Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಗೋವಾ ಗ್ರಾಮದಲ್ಲಿ ಬಯಲು ಶೌಚಕ್ಕೆ...

ಗೋವಾ ಗ್ರಾಮದಲ್ಲಿ ಬಯಲು ಶೌಚಕ್ಕೆ ಗುಡ್‌ಬೈ

ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಪರಿಸರಸ್ನೇಹಿ ಶೌಚಾಲಯ

ವಿಸ್ಮಯವಿಸ್ಮಯ6 Jun 2017 12:13 AM IST
share
ಗೋವಾ ಗ್ರಾಮದಲ್ಲಿ ಬಯಲು ಶೌಚಕ್ಕೆ ಗುಡ್‌ಬೈ

ಈ ಗ್ರಾಮದಲ್ಲಿ ಈಗ ಏಳು ಒಣ ಶೌಚಾಲಯಗಳಿವೆ. ಇದು ಪರಿಸರ ಸ್ನೇಹಿ ಶೌಚಾಲಯವಾಗಿರುವ ಜತೆಗೆ ಜನರಿಗೆ ಭದ್ರತೆ ಮತ್ತು ಖಾಸಗಿತನವನ್ನೂ ನೀಡುತ್ತದೆ. ಈ ಕಲ್ಪನೆ ಹುಟ್ಟಿಕೊಂಡದ್ದು ಮಿತ್ಸುಕೊ ಟ್ರಸ್ಟ್ ನಡೆಸಿದ ಮಕ್ಕಳ ಸಮಿತಿ ಸಭೆಯಲ್ಲಿ. ಪಣಜಿ ಮೂಲದ ಈ ಸ್ವಯಂಸೇವಾ ಸಂಸ್ಥೆ, ಯುವಮನಸ್ಸುಗಳು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ವೇದಿಕೆ ಕಲ್ಪಿಸಿಕೊಡುವುದಲ್ಲದೆ, ತಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ವಿಷಯಗಳ ಬಗೆಗಿನ ನೀತಿ ರೂಪಿಸುವಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಸಶಕ್ತಗೊಳಿಸುವ ಕಾರ್ಯವನ್ನೂ ಈ ಎನ್‌ಜಿಒ ಮಾಡುತ್ತಿದೆ.

ಐದು ಸಾವಿರ ಮಂದಿ ಸಾರ್ವಜನಿಕ ಶೌಚಾಲಯವನ್ನು ಹಂಚಿಕೊಳ್ಳುವ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಸಹಜವಾಗಿಯೇ ಜನರ ಆಯ್ಕೆ ಬಯಲು ಶೌಚ. ಹಳೆಗೋವಾದ ವಿಶ್ವಪರಂಪರೆಯ ತಾಣದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಕರಂಬೊಲಿಮ್ ಎಂಬ ಗ್ರಾಮದ ವಾಸ್ತವ ಚಿತ್ರಣ ಇದು.

ಕರಂಬೊಲಿಮ್ ಮಾಮೂಲಿ ಗ್ರಾಮವಲ್ಲ. ಖ್ಯಾತ ಕರ್ಮಾಲಿ ಲೇಕ್‌ನಿಂದ ಈ ಗ್ರಾಮ ಹೆಸರುವಾಸಿ. ಇದನ್ನು ಈಗ ಪ್ರಮುಖ ಪಕ್ಷಿಪ್ರದೇಶ ಎಂದು ಘೋಷಿಸಲಾಗಿದೆ. ಹಲವು ದೇಶೀಯ ಹಾಗೂ ವಲಸೆ ಹಕ್ಕಿಗಳ ತಾಣ. ಆದರೆ ಈ ಪ್ರಸಿದ್ಧ ಕೆರೆ ಇದೀಗ ಘನ ತ್ಯಾಜ್ಯಗಳನ್ನು ಸುರಿದು, ಚರಂಡಿ ನೀರು ಸೇರಿ ಮಲಿನವಾಗಿದೆ. ಇಲ್ಲಿ ಯಾವುದೇ ಸೆಪ್ಟಿಕ್ ಟ್ಯಾಂಕ್ ವ್ಯವಸ್ಥೆಯಾಗಲೀ, ಒಳಚರಂಡಿ ಪೈಪ್‌ಲೈನ್ ವ್ಯವಸ್ಥೆಯಾಗಲೀ ಇಲ್ಲ. ಜನಸಾಮಾನ್ಯರು ಕೆರೆಯ ಸುತ್ತಮುತ್ತ ಶೌಚ ಕಾರ್ಯ ಪೂರೈಸಿಕೊಳ್ಳುವುದು ಅಥವಾ ತಮ್ಮ ಚರಂಡಿ ನೀರನ್ನು ಕೆರೆಗೆ ಹರಿಸುವುದು ಅನಿವಾರ್ಯವಾಗಿದೆ. ಕೆರೆಗೆ ನೀರು ಹರಿಸುವ ಪ್ರಮುಖ ತೊರೆಯಾದ ಕ್ಯುಂಬಾರ್ಜುವ ಹಿನ್ನೀರಿನ ಜತೆ ಈ ಚರಂಡಿ ನೀರು ಸೇರಿಕೊಂಡು ಕೆರೆ ತಲುಪುತ್ತದೆ.

ಕಳೆದ ಎರಡು ವರ್ಷಗಳಿಂದ ಮಕ್ಕಳ ವಿನೂತನ ಕ್ರಮದಿಂದಾಗಿ ಪರಿಸ್ಥಿತಿ ಬದಲಾಗುತ್ತಿದೆ. ಈ ಗ್ರಾಮದಲ್ಲಿ ಈಗ ಏಳು ಒಣ ಶೌಚಾಲಯಗಳಿವೆ. ಇದು ಪರಿಸರ ಸ್ನೇಹಿ ಶೌಚಾಲಯವಾಗಿರುವ ಜತೆಗೆ ಜನರಿಗೆ ಭದ್ರತೆ ಮತ್ತು ಖಾಸಗಿತನವನ್ನೂ ನೀಡುತ್ತದೆ. ಈ ಕಲ್ಪನೆ ಹುಟ್ಟಿಕೊಂಡದ್ದು ಮಿತ್ಸುಕೊ ಟ್ರಸ್ಟ್ ನಡೆಸಿದ ಮಕ್ಕಳ ಸಮಿತಿ ಸಭೆಯಲ್ಲಿ. ಪಣಜಿ ಮೂಲದ ಈ ಸ್ವಯಂಸೇವಾ ಸಂಸ್ಥೆ, ಯುವಮನಸ್ಸುಗಳು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ವೇದಿಕೆ ಕಲ್ಪಿಸಿಕೊಡುವುದಲ್ಲದೆ, ತಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ವಿಷಯಗಳ ಬಗೆಗಿನ ನೀತಿ ರೂಪಿಸುವಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಸಶಕ್ತಗೊಳಿಸುವ ಕಾರ್ಯವನ್ನೂ ಈ ಎನ್‌ಜಿಒ ಮಾಡುತ್ತಿದೆ.

ಕರಂಬೊಲಿಮ್ ಮಕ್ಕಳು ಈ ಸಭೆಯಲ್ಲಿ ತಮ್ಮ ಗ್ರಾಮದಲ್ಲಿ ಶೌಚಾಲಯ ಸಮಸ್ಯೆ ಇರುವ ಬಗ್ಗೆ ಮತ್ತು ಮಲಿನ ಕೆರೆ ಬಗ್ಗೆ ಬಾಲಗ್ರಾಮಸಭೆಯಲ್ಲಿ ಧ್ವನಿ ಎತ್ತಿದರು. ‘ಕುಥೆ ಗೇಲೆ ಸ್ವಚ್ಛ ಪಾನಿ’ ಎಂಬ ಮರಾಠಿ ನಾಟಕವನ್ನೂ 2015ರ ಫೆಬ್ರವರಿಯಲ್ಲಿ ಪ್ರದರ್ಶಿಸಿದರು. ಇದು ಕರಂಬೊಲಿಮ್ ಕೆರೆಯ ಪಕ್ಕದಲ್ಲಿ ವಾಸಿಸುವ ಪಕ್ಷಿಗಳ ಕರುಣಕಥೆಯನ್ನು ಬಣ್ಣಿಸುವ ಅಪರೂಪದ ನಾಟಕ. ಮಾಲಿನ್ಯ ಅವುಗಳ ಪಾಲಿಗೆ ಹೇಗೆ ಮಾರಕವಾಗಿದೆ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದರು. ಈ ಚಟುವಟಿಕೆಗಳ ಆಧಾರದಲ್ಲಿ ಮಿತ್ಸುಕೊ ತಂಡ, ಸಮುದಾಯಕ್ಕೆ ಶೌಚಾಲಯ ನಿರ್ಮಿಸಿಕೊಡುವ ಬಗ್ಗೆ ಯೋಚಿಸಿತು.

‘‘ಬಳಿಕ ನಾವು ವಾಸ್ತುಶಿಲ್ಪಿ ತಲ್ಲೂಹ್ ಡಿಸಿಲ್ವಾ ಅವರನ್ನು ಸಂಪರ್ಕಿಸಿದೆವು. ಅವರು ಸಮಸ್ಯೆ ಅರ್ಥ ಮಾಡಿಕೊಂಡರು. ಇದಕ್ಕೆ ಪರಿಸರ ಸ್ನೇಹಿ ಶೌಚಾಲಯ ಒಳ್ಳೆಯ ಪರಿಹಾರ ಎಂಬ ಸಲಹೆ ನೀಡಿದರು’’ ಎಂದು ಟ್ರಸ್ಟ್ ನಿರ್ದೇಶಕ ಶ್ಯಾಮಲೀರಾಯ್ ಹೇಳುತ್ತಾರೆ.

ಅನುದಾನದ ಕೊರತೆ ನೀಗಿಸಲು ಈ ಸ್ವಯಂಸೇವಾ ಸಂಸ್ಥೆ ಮಾರಾಟ ಮೇಳ ನಡೆಸಿತು ಹಾಗೂ ದಾನಿಗಳ ನೆರವು ಪಡೆಯಿತು. ಟ್ರಸ್ಟಿಗಳು ಕೂಡಾ ಇದಕ್ಕೆ ನೆರವು ನೀಡಿದರು. ಕರ್ಮಲಿ ಪಂಚಾಯತ್ ಕೂಡಾ ಕೈಜೋಡಿಸಿತು. ಸುಮಾರು 40 ಕುಟುಂಬಗಳು ಫಲಾನುಭವಿಗಳಾಗಲು ಹೆಸರು ನೋಂದಾಯಿಸಿದವು.

ವಾಸ್ತುಶಿಲ್ಪಿಮತ್ತು ಪಣಜಿಯ ಗ್ಲೋಬಲ್ ಶೇಪರ್ಸ್‌ ಪಂಜಿಮ್ ಹಬ್‌ನ ಸಂಸ್ಥಾಪಕರೂ ಆಗಿರುವ ತಲ್ಲೂಹ್, ಗ್ರಾಮಕ್ಕೆ ಹಲವು ಬಾರಿ ಭೇಟಿ ನೀಡಿ, ಈ ಪರಿಸರ ಸ್ನೇಹಿ ಶೌಚಾಲಯ ಹೇಗೆ ಸಮುದಾಯಕ್ಕೆ ನೆರವಾಗುತ್ತದೆ ಎಂಬ ಬಗ್ಗೆ, ಶೌಚಾಲಯಗಳ ಪ್ರಯೋಜನಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

‘‘ಈ ಜನರಿಗೆ ಅಗಲ ಕಿರಿದಾದ ಓಣಿಗಳಲ್ಲಿ ಪುಟ್ಟ ಮನೆಗಳು ಇರುವುದರಿಂದ, ನೈರ್ಮಲ್ಯ ವ್ಯವಸ್ಥೆ ಇಲ್ಲ. ಆದ್ದರಿಂದ ಕೊಳಕು ಸಾರ್ವಜನಿಕ ಶೌಚಾಲಯವನ್ನೇ ಬಳಸುವ ಅನಿವಾರ್ಯತೆ ಇತ್ತು. ಗ್ರಾಮದಲ್ಲಿ ಐದು ಸಾವಿರ ಮಂದಿಗೆ ಕೇವಲ ಮೂರು ಅಥವಾ ನಾಲ್ಕು ಶೌಚಾಲಯಗಳಿದ್ದವು. ವಾಸ್ತವವಾಗಿ 1:20 ಅನುಪಾತದಲ್ಲಿ ಅಂದರೆ 20 ಮಂದಿಗೆ ಒಂದು ಶೌಚಾಲಯ ಇರಬೇಕು’’ ಎಂದು ಅವರು ಹೇಳುತ್ತಾರೆ. ಆದ್ದರಿಂದ ಸೆಪ್ಟಿಕ್ ಟ್ಯಾಂಕ್ ಸೌಲಭ್ಯವೂ ಇಲ್ಲದ ಈ ಶೌಚಾಲಯಗಳನ್ನು ಬಳಸುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಶೌಚಾಲಯದ ಕೊಳಕು ನಾಲೆಗಳಲ್ಲಿ ಹರಿದು, ಗಂಭೀರ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತಿದ್ದವು

ಮಳೆಗಾಲದಲ್ಲಿ, ಹಲವು ಮಂದಿ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಒಣಕಾಗದದ ಮೇಲೆ ಮಲ ವಿಸರ್ಜನೆ ಮಾಡಿ, ಹಿಂಬದಿಗೆ ಬಿಸಾಕುತ್ತಿದ್ದರು. ಅಲ್ಲಿ ರಾತ್ರಿ ವೇಳೆ ನಿದ್ದೆ ಮಾಡುವ ಸ್ಥಿತಿಯೂ ಇರಲಿಲ್ಲ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು, ಸಮುದಾಯ ಹಾಗೂ ಪರಿಸರವನ್ನು ರಕ್ಷಿಸಲು ಇದಕ್ಕೆ ಪರಿಹಾರ ದೊರಕಿಸಲೇಬೇಕು ಎಂಬ ದೃಢಸಂಕಲ್ಪಕೈಗೊಂಡರು.

‘‘ಇಕೋ ಲೂ ಎಂಬ ಈ ಪರಿಸರ ಸ್ನೇಹಿ ಶೌಚಾಲಯ, ಒಣ ಶೌಚಾಲಯವಾಗಿದ್ದು, ನೀರು ಮಾಲಿನ್ಯದ ಸಮಸ್ಯೆ ಇರುವ ಪ್ರದೇಶಗಳಿಗೆ, ನೀರು ನಿಲ್ಲುವ ಅಥವಾ ಒಣ ಪ್ರದೇಶಗಳಿಗೆ ಸೂಕ್ತ. ಪಾಲ್ ಕಲ್ವರ್ಟ್ ಹಾಗೂ ಅವರ ಇಕೊ ಸೊಲ್ಯೂಶನ್ಸ್, ಈ ಯೋಜನೆಗೆ ಬೆಂಬಲ ವ್ಯವಸ್ಥೆಯಾಯಿತು’’ ಎಂದು ಅವರು ವಿವರಿಸುತ್ತಾರೆ. ‘‘ಈ ನಿಟ್ಟಿನಲ್ಲಿ ಮತ್ತಷ್ಟು ಸಂಶೋಧನೆ ಕೈಗೊಂಡಾಗ, ಭಾರತ ಹಾಗೂ ಚೀನಾದಂಥ ಏಷ್ಯನ್ ದೇಶಗಳಲ್ಲಿ ಬಳಕೆಯಲ್ಲಿದ್ದ ಅತ್ಯಂತ ಹಳೆಯ ವ್ಯವಸ್ಥೆ ಇದು ಎನ್ನುವುದು ತಿಳಿದುಬಂತು’’ ಎಂದು ಹೇಳಿದರು. ಈ ಶೌಚಾಲಯದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಎರಡು ಚೇಂಬರ್‌ಗಳಿರುತ್ತವೆ. ಬಳಸಿದ ಬಳಿಕ ಅದಕ್ಕೆ ಧೂಳು, ಬೂದಿ ಹಾಗೂ ಸುಣ್ಣ ಹಾಕಬೇಕು. ಗ್ರಾಮಗಳಲ್ಲಿ ಬೂದಿ ಸುಲಭವಾಗಿ ಸಿಗುತ್ತದೆ ಹಾಗೂ ಇದು ಬ್ಯಾಕ್ಟೀರಿಯಾಗಳನ್ನು ಕೂಡಾ ನಾಶಮಾಡುತ್ತದೆ. ಇದರ ಪ್ರಮುಖ ಅಂಶವೆಂದರೆ, ಇಲ್ಲಿ ನೀರು ಬೇಕಾಗುವುದಿಲ್ಲ ಹಾಗೂ ಕಾಂಪೋಸ್ಟಿಂಗ್ ಸುಲಭವಾಗಿ ಆಗುತ್ತದೆ.

ನೀರು ಸಾಮಾನ್ಯವಾಗಿ ರೋಗಕಾರಕ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ಕಾಂಪೋಸ್ಟಿಂಗ್ ನಿಧಾನವಾಗುವಂತೆ ಮಾಡುತ್ತದೆ. ಈ ಇಕೋ ಲೂಗಳನ್ನು ನೆಲಮಟ್ಟದಿಂದ ಮೇಲ್ಭಾಗದಲ್ಲಿ ನಿರ್ಮಿಸುವುದರಿಂದ, ತ್ಯಾಜ್ಯ ನೀರು, ಮೂತ್ರವನ್ನು ಹೊಂಡಗಳಿಗೆ ಹರಿಸಲಾಗುತ್ತದೆ. ಇದು ಮಲಿನ ನೀರನ್ನು ಸೋಸಿ ಮರುಬಳಕೆಗೆ ಅನುವು ಮಾಡಿಕೊಡುತ್ತದೆ.

ಒಂದು ಛೇಂಬರ್ ಭರ್ತಿಯಾದ ಬಳಿಕ ಆರು ತಿಂಗಳು ಅದನ್ನು ಹಾಗೆಯೇ ಇಡಲಾಗುತ್ತದೆ. ಆ ಅವಧಿಯಲ್ಲಿ ಮಾನವ ತ್ಯಾಜ್ಯ ಕಾಂಪೋಸ್ಟ್ ಆಗಿ ಪರಿವರ್ತನೆಯಾಗುತ್ತದೆ ಹಾಗೂ ಇದು ಮಣ್ಣಿಗೆ ಅತ್ಯಧಿಕ ಪೋಷಕಾಂಶಗಳನ್ನು ಒದಗಿಸುವ ಗೊಬ್ಬರವಾಗುತ್ತದೆ. ಗ್ರಾಮಸ್ಥರು ಇದನ್ನು ಮಾರಾಟ ಮಾಡಿ ಹಣವನ್ನೂ ಸಂಪಾದಿಸಬಹುದು ಎಂಬ ಲೆಕ್ಕಾಚಾರವನ್ನು ಶ್ಯಾಮಲೀ ಮುಂದಿಡುತ್ತಾರೆ. ಈ ವಿನೂತನ ವ್ಯವಸ್ಥೆಯ ಮೊದಲ ಫಲಾನುಭವಿ ಪ್ರಭಾಕರ ನಾಯ್ಕ. 2015ರ ಮೇ ತಿಂಗಳಲ್ಲಿ ಅವರ ಮನೆಯಲ್ಲಿ ಲೂ ನಿರ್ಮಿಸಲಾಯಿತು.

‘‘ನಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಅಂದರೆ ನಾನು, ಪತ್ನಿ ರೂಪಾ ಹಾಗೂ ಇಬ್ಬರು ಮಕ್ಕಳು ಇಂದು ಸಂತೋಷದಿಂದಿದ್ದೇವೆ. ನನ್ನ ನಾಲ್ಕು ವರ್ಷದ ಮಗ ಕೂಡಾ ಬೂದಿ ಹಾಗೂ ದೂಳಿನ ಮಿಶ್ರಣವನ್ನು ಶೌಚಾಲಯ ಬಳಸಿದ ಬಳಿಕ ಹಾಕುವಷ್ಟರ ಮಟ್ಟಿಗೆ ಸಜ್ಜ್ಜಾಗಿದ್ದಾನೆ. ಅತಿಥಿಗಳೂ ಇದನ್ನು ಬಳಸಲು ನನ್ನ ಪತ್ನಿ ಅಗತ್ಯ ಸೂಚನೆಗಳನ್ನು ನೀಡುತ್ತಾಳೆ ಎಂದು ಮತ್ತೊಬ್ಬ ಫಲಾನುಭವಿ ಪ್ರವೀಣ್ ಬೋರ್ಕರ್’’ ವಿವರಿಸುತ್ತಾರೆ.

ಇಂತಹ ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಗ್ರಾಮಸ್ಥರ ಉತ್ಸಾಹ ಹಾಗೂ ಅವರು ನೀಡಿದ ನೆರವಿನಿಂದಾಗಿ ಇದು ಯಶಸ್ವಿಯಾಗಿದೆ ಎಂದು ತಲ್ಲುಲಾಹ್ ಹೇಳುತ್ತಾರೆ.

‘‘ಇಕೋ ಲೂ ವ್ಯವಸ್ಥೆಗೆ 20 ರಿಂದ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಸುದೀರ್ಘ ಬಾಳಿಕೆ ಬರುವ ವಸ್ತುಗಳನ್ನು ನಾವು ಬಳಸುತ್ತೇವೆ. ಕಡಿಮೆ ವೆಚ್ಚವಾಗಬೇಕು ಎಂಬ ಕಾರಣಕ್ಕೆ ಅಗ್ಗದ ವಸ್ತುಗಳನ್ನು ಬಳಸುವುದಿಲ್ಲ’’ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಈ ಮಾದರಿ ಜನಪ್ರಿಯವಾಗುತ್ತಿದ್ದಂತೆ, ಇಂಥ ಶೌಚಾಲಯಗಳನ್ನು ಹೆಚ್ಚು ನಿರ್ಮಿಸಲು ಈ ಸ್ವಯಂಸೇವಾ ಸಂಸ್ಥೆಗೆ ಸಿಎಸ್‌ಆರ್ ನೆರವು ಕೂಡಾ ಹರಿದುಬರುತ್ತಿದೆ.

ಇದೀಗ ಪಣಜಿ ಸಮೀಪದ ಪುಟ್ಟ ಮೀನುಗಾರಿಕಾ ಗ್ರಾಮದಲ್ಲೂ ಇಂಥದ್ದೇ ಶೌಚಾಲಯ ನಿರ್ಮಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆ ಯೋಜನೆ ರೂಪಿಸಿದೆ.

share
ವಿಸ್ಮಯ
ವಿಸ್ಮಯ
Next Story
X