Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ನೋವಿನ ಹಾದಿಯಿಂದ ಸಂತಸದ ತಾಣಕ್ಕೆ

ನೋವಿನ ಹಾದಿಯಿಂದ ಸಂತಸದ ತಾಣಕ್ಕೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ22 Jun 2017 5:26 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ನೋವಿನ ಹಾದಿಯಿಂದ ಸಂತಸದ ತಾಣಕ್ಕೆ

‘‘ಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು. ಮತ್ತು ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ’’ ಎನ್ನುವ ಅರಿವನ್ನು ನಮಗೆ ನೀಡುವ ಕೃತಿ, ನೇಮಿಚಂದ್ರ ಅವರು ಬರೆದಿರುವ ‘ಸಾವೇ, ಬರುವುದಿದ್ದರೆ ನಾಳೆ ಬಾ!’ ಕೃತಿ. ಈ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗ ಇದು. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮಾಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ ಈ ಕೃತಿ. 

ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ. ‘ನಮ್ಮ ಆರೋ ಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ’ ಎನ್ನುವುದನ್ನು ಆ ಕೃತಿ ಬೇರೆ ಬೇರೆ ಉದಾಹರಣೆಗಳ ಮೂಲಕ ಹೇಳುತ್ತದೆ.

‘ನೀರು-ಸರ್ವ ರೋಗ ನಿವಾರಕ’ ಲೇಖನ ದಲ್ಲಿ ನೀರನ್ನು ಬಳಸುವ ಮೂಲಕವೇ ನಮ್ಮ ದೇಹವನ್ನು ಹೇಗೆ ಆರೋಗ್ಯವಾಗಿಟ್ಟು ಕೊಳ್ಳ ಬಹುದು ಎನ್ನುವುದನ್ನು ವಿವರಿಸುತ್ತಾರೆ. ನೀರಿನ ಕೊಡುಗೆಗಳ ಕುರಿತಂತೆ ಕುತೂಹಲಕರ ಮಾಹಿತಿಗಳಿವೆ. ಡಾ. ಬ್ಯಾಟ್‌ಮ್ಯಾಂಗ್ ಅವರ ಬದುಕಿನುದ್ದದ ಸಂದೇಶ ‘ನೀವು ರೋಗಿ ಯಲ್ಲ, ನೀವು ಬಾಯಾರಿದ್ದೀರಿ ಅಷ್ಟೇ’ ಎನ್ನುವು ದನ್ನು ಮನುಷ್ಯ ಸದಾ ನೆನಪಿನಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ನಾವು ಸಾಧಾರಣವಾಗಿ ‘ಶತಾಯುಷಿ’ ಎಂದು ಒಬ್ಬ ವ್ಯಕ್ತಿಯನ್ನು ಕರೆದು ಮುಗಿಸಿ ಬಿಡುತ್ತೇವೆ.

ಆದರೆ ಪ್ರತೀ ಶತಾಯುಷಿಯಿಂದಲೂ ಕಲಿಯುವುದು ಬಹಳಷ್ಟಿದೆ. ಅವರು ತಮ್ಮ ಬದುಕನ್ನು ರೂಪಿಸಿದ ರೀತಿಯನ್ನು ಅಧ್ಯಯನ ಮಾಡುವ ಅಗತ್ಯವಿದೆ. ದೀರ್ಘಾ ಯುಷ್ಯದ ಗುಟ್ಟನ್ನು ಒಡೆಯುವ ಪ್ರಯತ್ನ ಇನ್ನೊಂದು ಲೇಖನದಲ್ಲಿ ಮಾಡುತ್ತಾರೆ. ತಮ್ಮ ಲೇಖನಕ್ಕೆ ಶ್ರೀ ಸಿದ್ಧಗಂಗ ಮಠದ ಶಿವಕುಮಾರ ಸ್ವಾಮಿಗಳು, ಪ್ರೊ. ಜೀವಿ, ಪಂಡಿತ್ ಸುಧಾಕರ ಚತುರ್ವೇದಿ ಮೊದಲಾದವರ ಬದುಕನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾರೆ.

ಸಾಧಾರಣವಾಗಿ ಒಂದು ಪುಟ್ಟ ಕಾಲುನೋವು ಬಂದರೆ ನಾವು ಆಕಾಶಭೂಮಿ ಒಂದು ಮಾಡುತ್ತೇವೆ. ನಿರಾಶರಾಗುತ್ತೇವೆ. ಆದರೆ ತಮ್ಮ ವೈಕಲ್ಯ ಗಳನ್ನು ಗೆದ್ದು ಆಕಾಶದೆತ್ತರದ ಸಾಧನೆಗಳನ್ನು ಮಾಡಿದವರ ಬದುಕನ್ನು ಅವಲೋಕಿಸಿದರೆ ಸಾಕು, ನಾವು ಪಡೆದುಕೊಂಡದ್ದೇನು ಎನ್ನುವುದು ಗಮನಕ್ಕೆ ಬರುತ್ತದೆ. ‘ಬದುಕು ನಿಲ್ಲಲಿಲ್ಲ ಅಲ್ಲಿಗೇ’ ಕೃತಿಯಲ್ಲಿ ಇಂತಹ ಸಾಧಕರನ್ನು ಮುಂದಿಟ್ಟು ಆತ್ಮವಿಶ್ವಾಸವನ್ನು ಕಟ್ಟುತ್ತಾರೆ.

ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ ಲೇಖಕಿ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ‘ನಮ್ಮ ಚಿಂತನೆ, ವಿಚಾರ ಕ್ರಿಯೆಯ ನಡುವಿನ ಸಾಮರಸ್ಯವನಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ’ ಎಂಬ ಭರವಸೆಯ ಲೇಖನಗಳು ಈ ಕೃತಿಯಲ್ಲಿವೆ. ನವಕರ್ನಾಟಕ ಪ್ರಕಾಶನ ಹೊರ ತಂದಿರುವ ಈ ಕೃತಿಯ ಮುಖಬೆಲೆ 190 ರೂ. .

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X