Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಮೊಬೈಲ್ ಫೋನ್‌ನ್ನು...

ಮೊಬೈಲ್ ಫೋನ್‌ನ್ನು ಜೇಬಿನಲ್ಲಿಡಬಾರದು....ಏಕೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ8 July 2017 6:47 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮೊಬೈಲ್ ಫೋನ್‌ನ್ನು ಜೇಬಿನಲ್ಲಿಡಬಾರದು....ಏಕೆ ಗೊತ್ತೇ?

ಮೊಬೈಲ್ ಫೋನ್ ಇಂದು ನಮ್ಮ ಮೂಲಭೂತ ಅಗತ್ಯಗಳಲ್ಲೊಂದಾಗಿಬಿಟ್ಟಿದೆ. ಮೊಬೈಲ್ ಫೋನ್ ಕೈಯಲ್ಲಿ ಇಲ್ಲದೇ ನಾವು ಮನೆಯಿಂದ ಹೊರಗೆ ಬೀಳುವುದೇ ಇಲ್ಲ. ಇಡೀ ದಿನ ಮೊಬೈಲ್ ಇಲ್ಲದೆ ಕಳೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಇಡೀ ದಿನ ಮೊಬೈಲ್ ಫೋನ್‌ನ್ನು ನಮ್ಮ ದೇಹಕ್ಕೆ ಹತ್ತಿರವೇ ಇಟ್ಟುಕೊಳ್ಳುವುದು ಎಷ್ಟು ಸುರಕ್ಷಿತ ಎನ್ನುವುದನ್ನು ಪ್ರಸಕ್ತ ಅಧ್ಯಯನಗಳು ಸ್ಪಷ್ಟಪಡಿಸಿಲ್ಲ.

ಮೊಬೈಲ್ ವಿಕಿರಣದ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನಗಳು ನಡೆಯಬೇಕಿವೆ. ಮೊಬೈಲ್ ಫೋನ್‌ನ್ನು ನಿಮ್ಮ ಶರ್ಟ್ ಅಥವಾ ಪ್ಯಾಂಟ್‌ನ ಜೇಬಿನಲ್ಲಿ ಇಟ್ಟುಕೊಳ್ಳುವುದು ಆರೋಗ್ಯಕ್ಕೆ ಹಾನಿಕರ ಎನ್ನುವುದು ಆರೋಗ್ಯ ತಜ್ಞರ ಸದ್ಯದ ಪ್ರತಿಪಾದನೆ. ಅವರ ಕೆಲವು ಅಭಿಪ್ರಾಯಗಳು ಇಲ್ಲಿವೆ.....

ಸಂತಾನಶಕ್ತಿ ಕುಂಠಿತ

ಪ್ಯಾಂಟ್‌ನ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಳ್ಳುವುದರಿಂದ ಅದರಿಂದ ಹೊರಹೊಮ್ಮುವ ವಿದ್ಯುದಾಯಸ್ಕಾಂತೀಯ ಅಲೆಗಳು ವೀರ್ಯಾಣುಗಳ ಉತ್ಪಾದನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸ್ಪರ್ಮಟೊರೆವಾ ಎಂಬ ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರ ಫಲವಾಗಿ ಪುರುಷರಲ್ಲಿ ಸಂತಾನಶಕ್ತಿ ಕುಂದಬಹುದು.

ವೀರ್ಯಾಣುಗಳ ಸಂಖ್ಯೆ

ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆನ್ ಸ್ಥಿತಿಯಲ್ಲಿ ತಮ್ಮ ಪ್ಯಾಂಟ್ ಜೇಬಿನಲ್ಲಿ ಸುದೀರ್ಘ ಅವಧಿಗೆ ಇಟ್ಟುಕೊಳ್ಳುವ ಪುರುಷರಲ್ಲಿ ವಿಕಿರಣವು ವೀರ್ಯಾಣುಗಳ ಸಂಖ್ಯೆ ಮತ್ತು ಅವುಗಳ ಚಲನಶೀಲತೆಯು ಕುಗ್ಗಬಹುದು ಎಂದು ಅಧ್ಯಯನವೊಂದು ಹೇಳಿದೆ. ಅಲ್ಲದೆ ವೈದ್ಯಕೀಯ ಪರಿಭಾಷೆಯಲ್ಲಿ ‘ಆಕ್ಸಿಡೇಟಿವ್ ಸ್ಟ್ರೆಸ್’ ಎಂದು ಕರೆಯಲಾಗುವ ಒತ್ತಡಕ್ಕೆ ಕಾರಣವಾಗುವ ಜೊತೆಗೆ ಡಿಎನ್‌ಎ ರಚನೆಗೂ ಹಾನಿಯನ್ನುಂಟು ಮಾಡಬಹುದು.

ನಿಮಿರುವಿಕೆ ದೌರ್ಬಲ್ಯ

ಮೊಬೈಲ್ ಫೋನ್‌ನ್ನು ಯಾವಾಗಲೂ ಪ್ಯಾಂಟ್ ಜೇಬಿನಲ್ಲಿರಿಸಿಕೊಳ್ಳುವ ಪುರುಷರಲ್ಲಿ ನಿಮಿರುವಿಕೆ ದೌರ್ಬಲ್ಯ ಕಾಣಿಸಿಕೊಳ್ಳುವ ಅಪಾಯವಿದೆ.

ಕ್ಯಾನ್ಸರ್, ಹೃದ್ರೋಗ

ಹಾಗೆಂದು ಮೊಬೈಲ್ ಫೋನ್‌ನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಳ್ಳುವುದೂ ಸುರಕ್ಷಿತವಲ್ಲ. ಅದರಿಂದ ಹೊರಹೊಮ್ಮುವ ವಿಕಿರಣವು ಕ್ಯಾನ್ಸರ್‌ಗೆ ಕಾರಣವಾಗ ಬಹುದು, ಜೊತೆಗೆ ಹೃದ್ರೋಗಗಳನ್ನೂ ತರಬಹುದು.

ಮೊಬೈಲ್ ಸಂಕೇತಗಳು

 ಮೊಬೈಲ್ ಫೋನ್‌ಗಳಿಂದ ಹೆಚ್ಚಿನ ಅಪಾಯ ಅವುಗಳ ಸಂಕೇತಗಳ ಮೂಲಕ ಉಂಟಾಗುತ್ತದೆ. ಮೊಬೈಲ್ ಫೋನ್‌ಗಳು ಆ್ಯಂಟೆನ್ನಾದ ಮೂಲಕ ರೇಡಿಯೋ ಅಲೆಗಳನ್ನು ಹೊರಡಿಸುತ್ತವೆ. ಹೀಗಾಗಿ ಮೊಬೈಲ್ ಪೋನ್ ನಮ್ಮ ಶರೀರಕ್ಕೆ ಅತೀ ಹತ್ತಿರವಾಗಿದ್ದರೆ ನಮ್ಮ ಅಂಗಾಂಶಗಳು ಅದನ್ನು ಹೀರಿಕೊಂಡು ಹಾನಿಗೊಳಗಾಗುತ್ತವೆ. ಮೊಬೈಲ್ ಫೋನ್‌ಗಳು ಸಂಕೇತಗಳನ್ನು ಕಳುಹಿಸುತ್ತವೆ ಮತ್ತು ಸಂಕೇತಗಳನ್ನು ಸ್ವೀಕರಿಸುತ್ತವೆ. ಈ ಸಂಕೇತಗಳು ತಕ್ಷಣಕ್ಕಲ್ಲದಿದ್ದರೂ ಸುದೀರ್ಘಾವಧಿಯಲ್ಲಿ ನಮ್ಮ ಜೀವಕೋಶಗಳನ್ನು ಬಿಸಿಯಾಗಿಸುವ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ ಬಹುದು.

ಇತರ ಅಂಶಗಳು

 ಕರೆಗಳ ಸಂಖ್ಯೆ, ಮಾತನಾಡುವ ಅವಧಿ ಮತ್ತು ಮೊಬೈಲ್ ಫೋನ್‌ನ್ನು ನಿಮ್ಮ ದೇಹದ ಎಷ್ಟು ಸಮೀಪವಿಟ್ಟುಕೊಳ್ಳುತ್ತೀರಿ ಎನ್ನುವುದು ಆರೋಗ್ಯಕ್ಕೆ ಅಪಾಯವನ್ನು ಹೆಚ್ಚಿಸುವ ಅಥವಾ ತಗ್ಗಿಸುವ ಅಂಶಗಳಾಗಿವೆ. ಮೊಬೈಲ್ ಫೋನ್ ಬಳಸದಿರುವುದು ಅಸಾಧ್ಯವಾದರೂ ಕನಿಷ್ಠ ಪಕ್ಷ ಅದನ್ನು ನಮ್ಮ ಜೇಬಿನಲ್ಲಿರಿಸಿಕೊಳ್ಳುವುದನ್ನು ನಿವಾರಿಸ ಬಹುದಾಗಿದೆ. ಅಪಾಯವಂತೂ ಇದ್ದೇ ಇದೆ, ಆದರೆ ಮೊಬೈಲ್ ಫೋನ್‌ನ್ನು ಬ್ಯಾಗ್‌ನಲ್ಲಿ ಇರಿಸುವ ಅಥವಾ ಕೈಯಲ್ಲಿ ಹಿಡಿದುಕೊಳ್ಳುವ ಮೂಲಕ ಅದನ್ನು ಕನಿಷ್ಠಗೊಳಿಸಬಹುದಾಗಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X