ಕನಿಷ್ಕ ವಿಮಾನ ದುರಂತ
ಈ ದಿನ

1985 ಜೂ.23ರ ಈ ದಿನ ಏರ್ ಇಂಡಿಯಾ ಇತಿಹಾಸದಲ್ಲಿ ಮಹಾ ದುರಂತವೆಂದು ದಾಖಲಿಸಲ್ಪಟ್ಟಿದೆ. ವ್ಯಾಂಕೋವರ್-ದಿಲ್ಲಿ -ಮುಂಬೈ ಮಾರ್ಗದಿಂದ ಹಾರಾಟ ನಡೆಸುತ್ತಿದ್ದ ಕನಿಷ್ಕ 707 ಎಂಬ ಹೆಸರಿನ ವಿಮಾನದಲ್ಲಿ, ಭೂಮಿ ಯಿಂದ 9400 ಮೀ. ಅಂತರದಲ್ಲಿ ಬಾಂಬ್‌ಸ್ಫೋಟಗೊಂಡಿತು. ಪರಿಣಾಮ ಅಂಟ್ಲಾಂಟಿಕ್ ಸಾಗರದಲ್ಲಿ ವಿಮಾನ ಪತನವಾಗಿ, ಅದರೊಳಗಿದ್ದ ಎಲ್ಲ 329( ಸಿಬ್ಬಂದಿ ಸೇರಿ) ಜನರು ತಮ್ಮ ಪ್ರಾಣ ಕಳೆದುಕೊಂಡರು. ಇಂದ್ರಜಿತ್ ಸಿಂಗ್ ಎಂಬಾತನೇ ಈ ಕೃತ್ಯಕ್ಕೆ ಕಾರಣ ಎಂಬುದು ಸಾಬೀತಾಗಿ ಕೆನಡಾ ಸರಕಾರ ಆತನಿಗೆ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತು.
* 1757ರ ಈ ದಿನ ಬಂಗಾಳದ ನವಾಬ ಸಿರಾಜುದ್ದೌಲ್ ಮತ್ತು ಬ್ರಿಟಿಷ್ ಸೈನ್ಯದ ನಡುವೆ ಪ್ಲಾಸಿ ಎಂಬಲ್ಲಿ ಘನಘೋರ ಕದನ ಆರಂಭವಾಯಿತು. ಈ ಸಮರದಲ್ಲಿ ನವಾಬನು ಸಂಪೂರ್ಣವಾಗಿ ಸೋತು,ಬಂಗಾಳವು ಬ್ರಿಟಿಷರ ವಶವಾಯಿತು.
* 1930ರಲ್ಲಿ ಬ್ರಿಟಿಷರ ನೇಮಕವಾಗಿದ್ದ ಸೈಮನ್ ಕಮಿಷನ್‌ವು ಫೆಡರಲ್ ಸ್ಟೇಟ್ (ಸಂಯುಕ್ತರಾಷ್ಟ್ರ)ದ ಕೊಡುಗೆಯನ್ನು ಮುಂದಿಟ್ಟಿತು. ಆದರೆ ಭಾರತ ಇದಕ್ಕೆ ಒಪ್ಪಿಗೆ ನೀಡಲಿಲ್ಲ.
* 1946ರ ಈ ದಿನ ಮಧ್ಯಂತರ ಚುನಾವಣೆಯಲ್ಲಿ ಪಾಲ್ಗೊಳ್ಳದೆ, ಸಂವಿಧಾನ ಸಭೆಗೆ ಮಾತ್ರ ಪಾಲ್ಗೊಳ್ಳುವಂತೆ ಮಹಾತ್ಮಾ ಗಾಂಧೀಜಿ ಕಾಂಗ್ರೆಸಿಗೆ ಆದೇಶಿಸಿದರು.
* 930ರಲ್ಲಿ ಪ್ರಪಂಚದ ಅತ್ಯಂತ ಪ್ರಾಚೀನ ಸಂಸತ್ತು ದಿ ಐಲ್ಯಾಂಡಿಕ್ ಪಾರ್ಲಿಮೆಂಟ್ ರಚನೆಗೊಂಡಿತು.
* 1894ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಪ್ಯಾರಿಸ್‌ನ ಸಾರ್ಬನ್ನಾದಲ್ಲಿ ರಚನೆಯಾಯಿತು.
* ಜೂ.23, 1972ರಲ್ಲಿ ಹರ್ರಿಕೇನ್ ಎಗ್ನೆಸ್ ಹೆಸರಿನ ಚಂಡಮಾರುತ ಅಮೆರಿಕದಲ್ಲಿ ಬೀಸಿದ ಪರಿಣಾಮ 15 ರಾಜ್ಯಗಳ 119 ಜನ ಅಸುನೀಗಿದರು.ಸುಮಾರು 3ಬಿಲಿಯನ್ ಡಾಲರ್ ನಷ್ಟ ಸಂಭವಿಸಿತು. ಇದು ಅಮೆರಿಕದ ಅತ್ಯಂತ ದುಬಾರಿ ನೈಸರ್ಗಿಕ ದುರಂತವೆಂದೇ ಕುಖ್ಯಾತಿಯಾಗಿದೆ.
* 2016ರ ಈ ದಿನ ಬ್ರಿಟನ್ ಸಂಸತ್ತು ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ಕುರಿತು, ಬ್ರೆಕ್ಸಿಟ್ ಜನಮತ ಸಂಗ್ರಹಿಸಿತು.