Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ನ್ಯಾಯಮೂರ್ತಿ ಕರ್ಣನ್ ಪ್ರಕರಣ ಮತ್ತು...

ನ್ಯಾಯಮೂರ್ತಿ ಕರ್ಣನ್ ಪ್ರಕರಣ ಮತ್ತು ನ್ಯಾಯಾಂಗದ ಹೊಣೆಗಾರಿಕೆಯ ಪ್ರತಿರೋಧ

ಅಭಿಷೇಕ್ ಸುಧೀರ್ಅಭಿಷೇಕ್ ಸುಧೀರ್17 May 2017 11:44 PM IST
share
ನ್ಯಾಯಮೂರ್ತಿ ಕರ್ಣನ್ ಪ್ರಕರಣ ಮತ್ತು ನ್ಯಾಯಾಂಗದ ಹೊಣೆಗಾರಿಕೆಯ ಪ್ರತಿರೋಧ


ಭಾಗ-1

ನ್ಯಾಯಮೂರ್ತಿ ಕರ್ಣನ್ ಆಯ್ಕೆ ನ್ಯಾಯಾಧೀಶರೇ ನ್ಯಾಯಾಧೀಶರನ್ನು ಆಯ್ಕೆ ಮಾಡುವ ವ್ಯವಸ್ಥೆಯ ಲೋಪವನ್ನು ಎತ್ತಿಹಿಡಿಯುವ ಜೊತೆಗೆ ಅವರು ಇನ್ನೂ ಕೂಡಾ ನ್ಯಾಯಾಧೀಶರಾಗಿ ಮುಂದುವರಿದಿರುವುದು ನ್ಯಾಯಾಂಗದ ಆರೋಪಿತ ಸದಸ್ಯರ ಮೇಲೆ ಶಿಸ್ತುಕ್ರಮ ಜರಗಿಸುವ ಮತ್ತು ಕಿತ್ತು ಹಾಕುವ ಸದ್ಯದ ಪ್ರಕ್ರಿಯೆಯ ಅಸಮರ್ಪಕತೆಯನ್ನು ಬಿಂಬಿಸುತ್ತದೆ.

ಕಳೆದ ಫೆಬ್ರವರಿಯಿಂದ ಕೋಲ್ಕತಾ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಸಿಎಸ್ ಕರ್ಣನ್ ಅವರ ಹೆಸರು ಪ್ರತಿನಿತ್ಯ ಸುದ್ದಿಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದೆ. ಅನೇಕ ನ್ಯಾಯಾಧೀಶರು ಲಂಚ ಸ್ವೀಕರಿಸುತ್ತಾರೆ ಎಂಬ ಆರೋಪ ಹೊರಿಸಿ ಪ್ರಧಾನ ಮಂತ್ರಿಗೆ ಬರೆದ ಬಹಿರಂಗ ಪತ್ರದಲ್ಲಿ ಹಲವು ನ್ಯಾಯಾಧೀಶರ ಹೆಸರನ್ನು ಉಲ್ಲೇಖಿಸಿದ ಕಾರಣಕ್ಕೆ ಕರ್ಣನ್ ಅವರ ಮೇಲೆ ಸರ್ವೋಚ್ಚ ನ್ಯಾಯಾಲಯ ನಿಂದನೆ ಆರೋಪವನ್ನು ಹೊರಿಸಿತ್ತು. ಇದೇ ಮೊದಲ ಬಾರಿಗೆ ಸಕ್ರಿಯ ನ್ಯಾಯಾಧೀಶರ ಮೇಲೆ ನ್ಯಾಯಾಲಯ ನಿಂದನೆ ನೊಟೀಸ್ ಜಾರಿ ಮಾಡಲಾಗಿತ್ತು.

ಇತ್ತೀಚೆಗೆ ಅವರಿಗೆ ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಸರ್ವೋಚ್ಚ ನ್ಯಾಯಾಲಯದ ಇತರ ಆರು ಮಂದಿ ನ್ಯಾಯಾಧೀಶರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಅಪರಾಧಿಗಳು ಎಂದು ತೀರ್ಪು ನೀಡಿ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರು. ತಾನು ದಲಿತ ಸಮುದಾಯದಿಂದ ಬಂದವನು ಎಂಬ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದರು ಎಂದು ಕರ್ಣನ್ ಆರೋಪಿಸಿದ್ದರು.

ಸರ್ವೋಚ್ಚ ನ್ಯಾಯಾಲಯ ಹೊರಡಿಸಿದ್ದ ಮಾನಸಿಕ ಮೌಲ್ಯಮಾಪನ ನಡೆಸುವ ಆದೇಶವನ್ನು ತಿರಸ್ಕರಿಸಿದ ಕರ್ಣನ್ ಆರೋಪಿತ ನ್ಯಾಯಾಧೀಶರು ‘‘ಜಾತಿ ತಾರತಮ್ಯದ ವೈರಸನ್ನು ಹರಡಬಹುದು’’ ಎಂದು ಹೇಳುತ್ತಾ ಈ ನ್ಯಾಯಾಧೀಶರು ವಿದೇಶಕ್ಕೆ ಹಾರುವುದನ್ನು ತಡೆಯುವಂತೆ ವಾಯು ನಿಯಂತ್ರಣ ಮಂಡಳಿಗೆ ಸೂಚಿಸಿದ್ದರು.

2015ರ ಮೇನಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಸಂಜಯ್ ಕೌಲ್ ವಿರುದ್ಧ ನಿಂದನೆ ಪ್ರಕ್ರಿಯೆಯನ್ನು ಆರಂಭಿಸುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು. ಆದರೆ ಈ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ತಡೆಯೊಡ್ಡಿತು. ನ್ಯಾಯವಾದಿ ಕೌಲ್ ತನ್ನ ಕೆಲಸದಲ್ಲಿ ಮೂಗುತೂರಿಸುತ್ತಾರೆ ಮತ್ತು ತನ್ನ ವಿರುದ್ಧ ತಾರತಮ್ಯ ಧೋರಣೆ ತೋರುತ್ತಾರೆ ಎಂದು ಆ ಸಮಯದಲ್ಲಿ ಮದ್ರಾಸ್ ಉಚ್ಚನ್ಯಾಯಾಲಯದಲ್ಲಿ ಕರ್ತವ್ಯದಲ್ಲಿದ್ದ ಕರ್ಣನ್ ಆರೋಪಿಸಿದ್ದರು.

‘‘ಓರ್ವ ನ್ಯಾಯಾಧೀಶ ಇಂಟರ್ನ್‌ಗೆ ಕಿರುಕುಳ ನೀಡಿದ್ದರೆ ಇನ್ನೋರ್ವ ಜಾತಿ ಆಧಾರಿತ ತಾರತಮ್ಯ ಮಾಡುತ್ತಿದ್ದರು’’ ಎಂದೂ ಕರ್ಣನ್ ಆರೋಪಿಸಿದ್ದರು. ಆದರೆ ಈ ಆರೋಪಕ್ಕೆ ಅವರು ಯಾವುದೇ ಸಾಕ್ಷಿ ಒದಗಿಸಿರಲಿಲ್ಲ.

ಹಾಗಾದರೆ ಈ ಎಲ್ಲಾ ಒಡಕುಗಳ ನಂತರವೂ ಕರ್ಣನ್ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾದರೂ ಹೇಗೆ? ತನ್ನ ಪದವಿಗೆ ತಕ್ಕುದಲ್ಲದ ವರ್ತನೆಯನ್ನು ತೋರಿದರೂ ಕರ್ಣನ್ ಈಗಲೂ ಕೋಲ್ಕತಾ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ಮುಂದುವರಿದಿ ರುವುದಾದರೂ ಹೇಗೆ?

ಇದಕ್ಕೆ ಹೊಣೆಗಾರನಾಗಿರುವುದು ನ್ಯಾಯಾಂಗವೇ. ಹಿರಿಯ ನ್ಯಾಯಾಧೀಶರ ಆಯ್ಕೆ ಸಂಬಂಧಿಸಿದ ಸಾಂವಿಧಾನಿಕ ಭದ್ರತೆಯನ್ನು ವ್ಯವಸ್ಥಿತವಾಗಿ ಕಿತ್ತುಹಾಕುವ ಜೊತೆಗೆ ನ್ಯಾಯಾಧೀಶರು ತೆಗೆದುಕೊಳ್ಳುವ ಕ್ರಮಗಳಿಗೆ ಅವರನ್ನೇ ಜವಾಬ್ದಾರರನ್ನಾಗಿಸುವ ಶಾಸಕಾಂಗದ ಪ್ರಯತ್ನಕ್ಕೂ ನ್ಯಾಯಾಂಗ ಪ್ರತಿರೋಧ ತೋರಿದೆ.

ನ್ಯಾಯಾಧೀಶ ಎ.ಕೆ. ಗಂಗೂಲಿ ಮದ್ರಾಸ್ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದಾಗ ನ್ಯಾಯಾಧೀಶರ ತ್ರಿಸದಸ್ಯ ಪೀಠವೊಂದನ್ನು ಮುನ್ನಡೆಸುತ್ತಿದ್ದರು. ಇದಕ್ಕೆ ‘ಕೊಲಿಜಿಯಂ’ ಎಂದು ಕರೆಯಲಾಗುತ್ತಿತ್ತು. ಈ ತ್ರಿಸದಸ್ಯ ಪೀಠ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಕರ್ಣನ್ ಹೆಸರನ್ನು ಭಾರತದ ಮುಖ್ಯ ನ್ಯಾಯಾಧೀಶರಿಗೆ ಸೂಚಿಸಿತ್ತು. ಕೊಲಿಜಿಯಂ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರೇ ಇತರ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಾರೆ. ಉಚ್ಚನ್ಯಾಯಾಲಯದ ಕೊಲಿಜಿಯಂ ತನ್ನ ಆಯ್ಕೆಯ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂಗೆ ಕಳುಹಿಸುತ್ತದೆ. ಅದನ್ನು ಸರ್ವೋಚ್ಚ ನ್ಯಾಯಾಲಯ ರಾಷ್ಟ್ರಪತಿಗೆ ಮತ್ತು ಕೇಂದ್ರ ಸರಕಾರಕ್ಕೆ ಕಳುಹಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ರಾಷ್ಟ್ರಪತಿ ಮತ್ತು ಕೇಂದ್ರ ಸರಕಾರ ಈ ವಿಷಯದಲ್ಲಿ ಕೇವಲ ರಬ್ಬರ್ ಸ್ಟಾಂಪ್ ಕೆಲಸವನ್ನಷ್ಟೇ ಮಾಡುತ್ತವೆ. ಕರ್ಣನ್ ನೇಮಕವನ್ನು 2009ರಲ್ಲಿ ಪೂರ್ತಿಗೊಳಿಸಲಾಯಿತು.

ಹಲವು ವಿವಾದಗಳು ನಡೆದ ಹಿನ್ನೆಲೆಯಲ್ಲಿ ಉಚ್ಚನ್ಯಾಯಾಲಯದ ಕೊಲಿಜಿಯಂನ ನ್ಯಾಯಾಧೀಶರು ಕರ್ಣನ್‌ನ ಆಯ್ಕೆಯ ಬಗ್ಗೆ ಮಾತಾಡಿದ್ದರು. ನ್ಯಾಯಾಧೀಶ ಗಂಗೂಲಿ ಕರ್ಣನ್ ಹೆಸರನ್ನು ಪ್ರಸ್ತಾಪಿಸಿದ್ದರು. ‘‘ಅವರ ಬಗ್ಗೆ ಈ ಹಿಂದೆ ನಾನೆಂದೂ ಕೇಳಿರಲಿಲ್ಲ’’ ಎಂದು ನ್ಯಾಯಾಧೀಶರಾದ ಪಿ.ಕೆ. ಮಿಶ್ರಾ ತಿಳಿಸಿದ್ದರು. ಕರ್ಣನ್‌ರನ್ನು ಆಯ್ಕೆ ಮಾಡಿದ ಕೊಲಿಜಿಯಂನ ಭಾಗವಾಗಿರುವುದಕ್ಕೆ ವಿಷಾದವಾಗುತ್ತದೆ ಎಂದವರು ಖೇದ ವ್ಯಕ್ತಪಡಿಸಿದ್ದರು.

‘‘ಕರ್ಣನ್ ಎಂದೂ ಯಾವುದೇ ಪ್ರಕರಣದಲ್ಲಿ ತನ್ನ ಮುಂದೆ ಬಂದಿಲ್ಲ’’ ಎಂದು ನ್ಯಾಯಾಧೀಶ ಗಂಗೂಲಿಯವರೇ ಹೇಳಿ ಕೊಂಡಿದ್ದರು. ಕಳೆದ ವರ್ಷ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಯಾಕೆ ಕರ್ಣನ್‌ರನ್ನು ಆಯ್ಕೆ ಮಾಡಿದಿರಿ ಎಂಬ ಪ್ರಶ್ನೆಗೆ, ‘‘ಅವರ ಹೆಸರು ಹೇಗೆ ಪ್ರಸ್ತಾಪವಾಯಿತೆಂದು ನನಗೆ ನೆನಪಿಲ್ಲ. ಅದು 2008ರಲ್ಲಿ ನಡೆದ ಘಟನೆ ಹಾಗಾಗಿ ಅಷ್ಟೊಂದು ಜ್ಞಾಪಕವಿಲ್ಲ’’ ಎಂದು ಹೇಳಿಕೊಂಡಿದ್ದರು.

2009ರಲ್ಲಿ ಭಾರತದ ಮುಖ್ಯನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ಆರೋಪದಿಂದ ತಪ್ಪಿಸಿಕೊಳ್ಳುತ್ತಾ ‘‘ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರು ಹೆಸರುಗಳನ್ನು ಸೂಚಿಸುತ್ತಾರೆ ಮತ್ತು ನಾವು ಅವುಗಳನ್ನು ಅನುಮೋದಿಸುತ್ತೇವೆಯಷ್ಟೇ. ಕರ್ಣನ್ ಬಗ್ಗೆ ನಾನೇನೂ ಅಂಥಾ ವಿಚಾರಣೆಯನ್ನೇನೂ ಮಾಡಿಲ್ಲ’’ ಎಂದು ಹೇಳುತ್ತಾರೆ.

ನ್ಯಾಯಾಂಗ ಆಯ್ಕೆ ಪ್ರಕ್ರಿಯೆಯ ಬಗ್ಗೆ ಅರಿವಿಲ್ಲದವರು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚನ್ಯಾಯಾಲಯದ ಕೊಲಿಜಿಯಂಗಳ ಸಭೆಯನ್ನು ಯಾಕೆ ದಾಖಲಿಸಲಿಲ್ಲ ಎಂಬ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಬಹುದು. ಕೊಲಿಜಿಯಂ ಎಂದರೆ ಸ್ವಯಂ ಆಸಕ್ತಿ ಹೊಂದಿದ ಜನರ ಗುಂಪಿಗಿಂತ ಹೆಚ್ಚೇನೂ ಅಲ್ಲ. ಮಧ್ಯವಯಸ್ಕರನ್ನೇ ಹೆಚ್ಚಾಗಿ ಹೊಂದಿರುವ ಈ ಗುಂಪು ರಹಸ್ಯ ಸಭೆಗಳಲ್ಲಿ ಚಹಾ ಮತ್ತು ಬಿಸ್ಕತ್ ಸವಿಯುತ್ತಾ ಟೀಕೆ ಟಿಪ್ಪಣಿಗಳನ್ನು ಮಾಡುತ್ತವೆ. ಆದರೆ ಈ ಟಿಪ್ಪಣಿ ಮತ್ತು ವಿವರಣೆಗಳಿಗೆ ಯಾವುದೇ ಲಿಖಿತ ದಾಖಲೆಗಳಿರುವುದಿಲ್ಲ ಮತ್ತು ಇಂಥಾ ಸಭೆಗಳಲ್ಲಿ ಸರಕಾರದ ಎರಡು ಚುನಾಯಿತ ಅಂಗಗಳಾದ ಕಾರ್ಯಾಂಗ ಮತ್ತು ಶಾಸಕಾಂಗದ ಭಾಗವಹಿಸುವಿಕೆಯೂ ಇರುವುದಿಲ್ಲ.

ನ್ಯಾಯಮೂರ್ತಿ ಕರ್ಣನ್ ಆಯ್ಕೆ ನ್ಯಾಯಾ ಧೀಶರೇ ನ್ಯಾಯಾಧೀಶರನ್ನು ಆಯ್ಕೆ ಮಾಡುವ ವ್ಯವಸ್ಥೆಯ ಲೋಪವನ್ನು ಎತ್ತಿಹಿಡಿಯುವ ಜೊತೆಗೆ ಅವರು ಇನ್ನೂ ಕೂಡಾ ನ್ಯಾಯಾಧೀಶರಾಗಿ ಮುಂದುವರಿದಿರುವುದು ನ್ಯಾಯಾಂಗದ ಆರೋಪಿತ ಸದಸ್ಯರ ಮೇಲೆ ಶಿಸ್ತುಕ್ರಮ ಜರಗಿ ಸುವ ಮತ್ತು ಕಿತ್ತು ಹಾಕುವ ಸದ್ಯದ ಪ್ರಕ್ರಿಯೆಯ ಅಸಮರ್ಪಕತೆಯನ್ನು ಬಿಂಬಿಸುತ್ತದೆ.

share
ಅಭಿಷೇಕ್ ಸುಧೀರ್
ಅಭಿಷೇಕ್ ಸುಧೀರ್
Next Story
X