Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಾರತವನ್ನು ತಿನ್ನುತ್ತಿರುವ ಹೊಗೆಸೊಪ್ಪು

ಭಾರತವನ್ನು ತಿನ್ನುತ್ತಿರುವ ಹೊಗೆಸೊಪ್ಪು

ಓಜಸ್ವಿ ರಾವ್ಓಜಸ್ವಿ ರಾವ್5 Jun 2017 12:08 AM IST
share
ಭಾರತವನ್ನು ತಿನ್ನುತ್ತಿರುವ  ಹೊಗೆಸೊಪ್ಪು

ಹೊಗೆ ಸೊಪ್ಪು ಬಳಸುವ ಭಾರತೀಯರ ಸಂಖ್ಯೆ ಬಹಳಷ್ಟು ಏನೂ ಇಲ್ಲ; ಆದರೂ ಭಾರತವು ವಿಶ್ವದಲ್ಲಿ ಹೊಗೆ ಸೊಪ್ಪು ಉತ್ಪಾದಿಸುವ ದೇಶಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಒಂದು ದಶಕದ ಹಿಂದೆ ಹೊಗೆ ಸೊಪ್ಪು ಬಳಸುತ್ತಿದ್ದ ಭಾರತೀಯರ ಸಂಖ್ಯೆಗೆ ಹೋಲಿಸಿದರೆ 2015-2016ರಲ್ಲಿ ಹೊಗೆಸೊಪ್ಪು ಬಳಸಿದ ಭಾರತೀಯರ ಸಂಖ್ಯೆ ಅದಕ್ಕಿಂತ ಕಡಿಮೆ ಇದೆ. ಆದರೆ ಚೀನಾ ಮಾತ್ರ ನಮಗಿಂತ ಹೆಚ್ಚು ಹೊಗೆಸೊಪ್ಪು ಬಳಸುತ್ತದೆ ಮತ್ತು ಉತ್ಪಾದಿಸುತ್ತದೆ ಮತ್ತು ಪರಿಣಾಮವಾಗಿ ಅಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚು ಇದೆ, ಎನ್ನುತ್ತವೆ ಇತ್ತೀಚಿನ ರಾಷ್ಟ್ರೀಯ ಆರೋಗ್ಯ ಅಂಕಿ ಅಂಶಗಳು.

ಆರು ಈಶಾನ್ಯ ರಾಜ್ಯಗಳಾದ ಮಿರೆರಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಅಸ್ಸಾಂ ಭಾರತದಲ್ಲಿ ಅತ್ಯಧಿಕ ಹೊಗೆಸೊಪ್ಪು ಬಳಸುವ ರಾಜ್ಯಗಳು. 2015-2016ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್ 4)ಯ ಪ್ರಕಾರ ಈ ರಾಜ್ಯದಲ್ಲಿ ಸರಾಸರಿ ಶೇ.70.7 ಪುರುಷರು ಹೊಗೆಸೊಪ್ಪು ಬಳಸುತ್ತಾರೆ. ಇದು ತಲಾ ರಾಷ್ಟ್ರೀಯ ಸರಾಸರಿಗಿಂತ ಶೇ.26ದಷ್ಟು ಅಧಿಕವಾಗಿದೆ.

ಈಶಾನ್ಯ ರಾಜ್ಯಗಳ ಯಾದಿಯಲ್ಲಿ ಮಿರೆರಾಂ ಮೊದಲ ಸ್ಥಾನದಲ್ಲಿದೆ. ಇಲ್ಲಿ 15 ಮತ್ತು 45ರ ನಡುವಿನ ವಯೋಮಾನ ದವರಲ್ಲಿ ಶೇ.80.4 ಪುರುಷರು ಮತ್ತು ಶೇ.59.2 ಮಹಿಳೆಯರು ತಂಬಾಕು ಸೇವಿಸುತ್ತಾರೆ. ಪುರುಷರ ಪಟ್ಟಿಯಲ್ಲಿ ನಂತರದ ಸ್ಥಾನಗಳು ಹೀಗಿವೆ: ಮೇಘಾಲಯ (ಶೇ.72.2), ಮಣಿಪುರ(ಶೇ.70.6) ನಾಗಾಲ್ಯಾಂಡ್ (ಶೇ.69.4), ತ್ರಿಪುರಾ (ಶೇ.67.8) ಮತ್ತು ಅಸ್ಸಾಂ (ಶೇ.63.9) ಮಣಿಪುರ, ತ್ರಿಪುರ, ಮೇಘಾಲಯ ಮತ್ತು ನಾಗಾ ಲ್ಯಾಂಡ್ ನಲ್ಲಿ ಹೊಗೆಸೊಪ್ಪು ಬಳಸುವ ಮಹಿಳೆಯರ ಸರಾಸರಿ ಶೇ.37.7 ಇದು ರಾಷ್ಟ್ರೀಯ ಸರಾಸರಿ ಶೇ.6.8ಕ್ಕಿಂತ ತುಂಬ ಹೆಚ್ಚು.

ಈಶಾನ್ಯ ರಾಜ್ಯಗಳಲ್ಲಿ ಕ್ಯಾನ್ಸರ್‌ನ ಅಪಾಯ ಕೂಡ ಹೆಚ್ಚೇ ಇದೆ-ಇಲ್ಲಿ 1,000 ಮಂದಿಯಲ್ಲಿ 112ಮಂದಿ ಪುರುಷರು ಮತ್ತು 60ಮಂದಿ ಮಹಿಳೆಯರು ಕ್ಯಾನ್ಸರ್‌ನಿಂದ ಸಾಯುತ್ತಾರೆ. ಕ್ಯಾನ್ಸರ್‌ನಿಂದ ಸಾಯುವವರ ರಾಷ್ಟ್ರೀಯ ಸರಾಸರಿ: ಪುರುಷರು 47 ಮತ್ತು ಮಹಿಳೆಯರು 44 ದಿ ಲಾನ್ಸೆಟ್‌ನಲ್ಲಿ ಪ್ರಕಟವಾಗಿರುವ ‘2012 ಮಿಲಿಯನ್ ಸಾವು ಅಧ್ಯಯನ’ ಪ್ರಕಟಿಸಿರುವ ಅಂಕಿ ಅಂಶಗಳಿವು.

ಶ್ವಾಸಕೋಶದ ಮತ್ತು ಹೃದಯ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್ ಕಾಯಿಲೆಗಳು ಬರಲು ಕಾರಣವಾಗುವ ಅಪಾಯಕಾರಿ ಅಂಶಗಳಲ್ಲಿ ಹೊಗೆಸೊಪ್ಪು ಒಂದು ಮುಖ್ಯ ಅಂಶ. ಈಶಾನ್ಯ ರಾಜ್ಯಗಳಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಕೂಡ ಮಿಲಿಯಗಟ್ಟಲೆ ಭಾರತೀಯರು ಈ ಕಾಯಿಲೆಗಳಿಗೆ ತುತ್ತಾಗುವ ಅಪಾಯದಲ್ಲೇ ಇದ್ದಾರೆ.

ಕಳೆದ ಹನ್ನೆರಡು ತಿಂಗಳುಗಳಲ್ಲಿ ಶೇ.29.3 ಪುರುಷರು ಹಾಗೂ ಶೇ.30.6 ಮಹಿಳೆಯರು ಹೊಗೆಸೊಪ್ಪು ಸೇವನೆಯ ಅಭ್ಯಾಸವನ್ನು ತೊರೆಯಲು ಪ್ರಯತ್ನಿಸಿದ್ದಾರೆ.

ಮೇಲೆ ಹೇಳಿದ ಸಮೀಕ್ಷೆಯ ಪ್ರಕಾರ ಹೊಗೆಸೊಪ್ಪು ಬಳಕೆಯ ಇತ್ತೀಚಿನ ರಾಷ್ಟ್ರೀಯ ಸರಾಸರಿ ಬಳಕೆಯು(ಶೇ.44.5 ಪುರುಷರು ಮತ್ತು ಶೇ.6.8ಮಹಿಳೆಯರು), 2005-06ರ ಸರಾಸರಿ ಬಳಕೆಯ ಅಂಕಿ ಸಂಖ್ಯೆಗಳಿಗಿಂತ ಕಡಿಮೆ ಇದೆ. ಒಂದು ದಶಕದ ಅವಧಿಯಲ್ಲಿ ಭಾರತದಲ್ಲಿ ಹೊಗೆಸೊಪ್ಪಿನ ಬಳಕೆ ಪುರುಷರಲ್ಲಿ ಶೇ.12.5ರಷ್ಟು ಮತ್ತು ಮಹಿಳೆಯರಲ್ಲಿ ಶೇ.4ರಷ್ಟು ಕಡಿಮೆಯಾಗಿದೆ. ಆದರೂ ಭಾರತ ಇನ್ನೂ ಗರಿಷ್ಠ ಹೊಗೆಸೊಪ್ಪು ಬೆಳೆಯುವ ಮತ್ತು ಬಳಸುವ ದೇಶಗಳಲ್ಲಿ ದ್ವಿತೀಯ ಸ್ಥಾನದಲ್ಲೇ ಇದೆ. ‘ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ’ದ ಅಭಿಪ್ರಾಯ ಇದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ 35-69 ವಯೋಮಾನದವರು ತಂಬಾಕು ಬಳಕೆಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾದ ಪರಿಣಾಮವಾಗಿ ಈ ಕಾಯಿಲೆಗಳಿಗೆ ಸಂಬಂಧಿಸಿ ಸರಕಾರ ವೆಚ್ಚ ಮಾಡಿದ ಒಟ್ಟು ಮೊತ್ತ (2011ರಲ್ಲಿ) ರೂ. 1.05 ಲಕ್ಷಕೋಟಿ. ಈ ಮೊತ್ತವು ರಾಷ್ಟ್ರೀಯ ಒಟ್ಟು ಉತ್ಪನ್ನದ ಶೇ.1.16 ಮತ್ತು 2011ರಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರಕಾರ ಹೆಲ್ತ್‌ಕೇರ್‌ಗಾಗಿ ಬಳಸಿದ ಒಟ್ಟು ಮೊತ್ತದ ಶೇ.12 ಆಗುತ್ತದೆ. ಈ ಸಮೀಕ್ಷೆಯ ಹಿಂದಿನ 12ತಿಂಗಳುಗಳಲ್ಲಿ 15-49 ವಯೋಮಾನದವರ ಪೈಕಿ ಶೇ.29.3 ಮಹಿಳೆಯರು ಮತ್ತು ಶೇ.30.6 ಪುರುಷರು ತಮಗೆ ಅಂಟಿಕೊಂಡಿದ್ದ ತಂಬಾಕು ಸೇವನೆಯ ಚಟ ತೊರೆಯಲು ಪ್ರಯತ್ನಿಸಿದ್ದರು. ಮಿರೆರಾಂನಲ್ಲಿ 2005-2006ರಿಂದ ತಂಬಾಕು ಸೇವನೆ ಪುರುಷರಲ್ಲಿ ಶೇ. 1.6ದಷ್ಟು ಕಡಿಮೆಯಾಗಿದೆ; ಮಹಿಳೆಯರಲ್ಲಿ ಶೇ.3ರಷ್ಟು ಕಡಿಮೆಯಾಗಿದೆ.

ಪಂಜಾಬ್ ಮತ್ತು ಪುದುಚೇರಿಯಲ್ಲಿ ಅನುಕ್ರಮವಾಗಿ, ಪುರುಷ ರಲ್ಲಿ ಮತ್ತು ಮಹಿಳೆಯರಲ್ಲಿ ಶೇ.19.2 ಮತ್ತು ಶೇ.14.4ರಷ್ಟು ತಂಬಾಕು ಸೇವನೆ ಕಡಿಮೆಯಾಗಿದೆ. ಇದು ದಾಖಲಾದ ಶೇಕಡಾ ವಾರಿನಲ್ಲಿ ಕನಿಷ್ಠ ದಾಖಲೆಯಾಗಿದೆ. ಹಿಮಾಚಲ ಪ್ರದೇಶ, ದಾಮನ್ ಆ್ಯಂಡ್ ದಿಯು, ಕೇರಳ, ಚಂಡಿಗಡ ಮತ್ತು ಪುದುಚೇರಿಯಲ್ಲಿ 15- 49ರ ವಯೋಮಾನದ ಮಹಿಳೆಯರಲ್ಲಿ ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆಯಿದೆ.

ತಂಬಾಕು ಸೇವಿಸುವವರಲ್ಲಿ ಗ್ರಾಮೀಣ ಭಾರತೀಯರೇ ಹೆಚ್ಚು

15-49ರ ವಯೋಮಾನದ ಗ್ರಾಮೀಣ ಭಾರತದ ಪುರುಷರು ಮತ್ತು ಮಹಿಳೆಯರು-ಇಬ್ಬರಲ್ಲೂ ತಂಬಾಕು ಸೇವನೆ ನಗರ ಪ್ರದೇಶಗಳಿಗಿಂತ ಭಾರತದ ಹಳ್ಳಿಗಳಲ್ಲೇ ಹೆಚ್ಚು. ಹಳ್ಳಿಗಳಲ್ಲಿ ಶೇ.8.1 ಮಹಿಳೆಯರು ತಂಬಾಕು ಸೇವಿಸಿದರೆ ನಗರಗಳಲ್ಲಿ ತಂಬಾಕು ಸೇವಿಸುವ ಮಹಿಳೆಯರು ಶೇ.4.4. ಹಳ್ಳಿಗಳಲ್ಲಿ ಪುರುಷರಲ್ಲಿ ಇದು ಶೇ.48 ಮತ್ತು ನಗರಗಳಲ್ಲಿ ಶೇ.38.9 ಇದೆ.

ತಂಬಾಕು ಸೇವನೆ ತ್ಯಜಿಸಲು ಪ್ರಯತ್ನಿಸುವವರಲ್ಲಿ ಕೂಡ ನಗರವಾಸಿ ಮಹಿಳೆಯರ ಸಂಖ್ಯೆ (ಶೇ.33), ಹಳ್ಳಿಗಳಲ್ಲಿ ಪ್ರಯತ್ನಿಸುವ ಮಹಿಳೆಯರ ಸಂಖ್ಯೆ (ಶೇ.28.2)ಗಿಂತ ಹೆಚ್ಚು. ಪುರುಷರಲ್ಲಿ ಈ ಪ್ರವೃತ್ತಿ ತದ್ವಿರುದ್ಧವಾಗಿದೆ: ಹಳ್ಳಿಗಳಲ್ಲಿ ಶೇ.31.2 ಮತ್ತು ನಗರಗಳಲ್ಲಿ ಶೇ.29.6 ಪುರುಷರು ತಂಬಾಕು ತ್ಯಜಿಸಲು ಪ್ರಯ ತ್ನಿಸಿದರು.

ಭಾರತ ಯಾಕೆ ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಬೇಕು?

ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೇ 2009-10ರ ಪ್ರಕಾರ ಹೊಗೆರಹಿತ ತಂಬಾಕು ಸೇವಿಸುವವರ ಸಂಖ್ಯೆ (ಶೇ.25.9) ಧೂಮಪಾನ ಮಾಡುವವರ ಸಂಖ್ಯೆ(ಶೇ.14)ಗಿಂತ ಬಹುತೇಕ ದ್ವಿಗುಣವಾಗಿದೆ.

ಮುಂಬೈಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಪ್ರೊಫೆಸರ್ ಹಾಗೂ ಸರ್ಜನ್ ಪಂಕಜ್ ಚತುರ್ವೇದಿಯವರು ಹೇಳುವಂತೆ ‘‘ಭಾರತದಲ್ಲಿ ಶೇ. 50 ಕ್ಯಾನ್ಸರ್‌ಗೆ ಮತ್ತು ಶೇ.90 ಬಾಯಿ ಕ್ಯಾನ್ಸರ್‌ಗಳಿಗೆ ತಂಬಾಕೇ ಮುಖ್ಯ ಕಾರಣ, ಬಾಯಿ ಕ್ಯಾನ್ಸರ್ ರೋಗಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ರೋಗಿಗಳು ರೋಗ ಪತ್ತೆಯಾಗಿ ಹನ್ನೆರಡು ತಿಂಗಳುಗಳಲ್ಲೇ ಸಾಯುತ್ತಾರೆ.’’

ಪುರುಷರಲ್ಲಿ ಎಲ್ಲ ರೀತಿಯ ಕ್ಯಾನ್ಸರ್‌ಗಳಿಗೆ ತಂಬಾಕು ಶೇ.42ರಷ್ಟು ಮತ್ತು ಮಹಿಳೆಯರಿಗೆ ಬರುವ ಎಲ್ಲ ಕ್ಯಾನ್ಸರ್‌ಗಳಿಗೆ ಶೇ.18ರಷ್ಟು ಕಾರಣವಾಗಿದೆ. ಒಟ್ಟಿನಲ್ಲಿ, ತಂಬಾಕು ಸೇವನೆ 1,20,000 ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿದೆ. ಇದರ ದುಪ್ಪಟ್ಟು ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗೂ ತಂಬಾಕೇ ಕಾರಣವಾಗಿದೆ. ಇದು ಭಾರತದಲ್ಲಿ ಹೊಗೆಸೊಪ್ಪು ಅಗಿಯುವುದು ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸೂಚಿಸುತ್ತದೆ.

ವಿಶ್ವ ತಂಬಾಕು ದಿನದಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ‘ಇಂಟರ್‌ನ್ಯಾಷನಲ್ ಯೂನಿಯನ್ ಅಗೈನ್ಸ್ಟ್ ಟಿಬಿ ಮತ್ತು ಲಂಗ್ ಡಿಸೀಸ್’ನ ತಜ್ಞ ಮಿಶೆಲ್ ರೈಸ್ ಹೇಳಿದ ಈ ಮಾತು ಮನನೀಯ: ‘‘ತಂಬಾಕು ಬಳಕೆಯನ್ನು ಕಡಿಮೆಮಾಡಲು ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಏರಿಸುವುದು ಒಂದು ಪುರಾವೆ ಆಧಾರಿತ ದಾರಿಯಾಗಿದೆ, ಪರಿಹಾರವಾಗಿದೆ. ಬೀಡಿಯೂ ಸೇರಿದಂತೆ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಗರಿಷ್ಠ ಸರಕು ಮತ್ತು ಸೇವಾ ತೆರಿಗೆ ವಿಧಿಸುವಂತೆ ನಾವು ಭಾರತ ಸರಕಾರವನ್ನು ವಿಜ್ಞಾಪಿಸುತ್ತೇವೆ.’’

share
ಓಜಸ್ವಿ ರಾವ್
ಓಜಸ್ವಿ ರಾವ್
Next Story
X