Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಗಿಲ್ ಮಾಸ್ಟರ್ ಗೆ ವಿದಾಯ.....

ಗಿಲ್ ಮಾಸ್ಟರ್ ಗೆ ವಿದಾಯ.....

ಸದಾನಂದ ಗಂಗನಬೀಡು

ವಾರ್ತಾಭಾರತಿವಾರ್ತಾಭಾರತಿ29 May 2017 12:23 AM IST
share
ಗಿಲ್ ಮಾಸ್ಟರ್ ಗೆ ವಿದಾಯ.....

ಇತ್ತೀಚೆಗೆ ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಕಲ್ಲೆಸೆಯುತ್ತಿದ್ದ ಉಗ್ರರಿಂದ ತಪ್ಪಿಸಿಕೊಳ್ಳಲು ಸೇನಾ ಸಿಬ್ಬಂದಿ ನಾಗರಿಕನೊಬ್ಬನನ್ನು ತಮ್ಮ ಜೀಪಿಗೆ ರಕ್ಷಾಕವಚವಾಗಿ ಕಟ್ಟಿಕೊಂಡು ಊರೆಲ್ಲ ತಿರುಗಾಡಿದ್ದು ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದೆ. ಇದು ಒಂದರ್ಥದಲ್ಲಿ ಸೇನೆಯು ತನ್ನ ನಾಗರಿಕನನ್ನೇ ಒತ್ತೆಯಾಳಾಗಿಸಿಕೊಂಡಂತೆ. ಆದರೆ, ಇಂತಹ ತಂತ್ರವೊಂದು ಭಯೋತ್ಪಾದನೆಯ ವಿರುದ್ಧ ಪಂಜಾಬಿನಲ್ಲಿ ಎರಡು ದಶಕಗಳ ಹಿಂದೆಯೇ ನಡೆದಿತ್ತು ಎಂದರೆ ನೀವು ನಂಬುತ್ತೀರಾ?

ಹೌದು, ಇದು ಸತ್ಯ! 1991ರಲ್ಲಿ ಪಂಜಾಬಿನಲ್ಲಿ ಖಲಿಸ್ತಾನ ಚಳವಳಿ ಉತ್ತುಂಗ ಸ್ಥಿತಿ ತಲುಪಿ, ಅಲ್ಲಿನ ಸಿಖ್ಖರ ಭಯೋತ್ಪಾದನೆಗೆ ಸುಮಾರು 5,000 ಮಂದಿ ಅಸು ನೀಗಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಒಬ್ಬ ‘ಸೂಪರ್ ಕಾಪ್’ ನನ್ನು ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಲಾಯಿತು. ಆತ ಪಂಜಾಬ್‌ನ ಪೊಲೀಸ್ ಮಹಾ ನಿರ್ದೇಶಕನಾಗುತ್ತಿದ್ದಂತೆಯೇ, ಖಲಿಸ್ತಾನ ಚಳವಳಿಯ ಸಂಪೂರ್ಣ ವಿವರಗಳನ್ನು ಕಲೆಹಾಕಿ, ನಂತರ ಮುಂದಡಿಯಿಟ್ಟಿದ್ದು ಖಲಿಸ್ತಾನ ಚಳವಳಿಯಲ್ಲಿ ಭಯೋತ್ಪಾದಕರಾಗಿ ರೂಪುಗೊಂಡಿದ್ದ ಯುವಕರ ಪೋಷಕರನ್ನು ಒತ್ತೆಯಾಳುಗಳನ್ನಾಗಿ ಬಳಸಿಕೊಂಡಿದ್ದು. ಅವರ ಮೂಲಕವೇ ತಮ್ಮ ಮಕ್ಕಳಿಗೆ ‘ಪರಿವರ್ತನೆ ಯ ಸಂದೇಶ ರವಾನಿಸಿದ ಆ ‘ಸೂಪರ್ ಕಾಪ್’, ಕೇವಲ ಎರಡೇ ವರ್ಷ ಗಳಲ್ಲಿ ತಮ್ಮ ತಂತ್ರಗಾರಿಕೆಯಲ್ಲಿ ಯಶಸ್ಸನ್ನೂ ಸಾಧಿಸಿಬಿಟ್ಟರು. ಇದೇ ವಾಸ್ತವದ ಜಾಡನ್ನು ಹಿಡಿದು ಕನ್ನಡದಲ್ಲಿ ಡಾ. ವಿಷ್ಣುವರ್ಧನ್ ನಾಯಕ ನಟನಾಗಿ ಅಭಿನಯಿಸಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದ ‘ಮಹಾಕ್ಷತ್ರಿ’ಯ ಚಿತ್ರ ಕೂಡಾ ತೆರೆಗೆ ಬಂದಿತು. ಈ ‘ಸೂಪರ್ ಕಾಪ್’ ಬೇರೆ ಯಾರೂ ಅಲ್ಲ-ತಮ್ಮ ವರ್ಣ ರಂಜಿತ ಹಾಗೂ ನಿಷ್ಠುರ ಪೊಲೀಸ್ ಗಿರಿಯಿಂದಲೇ ವಿವಾದದ ಕೇಂದ್ರ ಬಿಂದುವಾಗಿದ್ದ, ನಿನ್ನೆ (26-5-2016) ದೀರ್ಘಕಾಲದ ಅನಾರೋಗ್ಯ ದಿಂದ ನಿಧನರಾಗಿರುವ ಕೆ.ಪಿ.ಎಸ್.ಗಿಲ್.

ಕೆ.ಪಿ.ಎಸ್.ಗಿಲ್ ಮೊದಲು ತಮ್ಮ ಪೊಲೀಸ್ ವೃತ್ತಿ ಯನ್ನು ಶುರು ಮಾಡಿದ್ದು ಈಶಾನ್ಯ ಭಾರತದ ಅಸ್ಸಾಂ ಮತ್ತು ಮೇಘಾಲಯದಲ್ಲಿ. 1980ರಲ್ಲಿ ಅವರು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರಾಗಿದ್ದರು. ಅಲ್ಲಿಯೇ ಅವರು ತಮ್ಮ ತೀಕ್ಷ್ಣ ಕಾರ್ಯವೈಖರಿಗೆ ಖ್ಯಾತರಾಗಿದ್ದರು. ನಂತರ 1988ರಲ್ಲಿ ಅವರು ಪಂಜಾಬ್‌ಗೆ ಮರಳಿದರು. ಅಲ್ಲವರು ತಮ್ಮ ಕರ್ತವ್ಯ ನಿಷ್ಠುರತೆ, ಪೊಲೀಸ್ ತಂತ್ರಗಾರಿಕೆಯಿಂದಾಗಿ ‘ಸೂಪರ್ ಕಾಪ್’ ಎಂಬ ಬಿರುದಿಗೆ ಪಾತ್ರರಾದರು. ಮೂಲತಃ ಪಂಜಾಬ್‌ನ ಲುಧಿಯಾ ನದವರಾದ ಕೆ.ಪಿ.ಎಸ್.ಗಿಲ್, ಸರ್ದಾರ್‌ಜೀಗಳಲ್ಲಿರುವ ಎಲ್ಲ ರಸಿಕತೆಯನ್ನೂ ಮೈಗೂಡಿಸಿಕೊಂಡಿದ್ದರು. ಹಾಗೆಯೇ ಅವರಲ್ಲಿನ ಅಪ್ರತಿಮ ಕರ್ತವ್ಯ ತತ್ಪರತೆ ಹಾಗೂ ದೇಶಪ್ರೇಮವನ್ನೂ.

1991 ಪಂಜಾಬ್ ರಾಜ್ಯದಲ್ಲಿ ಖಲಿಸ್ತಾನ ಚಳವಳಿ ಉತ್ತುಂಗದಲ್ಲಿದ್ದ ಕಾಲ. ಅಲ್ಲಿ ಪ್ರತಿದಿನವೂ ಗುಂಡಿನ ಮೊರೆಯುವ ಭೋರ್ಗರೆತದ ಸದ್ದು ಇಡೀ ಪ್ರಪಂಚಕ್ಕೇ ಮರುದಿನ ಗೊತ್ತಾಗುತ್ತಿತ್ತು. ಕೇವಲ 1991ರಲ್ಲೇ 5,000ಕ್ಕೂ ಹೆಚ್ಚು ಅಮಾಯಕ ಪಂಜಾಬ್ ನಾಗರಿಕರು ಖಲಿಸ್ತಾನ ಚಳವಳಿಯ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದರು. ಆಗ ಪಂಜಾಬ್ ಸಂಪೂರ್ಣವಾಗಿ ಭಾರತದ ಕೈತಪ್ಪಿಯೇ ಹೋಯಿತು ಎಂಬ ಹತಾಶೆ ಆಡಳಿತಾರೂಢರಲ್ಲಿ ಮನೆ ಮಾಡಿದ್ದಾಗ ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡವರು ಕೆ.ಪಿ. ಎಸ್.ಗಿಲ್. ಬಹುತೇಕ ಖಲಿಸ್ತಾನ ಚಳವಳಿಯ ಉಗ್ರರು ತಪ್ಪು ಗ್ರಹಿಕೆ ಯಿಂದ ಭಯೋತ್ಪಾದನೆಯಲ್ಲಿ ತೊಡಗಿರುವುದನ್ನು ಮನಗಂಡು ಅದಕ್ಕೆ ಪ್ರತಿಯಾಗಿ ಇತಿಹಾಸದಲ್ಲಿ ಎಂದೂ ಘಟಿಸಿರದಿದ್ದ ತಂತ್ರವೊಂದನ್ನು ಜಾರಿಗೆ ತಂದರು. ಅದು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಯುವಕರ ಕುಟುಂಬದ ಸದಸ್ಯರು ಹಾಗೂ ಅವರ ಪೋಷಕರನ್ನೇ ಒತ್ತೆ ಯಾಳಾಗಿಸಿಕೊಂಡು, ಅವರ ಮೂಲಕ ‘ಪರಿವರ್ತನೆ’ಯ ಸಂದೇಶ ರವಾನಿಸುವುದು. ಪ್ರಾರಂಭದಲ್ಲಿ ಈ ತಂತ್ರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದರೂ, ಕೇವಲ ಎರಡೇ ವರ್ಷದಲ್ಲಿ ಅವರ ಈ ಕಾರ್ಯತಂತ್ರ ಫಲಿಸಿತ್ತು. ಅವರ ಅಧಿಕಾರಾವಧಿ ಕೊನೆಗೊಂಡ 1995ರ ಹೊತ್ತಿಗೆ ಸಂಪೂರ್ಣವಾಗಿ ಭಯೋತ್ಪಾದನೆಯಿಂದ ಮುಕ್ತಗೊಂಡಿದ್ದ ಪಂಜಾಜ್, ಈಗ ಅತ್ಯಂತ ಸಂಪದ್ಭರಿತ ರಾಜ್ಯಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಸಂಪೂರ್ಣ ಶ್ರೇಯ ಸಲ್ಲಬೇಕಿರುವುದು ದಿ. ಕೆ.ಪಿ.ಎಸ್.ಗಿಲ್ ಅವರಿಗೆ.

ಈ ಯಶಸ್ಸಿನ ನಂತರ ಅವರನ್ನು ‘ಪ್ರತಿ ಭಯೋತ್ಪಾದನೆಯ ಚಾಣಾಕ್ಷ ಎಂದೇ ಪರಿಗಣಿಸಲಾಯಿತು. ಹೀಗಾಗಿಯೇ 1997ರಲ್ಲಿ ಅಸ್ಸಾಂನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಪ್ರಫುಲ್ಲ ಕುಮಾರ್ ಮಹಾಂತ ಅವರು, ಅವರನ್ನು ತಮ್ಮ ಭದ್ರತಾ ಸಲಹೆಗಾರನಾಗುವಂತೆ ಕೋರಿಕೊಂಡಿ ದ್ದರು. ಆದರೆ, 1988ರಲ್ಲಿ ನಡೆದಿತ್ತೆನ್ನಲಾದ ‘ಲೈಂಗಿಕ ಕಿರುಕುಳ’ ಆರೋಪ ದ ಪ್ರಕರಣ ಆಗಿನ್ನೂ ಕೋರ್ಟ್‌ನಲ್ಲಿದ್ದುದರಿಂದ ಗಿಲ್ ಆ ಅವಕಾಶ ದಿಂದ ವಂಚಿತರಾಗಿದ್ದರು. ಅವರು ಆ ಸಂದರ್ಭದಲ್ಲಿ 1988ರಲ್ಲಿ ನಡೆದಿದ್ದ ಪಾರ್ಟಿಯೊಂದರಲ್ಲಿ ತಮ್ಮ ಸಹೋದ್ಯೋಗಿ ಐಎಎಸ್ ಅಧಿಕಾರಿಣಿಯೊಬ್ಬರ ನಿತಂಬವನ್ನು ಚಿವುಟಿದರು ಎಂಬ ಗುರುತರ ಆರೋಪವನ್ನು ಎದುರಿಸಿದ್ದರು. ಈ ಆರೋಪದ ಸಂಬಂಧ ಅವರನ್ನು ಕೋರ್ಟ್ ತಪ್ಪಿತಸ್ಥ ಎಂದೂ ತೀರ್ಪು ನೀಡಿತ್ತು. 2002ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಯವರು ಕೆ.ಪಿ.ಎಸ್.ಗಿಲ್ ಅವರನ್ನು ತಮ್ಮ ಭದ್ರತಾ ಸಲಹೆಗಾರನ ನ್ನಾಗಿ ನೇಮಿಸಿಕೊಂಡಿದ್ದರು. 2006ರಲ್ಲಿ ನಕ್ಸಲ್ ಉಪಟಳವನ್ನು ನಿಗ್ರಹಿಸಲು ಛತ್ತೀಸ್‌ಗಡ ಸರಕಾರ ಅವರನ್ನು ಭದ್ರತಾ ಸಲಹೆಗಾರನನ್ನಾಗಿ ನೇಮಿಸಿ ಕೊಂಡಿತ್ತು. ಆದರೆ, ಈ ಎರಡು ರಾಜ್ಯಗಳಲ್ಲಿ ಅವರು ಪಂಜಾಬ್‌ನಲ್ಲಿ ಸಾಧಿಸಿದಷ್ಟು ಯಶಸ್ಸನ್ನು ಸಾಧಿಸಲಾಗಲಿಲ್ಲ. ಆದರೆ, ಅವರು ಪಂಜಾಬ್‌ನಲ್ಲಿ ಪ್ರಯೋಗಿಸಿದ್ದ ಕಾರ್ಯತಂತ್ರವನ್ನೇ ಬಳಸಿಕೊಂಡು ಶ್ರೀಲಂಕಾ ಸರಕಾರ ಅಲ್ಲಿನ ಎಲ್‌ಟಿಟಿಇಯನ್ನು ಬಗ್ಗುಬಡಿದಿತ್ತು. ಅದಕ್ಕೂ ಮುನ್ನ ಆಗಿನ ಶ್ರೀಲಂಕಾ ವಿದೇಶಾಂಗ ಸಚಿವ ಲಕ್ಷ್ಮಣ್ ಕದ್ರಿಮಗರ್ ಅವರು ಎಲ್‌ಟಿಟಿಇ ಮೂಲೋತ್ಪಾಟನೆಗೆ ಗಿಲ್ ಅವರಿಂದ ಸಲಹೆ ಪಡೆದಿದ್ದರಂತೆ.

ಬಹಳಷ್ಟು ‘ಸೂಪರ್ ಕಾಪ್’ಗಳ ಮೇಲೆ ಮಾನವ ಹಕ್ಕು ಉಲ್ಲಂಘ ನೆಯ ಆರೋಪ ಇದ್ದೇ ಇರುತ್ತದೆ. ಅಂತಹ ಆರೋಪಕ್ಕೆ ಕೆ.ಪಿ.ಎಸ್. ಗಿಲ್ ಕೂಡಾ ಹೊರತಾಗಿರಲಿಲ್ಲ. 1980ರಲ್ಲಿ ಅಸ್ಸಾಂನ ಪೊಲೀಸ್ ಮಹಾ ನಿರ್ದೇಶಕರಾಗಿದ್ದಾಗ ಪ್ರತಿಭಟನಾಕಾರನನ್ನು ಕಾಲಿನಿಂದ ಒದ್ದು ಕೊಲೆ ಮಾಡಿದ ಆರೋಪ ಗಿಲ್ ಬಗ್ಗೆ ಕೇಳಿ ಬಂದಿತ್ತು. ಈ ಪ್ರಕರಣದಿಂದ ಅವ ರನ್ನು ದಿಲ್ಲಿ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಆನಂತರ ಅವರು 1984ರಲ್ಲಿ ತಮ್ಮ ತವರು ರಾಜ್ಯ ಪಂಜಾಬ್‌ಗೆ ಮರಳಿದ್ದರು. ಅವರು 1991ರಲ್ಲಿ ಪೊಲೀಸ್ ಮಹಾನಿರ್ದೇಶಕರಾದಾಗ ಭಯೋತ್ಪಾದಕರ ಕುಟುಂಬದ ಸದಸ್ಯರು ಮತ್ತು ಪೋಷಕರನ್ನು ಒತ್ತೆಯಾಳುಗಳನ್ನಾಗಿರಿಸಿ ಕೊಂಡಾಗಲೂ ಮಾನವ ಹಕ್ಕು ಉಲ್ಲಂಘನೆಯ ಆರೋಪ ದೊಡ್ಡ ವಿವಾದದ ಸ್ವರೂಪ ಪಡೆದಿತ್ತು. ಆದರೆ, ಪಂಜಾಬ್‌ನಿಂದ ಭಯೋತ್ಪಾದನೆ ಯನ್ನು ಬುಡಸಮೇತ ಕಿತ್ತೊಗೆಯಲು ಕಟಿಬದ್ಧರಾಗಿದ್ದ ಕೆ.ಪಿ.ಎಸ್.ಗಿಲ್ ಅವರು ಆ ಆರೋಪಗಳಿಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳಲಿಲ್ಲ; ಮತ್ತು ತಮ್ಮ ಕಾರ್ಯಶೈಲಿಯನ್ನೂ ಬದಲಿಸಿಕೊಳ್ಳಲಿಲ್ಲ. ಅವರ ಈ ದಿಟ್ಟತನ ದಿಂದ ಇಂದಿಗೂ ಪಂಜಾಬ್ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ ಎನ್ನಲು ಅಡ್ಡಿಯಿಲ್ಲ.

ಕೆ.ಪಿ.ಎಸ್.ಗಿಲ್ ಕೇವಲ ಪೊಲೀಸ್ ಅಧಿಕಾರಿಯಾಗಿ ಮಾತ್ರವಲ್ಲದೆ ದಕ್ಷ ಆಡಳಿತಗಾರನಾಗಿಯೂ ಹೆಸರು ಮಾಡಿದರು. ಅವರು ಭಾರತೀಯ ಹಾಕಿ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಅವಧಿ ಅರ್ಥಾತ್ 1995-2000ರ ಆಸುಪಾಸಿನಲ್ಲಿ ಸಂಪೂರ್ಣವಾಗಿ ನೆಲಕಚ್ಚಿ ಹೋಗಿದ್ದ ಭಾರತದ ಹಾಕಿಗೆ ಮರುಜೀವ ನೀಡಿದ ಅವರು, ಭಾರತ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವಂತೆ ಹಾಕಿ ತಂಡವನ್ನು ಸಜ್ಜುಗೊಳಿಸಿದರು. ಆದರೆ, ಈ ಯಶಸ್ಸಿನ ನಿಶೆ ತಲೆಗೇರುತ್ತಿದ್ದಂತೆಯೇ ಸಂಪೂರ್ಣ ಸರ್ವಾಧಿಕಾರಿ ಮನಃಸ್ಥಿತಿಯನ್ನು ರೂಢಿಸಿಕೊಂಡರು. ಈ ನಡುವೆ ಭಾರತೀಯ ಹಾಕಿ ಫೆಡರೇಷನ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ 2008ರಲ್ಲಿ ಭಾರತೀಯ ಒಲಿಂಪಿಕ್ ಒಕ್ಕೂಟ ಅದನ್ನು ಅನಿರ್ದಿಷ್ಟಾವಧಿಯ ಕಾಲಕ್ಕೆ ಅಮಾನತುಗೊಳಿಸಿತು.

ಸರ್ದಾರ್‌ಜೀಗಳ ಸೇವಾತತ್ಪರತೆ, ಕಾಠಿಣ್ಯ, ವಿನೋದ, ರಸಿಕತೆ ಎಲ್ಲವನ್ನೂ ಮೇಳೈಸಿಕೊಂಡಿದ್ದ ಕೆ.ಪಿ. ಎಸ್.ಗಿಲ್ ತಮ್ಮ 82ನೆ ವಯಸ್ಸಿನಲ್ಲಿ ಹೃದಯಾಘಾತ ದಿಂದ ನಮ್ಮನ್ನೆಲ್ಲ ಅಗಲಿದ್ದಾರೆ. 1991ರಲ್ಲೇ ‘ಪ್ರತಿ ಭಯೋತ್ಪಾದನಾ’ ತಂತ್ರವನ್ನು ಯಶಸ್ವಿಯಾಗಿ ಪ್ರಯೋ ಗಿಸಿದ ಈ ‘ಸೂಪರ್ ಕಾಪ್’ನ ಮಾದರಿಯನ್ನು ಇಂದು ನಮ್ಮ ಸೇನೆ, ಬೇಹುಗಾರಿಕಾ ಸಂಸ್ಥೆಗಳಾದ ರಾ ಮತ್ತು ಇಂಟಲಿಜೆನ್ಸ್ ಬ್ಯೂರೊಗಳು ಅಳವಡಿಸಿಕೊಂಡಿವೆ. ಅಂದಹಾಗೆ, ಇಂದಿರಾ ಗಾಂಧಿ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ವಿವಾದಾತ್ಮಕ ಹಾಗೂ ಅವರ ಹತ್ಯೆಗೆಮೂಲಕಾರಣವಾದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಯ ಮಾದರಿಯಲ್ಲೇ 1998ರಲ್ಲಿ ಸ್ವರ್ಣಮಂದಿರದಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಹೊರಹಾಕಲು ‘ಆಪರೇಷನ್ ಬ್ಲ್ಯಾಕ್ ಥಂಡರ್’ ಕಾರ್ಯಾಚರಣೆಯ ನೇತೃತ್ವವನ್ನು ಗಿಲ್ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸ್ವರ್ಣ ಮಂದಿರಕ್ಕೆ ಕೇವಲ ಕೊಂಚ ಮಟ್ಟದ ಹಾನಿ ಮಾತ್ರ ಆಗಿತ್ತು. ಅಷ್ಟರ ಮಟ್ಟಿಗೆ ಅವರ ಕಾರ್ಯತಂತ್ರಗಳು ಕರಾರುವಾಕ್ಕಾಗಿ ಇರುತ್ತಿದ್ದವು. ‘ಖಲಿಸ್ತಾನ ಚಳವಳಿಯನ್ನು ಹತ್ತಿಕ್ಕಿ’, ‘ಆಪ ರೇಷನ್ ಬ್ಲ್ಯಾಕ್ ಥಂಡರ್’ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕಾರಣಕ್ಕೆ ಗಿಲ್ ಅವರಿಗೆ ಪ್ರಾಣ ಬೆದರಿಕೆ ಇತ್ತು. 1999ರಲ್ಲಿ ದಿಲ್ಲಿ ಪೊಲೀಸರು ಗಿಲ್ ಹತ್ಯೆ ಪ್ರಯತ್ನ ಸಂಬಂಧ ಬಬ್ಬರ್ ಖಾಲ್ಸಾ ಭಯೋ ತ್ಪಾದಕ ರಿಚ್‌ಪಾಲ್ ಸಿಂಗ್ ಎಂಬಾತನನ್ನು ಬಂಧಿಸಿದ್ದರೂ ಕೂಡಾ.

ಭಯೋತ್ಪಾದಕರ ಪಾಲಿಗೆ ಸಿಂಹಸ್ವಪ್ನರಾಗಿದ್ದ, ಮಾನವ ಹಕ್ಕು ಹೋರಾಟಗಾರರ ಕಣ್ಣಿನಲ್ಲಿ ಖಳನಾಗಿದ್ದ, ಆದರೆ, ತಮ್ಮ ಅಪ್ರತಿಮ ಕಾರ್ಯದಕ್ಷತೆ ಹಾಗೂ ದೇಶಪ್ರೇಮದಿಂದಲೇ ಅನೇಕರ ಪಾಲಿನ ಐಕಾನ್ ಆಗಿದ್ದ ಕೆ.ಪಿ.ಎಸ್. ಗಿಲ್ ಎಂದೂ ತಿರುಗಿ ಬಾರದ ಲೋಕಕ್ಕೆ ಮರಳಿದ್ದಾರೆ. ಆದರೆ, ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಹೇಗಿರಬೇಕು ಎಂಬ ಮಾದರಿಯನ್ನು ನಮ್ಮಾಂದಿಗೆ ಬಿಟ್ಟು ಹೋಗಿದ್ದಾರೆ. ಅವರಲ್ಲಿನ ಧನಾತ್ಮಕ ಅಂಶಗಳನ್ನು ನಮ್ಮ ಪೊಲೀಸ್ ವ್ಯವಸ್ಥೆ ಅಳವಡಿಸಿಕೊಂಡರೂ ಸಾಕು; ಭಾರತದಲ್ಲಿನ ಅಪರಾಧ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ. ಹೃದಯಪೂರ್ವಕ ವಿದಾಯಗಳು ನಿಮಗೆ ‘ಗಿಲ್’ ಮಾಸ್ಟರ್...!!

share
ವಾರ್ತಾಭಾರತಿ
ವಾರ್ತಾಭಾರತಿ
Next Story
X