Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಸ್ಪಷ್ಟವಾಗಿರುವ ಸ್ವಚ್ಛ ಭಾರತ ಅಭಿಯಾನ

ಅಸ್ಪಷ್ಟವಾಗಿರುವ ಸ್ವಚ್ಛ ಭಾರತ ಅಭಿಯಾನ

ಸ್ವಗತ ಯಾದವರ್ಸ್ವಗತ ಯಾದವರ್4 Jun 2017 11:55 PM IST
share
ಅಸ್ಪಷ್ಟವಾಗಿರುವ  ಸ್ವಚ್ಛ ಭಾರತ  ಅಭಿಯಾನ

ಸ್ವಚ್ಛ ಭಾರತ ಅಭಿಯಾನದಿಂದಾಗಿ ಭಾರತದಲ್ಲಿ ಶೌಚಾಲಯ ನಿರ್ಮಾಣದ ಸರಮಾಲೆಯೇ ಆರಂಭವಾಗಿದೆಯಾದರೂ, ಜನವರಿ 2015 ಮತ್ತು ಡಿಸೆಂಬರ್ 2016ರ ನಡುವೆ ದೇಶಾದ್ಯಂತ ಶೇ.51.6 ಮನೆಗಳು ಒಂದು ಸುಧಾರಿತ ಶೌಚ ವ್ಯವಸ್ಥೆಯನ್ನು ಬಳಸಲಿಲ್ಲ.

2014ರ ತನ್ನ ಮೊದಲ ಸ್ವಾತಂತ್ರೋತ್ಸವ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು. ‘‘ಸಹೋದರ ಸಹೋದರಿಯರೇ, ನಾವು 21ನೆ ಶತಮಾನ ದಲ್ಲಿ ಬದುಕುತ್ತಿದ್ದೇವೆ. ಮಹಿಳೆಯರ ಗೌರವ ನಮ್ಮ ಸಾಮೂಹಿಕ ಜವಾಬ್ದಾರಿ ಯಲ್ಲವೇ? ನಮ್ಮ ತಾಯಂದಿರ ಹಾಗೂ ಸಹೋದರಿಯರ ಗೌರವಕ್ಕಾಗಿ ನಾವು ಶೌಚಾಲಯಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ?

ಕುಡಿಯುವ ನೀರು ಮತ್ತು ಶೌಚಾಲಯ ಸಚಿವಾಲಯದ ಅಂಕಿಸಂಖ್ಯೆಗಳ ಪ್ರಕಾರ. 2017ರಲ್ಲಿ, ಗೃಹ ಶೌಚಾಲಯ ಲಭ್ಯತೆಯು 2014ರಲ್ಲಿ ಇದ್ದ ಶೇ. 41.93 ರಿಂದ ಶೇ.63.98ಕ್ಕೆ ಏರಿದೆ. ಮತ್ತು ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಕೇರಳ ರಾಜ್ಯಗಳು ಶೇ.100 ಬಯಲು ಶೌಚ ಮುಕ್ತ (ಒಡಿಎಫ್- ಓಪನ್ ಡಿಫಕೇಶನ್ ಫ್ರೀ) ಸ್ಥಾನವನ್ನು ಪಡೆದಿವೆ. ಆದರೆ ಸಚಿವಾಲಯವು ವರದಿ ಮಾಡಿರುವ ಅಭಿವೃದ್ಧಿ ಯನ್ನು ಯಾವುದೇ ತೃತೀಯ-ಪಕ್ಷ ಪರಿಶೀಲಿಸಿ ದೃಢೀಕರಿಸಿಲ್ಲ.

ಬಿಜೆಪಿ ಸರಕಾರ ಅಧಿಕಾರದಲ್ಲಿ ಮೂರು ವರ್ಷಗಳನ್ನು ಪೂರೈಸಿರುವ ವೇಳೆ ‘ಇಂಡಿಯಾ ಸ್ಪೆಂಡ್’ ಅದರ ಮುಖ್ಯ ಐದು ಚುನಾವಣಾ ಆಶ್ವಾಸನೆಗಳನ್ನು ವಿಶ್ಲೇಪಿ ಸುತ್ತಿದೆ. ಉದ್ಯೋಗ, ಸ್ವಚ್ಛ ಭಾರತ, ರಸ್ತೆಗಳು, ವಿದ್ಯುತ್ ಪೂರೈಕೆ ಮತ್ತು ಭಯೋತ್ಪಾ ದನೆ. ಈ ಐದರಲ್ಲಿ ಸ್ವಚ್ಛ ಭಾರತ ಅಭಿಯಾನದ ಪರಿಸ್ಥಿತಿ ಏನಾಗಿದೆ ನೋಡೋಣ.

ಸ್ವತಂತ್ರ ಪರಿಶೀಲನೆ ಇಲ್ಲ

ಗ್ರಾಮೀಣ- ಸ್ವಚ್ಛ ಭಾರತ ಅಭಿಯಾನವು ದೇಶಾದ್ಯಂತ ಪ್ರತಿವರ್ಷ ಗ್ರಾಮೀಣ ಪ್ರದೇಶಗಳ ‘ಶೌಚ ಸ್ಥಾನಮಾನದ ಸ್ವತಂತ್ರ ತೃತೀಯ- ಪಕ್ಷ ಪರಿಶೋಧನೆಯಾ ಗಬೇಕೆಂದು ಹೇಳುತ್ತದಾದರೂ ಇಷ್ಟರವರೆಗೆ ಅಂತಹ ಪರಿಶೋಧನೆ ನಡೆದಿಲ್ಲ.

ಜನವರಿ 2017ರಲ್ಲಿ ‘ದಿ ಇಕನಾಮಿಕ್ ಟೈಮ್’ ಪ್ರಕಟಿಸಿದ ವರದಿ ಹೇಳು ವಂತೆ, ವಿಶ್ವಬ್ಯಾಂಕ್ 2016ರ ಜುಲೈಯಲ್ಲಿ ತನ್ನ ಆಶ್ವಾಸನೆಯ ಪ್ರಕಾರ ಈ ಅಭಿ ಯಾನಕ್ಕೆ ಬಿಡುಗಡೆ ಮಾಡಬೇಕಾಗಿದ್ದ 1.5 ಬಿಲಿಯ ಡಾಲರ್ ಸಾಲವನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ ಕಾರಣ: ಭಾರತ ಸರಕಾರವೂ ತಾನು ಆಶ್ವಾಸನೆ ನೀಡಿದ್ದಂತೆ ಈ ಅಭಿಯಾನದ ಸ್ವತಂತ್ರ ಪರಿಶೋಧನೆ ನಡೆಸಿ, ಅದರ ಫಲಿತಾಂಶಗಳನ್ನು ಇನ್ನೂ ಪ್ರಕಟಿಸಿಲ್ಲ. ವಿಶ್ವಬ್ಯಾಂಕ್ ಭಾರತದ ಸ್ವಚ್ಛತಾ ಅಭಿಯಾನದ ಒಟ್ಟಾರೆ ಅನುಷ್ಠಾನ ವನ್ನು ‘‘ಸುಮಾರಾಗಿ ಅತೃಪ್ತಿಕರ’’ ವೆಂದು ಹೇಳಿದೆ.

ನಿರ್ಮಾಣದ ಭರಾಟೆ:

2014ರಿಂದ 40 ಮಿಲಿಯ ಗೃಹೋಪಯೋಗಿ ಶೌಚಾಲಯಗಳನ್ನು ಕಟ್ಟಲಾಗಿದೆ. 2017ರ ಮೇ 1ಮತ್ತು ಮೇ 21ರ ನಡುವೆ ದೇಶದಲ್ಲಿ 4,89,710 ಪ್ರತ್ಯೇಕ ಗೃಹೋಪಯೋಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಂದರೆ, ದಿನ ಒಂದರ 25,000 ಸರಾಸರಿ ಶೌಚಾಲಯಗಳನ್ನು ಕಟ್ಟಿದಂತಾಯಿತು.

ದೇಶದ 1,93, 081 ಹಳ್ಳಿಗಳನ್ನು ಶೌಚ ಮುಕ್ತವೆಂದು ಗ್ರಾಮ ಪಂಚಾಯತ್‌ಗಳು ತಾವಾಗಿಯೇ ಘೋಷಿಸಿಕೊಂಡಿವೆ. ಆದರೆ ಇವುಗಳಲ್ಲಿ ಶೇ.53.9 ಹಳ್ಳಿಗಳು ನಿಜವಾಗಿಯೂ ಶೌಚಮುಕ್ತವಾಗಿವೆಯೇ? ಎಂದು ಪರಿಶೋಧಿಸಲಾಗಿಲ್ಲ. ಹಳ್ಳಿಗಳನ್ನು ‘ಶೌಚಮುಕ್ತ’ ವೆಂದು ಘೋಷಿಸಬೇಕಾದರೆ ಆ ಹಳ್ಳಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೂ ಮಲ ಕಾಣಿಸಬಾರದು ಮತ್ತು ಭೂಮಿಯ ಮೇಲ್ಮೈಮಣ್ಣು ಅಂತರ್ಜಲ ಅಥವಾ ಮೇಲ್ಮೈಜಲ ಮಲಿನಗೊಳ್ಳದಂತೆ ಮಲವನ್ನು ವಿಲೇವಾರಿ ಮಾಡುವ ಸುರಕ್ಷಿತ ತಂತ್ರಜ್ಞಾನವನ್ನು ಪ್ರತಿಯೊಂದು ಮನೆ ಮತ್ತು ಸಾರ್ವಜನಿಕ/ ಸಾಮುದಾಯಿಕ ಸಂಸ್ಥೆ ಬಳಸಿರಬೇಕು. ಹಾಗೆಯೇ ನೊಣಗಳಿಗೆ ಅಥವಾ ಪ್ರಾಣಿಗಳಿಗೆ ಮಲ ಸಿಗುವಂತಿರಬಾರದು, ಆಗತಾನೇ ವಿಸರ್ಜಿತ ಮಲವನ್ನು ಮನುಷ್ಯ ನಿಭಾಯಿಸುವಂತಿರಬಾರದು ಮತ್ತು ಯಾವುದೇ ದುರ್ವಾಸನೆ ಮತ್ತು ಕಣ್ಣಿಗೆ ಹಿತವೆನ್ನಿಸದ ಪರಿಸ್ಥಿತಿ ಇರಬಾರದು.

ಸಾಮಾನ್ಯವಾಗಿ ‘ಶೌಚಮುಕ್ತ’ ಹಳ್ಳಿ ಎಂದು ಹಳ್ಳಿ ಅಥವಾ ಗ್ರಾಮ ಪಂಚಾ ಯತ್ ಘೋಷಿಸುತ್ತದೆ. ಮೂರು ತಿಂಗಳೊಳಗಾಗಿ ಸರಕಾರ ಇದರ ಪ್ರಥಮ ಪರಿಶೀಲನೆ ನಡೆಸಬೇಕು. ಘೋಷಣೆಯಾಗಿ ಸುಮಾರು ಆರು ತಿಂಗಳಾಗುವಾಗ ದ್ವಿತೀಯ ಪರಿಶೀಲನೆ ನಡೆಸಬೇಕು.

ಶೌಚಾಲಯದ ನಿರ್ಮಾಣ ಶೌಚಾಲಯದ ಬಳಕೆಗೆ ಸಮಾನವಲ್ಲ

 ಜನವರಿ 2015 ಮತ್ತು ಡಿಸೆಂಬರ್ 2016ರ ನಡುವೆ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 4ರ ಪ್ರಕಾರ 2016ರಲ್ಲಿ ಗ್ರಾಮೀಣ ಪ್ರದೇಶದ ಶೇ.36.7 ಮನೆಗಳು ಮತ್ತು ಶೇ.70.3 ನಗರ ಪ್ರದೇಶದ ಮನೆಗಳು ಸುಧಾರಿತ ನೈರ್ಮಲ್ಯ ಸೌಕರ್ಯವನ್ನು ಬಳಸಿದವು. ದೇಶದ ಒಟ್ಟು ಮನೆಗಳಲ್ಲಿ ಶೇ.48.4 ಮಾತ್ರ ಈ ಸೌಕರ್ಯವನ್ನು ಬಳಸಿದ್ದವು. ಅಂದರೆ ಬಹುಸಂಖ್ಯಾತರು, (ಶೇ.51.6) ಇದನ್ನು ಬಳಸಲಿಲ್ಲ. 2014ರಲ್ಲಿ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ ತೆರೆದ ಬಯಲಲ್ಲಿ ಮಲ ವಿಸರ್ಜನೆ ಮಾಡುವವರಲ್ಲಿ ಶೇ.47 ಮಂದಿ ತಾವು ಹೀಗೆ ಮಾಡಲು ಕಾರಣ ವೇನೆಂದರೆ, ಹೀಗೆ ತೆರೆದ ಬಯಲಲ್ಲಿ ಮಲವಿಸರ್ಜನೆ ಮಾಡುವುದು ಅನುಕೂಲ ಕರ, ಆರಾಮದಾಯಕ ಮತ್ತು ಖುಷಿಯ ವಿಷಯ ಎಂದರು. ಶೌಚಾಲಯ ನಿರ್ಮಿಸಿದ್ದ ಮನೆಗಳಲ್ಲಿ ಕೂಡ ಶೇ.40 ಮನೆಗಳಲ್ಲಿ ಕನಿಷ್ಠ ಓರ್ವ ತೆರೆದ ಬಯಲಲ್ಲೇಮಲವಿಸರ್ಜಿಸುತ್ತಿದ್ದ ಎಂಬುದು ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ಕಂಪ್ಯಾಷನೇಟ್ ಇಕನಾಮಿಕ್ಸ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಅಧ್ಯಯನದ ಪ್ರಕಾರ ಅಸ್ಪಶ್ಯತೆ ಮತ್ತು ಪರಿಶುದ್ಧ್ದತೆಯ ಕುರಿತಾದ ನಂಬಿಕೆಗೂ ಬಹಿರಂಗ ಮಲವಿಸರ್ಜನೆಗೂ ಸಂಬಂಧವಿದೆ.

ಶೌಚ ಹೊಂಡಗಳಿರುವ ಶೌಚಾಲಯಗಳನ್ನು ಬಳಸುವುದನ್ನು ಜನರು ಅಪರಿಶುದ್ಧ ಮತ್ತು ಮಾಲಿನ್ಯಕಾರವೆಂದು ಪರಿಗಣಿಸುತ್ತಾರೆ.

ಮಾಹಿತಿ, ಶಿಕ್ಷಣ ಮತ್ತು ಸಂವಹನದ ಅವಗಣನೆ ವರ್ತನೆಯ, ಮನೋಧರ್ಮದ ಬದಲಾವಣೆ ಗ್ರಾಮೀಣ ಸ್ವಚ್ಛಭಾರತ ಅಭಿಯಾನದ ಕೇಂದ್ರಬಿಂದುವಾಗಿರುವುದರಿಂದ ಈ ಅಭಿಯಾನಕ್ಕೆ ವ್ಯಯಿಸುವ ಮೊತ್ತದ ಶೇ.8ರಷ್ಟನ್ನು ಅಭಿಯಾನದ ಕುರಿತಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಬಂಧಿ ಚಟುವಟಿಕೆಗಳಿಗೆ ಬಳಸಬೇಕೆಂದು ಯೋಜನೆಯ ಮಾರ್ಗದರ್ಶಿ ಸೂತ್ರಗಳು ಹೇಳುತ್ತವೆ. ಆದರೆ ಜನವರಿ 2017ರ ವರೆಗೆ ಈ ಬಾಬ್ತು ವ್ಯಯಿಸಲಾದ ಮೊತ್ತವು ಯೋಜನೆಗೆ ವ್ಯಯಿಸಲಾದ ಒಟ್ಟು ಮೊತ್ತದ ಶೇ.1ರಷ್ಟು ಮಾತ್ರ. ಇದಕ್ಕೆ ವ್ಯತಿರಿಕ್ತವಾಗಿ ಮೊತ್ತದ ಶೇ.98 ಹಣವನ್ನು ಪ್ರತ್ಯೇಕ/ ವೈಯಕ್ತಿಕ ಮನೆಗಳ ಶೌಚಾಲಯ ನಿರ್ಮಾಣಕ್ಕೆ ವ್ಯಯಿಸಲಾಯಿತು.

ಫಲಾನುಭವಿಗಳ ನಂಬಲರ್ಹವಲ್ಲದ ಅಂಕಿ ಸಂಖ್ಯೆಗಳು ಡಿಸೆಂಬರ್ 2015ರಲ್ಲಿ ‘ಅಕೌಂಟೆಬಿಲಿಟಿ ಇನಿಷಿಯೇಟಿವ್ ಆಫ್ ದಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್’ ಹತ್ತು ಜಿಲ್ಲೆಗಳ 7,500 ಮನೆಗಳ ಫಲಾನುಭವಿಗಳ ಅಧ್ಯಯನ ನಡೆಸಿದಾಗ ಅದಕ್ಕೆ ಇದಿರಾದ ಸಮಸ್ಯೆ ಎಂದರೆ ಖೋಟಾ/ ಡ್ಯುಪ್ಲಿಕೇಟ್ ಎಂಟ್ರಿಗಳು, ಅಸ್ತಿತ್ವದಲ್ಲೇ ಇಲ್ಲದ ಫಲಾನುಭವಿಗಳು, ಮತ್ತು ದಾಖಲೆ ಪಟ್ಟಿಯಲ್ಲಿ ಇಲ್ಲದ ಮನೆಗಳು. ಸರಕಾರಿ ದಾಖಲೆಗಳು ‘‘ನೈರ್ಮಲ್ಯ ಸ್ಥಾನಮಾನ’’ (ಸ್ಟೇಟಸ್) ಹೊಂದಿರುವುದಾಗಿ ಹೇಳುವ ಮನೆಗಳಲ್ಲಿ ಮೂರನೆ ಒಂದು ಪಾಲು ಮನೆಗಳಲ್ಲಿ ಮಾತ್ರ ಶೌಚಾಲಯಗಳಿದ್ದವು ಮತ್ತು ಶೌಚಾಲಯಗಳನ್ನು ನಿರ್ಮಿಸಿದ ಶೇ.36 ಮನೆ ಗಳ ಮಂದಿ ಅವು ಬಳಸಲು ಅರ್ಹವಲ್ಲ ಎಂದರು. ಇದು ಪಟ್ಟಿಯಲ್ಲಿದ್ದ ಮನೆಗಳಲ್ಲಿ 1,500 ಮನೆಗಳನ್ನು ಗುರುತಿಸಿದಾಗ ಸಮೀಕ್ಷಕರಿಗೆ ತಿಳಿದುಬಂದ ವಿಷಯ.

ಶೌಚಾಲಯಗಳಿದ್ದ ಮತ್ತು ಕುಟುಂಬದ ಕನಿಷ್ಠ ಓರ್ವ ಸದಸ್ಯ ತೆರೆದಬಯಲಲ್ಲಿ ಮಲ ವಿಸರ್ಜಿಸುತ್ತಿದ್ದ ಮನೆಗಳಲ್ಲಿ ಅವರು ನೀರಿನ ಕೊರತೆ ಮತ್ತು ಶೌಚ ಹೊಂಡ ತೀರ ಚಿಕ್ಕದಾಗಿರುವುದೇ ಇದಕ್ಕೆ ಮುಖ್ಯ ಕಾರಣಗಳೆಂದರು.

ಶೌಚಾಲಯ ನಿರ್ಮಾಣಕ್ಕಾಗಿ ಸರಕಾರದ ಸಹಾಯ ಧನಕ್ಕಾಗಿ ಅರ್ಜಿಸಲ್ಲಿಸಿ ದವರಲ್ಲಿ ಶೇ.40 ಮಂದಿ ತಮಗೆ ಆ ಸಹಾಯಧನ ಸಿಕ್ಕಿಯೇ ಇಲ್ಲ ಎಂದರು.

ಸ್ವಚ್ಛ ಭಾರತ ನಗರ ಅಭಿಯಾನದ ನಿಧಾನಗತಿ 

ಸ್ವಚ್ಛ ಭಾರತ ನಗರ ಅಭಿಯಾನದ ವೆಬ್ ಸೈಟ್ ಪ್ರಕಾರ ನಗರ ಪ್ರದೇಶಗಳಲ್ಲಿ 2017-18ರಲ್ಲಿ ನಿರ್ಮಾಣದ ಗುರಿಯಾಗಿದ್ದ 3.5 ಮಿಲಿಯ ಶೌಚಾಲ ಯಗಳಲ್ಲಿ 3.1 ಮಿಲಿಯ (ಶೇ.88) ಗೃಹ ಶೌಚಾಲಯಗಳನ್ನು ನಿರ್ಮಿಸ ಲಾಗಿದೆ. ಹಾಗೆಯೇ ನಿರ್ಮಾಣದ ಗುರಿಯಾಗಿದ್ದ 2,04,000 ಸಮುದಾಯ ಶೌಚಾಲಯಗಳಲ್ಲಿ 1,15,786 (ಶೇ.56) ಶೌಚಾಲಯ ಗಳನ್ನು ನಿರ್ಮಿಸಲಾಗಿದೆ.

ಆದರೂ ಕೂಡ ನಗರ ಪ್ರದೇಶಗಳಲ್ಲಿ ಸಾಮುದಾಯಿಕ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಸರಿಯಾದ ಜಲ-ತ್ಯಾಜ್ಯ, ವಿಲೇವಾರಿ ವ್ಯವಸ್ಥೆ ಯಿರುವುದಾಗಿ ಕೇವಲ ಶೇ.36.8 ವಾರ್ಡ್‌ಗಳು ಮಾತ್ರ ವರದಿ ಮಾಡಿದವು. ಹಾಗಾಗಿ, ಸ್ವಚ್ಛ ಭಾರತ ನಗರ ಅಭಿಯಾನದ ಮುಖ್ಯ ಒತ್ತು ನಿಧಾನವಾಗಿ ಶೌಚಾಲಯ ನಿರ್ಮಾಣದಿಂದ ಘನ ತ್ಯಾಜ್ಯ ನಿರ್ವಹಣೆಯ ಕಡೆಗೆ ತಿರುಗುತ್ತಿದೆ. ಘನತ್ಯಾಜ್ಯ ನಿರ್ವಹಣೆಯಲ್ಲಿ ಮೂಲದಲ್ಲೇ ತ್ಯಾಜ್ಯವನ್ನು ಬೇರ್ಪಡಿಸುವುದು, ತ್ಯಾಜ್ಯದ ಸಂಸ್ಕರಣೆ ವಿಂಗಡಣೆ, ಸಂಗ್ರಹ, ಸಾಗಾಟ ಮತ್ತು ದಾಸ್ತಾನು ಹಾಗೂ ಅಂತಿಮ ವಿಲೇವಾರಿ ಸೇರಿದೆ.

2015-16ರಲ್ಲಿ ಸರಕಾರ ಬಿಡುಗಡೆ ಮಾಡಿದ ಒಟ್ಟು ಮೊತ್ತದ ಶೇ.25ದಷ್ಟು ಘನತ್ಯಾಜ್ಯ ನಿರ್ವಹಣೆಗೆ ಹಾಗೂ ಶೇ.70ದಷ್ಟು ಮೊತ್ತ ಶೌಚಾಲಯ ನಿರ್ಮಾಣಕ್ಕೆ ಆಗಿತ್ತು. 2017ರಲ್ಲಿ ಈ ಮೊತ್ತ ಘನತ್ಯಾಜ್ಯ ನಿರ್ವಹಣೆಗೆ ಶೇ.45 ಮತ್ತು ಶೌಚಾಲಯ ನಿರ್ಮಾಣಕ್ಕೆ ಶೇ.45 ಆಗಿದೆ.

ಅದೇನಿದ್ದರೂ, ಗುಜರಾತ್ ಅಸ್ಸಾಂ ಮತ್ತು ಕೇರಳ ಸೇರಿದಂತೆ ಆರು ರಾಜ್ಯಗಳೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಘನತ್ಯಾಜ್ಯ ನಿರ್ವಹಣೆಗಾಗಿ ಕೇಂದ್ರದಿಂದ ಇದುವರೆಗೆ ಯಾವುದೇ ಮೊತ್ತ ಬಂದಿಲ್ಲ. ಹಾಗೆಯೇ, 23ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2016-17 ವಿತ್ತೀಯ ವರ್ಷದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಬರ ಬೇಕಿದ್ದ ಮೊತ್ತ ಜನವರಿ 18,2017ರ ತನಕವೂ ಬಂದಿಲ್ಲ ಎನ್ನುತ್ತದೆ ಅಕೌಂಟೆಬಿಲಿಟಿ ಇನಿಷಿಯೇಟಿವ್ ಜನವರಿ 2017ರಲ್ಲಿ ನಡೆಸಿದ ಅಧ್ಯಯನ.

share
ಸ್ವಗತ ಯಾದವರ್
ಸ್ವಗತ ಯಾದವರ್
Next Story
X