Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕೃಷಿ ಭೂಮಿಯನ್ನು ಆಳುತ್ತಿರುವ ಬಡ್ಡಿ...

ಕೃಷಿ ಭೂಮಿಯನ್ನು ಆಳುತ್ತಿರುವ ಬಡ್ಡಿ ಸಾಹುಕಾರರು

ಮೊನ್ ಖಾಜಿಮೊನ್ ಖಾಜಿ3 July 2017 6:22 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕೃಷಿ ಭೂಮಿಯನ್ನು ಆಳುತ್ತಿರುವ ಬಡ್ಡಿ ಸಾಹುಕಾರರು

 ಸಾಂಸ್ಥಿಕ ಸಾಲ ನೀಡುವ ವ್ಯವಸ್ಥೆಯನ್ನು ಹೇಗೆ ಸುಧಾರಿಸಬಹುದು, ಹೇಗೆ ಉತ್ತಮಪಡಿಸಿ ಸಾಹುಕಾರನನ್ನು ಬದಿಗೆ ತಳ್ಳಬಹುದು ಎಂಬ ಬಗ್ಗೆ ಸಮಿತಿಗಳು ಹಾಗೂ ವರದಿಗಳು ಸಾಲು ಸಾಲಾಗಿ ಬಂದ ಬಳಿಕವೂ ಬಡ್ಡಿ ಸಾಹುಕಾರ ಇನ್ನೂ ಕೂಡ ಗ್ರಾಮೀಣ ಹಣಕಾಸು ವ್ಯವಸ್ಥೆಯ ಬೆನ್ನೆಲುಬಾಗಿಯೇ ಉಳಿದಿದ್ದಾನೆ. ಇದು ನಾವು ನುಂಗಲೇ ಬೇಕಾದ ಸತ್ಯ.

ಸರಕಾರವು ರೈತರ ಮಿಲಿಯಗಟ್ಟಲೆ ಸಾಲಗಳನ್ನು ಮನ್ನಾ ಮಾಡುತ್ತಿದೆ. ಆದರೆ ಅವರಲ್ಲಿ ನಿಜವಾಗಿಯೂ ಸಂತ್ರಸ್ತರಾಗಿರುವವರಿಗೆ ಸರಕಾರದ ಈ ಕ್ರಮದಿಂದ ಯಾವುದೇ ಪರಿಹಾರ ಸಿಕ್ಕಿದಂತಾಗುವುದಿಲ್ಲ. ಯಾಕೆಂದರೆ ರೈತರ ಈ ವರ್ಗ ಸಾಲ ತೀರಿಸಬೇಕಾಗಿರುವುದು ಅವರು ಬಡ್ಡಿ ಸಾಹುಕಾರರಿಂದ ಪಡೆದ ಸಾಲಗಳನ್ನು. ಸರಕಾರದ ಸಾಲಮನ್ನಾ ಅನ್ವಯಿಸುವುದು ಬ್ಯಾಂಕ್‌ಗಳಿಂದ ಅಧಿಕೃತ ಸಾಲವನ್ನು ಪಡೆದವರಿಗೆ ಮಾತ್ರ.

ಭಾರತದ ಬೃಹತ್ ಗ್ರಾಮೀಣ ಪ್ರದೇಶಗಳಲ್ಲಿ ಬಹುಪಾಲು ಪ್ರತಿಯೊಬ್ಬ ರೈತನೂ, ಒಂದಲ್ಲ ಒಂದು ರೀತಿಯಲ್ಲಿ, ಸರ್ವಾಂತರ್ಯಾಮಿಯಾದ ಹಾಗೂ ಧನದಾಹಿಯಾದ ಬಡ್ಡಿ ಸಾಹುಕಾರರೆಂಬ ಸಾಲದ ಶಾರ್ಕ್‌ನ ದವಡೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಶತಮಾನಗಳ ಲಾಗಾಯ್ತು ಬಡ್ಡಿ ಸಾಹುಕಾರರು ಗ್ರಾಮೀಣ ಭಾರತೀಯ ಸಾಲ ಮಾರುಕಟ್ಟೆಗಳ ಮೇಲೆ ಸರ್ವಸ್ವಾಮ್ಯ ಹೊಂದಿದ್ದಾರೆ. ಪರಿಣಾಮವಾಗಿ ಸಾವಿರಾರು ರೈತ ಕುಟುಂಬಗಳು ತಮ್ಮ ಜಮೀನು ಕಳೆದುಕೊಂಡಿವೆ; ಪಡೆದ ಸಾಲಕ್ಕೆ ಬದಲಾಗಿ ತಮ್ಮ ಹೆಂಡಂದಿರನ್ನು ಸಾಹುಕಾರರಿಗೆ ದೇಹ ಹಂಚಿಕೊಳ್ಳಲು ನೀಡುವಂತೆ ರೈತರನ್ನು ಬಲಾತ್ಕರಿಸಲಾಗಿದೆ.

ಗ್ರಾಮೀಣ ಭಾರತವನು,್ನ ನಿರ್ದಿಷ್ಟವಾಗಿ ಅದರ ರೈತವರ್ಗವನ್ನು ಸಾಲದ ಚಕ್ರ ತಪ್ಪಿಸಿಕೊಳ್ಳಲಾಗದಂತೆ ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದೆ. ಆದರೂ ಭಾರತ ಮೂರು ಮಿಲಿಯ ರೈತರ ನಿಜವಾದ ಪರಿಸ್ಥಿತಿಯನ್ನು ಸಾಲ ವಸೂಲಿ ಮಾಡುವ ಸಾಹುಕಾರರ ಕ್ರೂರ ಚಿತ್ರವು, ಸಮಾಜದ ಮುಂದೆ ಸರಿಯಾಗಿ ಪ್ರತಿಫಲಿಸುವುದಿಲ್ಲ. ಜಾಗತೀಕರಣದೊಂದಿಗೆ, ಕೃಷಿಯಿಂದ ಉದ್ಯಮಕ್ಕೆ, ಭಾರತದ ಆರ್ಥಿಕ ಆದ್ಯತೆಗಳು ಬದಲಾದಂದಿನಿಂದ ಬಡ್ಡಿ ಸಾಹುಕಾರರ ವ್ಯಾಪಾರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಂಪರ್ ಕೊಯ್ಲುಗಳ ಆಕರ್ಷಣೆ ರೈತರ ಸಾಲಗಳನ್ನು ಇನ್ನಷ್ಟು ಹೆಚ್ಚಿಸಿದೆ. ಬೇಸಾಯವೇ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಬಡ್ಡಿ ಸಾಹುಕಾರರು, ಗದ್ದೆಗಳಿಗೆ ಬೇಕಾಗುವ ಬೀಜ ಹಾಗೂ ಕೀಟನಾಶಕ ಇತ್ಯಾದಿ ಸರಕು ಸಾಮಾನುಗಳ ವ್ಯಾಪಾರಿಗಳ ರೂಪದಲ್ಲೂ, ಕಾರ್ಯಾಚರಣೆ ನಡೆಸುತ್ತಾರೆ. 2012 ಅಖಿಲ ಭಾರತ ಸಾಲ ಹೂಡಿಕೆ ಸಮೀಕ್ಷೆಯ ಪ್ರಕಾರ, ದೇಶಾದ್ಯಂತ ಸುಮಾರು ಶೇ. 48 ರೈತರು ಬಡ್ಡಿ ಸಾಹುಕಾರರು ಮತ್ತು ಭೂಮಾಲಕರಂತಹ ಅನಧಿಕೃತ ಮೂಲಗಳಿಂದ ಸಾಲ ಪಡೆದಿದ್ದಾರೆ. ಇವರ ಸಂಖ್ಯೆ 1991ರಲ್ಲಿ ಇದ್ದ ಶೇಕಡ 36ರಿಂದ 2001ರ ವೇಳೆಗೆ ಶೇ. 43ಕ್ಕೆ ಏರಿತು.

ಸಮಾಜವಾದಿ ಭಾರತದಲ್ಲಿ, ಸಾಲ ಪಡೆಯಬಯಸುವ ಗಿರಾಕಿಗಳಿಗೆ ಬ್ಯಾಂಕ್‌ಗಳು ಸಾಲ ನೀಡುವ ಭಾರೀ ಜನಪ್ರಿಯ ತಾಣಗಳಾಗಬಹುದೆಂದು ನಿರೀಕ್ಷಿಸಲಾಗಿತ್ತು. ನಿಜವಾಗಿ 1970ರ ದಶಕದ ಸಾಮಾಜಿಕ ಬ್ಯಾಂಕಿಂಗ್ ಯುಗದಲ್ಲಿ ಬ್ಯಾಂಕ್‌ಗಳು ದಾಖಲೆ ಮಟ್ಟದಲ್ಲಿ ದೇಶಾದ್ಯಂತ ಪ್ರಗತಿ ಕಂಡವು. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳು ಗಣನೀಯ ಸಂಖ್ಯೆಯಲ್ಲಿ ಆರಂಭಗೊಂಡವು. 1969ರಲ್ಲಿ ಇದ್ದ 8,261 ಬ್ಯಾಂಕ್ ಶಾಖೆಗಳ ಸಂಖ್ಯೆ 2000ನೆ ಇಸವಿಯಲ್ಲಿ ಭಾರೀ ಸಂಖ್ಯೆಯಲ್ಲಿ ಏರಿ 65,521ಕ್ಕೇರಿತು. ಬ್ಯಾಂಕ್ ಸಾಲ ಪಡೆಯುವ ಮನೆಗಳ ಸಂಖ್ಯೆ 1971-1981ರ ನಡುವೆ ಶೇ. 32 ರಿಂದ ಶೇ. 61 ಕ್ಕೇರಿತು.

ಸಣ್ಣ ರೈತರು ದುಬಾರಿ ಬಡ್ಡಿ ತೆರುವಾಗ, ದೊಡ್ಡ ಶ್ರೀಮಂತ ರೈತರು ಶೇ. 7ರ ದರದಲ್ಲಿ ಸಬ್ಸಿಡಿ ಸಾಲ ಪಡೆಯುತ್ತಾರೆ; ಸಕಾಲಕ್ಕೆ ಸಾಲ ಪಾವತಿಸಿದವರಿಗೆ ಶೇ. 4 ದರದಲ್ಲಿ; ಸಾಲ ಸಿಗುತ್ತದೆ.

ಸಾಲವು ಗಂಡನಿಂದ ಆತನ ವಿಧವೆ ಪತ್ನಿಗೆ, ತಂದೆಯಿಂದ ಮಕ್ಕಳಿಗೆ ರವಾನೆಯಾಗುತ್ತಿರುವಾಗ ದೇಶದ ಆತ್ಮಹತ್ಯಾ ಸರಣಿಗಳ ಆಡುಂಬೊಲವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಭಯದ ಒಂದು ಪ್ರವಾಹವೇ ಹರಿಯುತ್ತಿರುತ್ತದೆ. ಹಳ್ಳಿಗರಲ್ಲಿ ಹೆಚ್ಚಿನವರು ತಮ್ಮ ಹಳ್ಳಿಯ ಬಡ್ಡಿಸಾಹುಕಾರನಿಂದ ಬಿಡಿಸಿಕೊಳ್ಳಲಾಗದ ಸರಪಳಿಯಿಂದ ಬಂಧಿತರಾಗಿದ್ದಾರೆ. ಅಂತಿಮವಾಗಿ ಅವರ ಬದುಕು ದುರಂತದಲ್ಲಿ ಕೊನೆಗೊಳ್ಳುತ್ತದೆ.

ಸಾಹುಕಾರನ ಸಾಲದ ಬೋನಿನೊಳಗೆ ಬೀಳುವ ರೈತರು ಭಾರೀ ದರದ ಬಡ್ಡಿ ತೆತ್ತು, ಒಂದು ದಿನ ಉತ್ತಮ ಬೆಳೆ ತಮ್ಮ ಸಾಲ ತೀರಿಸಲು ನೆರವಾಗುತ್ತದೆಂದೂ, ಆಗ ಹೊಸ ಸಾಲ ಪಡೆಯಬಹುದೆಂದೂ ಕನಸು ಕಾಣುತ್ತಾ ಬದುಕು ಸವೆಸುತ್ತಾರೆ. ಈ ಕನಸು ಮಾನವ ಜೀವಿಗಳ ಸರಣಿ ಸಾವಲ್ಲಿ ಕೊನೆಗೊಳ್ಳುತ್ತದೆ.

ರೈತರಿಗೆ ಸಾಂಸ್ಥಿಕ ಸಾಲ ದುರ್ಲಭವಾಗಿರುವುದರಿಂದ ಸ್ಥಳೀಯ (ಸಾಹುಕಾರ) ಶಾರ್ಕ್‌ಗಳು ಬ್ಯಾಂಕ್‌ಗಳ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಈ ಸಾಹುಕಾರರ ಬಡ್ಡಿ ತುಂಬಲಾರದೆ, ಸಾಲದ ಹೊರೆ ತಾಳಲಾರದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಆತ್ಮಹತ್ಯೆಯಿಂದ ರೈತನ ಕುಟುಂಬ ಋಣಮುಕ್ತವಾಗುವುದಿಲ್ಲ. ಬ್ಯಾಂಕ್‌ಗಳ ಸಾಲವನ್ನು ಸರಕಾರ ಮನ್ನಾ ಮಾಡುತ್ತದೆ; ಆದರೆ ಬಡ್ಡಿ ಸಾಹುಕಾರನನ್ನು, ಆತ್ಮಹತ್ಯೆಯಾದ ರೈತನ ದುಃಖತಪ್ತ ಕುಟುಂಬ ಪಾವತಿಸಬೇಕಾಗುತ್ತದೆ. ಜೀವ ಹಿಂಡುವ ಸಾಲಗಳು ರೈತನನ್ನು ಭಯಾನಕವಾದ ಕತ್ತಲ ಕೋಣೆಗಳಿಗೆ, ಆಳವಾ ಸಾವಿನ ಹೊಂಡಗಳಿಗೆ ತಳ್ಳುತ್ತಿವೆ.

ರೈತರ ಗೋಳು ಸಾಲ ನೀಡುವ ಒಂದು ಹೊಸ ವರ್ಗವನ್ನು ಸೃಷ್ಟಿಸಿದೆ. ಸ್ವಲ್ಪ ಅಧಿಕ ನಗದು ಇರುವ ಯಾರು ಬೇಕಾದರೂ ಈಗ ಬಡ್ಡಿಸಾಹುಕಾರನಾಗಬಹುದು; ಅಂಗಡಿ ಮಾಲಕರು, ವ್ಯಾಪಾರಿಗಳು, ಸರಕಾರಿ ಅಧಿಕಾರಿಗಳು, ಪೊಲೀಸರಿಂದ ಹಿಡಿದು ಶಿಕ್ಷಕರವರೆಗೆ ಎಲ್ಲರೂ ಈಗ ದುಬಾರಿ ಬಡ್ಡಿಗೆ, ಒಮ್ಮಿಮ್ಮೆ ಶೇ. 50ಕ್ಕೂ ಹೆಚ್ಚಿನ ದರದಲ್ಲಿ, ಸಾಲ ನೀಡುತ್ತಾರೆ.

1950ರ ದಶಕದ ಆದಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಸಾಲ ಮತ್ತು ಕುಟುಂಬದ ಸಾಲದ ಹೊರೆಯ ಕುರಿತಾದ ಒಂದು ಅಧ್ಯಯನವು ಸೂಚಿಸಿದ ಪರಿಹಾರದಲ್ಲಿ ಬಡ್ಡಿಸಾಹುಕಾರರು ಭವಿಷ್ಯದಲ್ಲಿ ಅಮುಖ್ಯ ಪಾತ್ರ ವಹಿಸುತ್ತಾರೆಂದು ಹೇಳಿತ್ತು. ‘‘ಸಹಕಾರಿ ಬ್ಯಾಂಕ್‌ಗಳ ಯೋಜನೆಯಲ್ಲಿ ಸಾಹುಕಾರರಿಗೆ ಪಾತ್ರವೇ ಇರಕೂಡದು. ...’’ ಎಂದಿತ್ತು ಆದರೆ ಆ ಅಧ್ಯಯನ ನಡೆಸಿದ ಲೇಖಕರು ರೈತರ ಸಾಲಗಳ ಮೇಲೆ ಸಹಕಾರಿ ಸಂಸ್ಥೆಗಳ ವ್ಯವಸ್ಥೆಯ ಪರಿಣಾಮಗಳ ವಿಶ್ಲೇಷಣೆ ನೀಡಲಿಲ್ಲ.

ಸಾಂಸ್ಥಿಕ ಸಾಲ ನೀಡುವ ವ್ಯವಸ್ಥೆಯನ್ನು ಹೇಗೆ ಸುಧಾರಿಸಬಹುದು, ಹೇಗೆ ಉತ್ತಮಪಡಿಸಿ ಸಾಹುಕಾರನನ್ನು ಬದಿಗೆ ತಳ್ಳಬಹುದು ಎಂಬ ಬಗ್ಗೆ ಸಮಿತಿಗಳು ಹಾಗೂ ವರದಿಗಳು ಸಾಲು ಸಾಲಾಗಿ ಬಂದ ಬಳಿಕವೂ ಬಡ್ಡಿ ಸಾಹುಕಾರ ಇನ್ನೂ ಕೂಡ ಗ್ರಾಮೀಣ ಹಣಕಾಸು ವ್ಯವಸ್ಥೆಯ ಬೆನ್ನೆಲುಬಾಗಿಯೇ ಉಳಿದಿದ್ದಾನೆ. ಇದು ನಾವು ನುಂಗಲೇ ಬೇಕಾದ ಸತ್ಯ.

ಕೃಪೆ: countercurrents

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಮೊನ್ ಖಾಜಿ
ಮೊನ್ ಖಾಜಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X