೆ ತಿಳಿದಿರುವವರಿಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳು ಹಾಗೂ ಪ್ರೋತ್ಸಾಹಕ ಗಳನ್ನು ಸೃಷ್ಟಿಸುತ್ತವೆ. ಇದಕ್ಕಾಗಿ ಹಿಂದಿಯೇತರ ಜನರಿಂದ ಸಂಗ್ರಹಿಸಲ್ಪಟ್ಟ ಕಂದಾಯ ಹಾಗೂ ತೆರಿಗೆಗಳು ಬಳಕೆಯಾಗುತ್ತವೆ. ಹಿಂದಿ ಭಾಷೆಯನ್ನು ಯಾರೂ ಕೂಡಾ ಕಲಿತು ಕೊಳ್ಳಬಹುದಾದರೂ, ಈ ಶಿಾರಸಿನಿಂದ ಯಾವ ಭಾಷಾ ಗುಂಪಿಗೆ ಹೆಚ್ಚಿನ ಪ್ರಯೋಜನವಾಗಲಿದೆಯೆಂಬುದು ಎಲ್ಲರಿಗೂ ಅರಿವಾಗುವಂತಹದ್ದೇ. ಆದರೆ ಸಮಿತಿಯ 11ನೆ ಶಿಫಾರಸು ಅತ್ಯಂತ ಅಪಾಯಕಾರಿಯಾದುದಾಗಿದೆ. ಯಾವುದೇ ಇಲಾಖೆಯಲ್ಲಿ ತಮ್ಮ ಕಚೇರಿ ಕೆಲಸಗಳಲ್ಲಿ ಹಿಂದಿಯನ್ನು ಬಳಸುವುದಕ್ಕಾಗಿ ಮೇಲಕಾರಿಗಳು ಕಣ್ಗಾವಲಿಡಬೇಕೆಂದು ಅದು ಸೂಚಿ ಸುತ್ತದೆ. ‘‘ಪ್ರತಿ ತಿಂಗಳ ಕೊನೆಯ ವಾರದ ಯಾವುದೇ ದಿನದಲ್ಲಿ ಪ್ರತಿಯೊಂದು ಕಚೇರಿಯ ಅತ್ಯಂತ ಹಿರಿಯ ಅಕಾರಿಯು ತನ್ನ ಅಧೀನದ ಅಧಿಕಾರಿಗಳು ಹಿಂದಿಯಲ್ಲಿ ನಿರ್ವಹಿಸಿರುವ ಕಚೇರಿ ಕೆಲಸಗಳ ಪರಾಮರ್ಶೆ ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಾಗಿದೆ’’ ಎಂದು ಈ ಶಿಾರಸು ಪ್ರತಿಪಾದಿಸುತ್ತದೆ. ಇದರಿಂದಾಗಿ ಖಂಡಿತವಾಗಿಯೂ, ಮಹಾರಾಷ್ಟ್ರ ಅಥವಾ ಪಶ್ಚಿಮ ಬಂಗಾಳದ ಆದಾಯ ಇಲಾಖೆ ಕಚೇರಿಯ ಅತ್ಯುನ್ನತ ಅಕಾರಿಯ ಮಹತ್ವದ ಸಮಯವು ಹಿಂದಿ ಭಾಷೆಯನ್ನು ಬಳಕೆಯ ಬಗ್ಗೆ ತಪಾಸಣೆ ನಡೆಸುವುದಕ್ಕೆ ಮೀಸಲಾಗಲಿದೆ.
ಸಮಿತಿಯ 35ನೆ ಶಿಾರಸಿನಲ್ಲಿ ಹಿಂದಿ ವಿಭಾಗಗಳಿಲ್ಲದ ವಿಶ್ವವಿದ್ಯಾನಿಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ವಿಭಾಗಗಳನ್ನು ಸ್ಥಾಪಿಸುವ ಮೂಲಕ ಹಿಂದಿ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವುದಕ್ಕೆ ಅವು ನೆರವಾಗಬೇಕೆಂದು ಪ್ರತಿಪಾದಿಸ ಲಾಗಿದೆ. ಹೀಗಾಗಿ, ಹಿಂದಿಯೇತರ ರಾಜ್ಯಗಳಲ್ಲಿ ಉನ್ನತ ಶಿಕ್ಷಣವನ್ನು ಹಿಂದಿ ಮಾಧ್ಯಮದಲ್ಲಿ ನೀಡುವುದಕ್ಕೆ ಸಚಿವಾಲಯವು ಉತ್ತೇಜನ ನೀಡಲಿದೆ. ಪ್ರಸ್ತುತ ಹಿಂದಿ ವಲಯದ ರಾಜ್ಯಗಳನ್ನು ಹೊರತು ಪಡಿಸಿದರೆ, ದೇಶದಲ್ಲಿ ಬೇರೆ ಎಲ್ಲಿಯೂ ಹಿಂದಿ ಮಾಧ್ಯಮದಲ್ಲಿ ಉನ್ನತ ಶಿಕ್ಷಣವನ್ನು ನೀಡಲಾಗುತ್ತಿಲ್ಲ.
ರಾಷ್ಟ್ರೀಯ ರ್ಯಾಂಕಿಂಗ್ ಕಾರ್ಯಚೌಕಟ್ಟಿನ ಸಂಸ್ಥೆಯಡಿ ಉನ್ನತ ಶಿಕ್ಷಣ ಸಂಸ್ಥೆಗಳ ಟಾಪ್ 100 ಉತ್ಕೃಷ್ಟತಾ ರ್ಯಾಂಕಿಂಗ್‌ನಲ್ಲಿ ಹಿಂದಿ ವಲಯದ ರಾಜ್ಯಗಳಲ್ಲಿನ ಕೇವಲ 21 ಶಿಕ್ಷಣ ಸಂಸ್ಥೆಗಳು ಸೇರ್ಪಡೆಗೊಂಡಿವೆ. ಈ 100 ರ್ಯಾಂಕಿಂಗ್‌ನಲ್ಲಿ ಹಿಂದಿ ಮಾಧ್ಯಮವು ಅಸ್ತಿತ್ವದಲ್ಲಿಯೇ ಇರದ ತಮಿಳುನಾಡಿನ 26 ಶಿಕ್ಷಣ ಸಂಸ್ಥೆಗಳು ಸೇರ್ಪಡೆಯಾಗಿವೆ. ಹೀಗಾಗಿ ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಮುಂದುವರಿದ ಹಿಂದಿಯೇತರ ರಾಜ್ಯಗಳ ಶಿಕ್ಷಣದ ಗುಣಮಟ್ಟವನ್ನು, ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದಿ ರಾಜ್ಯಗಳ ಮಟ್ಟಕ್ಕೆ ತರುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಹಿಂದಿಯೇತರರ ಪ್ರಗತಿಯುತ ಭವಿಷ್ಯದ ವಿರುದ್ಧ ಎಸಗಿರುವ ಸಂಚು ಇದಾಗಿದೆಯೆಂದು ಹೇಳಿದರೆ ತಪ್ಪಾಗಲಾರದು.
ಸಮಿತಿಯ 36ನೆ ಶಿಾರಸಿನಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಹಿಂದಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದ್ದರೆ, ಹಿಂದಿ ರಾಜ್ಯಗಳಲ್ಲಿ ಕನ್ನಡ, ತಮಿಳು ಹಾಗೂ ಬಂಗಾಳಿಯ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಆಯ್ದುಕೊಳ್ಳುವುದಕ್ಕೆ ಅವಕಾಶವಿರು ವುದಿಲ್ಲ. ಇದರಿಂದಾಗಿ ಉದ್ಯೋಗವಕಾಶಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ವಿಸ್ತರಣೆಯಾದರೆ, ಹಿಂದಿಯೇತರ ರಾಜ್ಯಗಳಲ್ಲಿ ಕುಂಠಿತಗೊಳ್ಳುತ್ತವೆ.
ಅಸಮಾನತೆಯ ದೇಶ
ಗ್ರಂಥಾಲಯಗಳಲ್ಲಿ ಹಿಂದಿ ಪುಸ್ತಕಗಳ ಖರೀದಿಯನ್ನು ಕಡ್ಡಾಯಗೊಳಿಸುವುದು, ಎಲ್ಲಾ ರಾಜ್ಯಗಳಲ್ಲಿಯೂ ಸರಕಾರಿ ಜಾಹೀರಾತುಗಳನ್ನು ಹಿಂದಿ ಭಾಷೆಯಲ್ಲಿಯೇ ಪ್ರಕಟಿಸುವುದು, ವಿಮಾನನಿಲ್ದಾಣದಲ್ಲಿ ಹಿಂದಿಯಲ್ಲಿಯೇ ಪ್ರಕಟನೆಗಳನ್ನು ಹೊರಡಿಸುವುದನ್ನು ಕಡ್ಡಾಯಗೊಳಿಸುವುದು (ಉದಾಹರಣೆಗೆ ವಿಮಾನವು ಪ.ಬಂಗಾಳ ಅಥವಾ ಕರ್ನಾಟಕದಿಂದ ಹೊರಡುತ್ತಿದ್ದರೂ, ಬಂಗಾಳಿ ಅಥವಾ ಕನ್ನಡ ಭಾಷೆಯಲ್ಲಿ ಪ್ರಕಟನೆಗಳನ್ನು ಹೊರಡಿಸುವಂತಿಲ್ಲ), ಬೃಹತ್ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಹಿಂದಿ ಪ್ರಕಟನಾ ಕ್ಷೇತ್ರಕ್ಕೆ ಆರ್ಥಿಕ ಬೆಂಬಲವನ್ನು ನೀಡುವುದು, ಹಿಂದಿಯಲ್ಲಿ ಸೃಜನಶೀಲ ಬರವಣಿಗೆಗಾಗಿ ಸರಕಾರಿ ಅಕಾರಿಗಳಿಗೆ ವಿಶೇಷ ಉತ್ತೇಜನಗಳನ್ನು ಒದಗಿಸುವುದು, ದೇವನಾಗರಿ ಲಿಪಿಯಲ್ಲಿ ರೈಲ್ವೆಗೆ ಸಂಬಂಸಿದ ಬರಹಗಳನ್ನು ಕಡ್ಡಾಯವಾಗಿ ಮುದ್ರಿಸುವುದು, ಹಿಂದಿಯೇತರ ರಾಜ್ಯಗಳ ರೈಲು ನಿಲ್ದಾಣಗಳಲ್ಲಿ ಹಿಂದಿಯಲ್ಲಿ ಪ್ರಕಟನೆಗಳನ್ನು ಮಾಡುವುದನ್ನು ಕಡ್ಡಾಯಗೊಳಿಸುವುದು, ಎಲ್ಲಾ ಸರಕಾರಿ ವೆಬ್‌ಸೈಟ್‌ಗಳಲ್ಲಿ ಹಿಂದಿಯನ್ನು ಅಳವಡಿಸುವುದು, ಕೇಂದ್ರ ಲೋಕ ಸೇವಾ ಆಯೋಗವು ಆಯೋಜಿಸುವ ಎಲ್ಲಾ ಪರೀಕ್ಷೆಗಳಲ್ಲಿ ಪರೀಕ್ಷಾರ್ಥಿಗಳಿಗೆ ಹಿಂದಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವುದು (ಆದರೆ ಹಿಂದಿಯೇತರ ಪರೀಕ್ಷಾರ್ಥಿಗಳಿಗೆ ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಆಯ್ಕೆಯನ್ನು ನೀಡಲಾಗಿಲ್ಲ).
ಈ ಭಾಷಾ ಸಮಿತಿಯ ಅಧ್ಯಕ್ಷತೆಯನ್ನು ಪಿ.ಚಿದಂಬರಂ ವಹಿಸಿದ್ದರು. ಅದರ ಶಿಾರಸುಗಳಿಗೆ ಪ್ರಣವ್ ಮುಖರ್ಜಿ ಅನುಮೋದನೆಯನ್ನು ನೀಡಿದ್ದರು ಹಾಗೂ ಎಂ.ವೆಂಕಯ್ಯ ನಾಯ್ಡು ಸ್ವಾಗತಿಸಿದ್ದರು. ಈ ಮೂವರು ಕೂಡಾ ಹಿಂದಿ ಭಾಷಿಕರಲ್ಲ ಹಾಗೂ ಅವರು ತಮ್ಮ ರಾಜ್ಯಗಳಲ್ಲಿ ರಾಜಕೀಯವಾಗಿ ಅಪ್ರಸ್ತುತರಾಗಿದ್ದಾರೆ. ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಶಾನವಾಝ್ ಹುಸೈನ್ ಬಿಜೆಪಿಗಾಗಿ ಏನು ಮಾಡುತ್ತಿರುವರೋ ಹಾಗೆಯೇ ಇವರು ದಿಲ್ಲಿಯ ಹಿಂದಿ ಪರ ಹಿತಾಸಕ್ತಿಗಳ ಪರವಾಗಿ ಪಾತ್ರ ವಹಿಸುತ್ತಿದ್ದಾರೆ.
ಈ ಶಿಫಾರಸುಗಳು ಉದ್ಯೋಗಗಳಲ್ಲಿ ಹಿಂದಿ ಮಾತನಾಡು ವವರ ಬಗ್ಗೆ ಒಲವನ್ನು ತೋರಿವೆ ಮತ್ತು ಹೆಚ್ಚುಕಮ್ಮಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದಿಯೇತರ ಪೌರರಿಗೆ ಅಡೆತಡೆಗಳನ್ನು ಸೃಷ್ಟಿಸಿದ್ದು, ಅವರನ್ನು ಎರಡನೆ ದರ್ಜೆಯ ನಾಗರಿಕರನ್ನಾಗಿ ಮಾಡಲಿವೆ. ಸರಕಾರದ ಎಲ್ಲಾ ಉದ್ದೇಶಗಳಲ್ಲಿ ಹಿಂದಿಯನ್ನು ಉತ್ತೇಜಿಸುವುದು ಹಾಗೂ ಹಿಂದಿಯೇತರ ಭಾಷೆಗಳನ್ನು ನಿರುತ್ತೇಜಿಸುವುದು, ಉದ್ಯೋಗದ ವಿಷಯಗಳಲ್ಲಿ ಹಿಂದಿಯೇತರ ಭಾಷಿಕರ ವಿರುದ್ಧ ತಾರತಮ್ಯ ಎಸಗಿರುವುದು ಹಾಗೂ ಹಿಂದಿ ಭಾಷಿಕರ ಪರವಾಗಿ ವರ್ತಿಸಿರುವುದು, 1971ಕ್ಕಿಂತ ಮೊದಲು ಪೂರ್ವ ಬಂಗಾಳ (ಈಗಿನ ಬಾಂಗ್ಲಾ)ದಲ್ಲಿ ಪಾಕಿಸ್ತಾನವು ಬಂಗಾಳಿ ಭಾಷಿಕರ ಮೇಲೆ ಉರ್ದು ಭಾಷೆಯನ್ನು ಹೇರಲು ಇದೇ ಧೋರಣೆಯನ್ನು ಅನುಸರಿಸಿತ್ತು. ಆದರೆ ಪೂರ್ವ ಬಂಗಾಳದ ಜನತೆ ಇದರ ವಿರುದ್ಧ ಸಿಡಿದೆದ್ದು, ಉರ್ದು ಭಾಷಿಕರು ಪಡೆಯುವ ಪ್ರತಿಯೊಂದು ಹಕ್ಕುಗಳು ತಮಗೆ ದೊರೆಯುವುದಕ್ಕಾಗಿ ಹೋರಾಡಿದರು. ಅಂತಿಮವಾಗಿ ಅವರು ಪಾಕಿಸ್ತಾನದಿಂದ ಸಿಡಿದು, ಬಾಂಗ್ಲಾ ದೇಶವನ್ನು ಸ್ಥಾಪಿಸಿದರು.
ಭಾರತೀಯ ಒಕ್ಕೂಟವು ಯಾವುದೇ ರಾಷ್ಟ್ರಭಾಷೆಯನ್ನು ಹೊಂದಿಲ್ಲ. ಯಾಕೆಂದರೆ ಇದೊಂದು ವಿವಿಧ ಭಾಷಾ ರಾಷ್ಟ್ರೀಯತೆಗಳ ಒಕ್ಕೂಟವಾಗಿದೆ. ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಬೆಟ್ಟು ಮಾಡಿ ತೋರಿಸಿರುವಂತೆ, ಭಾರತವನ್ನು ಹಿಂದಿ ಯಜಮಾನಿಕೆಯ ದೇಶವಾಗಿ ಮಾಡುವುದು, ಸ್ವತಃ ದೇಶದ ಏಕತೆಗೆ ಒಡ್ಡುವ ಬೆದರಿಕೆಯಾಗಲಿದೆ. ಧರ್ಮದ ಬಗ್ಗೆ ಬಿಜೆಪಿ ಸರಕಾರದ ರಾಜಕೀಯ ಆಟಾಟೋಪದ ಹೇಳಿಕೆಗಳು ಹಾಗೂ ಅದಕ್ಕೆ ಪ್ರತಿಕ್ರಿಯೆಯೆಂಬಂತೆ ಆ ಪಕ್ಷದ ಬೆಂಬಲಿಗರು ಎಸಗುವ ಕೃತ್ಯಗಳು ಭಾರತ ಒಕ್ಕೂಟದ ಕೆಲವು ಭಾಗಗಳು ಪಾಕಿಸ್ತಾನದ ಹಾಗೆ ಮತಾಂಧತೆಗೆ ತುತ್ತಾಗುವಂತೆ ಮಾಡಿವೆ. ಹಿಂದಿಯನ್ನು ಹೇರ ಹೊರಟಿರುವ ಬಿಜೆಪಿ ಸರಕಾರವು, 1971ಕ್ಕೆ ಮೊದಲು ಉರ್ದುವನ್ನು ಬಲವಂತವಾಗಿ ಹೇರಹೊರಟಿದ್ದ ಪಾಕಿಸ್ತಾನ ಸರಕಾರದ ತದ್ರೂಪದಂತೆ ವರ್ತಿಸಲು ಹೊರಟಿದೆ. ಹೀಗಾಗಿ ದೇಶದ ಭವಿಷ್ಯವನ್ನು ನಿರ್ಧರಿಸುವುದು ಕೇಂದ್ರ ಸರಕಾರದ ಕೈಯಲ್ಲಿದೆ. ಅವರು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಭಾರತ ಒಕ್ಕೂಟದ ಹಿಂದಿಯೇತರರು ತಮ್ಮದೇ ಆಯ್ಕೆಗಳನ್ನು ನಿರ್ಧರಿಸಲು ಸಮರ್ಥರಿದ್ದಾರೆ.
ಕೃಪೆ: scroll.in