ನಾಲ್ಕು ಇಲಾಖೆಗಳಿಂದ 13.5 ಕೋಟಿ ಆಧಾರ್ ಸಂಖ್ಯೆ ಬಹಿರಂಗ !

ಭಾರತದ ಆಧಾರ್ ಮಾಹಿತಿ ವ್ಯವಸ್ಥೆಯನ್ನು ಹ್ಯಾಕ್ ಮಾಡುವುದು ಸಾಧ್ಯವೇ ಇಲ್ಲ ಎಂದು ಯುಐಡಿಎಐ ಪದೇ ಪದೇ ಸಾರಿ ಹೇಳುತ್ತಿದೆ. ಆದಾಗ್ಯೂ ಆಧಾರ್ ಬಳಸಿಕೊಳ್ಳುತ್ತಿರುವ ಇತರ ವೆಬ್‌ಸೈಟ್ ಹಾಗೂ ಸೇವಾ ಇಲಾಖೆಗಳು, ಸಾರ್ವಜನಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವ ಕುಖ್ಯಾತಿಯನ್ನು ಪಡೆದಿವೆ. ನಾಲ್ಕು ಸರಕಾರಿ ಮಾಹಿತಿಕೋಶಗಳು ದೇಶದಲ್ಲಿ 13.5 ಕೋಟಿ ಮಂದಿಯ ಆಧಾರ್ ಸಂಖ್ಯೆಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿರುವುದನ್ನು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಕೇಂದ್ರ ಸರಕಾರ ದೇಶವನ್ನು ಡಿಜಿಟಲೀಕರಿಸುವ ದೂರದೃಷ್ಟಿಯ ವಿಸ್ತೃತ ಯೋಜನೆ ಹಾಕಿಕೊಂಡಿದೆ. ದೇಶದ ಡಿಜಿಟಲೀಕರಣದಲ್ಲಿ ಪ್ರಮುಖ ವಿಷಯ ಎಂದರೆ ಆಧಾರ್ ಗುರುತಿಸುವಿಕೆ, ದೇಶದಲ್ಲಿ ಎಲ್ಲ ಪ್ರಮುಖ ಸರಕಾರಿ ಸೇವೆಗಳಿಗೆ ಬಹುತೇಕ ಕಡ್ಡಾಯವಾಗುತ್ತಿರುವುದು ಒಬ್ಬ ವ್ಯಕ್ತಿಯ ಗುರುತಿಸುವಿಕೆಗೆ ಮಹತ್ವದ ಮತ್ತು ಸೂಕ್ಷ್ಮವಾದ ಬಯೋಮೆಟ್ರಿಕ್ ಮಾಹಿತಿ ಅನಿವಾರ್ಯವಾಗುತ್ತದೆ. ಭಾರತದ ಆಧಾರ್ ಮಾಹಿತಿ ವ್ಯವಸ್ಥೆಯನ್ನು ಹ್ಯಾಕ್ ಮಾಡುವುದು ಸಾಧ್ಯವೇ ಇಲ್ಲ ಎಂದು ಯುಐಡಿಎಐ ಪದೇ ಪದೇ ಸಾರಿ ಹೇಳುತ್ತಿದೆ. ಆದಾಗ್ಯೂ ಆಧಾರ್ ಬಳಸಿಕೊಳ್ಳುತ್ತಿರುವ ಇತರ ವೆಬ್‌ಸೈಟ್ ಹಾಗೂ ಸೇವಾ ಇಲಾಖೆಗಳು, ಸಾರ್ವಜನಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವ ಕುಖ್ಯಾತಿಯನ್ನು ಪಡೆದಿವೆ. ನಾಲ್ಕು ಸರಕಾರಿ ಮಾಹಿತಿಕೋಶಗಳು ದೇಶದಲ್ಲಿ 13.5 ಕೋಟಿ ಮಂದಿಯ ಆಧಾರ್ ಸಂಖ್ಯೆಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿರುವುದನ್ನು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಸೆಂಟರ್ ಫಾರ್ ಇಂಟರ್‌ನೆಟ್ ಆ್ಯಂಡ್ ಸೊಸೈಟಿ (ಸಿಐಎಸ್) ಎಂಬ ಸಂಸ್ಥೆ ಈ ಸಂಶೋಧನೆ ಕೈಗೊಂಡಿತ್ತು. ಇನಾರ್ಮೇಷನ್ ಸೆಕ್ಯುರಿಟಿ ಪ್ರಾಕ್ಟೀಸಸ್ ಆ್ ಆಧಾರ್ (ಆರ್ ಲ್ಯಾಕ್ ದೇರ್‌ಆ್): ಎ ಡಾಕ್ಯುಮೆಂಟೇಷನ್ ಆಫ್ ಪಬ್ಲಿಕ್ ಅವೈಲೇಬಿಲಿಟಿ ಆಫ್ ಆಧಾರ್ ನಂಬರ್ ವಿದ್ ಸೆನ್ಸಿಟಿವ್ ಪರ್ಸನಲ್ ಫೈನಾನ್ಶಿಯಲ್ ಇನಾರ್ಮೇಷನ್ (ಆಧಾರ್‌ನಲ್ಲಿ ಮಾಹಿತಿ ಭದ್ರತಾ ವ್ಯವಸ್ಥೆ: ಸಾರ್ವಜನಿಕರ ಆಧಾರ್ ಸಂಖ್ಯೆ ಜತೆ ಸೂಕ್ಷ್ಮ ವೈಯಕ್ತಿಕ ಹಣಕಾಸು ಮಾಹಿತಿ ಲಭ್ಯತೆ) ಎಂಬ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅಂಬೆರ್‌ಸಿಂಗ್ ಹಾಗೂ ಶ್ರೀನಿವಾಸ ಕೊಡಲಿ ಎಂಬವರು ಜಂಟಿಯಾಗಿ ಈ ವರದಿ ಸಿದ್ಧಪಡಿಸಿದ್ದಾರೆ. ಸರಕಾರದ ವೆಬ್‌ಸೈಟ್‌ಗಳಲ್ಲಿ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ ವ್ಯವಸ್ಥೆ (ಪಿಐಐ) ಮತ್ತು ಆಧಾರ್ ಸಂಖ್ಯೆಗಳು ಸಾರ್ವಜನಿಕವಾಗಿ ಲಭ್ಯವಾಗುವ ನಿದರ್ಶನಗಳು ಹೇರಳವಾಗಿವೆ ಎಂದು ವರದಿ ವಿವರಿಸಿದೆ. ಈ ಯೋಜನೆಗಳಲ್ಲಿ ಪ್ರಮುಖವಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸೇರಿದೆ. ಇದರ ಜತೆಗೆ ಇತರ ಎರಡು ದೈನಿಕ ಆನ್‌ಲೈನ್ ಪಾವತಿ ವರದಿಗಳಾದ ನರೇಗಾ ಹಾಗೂ ಆಂಧ್ರಪ್ರದೇಶ ಸರಕಾರದ ಚಂದ್ರಣ್ಣ ವಿಮಾ ಯೋಜನೆ ಸೇರಿದೆ.
ಈ ಸಂಶೋಧನೆಗಳ ಅನ್ವಯ, 130 ರಿಂದ 135 ದಶಲಕ್ಷ ಆಧಾರ್ ಸಂಖ್ಯೆಗಳು ನಾಲ್ಕು ಸರಕಾರಿ ವೆಬ್‌ಪೋರ್ಟೆಲ್‌ಗಳ ಮೂಲಕ ಸೋರಿಕೆಯಾಗಿವೆ. ಇತರ ಪೋರ್ಟೆಲ್‌ಗಳು 100 ದಶಲಕ್ಷ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಬಹಿರಂಗಗೊಳಿಸಿವೆ. ರಾಷ್ಟ್ರೀಯ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿದಾರರ ಸೂಕ್ಷ್ಮ ಮಾಹಿತಿಗಳಾದ ಜಾಬ್‌ಕಾರ್ಡ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಖಾತೆ ಸ್ಥಗಿತವಾಗಿರುವ ಸ್ಥಿತಿಗತಿ ವಿವರಗಳು ಲಭ್ಯ ಇವೆ. ಈ ವಿವರಗಳು ಸಾರ್ವಜನಿಕವಾಗಿ ಲಭ್ಯ ಇಲ್ಲದಿದ್ದರೂ, ಲಾಗ್ ಇನ್ ಸೌಲಭ್ಯ ಹೊಂದಿರುವ ಯಾರು ಬೇಕಾದರೂ ಈ ಎಲ್ಲ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ತಮ್ಮ ಎಲ್ಲ ಕೆಲಸಗಾರರ ಎಂಐಎಸ್ ವರದಿಗಳನ್ನು ಹೊಂದಿದೆ. ಆಳವಾದ ಸಂಶೋಧನೆಯ ಬಳಿಕ, ಜಾಬ್‌ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಹಾಗೂ ಅಂಚೆ ಉಳಿತಾಯ ಖಾತೆಯ ಸಂಖ್ಯೆ, ಕೆಲಸ ಮಾಡಿದ ದಿನಗಳು, ನೋಂದಣಿ ಸಂಖ್ಯೆ, ಖಾತೆಯ ಸ್ಥಿತಿಗತಿ ಮತ್ತಿತರ ವಿವರಗಳು ಸಾರ್ವಜನಿಕವಾಗಿ ಲಭ್ಯ ಇರುವುದನ್ನು ಕಂಡುಹಿಡಿಯಲಾಗಿದೆ.

ಚಂದ್ರಣ್ಣ ವಿಮಾ ಯೋಜನೆಯಡಿ ಅಸಂಘಟಿತ ಕಾರ್ಮಿಕರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೆರವು ನೀಡಲಾಗುತ್ತದೆ. ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾದ ವ್ಯಕ್ತಿಗಳ ಪಿಐಐ ಮಾಹಿತಿ ಕೂಡಾ ಸಾರ್ವಜನಿಕ ಬಳಕೆಗೆ ಲಭ್ಯವಿದೆ. ವೆಬ್‌ಸೈಟ್‌ನಲ್ಲಿ ಸುಲಭವಾಗಿ ಸಿಗುವ ಪಿಐಐ ಮಾಹಿತಿಯಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಭಾಗಶಃ ಮಬ್ಬಾದ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್‌ಸಿ ಸಂಕೇತ ಹಾಗೂ ಬ್ಯಾಂಕ್ ಹೆಸರು ಲಭ್ಯವಿದೆ. ಕೊನೆಯದಾಗಿ, ನರೇಗಾ ಕಾಮಗಾರಿ ಹಾಗೂ ಪಾವತಿಯ ಬಗೆಗಿನ ದೈನಿಕ ವರದಿಗಳ ಮೇಲೆ ನಿಗಾ ಇಡುವ ದೈನಿಕ ಆನ್‌ಲೈನ್ ಪಾವತಿ ವರದಿಯಲ್ಲಿ, ತೀರಾ ಸೂಕ್ಷ್ಮವಾದ ವಿವರಗಳು ಸಾರ್ವಜನಿಕವಾಗಿ ಲಭ್ಯ ಇವೆ. ಇದರಲ್ಲಿ ಆಧಾರ್ ಸಂಖ್ಯೆ, ಬ್ಯಾಂಕ್ ಹಾಗೂ ಅಂಚೆಕಚೇರಿ ಉಳಿತಾಯ ಸಂಖ್ಯೆ, ಮೊಬೈಲ್ ಸಂಖ್ಯೆ, ಇ-ಪೇ ಆರ್ಡರ್‌ಗಳ ವಿವರಗಳು, ವಿತರಿಸಿದ ಸಮಯ ಹಾಗೂ ದಿನಾಂಕ, ಪೇ ಆರ್ಡರ್ ಮೊತ್ತ ಹಾಗೂ ಪಾವತಿಯ ವಿಧಾನದ ವಿವರಗಳು ಸಿಗುತ್ತವೆ.
ಇವೆಲ್ಲದಕ್ಕಿಂತ ಹೆಚ್ಚಾಗಿ, ಯುಐಡಿಎಐ ಹೇಗೆ ಬೇಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಇದು ಅಭಿವ್ಯಕ್ತಪಡಿಸುತ್ತದೆ. ಆಧಾರ್ ಮಾಹಿತಿಗಳು ಇತರ ಸಂಬಂತ ಸೇವೆಗಳಲ್ಲಿ ಸುರಕ್ಷಿತವಾಗಿ ಬಳಕೆಯಾಗಬೇಕು ಎಂಬ ಬಗ್ಗೆ ಎಷ್ಟು ಕಾಳಜಿ ವಹಿಸುತ್ತದೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ಮೇಲೆ ನಮೂದಿಸಿದಂತೆ, ಆಧಾರ್ ಸಂಖ್ಯೆಯನ್ನು ಸರಕಾರಿ ಪೋರ್ಟೆಲ್‌ಗಳು ಹಾಗೂ ಸೇವೆಗಳಿಗೆ ಸಂಪರ್ಕಿಸಲಾಗಿದೆ. ಆದರೆ ಇವು ಎಷ್ಟು ನಿರ್ಲಕ್ಷ್ಯ ವಹಿಸಿವೆ ಮತ್ತು ಸೂಕ್ಷ್ಮ ಮಾಹಿತಿಗಳು ಬಹಿರಂಗವಾಗಲು ಹೇಗೆ ಕಾರಣವಾಗಿವೆ ಎನ್ನುವುದು ಇದರಿಂದ ವ್ಯಕ್ತವಾಗುತ್ತವೆ. ಇತ್ತೀಚಿನ ಪ್ರಕರಣದಲ್ಲಿ, ಜಾರ್ಖಂಡ್‌ನ ಸಾಮಾಜಿಕ ಭದ್ರತಾ ನಿರ್ದೇಶನಾಲಯ, ಹತ್ತು ಲಕ್ಷಕ್ಕೂ ಅಕ ಮಂದಿಯ ವೈಯಕ್ತಿಕ ಗುರುತಿಸುವಿಕೆ ಮಾಹಿತಿಯನ್ನು ಸೋರಿಕೆ ಮಾಡಿತ್ತು. ರಾಜ್ಯದಲ್ಲಿ ವೃದ್ಧಾಪ್ಯ ಪಿಂಚಣಿ ಪಡೆಯುವ ಎಲ್ಲ ಲಾನುಭವಿಗಳ ವೈಯಕ್ತಿಕ ವಿವರಗಳು ಬಹಿರಂಗವಾಗಿದ್ದವು. ಈ ಮಾಹಿತಿಗಳು ಹೇಗೆ ಸೋರಿಕೆಯಾಗಿವೆ ಎಂಬ ಬಗ್ಗೆ ಜಾರ್ಖಂಡ್ ಸರಕಾರಕ್ಕೆ ಯಾವ ಸುಳಿವೂ ಸಿಕ್ಕಿಲ್ಲ. ಅಂದರೆ ಆಧಾರ್ ಮಾಹಿತಿಯ ಭದ್ರತೆಗೆ ಸಂಬಂಸಿದಂತೆ ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.







