ಬಾಲ ಕಾರ್ಮಿಕರ ಮೇಲೆ ನಿಂತ ದೇಶ

ಬಾಲ್ಯದ ಕುರಿತಾದ ಇತ್ತೀಚಿನ ಜಾಗತಿಕ ವರದಿಯ ಪ್ರಕಾರ ಪೌಷ್ಟಿಕಾಹಾರದ ಕೊರತೆಯಿಂದಾಗಿ ಪೂರ್ಣವಾಗಿ ಬೆಳೆಯದ ಅತ್ಯಧಿಕ ಸಂಖ್ಯೆಯ 948.2 ಮಿಲಿಯ) ಮಕ್ಕಳು ಭಾರತದಲ್ಲಿ ಇದ್ದಾರೆ. ಈ ಮಕ್ಕಳ ಸಂಖ್ಯೆ-48.2 ಮಿಲಿಯ- ಕೊಲಂಬಿಯಾ ದೇಶದ ಒಟ್ಟು ಜನ ಸಂಖ್ಯೆಗೆ ಸಮನಾಗುತ್ತದೆ. ಅಲ್ಲದೆ ನಮ್ಮ ದೇಶದ ಮಕ್ಕಳಲ್ಲಿ 31ಮಿಲಿಯ ಮಕ್ಕಳು ಶ್ರಮಿಕ ವರ್ಗದ ಒಂದು ಭಾಗವಾಗಿದ್ದಾರೆ. ಇದು ವಿಶ್ವದಲ್ಲೇ ಬಾಲ ಕಾರ್ಮಿಕರ ಅತ್ಯಧಿಕ ಸಂಖ್ಯೆಯಾಗಿದೆ.
172 ದೇಶಗಳಲ್ಲೂ ಮಕ್ಕಳ ಬಾಲ್ಯಕ್ಕೆ ಎದುರಾಗುವ ಬೆದರಿಕೆಗಳ ಬಗ್ಗೆ ನಡೆಸಿದ ಒಂದು ಅಧ್ಯಯನದಲ್ಲಿ, ಸ್ಟಂಟೆಡ್ ಬೆಳವಣಿಗೆ ಮತ್ತು ಬಾಲಕಾರ್ಮಿಕರಾಗಬೇಕಾದ ಪರಿಸ್ಥಿತಿ ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಹಾಗೂ ಪೋಷಕತ್ವ (ಪೇರೆಂಟ್ ಹುಡ್), ಮತ್ತು ಶಿಕ್ಷಣದ ಕೊರತೆ-ಈ ಎಲ್ಲ ಅಂಶಗಳು ಭಾರತವನ್ನು 116ನೆ ಸ್ಥಾನಕ್ಕೆ ತಳ್ಳಿವೆ. (ಆಕರಃ ಎಂಡ್ ಆಫ್ ಚೈಲ್ಡ್‌ವುಡ್ ರಿಪೋರ್ಟ್, ಸೇವ್ ದಿ ಚಿಲ್ಡ್ರನ್, 2017)
ಜಾಗತಿಕವಾಗಿ, 700 ಮಿಲಿಯ ಮಕ್ಕಳ ಬಾಲ್ಯ, ಅವರ ಬಾಲ್ಯ ಕಳೆಯುವ ಮೊದಲೇ ಕಳೆದು ಹೋಗಿದೆ. ಈ ನಿಟ್ಟಿನಲ್ಲಿ ವರದಿಯ ಸೂಚ್ಯಂಕದಲ್ಲಿ ಭಾರತದ ನೆರೆಯ ಮೂರು ರಾಷ್ಟ್ರಗಳಾದ ಶ್ರೀಲಂಕಾ (61ನೆ ಸ್ಥಾನ), ಭೂತಾನ್ (93ನೆ ಸ್ಥಾನ) ಮತ್ತು ಮ್ಯಾನ್ಮಾರ್ (112ನೆ ಸ್ಥಾನ) ಭಾರತಕ್ಕಿಂತ ಮೇಲಿನ ಸ್ಥಾನ ಪಡೆದಿವೆ. ನೇಪಾಲ (134), ಬಾಂಗ್ಲಾ ದೇಶ (134) ಮತ್ತು ಪಾಕಿಸ್ತಾನ (148)ದಲ್ಲಿ ಮಕ್ಕಳ ಸ್ಥಿತಿ ಭಾರತದ ಸ್ಥಿತಿಗಿಂತ ಕೆಟ್ಟದಾಗಿದೆ.
ವರದಿಯಲ್ಲಿನ ಸೂಚ್ಯಂಕವು ಮಕ್ಕಳ ಬದುಕನ್ನುಬದಲಿಸುವ ಕೆಲವು ಘಟನೆಗಳ ಮೇಲೆ ತನ್ನ ಗಮನ ವನ್ನು ನೆಟ್ಟು ವಿವಿಧ ದೇಶಗಳಲ್ಲಿನ ಮಕ್ಕಳ ಸ್ಥಿತಿಗತಿಯನ್ನು ತಿಳಿಯಲು ಕೆಲವು ಮಾಪಕಗಳನ್ನು ಬಳಸುತ್ತದೆ: ಐದು ವರ್ಷ ವಯಸ್ಸಿಗಿಂತ ಚಿಕ್ಕ ಮಕ್ಕಳಲ್ಲಿ ಸಂಭವಿಸುವ ಮರಣಗಳ ಸಂಖ್ಯೆ, ಬೆಳವಣಿಗೆಯನ್ನು ತಡೆಯುವ ಪೌಷ್ಟಿಕಾಹಾರದ ಕೊರತೆ, ಶಿಕ್ಷಣದ ಕೊರತೆ, ಬಾಲ ಕಾರ್ಮಿಕರಾಗಿ ದುಡಿಯುವಿಕೆ, ಚಿಕ್ಕ ವಯಸ್ಸಿನಲ್ಲೇ ನಡೆಯುವ ವಿವಾಹ, ಹದಿಹರೆಯದಲ್ಲೇ ಒದಗುವ ತಂದೆ-ತಾಯ್ತನ, ತಿಕ್ಕಾಟದಿಂದಾಗಿ ನೆಲೆ ಕಳೆದುಕೊಂಡು ಸ್ಥಳಾಂತರಗೊಳ್ಳುವುದು ಹಾಗು ಶಿಶು ಹತ್ಯೆ. ಇವುಗಳಲ್ಲಿ ಹೆಚ್ಚಿನ ಮಾಪಕಗಳಲ್ಲಿ ಭಾರತ ಉತ್ತಮ ಅಂಕಗಳನ್ನು ಗಳಿಸಲು ವಿಫಲವಾಯಿತು.

ಒಂದು ಮಗುವಿನ ಬದುಕಿನ ಮೊದಲ 1,000 ದಿನಗಳಲ್ಲಿ, ಸತತ ಎದುರಾಗುವ ಪೌಷ್ಟಿಕಾಹಾರದ ಕೊರತೆಯೇ ಅದರ ದೇಹದ ಅಪೂರ್ವ ಬೆಳವಣಿಗೆಗೆ ಕಾರಣ. ವಿಶ್ವದಲ್ಲೇ ಭಾರತದಲ್ಲಿ ಇಂತಹ ಮಕ್ಕಳು ಗರಿಷ್ಠ ಸಂಖ್ಯೆಯಲ್ಲಿದ್ದಾರೆ ಮತ್ತು ದೇಶದಲ್ಲಿ ಇರುವ ಒಟ್ಟು ಹೆಣ್ಣು ಮಕ್ಕಳ ಮೂರನೆ ಒಂದು ಪಾಲು ಹೆಣ್ಣು ಮಕ್ಕಳು ಅಪೂರ್ಣ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ಇಲ್ಲಿ ಹತ್ತು ಶಿಶುಗಳಲ್ಲಿ ಒಂದು ಶಿಶುವಿಗೆ ಮಾತ್ರ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ.
ಪರಿಣಾಮವಾಗಿ ಭಾರತದಲ್ಲಿ ಐದು ವರ್ಷದ ಒಳಗಿನ ಮಕ್ಕಳಲ್ಲಿ ಶಿಶು ಮರಣದ ಪ್ರಮಾಣ ತುಂಬ ಹೆಚ್ಚು ಇದೆ. ಅಲ್ಲದೆ, ಪ್ರತೀ 21 ಶಿಶುಗಳಲ್ಲಿ ಒಂದು ಶಿಶು ತನ್ನ ಐದನೆ ಜನ್ಮ ದಿನವನ್ನು ತಲುಪುವ ಮೊದಲೇ ಸತ್ತುಹೋಗುತ್ತದೆ.
ಹುಟ್ಟಿದ ಪ್ರತೀ 1,000 ಮಕ್ಕಳಲ್ಲಿ, ಐದು ವರ್ಷದೊ ಳಗಿನ 50 ಮಕ್ಕಳು ಮರಣ ಹೊಂದುತ್ತವೆ. ಇದು ಭಾರತ ಕ್ಕಿಂತ ತುಂಬ ಬಡ ದೇಶವಾದ ಆಫ್ರಿಕದ ದ್ವೀಪ ರಾಷ್ಟ್ರ ಮಡಗಾಸ್ಕರ್‌ನ ಶಿಶು ಮರಣಗಳ ಸಂಖ್ಯೆಗೆ ಸಮಾನ ವಾಗಿದೆ, ಎಂದು ಮಾರ್ಚ್ 2017ರಲ್ಲಿ ಇಂಡಿಯಾ ಸ್ಪೆಂಡ್ ವರದಿ ಮಾಡಿತ್ತು. ಪ್ರೌಢ, ಪ್ರಾಥಮಿಕ ವಯಸ್ಸಿನ 47 ಮಿಲಿಯ ಯುವ ಜನತೆ ಶಾಲೆಗಳಿಗೆ ಹೋಗುವುದಿಲ್ಲ.
ಭಾರತದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಪ್ರಾಥಮಿಕ ವಯೋ ಗುಂಪಿನ ಮಕ್ಕಳಲ್ಲಿ ಶೇ.18.6ರಷ್ಟು ಮಕ್ಕಳು ಶಾಲೆಯ ಹೊರಗಿದ್ದಾರೆ. ಮತ್ತು ಪ್ರೌಢ ಪ್ರಾಥಮಿಕ ವಯೋ ಮಾನದ 47 ಮಿಲಿಯ ಯುವಕ ಯುವತಿ ಯರು ಶಾಲೆಗಳಿಗೆ ಹೋಗುತ್ತಿಲ್ಲ. ಪ್ರಾಥಮಿಕ ಶಿಕ್ಷಣವಂಚಿ ತರಾದ ಮಕ್ಕಳು, ಶಿಕ್ಷಣ ಪಡೆದ ತಮ್ಮ ಸಹಪಾಠಿಗಳಿಗಿಂತ, ತಮ್ಮ ಜೀವಿತದುದ್ದಕ್ಕೂ ತುಂಬ ಕಡಿಮೆ ಸಂಪಾದಿಸುತ್ತಾರೆ. 31 ಮಿಲಿಯ ದುಡಿಯುವ ಮಕ್ಕಳು:
4-14ರ ವಯೋಮಾನದ ಮಕ್ಕಳಲ್ಲಿ ಶೇ.11.8 ಮಕ್ಕಳು ದುಡಿಮೆ ಮಾಡುತ್ತಿದ್ದಾರೆ. ಅಂದರೆ 31 ಮಿಲಿಯ ಮಕ್ಕಳು. ತಮ್ಮ ಕುಟುಂಬಗಳಿಗೆ ನೆರವಾಗುವುದಕ್ಕಾಗಿ ದುಡಿಯುವ ಮಕ್ಕಳು ಕೇವಲ ಶಿಕ್ಷಣದಿಂದಷ್ಟೇ ವಂಚಿತರಾಗುವುದಿಲ್ಲ, ಅವರು ವಿಶ್ರಾಂತಿ ಮತ್ತು ಮನೋರಂಜನೆ ಯಿಂದಲೂ ವಂಚಿತರಾಗಿದ್ದಾರೆ.
ಬೀದಿಗಳಲ್ಲಿ ವಾಸಿಸುವ ಅಥವಾ ಮನೆಯಿಲ್ಲದ ಕುಟುಂಬ ಗಳಿಗೆ ಬರುವ ಒಟ್ಟು ಮಕ್ಕಳ ಅರ್ಧದಷ್ಟು ಮಕ್ಕಳು ಹೊಟ್ಟೆಪಾಡಿಗಾಗಿ ಕಟ್ಟಡ ನಿರ್ಮಾಣ ನಿವೇಶನಗಳಲ್ಲಿ, ಹೊಟೇಲ್‌ಗಳಲ್ಲಿ, ದುಡಿಯುತ್ತಾರೆ. ಅವರು ಶಾಲೆಗೆ ಹೋಗುವುದಿಲ್ಲ.
ಬಾಲ್ಯ ವಿವಾಹ ಎಂದರೆ ಬಾಲ್ಯದಿಂದ ವಂಚಿತರಾಗುವುದು. ಭಾರತದಲ್ಲಿ 15ರಿಂದ 19ರ ನಡುವಿನ ವಯೋಮಾನದ ಒಟ್ಟು ಹೆಣ್ಣು ಮಕ್ಕಳಲ್ಲಿ ಶೇ.21.1 ಹೆಣ್ಣು ಮಕ್ಕಳು ಅವರಿಗೆ 18 ವರ್ಷವಾಗುವ ಮೊದಲೇ ವಿವಾಹಿತರಾಗಿದ್ದರು. (ಎಪ್ರಿಲ್ 2016ರ ಇಂಡಿಯಾ ಸ್ಪೆಂಡ್ ವರದಿ) ಅಪ್ರಾಪ್ತ ವಯಸ್ಸಿನಲ್ಲಿ ನಡೆಯುವ ವಿವಾಹ ಹೆಣ್ನೊಬ್ಬಳ ಬದುಕಿನಲ್ಲಿ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅವಳು ದೈಹಿಕವಾಗಿ ಹಾಗೂ ಮಾನಸಿಕ ವಾಗಿ ಸಿದ್ಧಳಾಗುವ ಮೊದಲೇ ಅವಳನ್ನು ಪ್ರೌಢಕ್ಕೆ ಮತ್ತು ತಾಯ್ತನಕ್ಕೆ ಒತ್ತಾಯ ಪೂರ್ವಕವಾಗಿ ತಳ್ಳಿ ಅವಳ ಬಾಲ್ಯವನ್ನು ಕೊನೆಗೊಳಿಸುತ್ತದೆ. ಬಾಲವಧುಗಳಿಗೆ ತಾವು ಅಬಲೆಯರು ಅನ್ನಿಸುತ್ತದೆ ಮತ್ತು ಆರೋಗ್ಯ, ಶಿಕ್ಷಣ ಹಾಗೂ ಭದ್ರತೆಯ ಹಕ್ಕುಗಳಿಂದ ಅವರನ್ನು ವಂಚಿಸಲಾಗುತ್ತದೆ.
ಅದಲ್ಲದೆ (2016ರ ವರದಿಯ ಪ್ರಕಾರ) ಪ್ರತೀ 1,000 ಹೆಣ್ಣು ಮಕ್ಕಳಲ್ಲಿ ಶೇ.23.3 ಹೆಣ್ಣು ಮಕ್ಕಳು 15ಮತ್ತು 19ರ ವಯೋಮಾನದ ನಡುವೆ ತಾಯಂದಿರಾದರು. ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ತಾಯ್ತನ ಹೊಂದುವು ದರಿಂದ ರಾಷ್ಟ್ರದ ಅರ್ಥ ವ್ಯವಸ್ಥೆ ಹಾಗೂ ಸಮುದಾಯಗಳ ಮೇಲೆ ತೀವ್ರವಾದ ಪರಿಣಾಮಗಳಾಗುತ್ತವೆ; ಭಾರತದಲ್ಲಿ ಹದಿಹರೆಯದ ಹೆಣ್ಣು ಮಕ್ಕಳು ತಾಯಂದಿರಾಗಲು ತಮ್ಮ 20ರ ಹರೆಯದವರೆಗೆ ಕಾದರೆ, ಅವರು 7.7 ಬಿಲಿಯ ಡಾಲರ್ ಅಥವಾ 49,600 ಕೋಟಿ ರೂ.ಯಷ್ಟು ಹೆಚ್ಚಿನ ಆರ್ಥಿಕ ಉತ್ಪಾದಕತೆಯನ್ನು ಹೊಂದಬಲ್ಲರು.
ಜಾಗತಿಕವಾಗಿ, 700 ಮಿಲಿಯ ಮಕ್ಕಳ ಬಾಲ್ಯ, ಅವರ ಬಾಲ್ಯ ಕಳೆಯುವ ಮೊದಲೇ ಕಳೆದು ಹೋಗಿದೆ. ಈ ನಿಟ್ಟಿನಲ್ಲಿ ವರದಿಯ ಸೂಚ್ಯಂಕದಲ್ಲಿ ಭಾರತದ ನೆರೆಯ ಮೂರು ರಾಷ್ಟ್ರಗಳಾದ ಶ್ರೀಲಂಕಾ (61ನೆ ಸ್ಥಾನ), ಭೂತಾನ್ (93ನೆ ಸ್ಥಾನ) ಮತ್ತು ಮ್ಯಾನ್ಮಾರ್ (112ನೆ ಸ್ಥಾನ) ಭಾರತಕ್ಕಿಂತ ಮೇಲಿನ ಸ್ಥಾನ ಪಡೆದಿವೆ. ನೇಪಾಲ (134), ಬಾಂಗ್ಲಾ ದೇಶ (134) ಮತ್ತು ಪಾಕಿಸ್ತಾನ (148)ದಲ್ಲಿ ಮಕ್ಕಳ ಸ್ಥಿತಿ ಭಾರತದ ಸ್ಥಿತಿಗಿಂತ ಕೆಟ್ಟದಾಗಿದೆ.







