Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಏನಿದು ಪೆಟ್ ಇನ್ಶೂರೆನ್ಸ್?

ಏನಿದು ಪೆಟ್ ಇನ್ಶೂರೆನ್ಸ್?

ವಿಸ್ಮಯವಿಸ್ಮಯ23 Jun 2017 11:25 PM IST
share
ಏನಿದು ಪೆಟ್ ಇನ್ಶೂರೆನ್ಸ್?

ಹೆಚ್ಚಿನವರು ಪೆಟ್ ಅನಿಮಲ್ ಅಥವಾ ಸಾಕುಪ್ರಾಣಿಗಳನ್ನು ಬಹುವಾಗಿ ಪ್ರೀತಿಸು ತ್ತಾರೆ. ಸಾಕುಪ್ರಾಣಿಯಿಲ್ಲದ ಮನೆಗಳೇ ಅಪರೂಪ ಎನ್ನಬಹುದು. ಎಷ್ಟೋ ಜನರು ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಭಾವಿಸಿರುತ್ತಾರೆ. ಹೀಗಾಗಿ ಈ ಪ್ರಾಣಿಗಳ ರಕ್ಷಣೆಗಾಗಿ ಮತ್ತು ಅವುಗಳಿಗೆ ವೈದ್ಯಕೀಯ ಉಪಚಾರವನ್ನೊದಗಿಸಲು ಪೆಟ್ ಇನ್ಶೂರೆನ್ಸ್ ಅಥವಾ ಸಾಕುಪ್ರಾಣಿಗಳ ವಿಮಾ ಪಾಲಿಸಿಯನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ.

ಪೆಟ್ ಇನ್ಶೂರೆನ್ಸ್ ಇತರೆಲ್ಲ ವಿಮೆಗಳಂತೆ ರಕ್ಷಣೆಯನ್ನು ಒದಗಿಸುತ್ತದೆ. ನಿಮ್ಮ ಸಾಕುಪ್ರಾಣಿಗಳಿಗೆ ಸಂಬಂಧಿಸಿದ ಅನಿರೀಕ್ಷಿತ ವೆಚ್ಚಗಳ ವಿರುದ್ಧ ಅದು ನಿಮಗೆ ರಕ್ಷಣೆಯನ್ನು ನೀಡುತ್ತದೆ. ನಾಯಿ, ಬೆಕ್ಕು, ಹಕ್ಕಿಗಳಂತಹ ಸಾಕುಪ್ರಾಣಿಗಳಿಗಾಗಿ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿರುವ ವಿಮಾ ಪಾಲಿಸಿಗಳು ಲಭ್ಯವಿವೆ.

ಸಾಕುಪ್ರಾಣಿಗಳ ಜೊತೆ ಗುರುತಿಸಿಕೊಂಡಿರುವ ಹಲವು ಆರೋಗ್ಯ ಸಮಸ್ಯೆಗಳಿವೆ. ಇವು ಬೇರೆ ಬೇರೆ ಸಾಕುಪ್ರಾಣಿಗಳಿಗೆ ವಿಭಿನ್ನವಾಗಿರುತ್ತವೆ. ನಿಮ್ಮ ಮುದ್ದಿನ ನಾಯಿಗೆ ಜ್ವರ ಬರಬಹುದು, ಜನ್ಮಜಾತ ಕಾಯಿಲೆಯಿರಬಹುದು, ಅದು ಕಳವಾಗಬಹುದು ಅಥವಾ ಅದು ಅಪಘಾತಕ್ಕೂ ಸಿಲುಕಬಹುದು.
 ಪೆಟ್ ಇನ್ಶೂರೆನ್ಸ್ ಪಾಲಿಸಿಗಳಲ್ಲೂ ಇತರ ವಿಮೆಗಳಂತೆ ವೈವಿಧ್ಯಗಳಿವೆ. ನಿಮ್ಮ ಮುದ್ದಿನ ಪ್ರಾಣಿಗೆ ಸೂಕ್ತವಾದ ವಿಮೆ ರಕ್ಷಣೆಯನ್ನು ಪಡೆಯುವುದು ಮುಖ್ಯವಾಗಿದೆ. ಪಶುವೈದ್ಯಕೀಯ ಶುಲ್ಕಗಳ ಜೊತೆಗೆ ಈ ಕೆಳಗಿನವೂ ನಿಮ್ಮ ಪೆಟ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಒಳಗೊಂಡಿರುತ್ತವೆ.

ಸಾಕುಪ್ರಾಣಿಯ ನಷ್ಟ ಅಥವಾ ಕಳವು:
ಇದು ಸಾಕುಪ್ರಾಣಿಯ ಖರೀದಿ ಬೆಲೆಯ ರಕ್ಷಣೆಯನ್ನು ನೀಡುತ್ತದೆ. ಇದನ್ನು ಪಡೆಯಲು ನೀವು ರುಜುವಾತನ್ನು ಸಲ್ಲಿಸಬೇಕು, ಇಲ್ಲದಿದ್ದರೆ ವಿಮಾ ಕಂಪೆನಿ ಮಾರುಕಟ್ಟೆಯಲ್ಲಿ ಪ್ರಚಲಿತ ದರವನ್ನು ನಿಮಗೆ ಪಾವತಿಸುತ್ತದೆ.

ಸಾಕುಪ್ರಾಣಿಗಳ ವರ್ತನೆಯಲ್ಲಿ ಸಮಸ್ಯೆ, ಕಾಯಿಲೆಯಿಂದ ಸಾವು ಅಥವಾ ಗಾಯ ಬಾಧ್ಯತೆ: ಈ ವಿಮೆ ನಾಯಿಗಳಿಗೆ ಮಾತ್ರ ಲಭ್ಯವಿದೆ. ನಿಮ್ಮ ನಾಯಿ ಯಾರಿಗಾದರೂ ಕಚ್ಚಿ ಗಾಯಗೊಳಿಸಿದರೆ ಅಥವಾ ಇನ್ನೊಬ್ಬರ ಆಸ್ತಿಗೆ ಹಾನಿಯನ್ನುಂಟು ಮಾಡಿದರೆ ನೀವು ಶಾಸನಾತ್ಮಕವಾಗಿ ಪಾವತಿಸಬೇಕಾದ ಪರಿಹಾರ ಮೊತ್ತದ ವಿರುದ್ಧ ಇದು ರಕ್ಷಣೆ ನೀಡುತ್ತದೆ. ಅಂದರೆ ಆ ಮೊತ್ತವನ್ನು ವಿಮಾ ಕಂಪೆನಿಯೇ ಪಾವತಿಸುತ್ತದೆ.
ಭಾರತದಲ್ಲಿ ಪೆಟ್ ಇನ್ಶೂರೆನ್ಸ್ ಹೊಸ ಪರಿಕಲ್ಪನೆಯಾಗಿದ್ದು, ಇದರ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಹೀಗಾಗಿ ಈ ಪಾಲಿಸಿಯನ್ನು ಪಡೆಯುವ ಗ್ರಾಹಕರ ಸಂಖ್ಯೆ ಕಡಿಮೆಯೇ ಇದೆ. ಈ ಹಿಂದೆಯೂ ಪೆಟ್ ಇನ್ಶೂರೆನ್ಸ್ ಒದಗಿಸುವ ಹಲವು ಕಂಪೆನಿಗಳಿದ್ದವಾದರೂ ಅದು ಜಾನುವಾರುಗಳಿಗೆ ಮಾತ್ರ ಸೀಮಿತವಾಗಿತ್ತು.
ಭಾರತದಲ್ಲಿ ಹೆಚ್ಚಿನ ಪೆಟ್ ಇನ್ಶೂರೆನ್ಸ್ ಪಾಲಿಸಿಗಳು ನಾಯಿಗಳಿಗೆ ಮಾತ್ರ ಸೀಮಿತವಾಗಿವೆ.

ಪೆಟ್ ಇನ್ಶೂರೆನ್ಸ್ ಒದಗಿಸುವ ಕಂಪೆನಿಗಳು
ನ್ಯೂ ಇಂಡಿಯಾ ಇನ್ಶೂರೆನ್ಸ್:
ಈ ಕಂಪೆನಿಯು ವಿಮೆ ರಕ್ಷಣೆಗೊಳಪಟ್ಟ ನಾಯಿಗಳನ್ನು ಟ್ಯಾಟೂ, ನೋಸ್ ಪ್ರಿಂಟ್, ಫೋಟೊ ಇತ್ಯಾದಿಗಳಿಂದ ಗುರುತಿಸುತ್ತದೆ. ಎಂಟು ವಾರಗಳಿಂದ ಎಂಟು ವರ್ಷ ಪ್ರಾಯದವರೆಗಿನ ಶ್ವಾನಗಳಿಗೆ ವಿಮೆ ರಕ್ಷಣೆ ಲಭ್ಯವಿದೆ. ಕುರಿ ಮತ್ತು ಆಡು ವಿಮೆ, ಜಾನುವಾರು ವಿಮೆ, ಹಂದಿ ವಿಮೆ, ಪೌಲ್ಟ್ರಿ ವಿಮೆ, ಬಾತುಕೋಳಿ ವಿಮೆ, ಮೊಲ ವಿಮೆ, ಆನೆ ವಿಮೆ ಮತ್ತು ಒಳನಾಡು ಮೀನು ವಿಮೆ ಇತ್ಯಾದಿಗಳು ಈ ಕಂಪೆನಿಯು ನೀಡುತ್ತಿರುವ ಮುಖ್ಯ ಪೆಟ್ ಇನ್ಶೂರೆನ್ಸ್ ಯೋಜನೆಗಳಾಗಿವೆ.
ಯುನೈಟೆಡ್ ಇಂಡಿಯಾ ಅಶ್ಯೂರನ್ಸ್: ದೇಶಿ, ಸಂಕರ ಅಥವಾ ವಿದೇಶಿ ತಳಿಯ ಎಲ್ಲ ಪ್ರಾಣಿಗಳಿಗೆ ಈ ಕಂಪೆನಿಯು ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಪ್ರಾಣಿಗಳ ಮಾಲಕರು, ಖಾಸಗಿ ಡೇರಿಗಳು, ಸಹಕಾರಿ ಡೇರಿಗಳು ಆಥವಾ ಎನ್‌ಡಿಡಿಬಿ ಒಡೆತನದ ಡೇರಿಗಳು ಈ ಕಂಪೆನಿಯಿಂದ ವಿಮೆ ಪಾಲಿಸಿಗಳನ್ನು ಪಡೆಯಬಹುದಾಗಿದೆ. ಕಂಪೆನಿಯು ನಿಮ್ಮ ಸಾಕುಪ್ರಾಣಿಗೆ ಶಾಶ್ವತ ಅಂಗವೈಕಲ್ಯ ಮತ್ತು ಅಪಘಾತದಿಂದ ಸಾವಿನ ವಿರುದ್ಧ ವಿಮೆ ರಕ್ಷಣೆಯನ್ನು ಒದಗಿಸುತ್ತದೆ.

ಓರಿಯಂಟಲ್ ಇನ್ಶೂರೆನ್ಸ್: ಈ ಕಂಪೆನಿಯು ಕುದುರೆ, ನಾಯಿ, ಆನೆ ಇತ್ಯಾದಿಗಳಿಗೆ ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಎಂಟು ವಾರಗಳಿಂದ ಎಂಟು ವರ್ಷ ಪ್ರಾಯದವರೆಗಿನ ಶ್ವಾನಗಳಿಗೆ ಇಲ್ಲಿ ವಿಮೆ ಮಾಡಿಸಬಹುದು. ವಿಮೆಯ ಪ್ರೀಮಿಯಂ 200 ರಿಂದ 10,000 ರೂ.ವರೆಗೆ ಇದೆ.

share
ವಿಸ್ಮಯ
ವಿಸ್ಮಯ
Next Story
X