Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಮೋದಿ ಸರಕಾರದ ಮೂರು ವರ್ಷಗಳು : ಒಂದು...

ಮೋದಿ ಸರಕಾರದ ಮೂರು ವರ್ಷಗಳು : ಒಂದು ಅವಲೋಕನ

ಸುರೇಶ್ ಭಟ್, ಬಾಕ್ರಬೈಲ್ಸುರೇಶ್ ಭಟ್, ಬಾಕ್ರಬೈಲ್29 May 2017 11:58 PM IST
share
ಮೋದಿ ಸರಕಾರದ ಮೂರು ವರ್ಷಗಳು : ಒಂದು ಅವಲೋಕನ

ಭಾಗ-2

ಮೋದಿ ಸರಕಾರ ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಕರೆಸಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡೆಸಿದ್ದೇನು, ಮೋದಿ ವಿದೇಶಗಳಿಗೆ ಭೇಟಿ ನೀಡಿದ್ದೇನು, ‘ಮೇಕ್ ಇನ್ ಇಂಡಿಯ’, ‘ಸ್ಕಿಲಿಂಗ್ ಇಂಡಿಯ’, ‘ಸ್ಟ್ಯಾಂಡ್ ಅಪ್ ಇಂಡಿಯ’ ಎಂಬ ನಾನಾ ಬಣ್ಣಬಣ್ಣದ ಘೋಷಣೆಗಳೇನು? ಆದರೆ ಇವೆಲ್ಲದರ ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ ನಿರುದ್ಯೋಗ ಕಡಿಮೆಯಾಗುವ ಬದಲು ವಿಪರೀತ ಹೆಚ್ಚಾಗಿದೆ ಎಂದರೆ ಅದರ ಅರ್ಥ ಒಂದೇ. ಸಾಕಷ್ಟು ಪ್ರಮಾಣದಲ್ಲಿ ಹೂಡಿಕೆ ಆಗಿಲ್ಲ!

ಶಿಕ್ಷಣ ಮತ್ತು ಆರೋಗ್ಯ

ಕಳೆದ 3 ವರ್ಷಗಳಲ್ಲಿ ಶಿಕ್ಷಣಕ್ಷೇತ್ರದಲ್ಲಿ ಆಗಿರುವ ಸಾಧನೆ ಹೆಚ್ಚು ಕಡಿಮೆ ಶೂನ್ಯ. 2014ರ ನಂತರದ ಜಿಡಿಪಿ ಅಂಕಿಅಂಶಗಳು ಹೇಳುವಂತೆ ಸರಕಾರ ಶಿಕ್ಷಣಕ್ಕಾಗಿ ಮಾಡುವ ವೆಚ್ಚದಲ್ಲಿ ಇಳಿಕೆಯಾಗಿದೆ! 2016ರಲ್ಲಿ ಬಜೆಟ್ ಅಂದಾಜಿನಲ್ಲಿ ಕನಿಷ್ಠ ಪ್ರಮಾಣದ ಏರಿಕೆ ಮಾಡಲಾಗಿದೆಯಾದರೂ ಅದರಿಂದ ಯಾವುದೇ ಗಮನಾರ್ಹ ಬದಲಾವಣೆ ಆಗಿಲ್ಲ. ಅಣಬೆಗಳಂತೆ ತಲೆಎತ್ತುತ್ತಿರುವ ಖಾಸಗಿ ವಿಶ್ವವಿದ್ಯಾನಿಲಯಗಳಿಂದಾಗಿ ಶಿಕ್ಷಣ ಕೇವಲ ಉಳ್ಳವರ ಕೈಗೆಟಕುವಂತಾಗಿದೆ. ಇಂದು ಖಾಸಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಶೇ. 33ರಷ್ಟಿದೆ.

ದೇಶದ ಪ್ರಮುಖ ಶಿಕ್ಷಣ ತಜ್ಞರು ಮೋದಿ ಸರಕಾರದ ನೂತನ ಶಿಕ್ಷಣ ನೀತಿಯನ್ನು ಟೀಕಿಸಿದ್ದಾರೆ. ಶಿಕ್ಷಣಕ್ಷೇತ್ರದ ಸುಧಾರಣೆ ಕುರಿತು ನೀತಿನಿಯಮಗಳನ್ನು ನಿರೂಪಿಸುವ ಸಂದರ್ಭದಲ್ಲಿ ಮಕ್ಕಳ ಸಮಾಜೋಆರ್ಥಿಕ ಹಿನ್ನೆಲೆ ಮತ್ತು ಅವರ ಅಗತ್ಯಗಳನ್ನು ಪರಿಗಣಿಸುವುದು ಅತ್ಯಗತ್ಯ. ಇದನ್ನು ಮಾಡದೆ ಎಲ್ಲರಿಗೂ ಅನ್ವಯಿಸುವಂತಹ ಏಕರೂಪಿ ನೀತಿ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಬಡ ವಿದ್ಯಾರ್ಥಿಗಳ ಕಷ್ಟಕಾರ್ಪಣ್ಯಗಳು ಅಧಿಕಗೊಳ್ಳಲಿವೆ. ಮೋದಿ ಸರಕಾರದ ಅವಧಿಯಲ್ಲಿ ಕೇಂದ್ರೀಯ ನವೋದಯ ಮತ್ತು ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು, ಬಿಸಿಯೂಟ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿರುವುದು, ಶಿಕ್ಷಣ ಹಕ್ಕಿಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರಲಾಗಿರುವುದು ಮುಂತಾದುವೆಲ್ಲ ಹಿಂದಿನ ಯುಪಿಎ ಸರಕಾರದ ನೀತಿಗಳ ಮುಂದುವರಿಕೆಯೇ ಹೊರತು ಬೇರೇನೂ ಅಲ್ಲ. ಸರಕಾರಿ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸಲೆನ್ನಲಾದ ‘ಪಂಡಿತ ಮದನ್ ಮೋಹನ್ ಮಾಳವೀಯ ರಾಷ್ಟ್ರೀಯ ಶಿಕ್ಷಕ ಮತ್ತು ಶಿಕ್ಷಣ ಯೋಜನೆ’ ಮುಂತಾದ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಕೋಟಿಗಟ್ಟಲೆ ಅನುದಾನ ಘೋಷಿಸಲಾಗಿದೆಯಾದರೂ ಅಭಿವೃದ್ಧಿ ಮಾತ್ರ ಶೂನ್ಯ. ಪಠ್ಯಪುಸ್ತಕಗಳಲ್ಲಿ ವಿವಾದಾತ್ಮಕ ವಿಚಾರಗಳ ತುರುಕುವಿಕೆ, ಇತಿಹಾಸದ ತಿರುಚುವಿಕೆ ಮುಂತಾದುವುಗಳ ಬಗ್ಗೆ ಏನೂ ಮಾಡಲಾಗಿಲ್ಲ. ಮೂರು ವರ್ಷಗಳಲ್ಲಿ ಮಾನವ ಸಂಪನ್ಮೂಲ ಸಚಿವರು ಮಾಡಿರುವ ಕೆಲಸವೆಂದರೆ ಶಿಕ್ಷಣ ವ್ಯವಸ್ಥೆಯನ್ನು ಮೋದಿಯ ಸ್ವಚ್ಛ ಭಾರತ ಮತ್ತು ಡಿಜಿಟಲ್ ಪಾವತಿ ಯೋಜನೆಗಳ ಪ್ರಚಾರಕ್ಕಾಗಿ ಬಳಸಿರುವುದು. ಆರೋಗ್ಯಕ್ಷೇತ್ರದಲ್ಲೂ ಖಾಸಗಿಯವರ ಹಾವಳಿಯನ್ನು ತಡೆಗಟ್ಟಲು ಯಾವುದೇ ಪ್ರಯತ್ನ ಮಾಡಲಾಗಿಲ್ಲ. ಪರಿಣಾಮವಾಗಿ ಬಡವರು, ಮಧ್ಯಮವರ್ಗಗಳು ಇನ್ನಷ್ಟು ಕಷ್ಟಕ್ಕೀಡಾಗಿದ್ದಾರೆ.

ನಿರುದ್ಯೋಗ ನಿವಾರಣೆ 

ಮೋದಿ ಸರಕಾರ ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಕರೆಸಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡೆಸಿದ್ದೇನು, ಮೋದಿ ವಿದೇಶಗಳಿಗೆ ಭೇಟಿ ನೀಡಿದ್ದೇನು, ‘ಮೇಕ್ ಇನ್ ಇಂಡಿಯ’, ‘ಸ್ಕಿಲಿಂಗ್ ಇಂಡಿಯ’, ‘ಸ್ಟ್ಯಾಂಡ್ ಅಪ್ ಇಂಡಿಯ’ ಎಂಬ ನಾನಾ ಬಣ್ಣಬಣ್ಣದ ಘೋಷಣೆಗಳೇನು? ಆದರೆ ಇವೆಲ್ಲದರ ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ ನಿರುದ್ಯೋಗ ಕಡಿಮೆಯಾಗುವ ಬದಲು ವಿಪರೀತ ಹೆಚ್ಚಾಗಿದೆ ಎಂದರೆ ಅದರ ಅರ್ಥ ಒಂದೇ. ಸಾಕಷ್ಟು ಪ್ರಮಾಣದಲ್ಲಿ ಹೂಡಿಕೆ ಆಗಿಲ್ಲ!

ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಎನ್ನಲಾದ ಮೇಕ್ ಇನ್ ಇಂಡಿಯ, ಸ್ಕಿಲಿಂಗ್ ಇಂಡಿಯ, ಸ್ಟ್ಯಾಂಡ್ ಅಪ್ ಇಂಡಿಯ ಯೋಜನೆಗಳಿಂದ ವಿಶೇಷ ಬದಲಾವಣೆಯೇನೂ ಆಗಿಲ್ಲ. ಸ್ಕಿಲಿಂಗ್ ಇಂಡಿಯ ಯೋಜನೆಯಡಿ 2015-16ರಲ್ಲಿ ಆಗಿರುವ ಗುರಿಸಾಧನೆ ಕೇವಲ ಶೇ. 58. ಕೌಶಲ್ಯ ಪಡೆದವರ ಪೈಕಿ ಉದ್ಯೋಗ ದೊರೆತಿರುವವರ ಸಂಖ್ಯೆ ಶೇ. 12ಕ್ಕಿಂತಲೂ ಕಡಿಮೆ ಇದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (Organisation of Economic Co-operation and Development, OECD) ಪ್ರಕಾರ ಭಾರತದಲ್ಲಿ ಇಂದು 15ರಿಂದ 29ರ ಹರೆಯದ ಶೇ. 30ಕ್ಕೂ ಅಧಿಕ ಯುವಜನತೆ ಉದ್ಯೋಗ, ಶಿಕ್ಷಣ ಅಥವಾ ತರಬೇತಿ ಕ್ಷೇತ್ರಗಳಲ್ಲಿ ಇಲ್ಲ (ಚೀನಾದಲ್ಲಿ ಕೇವಲ 11.2%).

ಇಂದು ಉತ್ಪಾದನೆ, ನಿರ್ಮಾಣ, ವಾಣಿಜ್ಯ, ಸಾರಿಗೆ, ಹೊಟೇಲ್, ಐಟಿ/ಬಿಪಿಒ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಒಟ್ಟು ಸುಮಾರು 2 ಕೋಟಿ ಮಂದಿ ದುಡಿಯುತ್ತಿದ್ದಾರೆ. ಇಲ್ಲಿ 2011-12 ಮತ್ತು 2012-13ರ ಸಾಲಿನಲ್ಲಿ 7,40,000 ಉದ್ಯೋಗಗಳು ಸೃಷ್ಟಿಯಾಗಿದ್ದರೆ 2014-15 ಮತ್ತು 2015-16ರಲ್ಲಿ ಕೇವಲ 2,70,000 ಉದ್ಯೋಗಗಳು ಸೃಷ್ಟಿಯಾಗಿವೆ (ಶೇ. 64ರಷ್ಟು ಇಳಿಕೆ). 2016-17ರಲ್ಲಿ 2.3 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನಲಾಗಿದೆ. ಆದರೆ ಇದರ ಹಿಂದೆ ಏನೋ ಒಂದು ಆಟ ನಡೆದಿರುವಂತಿದೆ. 2015ರಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಬರೀ ಶೇ. 1.5 ಪ್ರಗತಿಯಾಗಿ ಕೇವಲ 1.5 ಲಕ್ಷ ಉದ್ಯೋಗಗಳಷ್ಟೆ ಸೃಷ್ಟಿಯಾದಾಗ ಮೋದಿ ಸರಕಾರ ಒಂದು ಉಪಾಯ ಮಾಡಿತು. ಶಿಕ್ಷಣ, ಆರೋಗ್ಯ ಮತ್ತು ಹೊಟೇಲ್‌ಗಳಂತಹ ಪ್ರಮುಖ ಸೇವಾ ಕ್ಷೇತ್ರಗಳನ್ನು ಸೇರಿಸುವ ಮೂಲಕ ಸಂಘಟಿತ ಉದ್ದಿಮೆಯ ವ್ಯಾಪ್ತಿಯನ್ನು ವಿಸ್ತರಿಸಿತು. ಈ ರೀತಿಯಾಗಿ ಸೇವಾ ಕ್ಷೇತ್ರದಲ್ಲಿ ಆದ ಬೆಳವಣಿಗೆಯನ್ನು ತನಗನುಕೂಲವಾಗುವಂತೆ ಬಳಸಿಕೊಂಡಿತು. 2016ರಲ್ಲಿ ಹೊಸ ಉದ್ಯೋಗಗಳ ಸಂಖ್ಯೆ 2.3 ಲಕ್ಷಕ್ಕೆ ಏರಿರುವುದರ ಹಿಂದಿನ ಗುಟ್ಟು ಇದೇ ಆಗಿದೆ! ಏಕೆಂದರೆ ಈ ಹೊಸ ಉದ್ಯೋಗಗಳಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿವೆ! ಸುಮಾರು ಒಂದು ಕೋಟಿ ಉದ್ಯೋಗಿಗಳಿರುವ ಉತ್ಪಾದನಾ ಕ್ಷೇತ್ರದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನಲಾಯಿತು. ಆದರೆ ಈ ಹೆಚ್ಚಳ ಆಗಿರುವುದು ಕೊನೆಯ ಮೂರು ತಿಂಗಳುಗಳಲ್ಲಿ, ನೋಟು ರದ್ದತಿಯ ಕಾಲದಲ್ಲಿ ಎಂಬುದನ್ನು ಗಮನಿಸಬೇಕು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದ ಆ ಕಾಲದಲ್ಲಿ ಹೆಚ್ಚಳ ಆಗಿದೆ ಎನ್ನುವುದು ಭಾರೀ ಅನುಮಾನಾಸ್ಪದವಾಗಿದೆ. ಔದ್ಯಮಿಕ ಉತ್ಪಾದನೆಯ ಸೂಚ್ಯಂಕ (Index of Industrial Production, IIP) ಅಂಕಿಅಂಶಗಳು ಹೇಳುವಂತೆ ಜನವರಿ 2015ರಿಂದ ಜನವರಿ 2017ರ ತನಕ ಉತ್ಪಾದನೆಯಲ್ಲಿ ಆಗಿರುವ ಹೆಚ್ಚಳ ಬರೀ ಶೇ. 1. ಇನ್ನು ಭಾರತೀಯ ರಿಸರ್ವ್ ಬ್ಯಾಂಕು ಪ್ರಕಾರ ಬ್ಯಾಂಕುಗಳು ಉದ್ದಿಮೆಗಳಿಗೆ ನೀಡುವ ಸಾಲಗಳಲ್ಲಿ ಕೇವಲ 0.3 ಪ್ರತಿಶತ ಹೆಚ್ಚಳ ಆಗಿದೆ. 2015-16ರಲ್ಲಿ ಒಟ್ಟು ಮೌಲ್ಯವರ್ಧನೆ (gross value added, GVA) ಶೇ. 7.8ರಷ್ಟಿದ್ದರೆ 2016-17ರಲ್ಲಿ ಅದು 6.7ಕ್ಕೆ ಇಳಿದಿದೆ. ಇದರರ್ಥ ಏನೆಂದರೆ ಕಾರ್ಪೊರೇಟುಗಳು ಹೊಸಹೊಸ ಉತ್ಪಾದನಾ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿಲ್ಲ. ವಾಸ್ತವ ಹೀಗಿರುವಾಗ ಉದ್ಯೋಗಗಳಲ್ಲಿ ಹೆಚ್ಚಳ ಆಗುವುದಾದರೂ ಹೇಗೆ? ಎಲ್ಲಿಂದ? ಅಸಲಿಗೆ ಇಂದು ಐಟಿ, ಟೆಲಿಕಾಂ, ಬ್ಯಾಂಕಿಂಗ್ ಹಾಗೂ ಆರ್ಥಿಕ ಸೇವಾ ವಲಯಗಳಲ್ಲಿ ನೌಕರಿ ಕಡಿತ ಪ್ರಾರಂಭವಾಗಿದ್ದು ಮುಂದಿನ 12-18 ತಿಂಗಳುಗಳಲ್ಲಿ ಸುಮಾರು 10 ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಕೊನೆಯದಾಗಿ ಕಳೆದ ಮೂರು ವರ್ಷಗಳಲ್ಲಿ ಮೋದಿ ಸರಕಾರದ ಸಾಧನೆಯನ್ನು ಸಂಕ್ಷಿಪ್ತವಾಗಿ ಒಂದೇ ಶಬ್ದದಲ್ಲಿ ಹೇಳಬಹುದು: ದುರಾಡಳಿತ. (ಆಧಾರ: ವಿವಿಧ ಮೂಲಗಳಿಂದ)

share
ಸುರೇಶ್ ಭಟ್, ಬಾಕ್ರಬೈಲ್
ಸುರೇಶ್ ಭಟ್, ಬಾಕ್ರಬೈಲ್
Next Story
X