ಹ್ಯಾಮಂಡ್ ಸರ್ಕಸ್ ರೈಲು ಅವಘಡ
ಈ ದಿನ

*1918 ಜೂ.22ರಂದು ಘೋರ ಅಪಘಾತವೊಂದು ಅಮೆರಿಕದಲ್ಲಿ ಸಂಭವಿಸಿತು. ಹ್ಯಾಮಂಡ್ ಸರ್ಕಸ್ ರೈಲು ನಾಶವಾದ ದಿನವದು. ಟ್ರೇನ್ ಚಲನೆಗೆ ಸಂಬಂಧಿಸಿದ ಇಂಜಿನಿಯರೊಬ್ಬ ನಿದ್ದೆಗೆ ಜಾರಿದ್ದರಿಂದ ಹ್ಯಾಮಂಡ್ ಸರ್ಕಸ್ ರೈಲು ಎದುರುಗಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಗುದ್ದಿತು. ಪರಿಣಾಮ 80 ಜನ ತಮ್ಮ ಪ್ರಾಣ ಕಳೆದುಕೊಂಡರು. ಹಲವರು ಗಾಯಗೊಂಡರು.
*1555ರ ಈ ದಿನ ಭಾರತದ ಪ್ರಸಿದ್ಧ ಮೊಗಲ್ ರಾಜವಂಶದ 2ನೆ ದೊರೆ ಹುಮಾಯೂನ್ ತನ್ನ ಮಗ ಅಕ್ಬರ್‌ನನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸಿದನು.
*1897ರ ಈ ದಿನ ಸ್ವಾತಂತ್ರ ಹೋರಾಟ ಗಾರರಾದ ಚಾಪೇಕರ್ ಸಹೋದರರು ಹಾಗೂ ವಿನಾಯಕ ರಾನಡೆ ಸೇರಿಕೊಂಡು ಬ್ರಿಟಿಷ್ ಅಧಿಕಾರಿಗಳಾದ ಚಾರ್ಲ್ ವಾಲ್ಟರ್ ರ್ಯಾಂಡ್ ಮತ್ತು ಲೆ.ಚಾರ್ಲ್ಸ್ ಈಗರ್ಟನ್ ಆಯರೆಸ್ಟ್‌ನನ್ನು ಹತ್ಯೆಗೈದರು.
*1633ರ ಈ ದಿನ ‘ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ’ ಎಂಬ ಕೋಪರ್ನಿಕಸ್‌ನ ವಾದವನ್ನು ಸಮರ್ಥಿಸಿದ ಖಗೋಳ ವಿಜ್ಞಾನಿ ಗೆಲಿಲಿಯೊಗೆ ತನ್ನ ಸಮರ್ಥನೆಯನ್ನು ಹಿಂಪಡೆಯುವಂತೆ ಪೋಪ್ ಒತ್ತಾಯಿಸಿದರು. ಏಕೆಂದರೆ ‘ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆ’ ಎಂಬುದು ಚರ್ಚ್‌ನ ನಂಬಿಕೆಯಾಗಿತ್ತು. ಆದರೆ 1992ರ ಅ.31ರಂದು ವ್ಯಾಟಿಕನ್ ಆಡಳಿತ ತನ್ನ ತಪ್ಪು ಒಪ್ಪಿಕೊಂಡ ತರುವಾಯ ವಿಜ್ಞಾನಕ್ಕೆ ಅಂತಿಮ ಜಯ ಎಂಬುದು ಸಾಬೀತಾಯಿತು.
*1675ರ ಈ ದಿನ ಇಂಗ್ಲೆಂಡ್ ದೊರೆ 2ನೆ ಚಾರ್ಲ್ಸ್‌ನಿಂದ ರಾಯಲ್ ಗ್ರೀನ್‌ವಿಚ್ ವೀಕ್ಷಣಾಲಯ ಸ್ಥಾಪಿಸಲ್ಪಟ್ಟಿತು.
*1934ರಲ್ಲಿ ಡಿಲ್ಲಿಂಜರ್ ದರೋಡೆಕೋರರ ಗುಂಪಿನ ನಾಯಕ ಜಾನ್ ಡಿಲ್ಲಿಂಜರ್‌ನನ್ನು ಅಮೆರಿಕದ ಪ್ರಥಮ ನಂ.1 ವಿರೋಧಿ ಎಂದು ಹೆಸರಿಸಲಾಯಿತು.
*1941ರ ಈ ದಿನ ಜರ್ಮನಿ, ಇಟಲಿ ಮತ್ತು ರೋಮಾನಿಯಾಗಳು ಸಂಯುಕ್ತವಾಗಿ ಸೋವಿಯತ್ ರಶ್ಯದ ವಿರುದ್ಧ ಯುದ್ಧ ಸಾರಿದವು.







