ಅಮರೀಶ್ ಪುರಿ
ಹ್ಯಾಪಿ ಬರ್ತ್‌ಡೇ

ಅಮರೀಶ್ ಪುರಿ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಇವರು 1932 ಜೂ.22 ಪಂಜಾಬ್‌ನ ಜಲಂದರ್‌ನಲ್ಲಿ ಜನಿಸಿದರು. ಸತ್ಯದೇವ್ ದುಬೆ ಅವರ ‘ಪೃಥ್ವಿ’ ರಂಗಶಾಲೆಯಿಂದ ನಟನಾ ಪಯಣ ಆರಂಭಿಸಿದ ಅವರು ಗಿರೀಶ್ ಕಾರ್ನಾಡ್‌ರಂತಹ ಮಹಾನ್ ನಾಟಕಕಾರರ ಜತೆ ಕೆಲಸ ಮಾಡಿದರು.
ಪೋಷಕ ನಟನಾಗಿ ಅದರಲ್ಲೂ ವಿಶೇಷವಾಗಿ ಖಳನ ಪಾತ್ರದಲ್ಲಿ ಹಿಂದಿ ಚಿತ್ರರಂಗದಲ್ಲಿ ಮಿಂಚು ಹರಿಸಿದ್ದರು. 1967-2005ರ ಅವಧಿಯಲ್ಲಿ ಸುಮಾರು 400 ಸಿನೆಮಾಗಳಲ್ಲಿ ಅಭಿನಯಿಸಿದ ಹಿರಿಮೆ ಅವರದು. ಶೇಖರ್ ಕಪೂರ್ ನಿರ್ದೇಶನದ ‘ಮಿ.ಇಂಡಿಯಾ’ ಚಿತ್ರದ ‘ಮೊಗ್ಯಾಂಬೊ’ ಪಾತ್ರದಿಂದಲೇ ಭಾರತೀಯರಿಗೆ ಚಿರಪರಿಚಿತರು.
ಪ್ರೇಮ್ ಪೂಜಾರಿ, ದೋಸ್ತಾನಾ, ಹಮ್‌ಪಾಂಚ್, ಕಲಿಯುಗ್, ಡಿಡಿಎಲ್‌ಜೆ ಅವರ ಇನ್ನಿತರ ಪ್ರಮುಖ ಚಿತ್ರಗಳು. ಅತ್ಯುತ್ತಮ ಪೋಷಕ ನಟನೆಗೆ ಮೂರು ಬಾರಿ ಫಿಲ್ಮ್‌ಫೇರ್ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ. ಪುರಿ ಅವರು 2005ರ ಜ.12ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾದರು.
Next Story





