Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ನ್ಯಾಯಾಂಗ ಆಯೋಗವು ಪ್ರಕರಣವನ್ನು ...

ನ್ಯಾಯಾಂಗ ಆಯೋಗವು ಪ್ರಕರಣವನ್ನು ಹೂತುಹಾಕುವ ಒಂದು ಹುನ್ನಾರವೇ?

ಮಧ್ಯಪ್ರದೇಶದ ರೈತರ ಮೇಲೆ ಗೋಲಿಬಾರ್

ರಾಕೇಶ್ ದೀಕ್ಷಿತ್ರಾಕೇಶ್ ದೀಕ್ಷಿತ್23 Jun 2017 6:34 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ನ್ಯಾಯಾಂಗ ಆಯೋಗವು ಪ್ರಕರಣವನ್ನು  ಹೂತುಹಾಕುವ ಒಂದು ಹುನ್ನಾರವೇ?

‘‘ಹತ್ಯೆಯಾದವರು ರೈತರೆಂದ ಮೇಲೆ, ಗೃಹ ಸಚಿವರೂ ಸೇರಿದಂತೆ ಬಿಜೆಪಿ ನಾಯಕರು, ಅವರನ್ನು ಸಮಾಜ ವಿರೋಧಿಗಳು ಹಾಗೂ ಅಫೀಮು ಕಳ್ಳಸಾಗಾಟಗಾರರೆಂದು ಹೇಗೆ ಹೇಳಿದರು? ಸಮಾಜ ವಿರೋಧಿಗಳಾದರೆ, ಸರಕಾರ ಯಾಕೆ ಅವರ ಕುಟುಂಬಗಳಿಗೆ ಅವರು ಕೇಳಿರದ ಒಂದು ಕೋಟಿ ರೂ. ಪರಿಹಾರ ಘೋಷಿಸಿತು?’’ ಎಂದು ಅಜಯ್‌ಸಿಂಗ್ ಪ್ರಶ್ನಿಸಿದ್ದಾರೆ.

ಕಳೆದ ದಶಕದಲ್ಲಿ ಮಧ್ಯಪ್ರದೇಶವು ಪೊಲೀಸ್ ಎನ್‌ಕೌಂಟರ್, ರಾಜ್ಯದಲ್ಲಿ ನಡೆದ ಸ್ಫೋಟಗಳು ಹಾಗೂ ಹಗರಣಗಳು ಇತ್ಯಾದಿಗಳ ವಿಚಾರಣೆ ನಡೆಸಲು ಹಲವು ನ್ಯಾಯಾಂಗ ಆಯೋಗಗಳನ್ನು ರಚಿಸಿದೆ. ಆದರೆ ವರದಿಗಳನ್ನು ಸರಕಾರಕ್ಕೆ ಸಲ್ಲಿಸಿದಾಗೆಲ್ಲಾ ಅವುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದು ಅಪರೂಪವೆಂದೇ ಹೇಳಬಹುದು, ಇತ್ತೀಚೆಗೆ ಮಂದ್‌ಸೋರ್‌ನಲ್ಲಿ ಜೂನ್ 6ರಂದು ಐದು ರೈತರ ಸಾವಿಗೆ ಕಾರಣರಾದ ಪೊಲೀಸ್ ಗೋಲಿಬಾರ್ ಬಗ್ಗೆ ವಿಚಾರಣೆ ನಡೆಸಲು ನೇಮಕಗೊಂಡ ಆಯೋಗದ ಗತಿಕೂಡ ಹೀಗೆಯೇ ಆಗಬಹುದೆಂಬುದು ಅಲ್ಲಿಯ ವಿರೋಧ ಪಕ್ಷಗಳ ನಿರೀಕ್ಷೆ.

ಸಾಲಮನ್ನಾ ಹಾಗೂ ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಗಳಿಗಾಗಿ ಆಗ್ರಹಿಸುತ್ತಿದ್ದ ರೈತರ ಮೇಲೆ ನಡೆದ ಗೋಲಿಬಾರ್ ಪ್ರಕರಣದ ವಿಚಾರಣೆಗೆ ಸರಕಾರವು ಏಕ-ಸದಸ್ಯ ಆಯೋಗದ ಮುಖ್ಯಸ್ಥರನ್ನಾಗಿ ನ್ಯಾಯ ಮೂರ್ತಿ ಜೆ.ಕೆ.ಜೈನ್‌ರವರನ್ನು ನೇಮಿಸಿದೆ. ಇಂದೋರ್‌ನಲ್ಲಿ ಇರಲಿರುವ ಆಯೋಗದ ರಚನೆಯಾಗಿ ಮೂರು ತಿಂಗಳೊಳಗೆ ಅದು ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ. ಯಾವ ಸನ್ನಿವೇಶಗಳಲ್ಲಿ ಗೋಲಿಬಾರ್ ಹಾಗೂ ರೈತರ ಸಾವುಗಳು ಸಂಭವಿಸಿದವು, ಆ ಸಂದರ್ಭದಲ್ಲಿ ಪೊಲೀಸ್ ತೆಗೆದುಕೊಂಡ ಕ್ರಮ ಸರಿಯೆ? ಅಲ್ಲವಾದಲ್ಲಿ ಅಪರಾಧಿಗಳು ಯಾರು ಎಂಬುದನ್ನು ಆಯೋಗವು ವಿಚಾರಣೆ ನಡೆಸಲಿದೆ.

ಆದರೆ ಆಯೋಗ ರಚಿಸುವ ಸರಕಾರದ ನಿರ್ಧಾರವು ರಾಜ್ಯದ ರಾಜಕೀಯ ವೀಕ್ಷಕರಲ್ಲಿ ಅನುಮಾನ ಮೂಡಿಸಿದೆ. ಯಾಕೆಂದರೆ ಮಧ್ಯಪ್ರದೇಶದಲ್ಲಿ ನ್ಯಾಯಾಂಗ ವಿಚಾರಣಾ ಆಯೋಗ ಎಂದರೆ ನಿವೃತ್ತ ನ್ಯಾಯಾಧೀಶರೊಬ್ಬರಿಗೆ ತಾತ್ಕಾಲಿಕ ನೌಕರಿ ನೀಡುವ ಒಂದು ಅವಕಾಶಕ್ಕಿಂತ ಹೆಚ್ಚೇನೂ ಅಲ್ಲವೆಂಬ ಭಾವನೆ ಇದೆ. ಕಳೆದ ದಶಕದಲ್ಲಿ ಚೌಹಾನ್ ಸರಕಾರ ಸುಮಾರು ಒಂದು ಡಝನ್ ಇಂತಹ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾ ಆಯೋಗಗಳ ಮುಖ್ಯಸ್ಥರನ್ನಾಗಿ ನೇಮಿಸಿದೆ. ಈ ಸಾಲಿಗೆ, ಕಳೆದ ಜನವರಿಯಲ್ಲಿ ನಿವೃತ್ತರಾದ ನ್ಯಾಯಮೂರ್ತಿ ಜೈನ್ ತೀರ ಇತ್ತೀಚಿನ ಸೇರ್ಪಡೆಯಾಗಿದ್ದಾರೆ.

ನ್ಯಾಯದ ಬಗ್ಗೆ ಅನುಮಾನ

ಈ ಹಿಂದಿನ ನ್ಯಾಯಾಂಗ ವಿಚಾರಣಾ ಆಯೋಗಗಳ ವರದಿಗಳ ಹಣೆಬರಹ ನೋಡಿದರೆ ಜೆ.ಕೆ.ಜೈನ್ ಆಯೋಗವು ಪೊಲೀಸ್ ಗೋಲಿಬಾರಿನ ಬಲಿಪಶುಗಳಿಗೆ ನ್ಯಾಯ ದೊರಕಿಸುತ್ತದೆಂಬ ಭರವಸೆ ತಮಗಿಲ್ಲ ಎನ್ನುತ್ತಾರೆ ವಿಪಕ್ಷ ರಾಜಕಾರಣಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು. ಕಳೆದ ವರ್ಷ ಹಿರಿಯ ಕಾಂಗ್ರೆಸ್ ನಾಯಕ ರಾಮ್ ನಿವಾಸ್ ರಾವತ್, ಕಳೆದ ಹತ್ತು ವರ್ಷಗಳಲ್ಲಿ ರಚಿತವಾದ ಒಂಬತ್ತು ನ್ಯಾಯಾಂಗ ಆಯೋಗಗಳ ಕುರಿತು ಸರಕಾರ ನಿಷ್ಕ್ರಿಯತೆಯ ಬಗ್ಗೆ ಬೆಳಕು ಚೆಲ್ಲಲು ರಾಜ್ಯಪಾಲ ಒ.ಪಿ. ಕೊಹ್ಲಿಯವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ‘‘ಜನರನ್ನು ಸಮಾಧಾನಪಡಿಸಿ, ತತ್‌ಕ್ಷಣದ ಪ್ರಕರಣದಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ನ್ಯಾಯಾಂಗ ಆಯೋಗಗಳನ್ನು ರಚಿಸುವುದು ಸರಕಾರಕ್ಕೆ ಒಂದು ಅಭ್ಯಾಸವಾಗಿಹೋಗಿದೆ’’ ಎಂದು ಅವರು ಬರೆದಿದ್ದರು.

ನ್ಯಾಯಾಂಗ ವಿಚಾರಣಾ ಆಯೋಗಗಳನ್ನು ರಚಿಸಲು ಅವಕಾಶ ನೀಡುವ ಕಮಿಶನ್ ಆಫ್ ಜುಡಿಶಿಯಲ್ ಎನ್‌ಕ್ವಾಯರಿ ಮಸೂದೆಯೇ ದೋಷಪೂರಿತ; ಸರಕಾರಕ್ಕೆ ಸಲ್ಲಿಸಲಾಗುವ ಆಯೋಗಗಳ ವರದಿಗಳನ್ನು ಸರಕಾರ ಬಹಿರಂಗ ಪಡಿಸುವುದನ್ನು ಅದು ಕಡ್ಡಾಯಗೊಳಿಸುವುದಿಲ್ಲ ಎಂದಿದ್ದಾರೆ, ಒಂದು ಸಾಮಾಜಿಕ ಸಂಘಟನೆಯಾಗಿರುವ ನ್ಯಾಶನಲ್ ಸೆಕ್ಯುಲರ್ ಫೋರಮ್‌ನ ನಿರ್ವಾಹಕ ಲಜ್ಜಾ ಶಂಕರ್ ಹರ್ದೆನಿಯಾ. ಸರ್ದಾರ್ ಸರೋವರ ಯೋಜನೆಯಲ್ಲಿ ನಡೆದ ಅವ್ಯವಹಾರಗಳ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಸ್.ಕೆ.ಝಾ ಆಯೋಗದ ವರದಿಯ ಬಗ್ಗೆ ಸರಕಾರ ತೋರಿದ ನಿಷ್ಕ್ರಿಯೆ ಈ ನಿಟ್ಟಿನಲ್ಲಿ ಎದ್ದು ಕಾಣುವ ಒಂದು ಉದಾಹರಣೆಯಾಗಿದೆ

2008ರ ಆಗಸ್ಟ್‌ನಲ್ಲಿ ಮಧ್ಯಪ್ರದೇಶದ ಹೈಕೋರ್ಟ್, 3,000 ಖೋಟಾ ಜಮೀನು ಮಾರಾಟ ನೋಂದಣಿಗಳು, ಪುನರ್ವಸತಿ ನಿವೇಶನಗಳಲ್ಲಿ ಭ್ರಷ್ಟಾಚಾರ ಹಾಗೂ ಸರ್ದಾರ್ ಸರೋವರ ಯೋಜನೆಯಿಂದಾದ ನಿರ್ವಸಿತರಿಗೆ ಮನೆ ಕಟ್ಟಲು ನಿವೇಶನಗಳ ಹಂಚಿಕೆ ಇತ್ಯಾದಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ವಿಚಾರಣೆ ನಡೆಸಲು ಝಾ ಆಯೋಗವು ರಚಿಸಿತ್ತು. ಕಳೆದ ಫೆಬ್ರವರಿಯಲ್ಲಿ ಆಯೋಗದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತಾದರೂ, ಸರಕಾರ ವರದಿಯ ಬಗ್ಗೆ ಕ್ರಮ ತೆಗೆದುಕೊಳ್ಳುವ ಮಾತು ಹಾಗಿರಲಿ; ಅದು ವರದಿಯನ್ನು ಇನ್ನೂ ಬಹಿರಂಗ ಪಡಿಸಿಯೇ ಇಲ್ಲ.

ವರದಿಯನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿ ‘ನರ್ಮದಾ ಬಚಾವೋ’ದ ನಾಯಕಿ ಮೇಧಾ ಪಾಟ್ಕರ್ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ.

ಕಥಾನಕಗಳ ನಡುವೆ ಯುದ್ಧ ವಿಪಕ್ಷನಾಯಕ ಕಾಂಗ್ರೆಸ್‌ನ ಅಜಯ್ ಸಿಂಗ್, ಈಗ ರಚಿತವಾಗಿರುವ ನ್ಯಾಯಾಂಗ ವಿಚಾರಣೆಯ ಮೇಲೆ ಪ್ರಭಾವ ಬೀರಲು ಮಂದ್‌ಸೋರ್ ಗೋಲಿಬಾರ್‌ನ ವಿಷಯದಲ್ಲಿ ಸರಕಾರವು ಉದ್ದೇಶಪುರ್ವಕವಾಗಿ ವರದಿಗಳನ್ನು, ಕಥಾನಕಗಳನ್ನು ಗೋಜಲಾಗಿ ಮಾಡಿದೆ ಎಂದು ಆಪಾದಿಸಿದ್ದಾರೆ.

  ಗೋಲಿಬಾರ್‌ನಲ್ಲಿ ರೈತರ ಹತ್ಯೆಯಾದ ಕೂಡಲೇ ಗೃಹ ಸಚಿವ ಭೂಪೇಂದ್ರ ಸಿಂಗ್, ಸಮಾಜ ವಿರೋಧಿ ಶಕ್ತಿಗಳ ಎರಡು ಗುಂಪುಗಳ ನಡುವೆ ನಡೆದ ಉಗ್ರಘರ್ಷಣೆಗಳ ಪರಿಣಾಮವಾಗಿ ಸಾವುಗಳು ಸಂಭವಿಸಿರಬಹುದೆಂದು ಹೇಳಿದ್ದರು. ಮೂರು ದಿನಗಳ ಬಳಿಕ ಅವರು ತನ್ನ ಹೇಳಿಕೆಯನ್ನು ಪೂರ್ತಿ ಬದಲಿಸಿ ಐವರು ರೈತರು ನಿಜವಾದ ಪೊಲೀಸರ ಗುಂಡುಗಳಿಗೆ ಬಲಿಯಾದರೆಂದು ಒಪ್ಪಿಕೊಂಡರು. ಆದರೂ ಮಂದ್‌ಸೋರ್‌ನ ಪೊಲೀಸ್ ಸೂಪರಿಂಟೆಂಡೆಂಟ್ ಮನೋಜ್ ಕುಮಾರ್ ಸಿಂಗ್, ಮಡಿದ ಐವರು ರೈತರಲ್ಲಿ ಒಬ್ಬ ಅಫೀಮು ಕಳ್ಳ ಸಾಗಾಟಗಾರನೆಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ‘‘ಹತ್ಯೆಯಾದವರು ರೈತರೆಂದ ಮೇಲೆ, ಗೃಹ ಸಚಿವರೂ ಸೇರಿದಂತೆ ಬಿಜೆಪಿ ನಾಯಕರು, ಅವರನ್ನು ಸಮಾಜ ವಿರೋಧಿಗಳು ಹಾಗೂ ಅಫೀಮು ಕಳ್ಳಸಾಗಾಟಗಾರರೆಂದು ಹೇಗೆ ಹೇಳಿದರು? ಸಮಾಜ ವಿರೋಧಿಗಳಾದರೆ, ಸರಕಾರ ಯಾಕೆ ಅವರ ಕುಟುಂಬಗಳಿಗೆ ಅವರು ಕೇಳಿರದ ಒಂದು ಕೋಟಿ ರೂ. ಪರಿಹಾರ ಘೋಷಿಸಿತು?’’ ಎಂದು ಅಜಯ್‌ಸಿಂಗ್ ಪ್ರಶ್ನಿಸಿದ್ದಾರೆ.

ನ್ಯಾಯಾಂಗ ಆಯೋಗ ರಚನೆಯಾಗುವ ಮೊದಲೇ ಘಟನೆಯ ಬಗ್ಗೆ ಸರಕಾರದ ಪ್ರತಿನಿಧಿಗಳು ತೀರ್ಪು ನೀಡಿದ್ದು ಇದೇ ಮೊದಲ ಬಾರಿಯಲ್ಲ.

ಕಳೆದ ವರ್ಷ ಆಕ್ಟೋಬರ್ 31ರ ರಾತ್ರಿ ಗರಿಷ್ಠ ಭದ್ರತೆಯ ಭೋಪಾಲ್ ಸೆಂಟ್ರಲ್ ಜೈಲಿನಿಂದ ಎಂಟು ಮಂದಿ ವಿಚಾರಣಾ ಧೀನ ಕೈದಿಗಳು ತಪ್ಪಿಸಿಕೊಂಡ ಕೆಲವೇ ಗಂಟೆಗಳ ಬಳಿಕ ಪೊಲೀಸರು ಅವರನ್ನು ಗುಂಡಿಕ್ಕಿ ಕೊಂದರು. ಮರುದಿನ ಮುಖ್ಯಮಂತ್ರಿ ಚೌಹಾನ್ ಹತ್ಯೆಗೀಡಾದ ಎಂಟು ಮಂದಿ ‘ಭಯಾನಕ ಭಯೋತ್ಪಾದಕರು’ ಎಂದು ಘೋಷಿಸಿದರು.

ಘಟನೆ ನಡೆದು ಕೆಲವು ದಿನಗಳ ಬಳಿಕ ಪೊಲೀಸ್ ಎನ್‌ಕೌಂಟರ್ ಬಗ್ಗೆ ಒಂದು ವಿಚಾರಣಾ ಆಯೋಗ ರಚಿಸುವುದಾಗಿ ಅವರು ಪ್ರಕಟಿಸಿದರು.

ಬಾಕಿ ಇರುವ ವರದಿಗಳು

   ಸರ್ದಾರ್ ಸರೋವರ್ ಯೋಜನೆಗೆ ಸಂಬಂಧಿಸಿದ ವರದಿಯಲ್ಲದೆ ಇತರ ಹಲವಾರು ವರದಿಗಳು ಬಾಕಿ ಇದೆ: ಇವುಗಳಲ್ಲಿ ಮುಖ್ಯವಾಗಿ 2000ನೆ ಇಸವಿಯಲ್ಲಿ ಭೋಪಾಲ್ ಮುನ್ಸಿಪಲ್ ಕಾರ್ಪೋರೇಶನ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಸಂಬಂಧಿಸಿ ನಡೆದ ಘಟನೆಯಲ್ಲಿ ಹಾಗೂ ಹಗರಣದ ಕುರಿತಾದ ಎಸ್.ಕೆ.ದುಬೆ ಆಯೋಗದ ವರದಿ 16 ವರ್ಷಗಳ ಬಳಿಕವೂ ಗೃಹ ಇಲಾಖೆಯಲ್ಲಿ ಇನ್ನೂ ಧೂಳು ತಿನ್ನುತ್ತಿದೆ. ಹಾಗೆಯೇ ಬಿಜೆಪಿ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಇಂಧೋರ್ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಆಗಿದ್ದಾಗ 2000ನೆ ಇಸವಿಯಲ್ಲಿ ನಡೆದ ಪಿಂಚಣಿ ಹಗರಣದ ನ್ಯಾಯಾಂಗ ವರದಿಕೂಡ ಇನ್ನೂ ಇತ್ಯರ್ಥವಾಗಿಲ್ಲ.

 ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ 1984ರಲ್ಲಿ ಸಂಭವಿಸಿದ ಸಾವಿರಾರು ಜನರ ಸಾವಿಗೆ ಕಾರಣವಾದ ಅನಿಲ ಸೋರಿಕೆ ದುರಂತದ ಕುರಿತು 2010ರಲ್ಲಿ ರಚನೆಯಾದ ನ್ಯಾಯಾಂಗ ಆಯೋಗವು ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆಯಾದರೂ ಸರಕಾರ ಅದರ ಬಗ್ಗೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಆಯೋಗದ ರಚನೆ ಜನರ ಕಣ್ಣೊರೆಸುವ ತಂತ್ರವಲ್ಲದೆ ಬೇರೇನೂ ಅಲ್ಲವೆಂದಿದ್ದಾರೆ, ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಉದ್ಯೋಗ್ ಸಂಘಟನ್‌ನ ಕಾರ್ಯನಿರ್ವಾಹಕ ಅಬ್ದುಲ್ ಜಬ್ಬಾರ್

ಕೃಪೆ:  scroll.in

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ರಾಕೇಶ್ ದೀಕ್ಷಿತ್
ರಾಕೇಶ್ ದೀಕ್ಷಿತ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X