Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಾರತದಲ್ಲಿ ಕ್ರಿಕೆಟ್ ರಾಷ್ಟ್ರೀಯತೆ

ಭಾರತದಲ್ಲಿ ಕ್ರಿಕೆಟ್ ರಾಷ್ಟ್ರೀಯತೆ

ಟಿ. ನವೀನ್ಟಿ. ನವೀನ್3 July 2017 11:46 PM IST
share
ಭಾರತದಲ್ಲಿ ಕ್ರಿಕೆಟ್ ರಾಷ್ಟ್ರೀಯತೆ

ಹಿಂದೂ ಮೂಲಭೂತವಾದಿಗಳ ಕೈಯಲ್ಲಿ ಕ್ರಿಕೆಟ್ ಆಟವು ಅಲ್ಪಸಂಖ್ಯಾತರನ್ನು ನಿಯಂತ್ರಿಸುವ, ದಮನಿಸುವ ಮತ್ತು ಅವರ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವಂತೆ ಅವರನ್ನು ಬಲಾತ್ಕರಿಸುವ ಒಂದು ಸಾಧನವಾಗಿದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೆಯೇ, ಮುಸ್ಲಿಂ ಅಲ್ಪಸಂಖ್ಯಾತರನ್ನು ಸ್ಟೀರಿಯೊಟೈಪ್‌ಗಳಾಗಿ ಮಾಡಿ ಅವರು ಭಾರತಕ್ಕೆ ನಿಷ್ಠರಾಗಿಲ್ಲವೆಂದು ತೋರಿಸುವ ಒಂದು ಪ್ರಯತ್ನವನ್ನು ಬಲಪಡಿಸುವ ಮಾರ್ಗವಾಗಿ, ಸಾಧನವಾಗಿ ಕೂಡ ಕ್ರಿಕೆಟ್ ಆಟವನ್ನು ಬಳಸಲಾಗಿದೆ.

ಕ್ರಿಕೆಟ್ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಆಟ. ವೀಕ್ಷಕರಲ್ಲಿ ಅದು ಸಂತಸದ ಅತ್ಯಂತ ತೀವ್ರವಾದ ರೂಪಗಳಿಂದ ಉದ್ರೇಕ, ಹತಾಶೆಯವರಿಗೆ ಹಲವು ಭಾವನೆಗಳನ್ನು ಬಡಿದೆಬ್ಬಿಸುತ್ತದೆ. ಕ್ರಿಕೆಟ್ ತಂಡಗಳೊಂದಿಗೆ ವೀಕ್ಷಕರ ತಾದಾತ್ಮವನ್ನವಲಂಬಿಸಿ ಈ ಭಾವನೆಗಳ ತೀವ್ರವಾದ ರೂಪಗಳು ಪ್ರಕಟಗೊಳ್ಳುತ್ತದೆ. 

ಅಂತಾರಾಷ್ಟ್ರೀಯ ಕ್ರಿಕೆಟ್ (ರಾಷ್ಟ್ರಗಳ ನಡುವೆ) ಅತ್ಯಂತ ಜನಪ್ರಿಯವಾಗಿದ್ದ ಕ್ರಿಕೆಟ್‌ನ ಯುಗದಿಂದ, ಕ್ಲಬ್ ಕ್ರಿಕೆಟ್ ಭಾರೀ ಜನಪ್ರಿಯವಾಗಿರುವ ಈಗ, ಕ್ರಿಕೆಟ್‌ನಲ್ಲಿ ಒಂದು ಬದಲಾಣೆಯಾಗಿದೆ. ಪರಿಣಾಮವಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಹೆಚ್ಚು ಜನಪ್ರಿಯವಾಗಿದೆ. ಈ ಬದಲಾವಣೆಗೆ ಕೇವಲ ವಾಣಿಜ್ಯ ಪರಿಗಣನೆಯಲ್ಲದೆ ಬೇರೆ ಯಾವುದೇ ಕಾರಣವಿಲ್ಲ. ಐಪಿಎಲ್‌ನಲ್ಲಿ ಹಲವು ದೇಶಗಳ ಮತ್ತು ಭಾರತದ ಒಳಗೆಯೇ ಹಲವು ಪ್ರದೇಶದ ಆಟಗಾರರು ಸೇರಿಕೊಂಡಿರುವುದರಿಂದ ರಾಷ್ಟ್ರೀಯ ಗಡಿಗಳು ಇಲ್ಲಿ ಹಿನ್ನೆಲೆಗೆ ಸರಿಯುತ್ತವೆ. ವೀಕ್ಷಕರು ಒಂದು ಪ್ರಾದೇಶಿಕ ತಂಡವನ್ನು ಬೆಂಬಲಿಸಬಹುದು, ಆದರೆ ಇದು ವಾಸ್ತವದಲ್ಲಿ ಸುಳ್ಳು. ಏಕೆಂದರೆ ಸ್ಥಳೀಯ ಆಟಗಾರರು ನಿಜವಾಗಿ ಆ ಭಾಗದ ತಂಡಲ್ಲಿರದೆ, ತಂಡದಲ್ಲಿ ಸ್ಥಳೀಯರಲ್ಲದ ಮತ್ತು ಹೊರದೇಶಗಳ ಆಟಗಾರರಿರುತ್ತಾರೆ. ಅದೇನಿದ್ದರೂ, ಈಗ ಬದಲಾಗಿರುವ ಪರಿಸ್ಥಿತಿಯಲ್ಲಿ ಕೂಡ, ರಾಷ್ಟ್ರೀಯ ಅನ್ಯಾಕ್ರಮಣ ಶೀಲತೆ (ಶೌವಿನಿಸಂ) ಮತ್ತು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡಲು ಒಂದು ಸಾಧನವಾಗಿ ಕ್ರಿಕೆಟನ್ನು ಬಳಸಲಾಗುತ್ತದೆ. ದಶಕಗಳ ಲಾಗಾಯ್ತು ಕ್ರಿಕೆಟನ್ನು ಮುಸ್ಲಿಮರು ಮತ್ತು ಪಾಕಿಸ್ತಾನದ ವಿರುದ್ಧ ದ್ವೇಷ ಹರಡಲು ನಮ್ಮ ದೇಶದ ಕೋಮುವಾದಿ ವರ್ಗಗಳು ಬಳಸುತ್ತ ಬಂದಿವೆ. ಒಬ್ಬ ಭಾರತವನ್ನು ಎಷ್ಟು ಬೆಂಬಲಿಸುತ್ತಾನೆ ಮತ್ತು ಪಾಕಿಸ್ತಾನವನ್ನು ಎಷ್ಟು ದ್ವೇಷಿಸುತ್ತಾನೆ ಎಂಬುವುದನ್ನವಲಂಬಿಸಿ ದಿಢೀರ್ ರಾಷ್ಟ್ರೀಯವಾದಿಗಳನ್ನು ಸೃಷ್ಟಿಸಲಾಗುತ್ತದೆ. ಇದು ವಿಶೇಷವಾಗಿ ಭಾರತ-ಪಾಕಿಸ್ತಾನ ಪಂದ್ಯಗಳ ಸಂದರ್ಭದಲ್ಲಿ ನಡೆಯುತ್ತದೆ. ಆಟವೊಂದು ಹೋರಾಟವಾಗುತ್ತದೆ. ಒಂದು ಕ್ರೀಡೆ ಒಂದು ಯುದ್ಧವಾಗುತ್ತದೆ. ಕ್ರೀಡೆಯ ಸಂದರ್ಭ ದೇಶದ ಮುಸ್ಲಿಮರ ಪಾಲಿಗೆ ಅವರ ರಾಷ್ಟ್ರೀಯತೆಯನ್ನು ಸಾಬೀತು ಪಡಿಸಬೇಕಾದ ಒಂದು ಪರೀಕ್ಷೆಯಾಗುತ್ತದೆ.

ಹಿಂದೂ ಕೋಮುವಾದಿಗಳಿಗೆ ಭಾರತ-ಪಾಕಿಸ್ತಾನಗಳ ಮುಖಾಮುಖಿ ಕೋಮು ಹಿಂಸೆಯನ್ನು ಹರಡಲು ಒಂದು ಅತ್ಯಂತ ಸೂಕ್ತಸಮಯವಾಗುತ್ತದೆ. ಕ್ರಿಕೆಟ್ ಮುಖಾಮುಖಿಯಲ್ಲಿ, ಅಕಸ್ಮಾತ್ ಪಾಕಿಸ್ತಾನ ಗೆದ್ದರೆ, ಅದು ಕೇಸರಿಪಡೆಗಳಿಗೆ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ಇನ್ನಷ್ಟು ಸೂಕ್ತವಾದ ಹಾಗೂ ಉತ್ತಮವಾದ ಅವಕಾಶವಾಗುತ್ತದೆ. ಭಾರತೀಯ ಮುಸ್ಲಿಮರು ಪಾಕಿಸ್ತಾನದ ಗೆಲುವನ್ನು ಆಚರಿಸುತ್ತಿದ್ದಾರೆಂಬ ಕೋಮು ಸಂದೇಶಗಳನ್ನು ಅವರು ಹರಡುತ್ತಾ ಹೊಗುತ್ತಾರೆ. ಹಿಂದೂ ಮೂಲಭೂತವಾದಿಗಳ ಕೈಯಲ್ಲಿ ಕ್ರಿಕೆಟ್ ಆಟವು ಅಲ್ಪಸಂಖ್ಯಾತರನ್ನು ನಿಯಂತ್ರಿಸುವ, ದಮನಿಸುವ ಮತ್ತು ಅವರ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವಂತೆ ಅವರನ್ನು ಬಲಾತ್ಕರಿಸುವ ಒಂದು ಸಾಧನವಾಗಿದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೆಯೇ, ಮುಸ್ಲಿಂ ಅಲ್ಪಸಂಖ್ಯಾತರನ್ನು ಸ್ಟೀರಿಯೊಟೈಪ್‌ಗಳಾಗಿ ಮಾಡಿ ಅವರು ಭಾರತಕ್ಕೆ ನಿಷ್ಠರಾಗಿಲ್ಲವೆಂದು ತೋರಿಸುವ ಒಂದು ಪ್ರಯತ್ನವನ್ನು ಬಲಪಡಿಸುವ ಮಾರ್ಗವಾಗಿ, ಸಾಧನವಾಗಿ ಕೂಡ ಕ್ರಿಕೆಟ್ ಆಟವನ್ನು ಬಳಸಲಾಗಿದೆ.

ಇತ್ತೀಚೆಗೆ, ಐಸಿಸಿ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ಗೆದ್ದಾಗ, ಸಾಮಾಜಿಕ ಮಾಧ್ಯಮಗಳ ಮೂಲಕ, ಖೋಟಾ ವೀಡಿಯೊಗಳ ಒಂದು ಸರಮಾಲೆಯ ಮೂಲಕ ಮುಸ್ಲಿಂ ದ್ವೇಷವನ್ನು ಹರಡಲಾಯಿತು. ಪಾಕಿಸ್ತಾನದಲ್ಲಿ ಮಾಡಿದ ಗೆಲುವಿನ ಸಂಭ್ರಮಾಚರಣೆಗಳನ್ನು ಭಾರತದ ಮುಸ್ಲಿಮರು ದೇಶದ ವಿವಿಧ ಭಾಗಗಳಲ್ಲಿ ಮಾಡಿದ ಆಚರಣೆಗಳೆಂಬಂತೆ ಬಿಂಬಿಸಲಾಯಿತು.

ಒಂದು ಜನಪ್ರಿಯ ಆಟವು ಎರಡು ರಾಷ್ಟ್ರಗಳ ನಡುವೆ ಸ್ನೇಹದ ಒಂದು ಸೇತುವೆಯಾಗಬಲ್ಲುದು. ಆದರೆ ಇಲ್ಲಿ ಅದೇ ಆಟವನ್ನು ಎರಡು ಧರ್ಮಗಳನ್ನು ಹಾಗೂ ಎರಡು ರಾಷ್ಟ್ರಗಳನ್ನು ವಿಭಜಿಸಲು ಒಂದು ಸಾಧನವಾಗಿ ಬಳಸಲಾಗುತ್ತಿದೆ. ಇದು ವಾಣಿಜ್ಯ ಉದ್ದೇಶಗಳನ್ನು ಈಡೇರಿಸುತ್ತದೆ. ಕ್ರಿಕೆಟ್ ಆಟದ ಮೂಲಕ ಭಾರತ-ಪಾಕಿಸ್ತಾನದ ಮಧ್ಯೆ ಯುದ್ಧದ ಒಂದು ಚಿತ್ರವು ಜಾಹೀರಾತುದಾರರಿಗೆ ಅತ್ಯಂತ ಪ್ರಶಸ್ತವಾದ ಒಂದು ಅವಕಾಶ. ಈ ಚಿತ್ರದ ನೆರವು ಪಡೆದು ಟಿವಿ ಚಾನೆಲ್‌ಗಳು, ಬುಕ್ಕಿಗಳು, ಬಳಕೆದಾರರ ಬ್ರಾಂಡ್‌ಗಳು ಜಾಹೀರಾತುಗಳ ಮೂಲಕ ತಮ್ಮ ಹಣಕಾಸಿನ ಬಾಟಮ್-ಲೈನ್ ಅನ್ನು ಹೆಚ್ಚಿಸಿಕೊಳ್ಳುತ್ತಾರೆ; ಕೋಟಿಗಟ್ಟಲೆ ಲಾಭಹೊಡೆದುಕೊಳ್ಳುತ್ತಾರೆ. ತಮ್ಮ-ತಮ್ಮ ಕಾರ್ಯಸೂಚಿಗಾಗಿ, ಅಂದರೆ ಹಣ ಸಂಪಾದನೆ ಮತ್ತು ಧಾರ್ಮಿಕ ಕಂದಕಗಳನ್ನು ಇನ್ನಷ್ಟು ಅಗಲಗೊಳಿಸುವುದಕ್ಕಾಗಿ, ವಾಣಿಜ್ಯ ಮತ್ತು ಕೋಮುವಾದಿ ಶಕ್ತಿಗಳಿಗೆ ಪಾಕಿಸ್ತಾನ ಬೇಕು; ಆದರೆ ಐಪಿಎಲ್‌ನಲ್ಲಿ ಅದೇ ದೇಶದ ಜನರು ಈ ಶಕ್ತಿಗಳಿಗೆ ಬೇಡ! ಯಾಕೆಂದರೆ, ಪಾಕಿಸ್ತಾನದ ಜನರು ಒಂದು ಪ್ರಾದೇಶಿಕ ತಂಡದ ಭಾಗವಾದಾಗ (ಬೇರೆಯವ ಮತ್ತು ಶತ್ರು) ಎಂಬ ಪಾಕಿಸ್ತಾನದ ಅನನ್ಯತೆ ಕಳೆದುಹೋಗುತ್ತದೆ.

ಒಬ್ಬ ಕೃತಕ ಶತ್ರು ಫ್ಯಾಶಿಸ್ಟರಿಗೆ ಮತ್ತು ವಾಣಿಜ್ಯಕ್ಕೆ, ವ್ಯಾಪಾರಕ್ಕೆ ಯಾವಾಗಲೂ ಲಾಭದಾಯಕ. ಕೃತಕ ಶತ್ರುವಿದ್ದರೆ ಇವರ ಸ್ವಾರ್ಥ ಈಡೇರುತ್ತದೆ. ಆದರೆ ಈ ಪ್ರತಿಕ್ರಿಯೆಯಲ್ಲಿ ಕ್ರೀಡೆ ತನ್ನ ನಿಜವಾದ ಸತ್ವವನ್ನು ಕಳೆದುಕೊಳ್ಳುತ್ತದೆ.

ಕೃಪೆ: countercurrents

share
ಟಿ. ನವೀನ್
ಟಿ. ನವೀನ್
Next Story
X