Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕಾಂಗ್ರೆಸ್‌ನೊಳಗೂ ಕೋಮು ಶಕ್ತಿಗಳಿವೆ...

ಕಾಂಗ್ರೆಸ್‌ನೊಳಗೂ ಕೋಮು ಶಕ್ತಿಗಳಿವೆ ಎನ್ನುವುದನ್ನು ನೆಹರೂ ಎಚ್ಚರಿಸಿದ್ದರು: ರಾಮ್ ಪುನಿಯಾನಿ

ವಾರ್ತಾಭಾರತಿವಾರ್ತಾಭಾರತಿ9 July 2017 11:55 PM IST
share
ಕಾಂಗ್ರೆಸ್‌ನೊಳಗೂ ಕೋಮು ಶಕ್ತಿಗಳಿವೆ ಎನ್ನುವುದನ್ನು ನೆಹರೂ ಎಚ್ಚರಿಸಿದ್ದರು: ರಾಮ್ ಪುನಿಯಾನಿ

ರಾಮ್ ಪುನಿಯಾನಿ ಕೋಮುವಾದದ ವಿರುದ್ಧ ಧ್ವನಿ ಎತ್ತಿ ಹೋರಾಡುವ ಅತ್ಯಂತ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೋಮು ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆಗಾಗಿ ಹಲವಾರು ರೀತಿಗಳಲ್ಲಿ ತಳಮಟ್ಟದಲ್ಲಿ ಕೀಯಾಶೀಲರಾಗಿದ್ದಾರೆ. ಪ್ರಮುಖ ಸಾಮಾಜಿಕ ರಾಜಕೀಯ ವಿಷಯಗಳ ಬಗ್ಗೆ ನಿಗದಿತವಾಗಿ ವಿಶ್ಲೇಷಣೆ ನಡೆಸುತ್ತಾ ಬಂದಿರುವ ಪುನಿಯಾನಿ ಕೋಮುವಾದದ ಮತ್ತು ಸೆಕ್ಯುಲರ್‌ವಾದದ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ; ಸಂಪಾದಿಸಿದ್ದಾರೆ. ಕಾರ್ಯಕರ್ತ-ಲೇಖಕ ವಿದ್ಯಾಭೂಷಣ್ ರಾವತ್ ಜತೆ ನಡೆಸಿದ ಈ ವಿವರವಾದ ಸಂಭಾಷಣೆಯಲ್ಲಿ, ಪುನಿಯಾನಿ ರಾಷ್ಟ್ರವು ಎದುರಿಸುತ್ತಿರುವ ಹಲವಾರು ವಿಷಯಗಳನ್ನು ವಿವರಿಸಿದ್ದಾರೆ.

ವಿಬಿ: ಸ್ವಾತಂತ್ರಾನಂತರ ಭಾರತವು ಅತ್ಯಂತ ಕಠಿಣವಾದ ಒಂದು ಕಾಲ ಘಟ್ಟವನ್ನು ಹಾದುಹೋಗುತ್ತಿದೆ. ನೀವು ತುರ್ತು ಪರಿಸ್ಥಿತಿಯ ಕಾಲವನ್ನೂ ನೋಡಿದ್ದೀರಿ. 1975 ತುರ್ತು ಪರಿಸ್ಥಿತಿ ಮತ್ತು ಇಂದಿನ ನಡುವೆ ಏನು ವ್ಯತ್ಯಾಸ ಕಾಣಿಸುತ್ತದೆ? ಆರ್‌ಪಿ: ತುರ್ತು ಪರಿಸ್ಥಿತಿ ಮತ್ತು ಇಂದಿನ ರಾಜಕೀಯ ಸ್ಥಿತಿಯನ್ನು ಹೋಲಿಸಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿಯು ಇಂದಿರಾಗಾಂಧಿ ಯವರ ಸುತ್ತ ಇದ್ದ ಒಂದು ಚಿಕ್ಕ ಗುಂಪು ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿಲ್ಲದ ಮೆಕ್ಯಾನಿಸಂಗಳ ಮೂಲಕ ಸರ್ವಾಧಿಕಾರವನ್ನು ದೇಶದ ಮೇಲೆ ಹೇರಿದ ಒಂದು ಆಡಳಿತ ಕ್ರಮವಾಗಿತ್ತು. ಪತ್ರಿಕೆಗಳ ಮೇಲೆ ನಿಷೇಧ ಹೇರಲಾಗಿತ್ತು. ಸಂಜಯ್ ಗಾಂಧಿಯವರ ಅತ್ಯುತ್ಸಾಹದ ಕುಟುಂಬ ಯೋಜನೆ ಕಾರ್ಯಕ್ರಮವು ತುರ್ಕ್ ಮನ್ ಗೇಟ್ ಘಟನೆಗೆ ಕಾರಣವಾಯಿತು. ಸರಕಾರ ತನಗಿಷ್ಟ ಕಂಡಂತೆ ಬೇಕಾಬಿಟ್ಟಿಯಾಗಿ ಕಾರ್ಯಾಚರಿಸುತ್ತಿತ್ತು.

ಇವತ್ತಿನ ಪರಿಸ್ಥಿತಿ ಒಂದು ಅರೆ ಪ್ಲಾಸ್ಟಿಕ್ (ಸೆಮಿ-ಪ್ಲಾಸ್ಟಿಕ್) ಆಡಳಿತದಂತಿದೆ. ತನ್ನ ವಿಭಿನ್ನ ಮೈತ್ರಿ ಸಂಘಟನೆಗಳ ಮೂಲಕ ರಾಜಕೀಯ ಪಕ್ಷವೊಂದು ಅಧಿಕಾರ ಚಲಾಯಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿದೆಯಾದರೂ, ಆರೆಸ್ಸೆಸ್‌ನ ಆಜ್ಞೆಗಳು, ನಿರ್ದೇಶಗಳು ಪರಿಸ್ಥಿತಿಯ ಕೇಂದ್ರ ಬಿಂದುವಿನಲ್ಲಿದೆ. ಇಡೀ ಆರೆಸ್ಸೆಸ್ ಕೂಟ (ಆರೆಸ್ಸೆಸ್‌ನ ಮಿತ್ರ ಸಂಘಟನೆಗಳಾದ ವಿಎಚ್‌ಪಿ, ಎಬಿವಿಪಿ, ಬಜರಂಗದಳ ಇತ್ಯಾದಿ) ಚುಕ್ಕಾಣಿ ಹಿಡಿದಿದೆ, ಈ ಸಂಘಟನೆಗಳ ಮೂಲಕ ದಮನ ಕಾರ್ಯ ನಡೆಸಲಾಗುತ್ತಿದೆ. ಈ ಸಂಘಟನೆಗಳು ಸಮಾಜದಲ್ಲಿ ಒಂದು ನೆಲೆಯನ್ನು ಸೃಷ್ಟಿಸಿವೆ. ಜನರ ಈ ತಂಡ ಅಲ್ಪಸಂಖ್ಯಾತರನ್ನು ಮತ್ತು ಸಮಾಜದ ಬಡ ವರ್ಗಗಳನ್ನು ದಮನಿಸುವ ಕಾರ್ಯದಲ್ಲಿ ಸರಕಾರದ ಪರವಾಗಿ ನಿಂತಿದೆ. ಗೋರಕ್ಷಕರು ಮತ್ತು ಹಿಂದೂ ಯುವವಾಹಿನಿ ಇದಕ್ಕೆ ಉದಾಹರಣೆ. ಆರೆಸ್ಸೆಸ್ ಶಾಖೆಗಳ ಮೂಲಕ ಹರಡಲಾದ ‘ಅವರನ್ನು-ದ್ವೇಷಿಸು ಸಿದ್ಧಾಂತ’ (ಹೇಟ್-ಅದರ್ ಐಡಿಯಾಲಜಿ) ಈಗ ಸಾಮಾನ್ಯ ತಿಳುವಳಿಕೆ (ಕಾಮನ್‌ಸೆನ್ಸ್)ಯ ಭಾಗವಾಗಿದೆ ಮತ್ತು ಇದು ಸಮಾಜದಲ್ಲಿ ದ್ವೇಷ ಮತ್ತು ಹಿಂಸೆಗೆ ಆಧಾರವಾಗಿದೆ, ನೆಲೆ ಯಾಗಿದೆ. ಸಾಮಾಜಿಕ ಅವಕಾಶ (ಸೋಶಿಯಲ್ ಸ್ಪೇಸ್)ವನ್ನು ಭಾವನಾತ್ಮಕ ವಿಷಯಗಳು ಆಳುತ್ತಿವೆ, ಡಾಮಿನೇಟ್ ಮಾಡುತ್ತಿವೆ; ಅಸಹನೆಯ ವಾತಾವರಣ ದಿನನಿತ್ಯದ ಸಂಗತಿಯಾಗಿದೆ.

ವಿಬಿ: ಭಾರತದಲ್ಲಿ ಹಿಂದೂ ಕೋಮು ರಾಜಕಾರಣದ ಬೆಳವಣಿಗೆಗೆ ಮೂಲ ಕಾರಣಗಳೇನು? ಕಾಂಗ್ರೆಸ್ ಪಕ್ಷದ ಒಳಗೆಯೇ ಇರುವ ಸಂಘಪರಿವಾರದ ರೀತಿಯ ಉದಾರವಾದಿ ಮೇಲ್ಜಾತಿ ಹಿಂದೂಗಳ ಹಿತಾಸಕ್ತಿಗಳ ಹೊರತಾಗಿ ಮತ್ತು ಭಾರತದಲ್ಲಿ ಕೋಮು ರಾಜಕಾರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕಾಂಗ್ರೆಸಿಗರ ಸೋಲಿನ ಹೊರತಾಗಿ ಈ ಕೋಮು ರಾಜಕಾರಣದ ಬೆಳವಣಿಗೆ ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ.

ಆರ್‌ಪಿ: ಭಾರತದಲ್ಲಿ ಕೋಮು ರಾಜಕಾರಣಕ್ಕೆ ಮೂಲ ಕಾರಣ ಗಳು: ಭೂಸುಧಾರಣೆಗಳ ಮತ್ತು ಮತನಿರಪೇಕ್ಷೀಕರಣದ (ಸೆಕ್ಯುಲರೈಸೇಶನ್) ಗೈರು ಹಾಜರಿ ಮತ್ತು ಪುರೋಹಿತಶಾಹಿಯ ಹಿಡಿತವನ್ನು ಕಡಿತಗೊಳಿಸುವಲ್ಲಿ ಆಗಿರುವ ಸೋಲು. ಮುಸ್ಲಿಂ ಕೋಮು ಶಕ್ತಿಗಳು ಮೂಲತಃ ಮುಸ್ಲಿಂಲೀಗ್‌ನಲ್ಲಿದ್ದವು. ಆದರೆ ಹಿಂದೂ ಮಹಾಸಭಾ, ಆರೆಸ್ಸೆಸ್ ಮತ್ತು ಕಾಂಗ್ರೆಸ್‌ನಲ್ಲಿ ಕೂಡಾ ಹರಡಿಕೊಂಡಿದ್ದವು. ನೆಹರೂ ಇರುವ ವರೆಗೆ ಕಾಂಗ್ರೆಸ್ಸಿನ ಒಳಗೆ ಈ ಶಕ್ತಿಗಳ ಪ್ರಭಾವ ತುಂಬ ಸೀಮಿತವಾಗಿತ್ತು. ಕಾಂಗ್ರೆಸ್ಸಿನ ಒಳಗೇ ಇದ್ದ ಈ ಕೋಮುಶಕ್ತಿಗಳು ಕಾಂಗ್ರೆಸ್ಸಿನ ಒಳಗೆಯೂ ಕೋಮುಶಕ್ತಿಗಳನ್ನು ಜೀವಂತವಾಗಿ ಇಟ್ಟಿದ್ದವು. ನೆಹರೂರವರ ನಂತರ ಈ ಶಕ್ತಿಗಳ ಹಿಡಿತ ಹೆಚ್ಚಾಗ ಲಾರಂಭಿಸಿತು ಮತ್ತು ಪರಿಣಾಮವಾಗಿ ಕಾಂಗ್ರೆಸ್ಸಿನ ಕೋಮುರಾಜಕಾರಣ ಮುನ್ನೆಲೆಗೆ ಬರುವಂತಾಯಿತು ಕಾಂಗ್ರೆಸ್ ಪಕ್ಷದ ಒಳಗೂ ಕೋಮುಶಕ್ತಿಗಳಿವೆ ಎಂದು ನೆಹರೂ ಎಚ್ಚರಿಕೆ ನೀಡಿದ್ದರು; ಆದರೆ ಆ ಶಕ್ತಿಗಳನ್ನು ಹೊರ ದಬ್ಬಲು; ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ.

ವಿಬಿ: ನೆಹರೂರವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳನ್ನು ಸಾರ್ವಜನಿಕ ತಿಳುವಳಿಕೆಗಾಗಿ ಇನ್ನಷ್ಟು ಸಂಖ್ಯೆಯಲ್ಲಿ ಪ್ರಕಟಿಸಿ ಹಂಚಬೇಕು. ಇದರಿಂದ ಅವರು ತಮ್ಮ ಮುಖ್ಯ-ಮಂತ್ರಿಗಳೊಂದಿಗೆ ಹೇಗೆ ಸಂವಹಿಸುತ್ತಿದ್ದರು ಎಂದು ತಿಳಿಯಬಹುದೆಂದು ನೀವು ಇತ್ತೀಚೆಗೆ ಹೇಳಿದ್ದೀರಿ. ನಿಜವಾಗಿ ಅವರು ಅಯೋಧ್ಯಾ ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮುಖ್ಯ ಮಂತ್ರಿ ಗೋವಿಂದವಲ್ಲಭ ಪಂತ್‌ರವರಿಗೆ ಬರೆದ ಪತ್ರ ನಮ್ಮ ಕಣ್ಣು ತೆರೆಸುವ ಪತ್ರ. ಇಂತಹ ಹಲವು ಪತ್ರಗಳು ಇರಬಹುದು. ನಮ್ಮಲ್ಲಿರುವ ಪ್ರತಿಯೊಂದುಅನಿಷ್ಟಕ್ಕೂ ನೆಹರೂರವರನ್ನು ದೂಷಿಸಲಾಗುತ್ತಿರುವ ಇಂದಿನ ಸಂದರ್ಭಗಳಲ್ಲಿ ಈ ಪತ್ರಗಳು ಎಷ್ಟು ಮುಖ್ಯವಾಗುತ್ತವೆ?

ಆರ್‌ಪಿ: ನೆಹರೂ ಓರ್ವ ಸಂಪೂರ್ಣ ಡೆಮೋಕ್ರ ಟಿಕ್ (ಸಂಸದೀಯವಾದಿ) ಆಗಿದ್ದರು. ಅದೇ ವೇಳೆ ಅತಿ ಧಾರ್ಮಿಕತೆ (ರಿಲಿಜಿಯೊಸಿಟಿ)ಯ ಹಿಡಿತದಲ್ಲಿದ್ದ ಒಂದು ಸಮಾಜದಲ್ಲಿ ಅವರು ಮತನಿರಪೇಕ್ಷತೆಯ ಬೇರುಗಳನ್ನು ನೆಡಲು ಸದಾ ಪ್ರಯತ್ನಿಸುತ್ತಿದ್ದರು. ಮುಖ್ಯಮಂತ್ರಿಗಳಿಗೆ ಮತನಿರಪೇಕ್ಷ (ಸೆಕ್ಯುಲರ್) ಪ್ರಜಾಸತ್ತಾತ್ಮಕ ವೌಲ್ಯಗಳು ಮತ್ತು ಶಿಕ್ಷಣ, ಔದ್ಯೋಗೀಕರಣದಂತಹ ವಿಷಯಗಳಿಗೆ ಸಂಬಂಧಿ ಸಿದ ಸಂಗತಿಗಳನ್ನು ತನ್ನ ಪತ್ರಗಳಲ್ಲಿ ಬರೆಯುತ್ತಿದ್ದರು. 1949ರಲ್ಲಿ ಗೋವಿಂದ ವಲ್ಲಭ ಪಂತ್‌ರವರಿಗೆ ಬರೆದ ಪತ್ರ ಬಾಬರಿ ಮಸೀದಿಯಲ್ಲಿ 1949ರಲ್ಲಿ ಬಲಾತ್ಕಾರಪೂರ್ವಕವಾಗಿ ಇಡಲಾಗಿದ್ದ ರಾಮ್ ಲಲ್ಲಾ ಮೂರ್ತಿಗಳನ್ನು ತೆಗೆಸುವಕುರಿತು ಬರೆದ ಪತ್ರವಾಗಿತ್ತು. ಈ ಪತ್ರಗಳಲ್ಲಿ ಉದಾರವಾದಿ, ಪ್ರಜಾಸತ್ತಾತ್ಮಕ ದೇಶವೊಂದರ ವೌಲ್ಯಗಳ ಜೊತೆಗೆ ದೇಶದ ಆಡಳಿತ ನಡೆಸುವ (ವಿಸ್ಡಮ್) ವಿವೇಕ ಅಡಗಿದೆ.

ವಿಬಿ: ಬಿಜೆಪಿ ಪ್ರತಿಯೊಬ್ಬ ನಾಯಕನ್ನೂ ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳಲು ಪ್ರಯತ್ನಿಸಿದೆ. ಬಿಜೆಪಿ ಜನರು ಸರ್ದಾರ್ ಪಟೇಲ್‌ರಿಂದ ಆರಂಭಿಸಿ, ಬಳಿಕ ಸುಭಾಶ್ಚಂದ್ರ ಬೋಸ್‌ರಲ್ಲಿಗೆ ಬಂದು, ಈಗ ಅಂಬೇಡ್ಕರ್ ಬಳಿ ನಿಂತಿದ್ದಾರೆ. ಈ ಮಧ್ಯೆ ಅವರು ಗಾಂಧಿ, ವಿವೇಕಾನಂದ ಮತ್ತು ಭಗತ್‌ಸಿಂಗ್‌ರನ್ನು ಬಳಸಿಕೊಂಡರು. ಸದ್ಯಕ್ಕೆ ಅವರ ಗಮನ ಸಂಪೂರ್ಣವಾಗಿ ಡಾ. ಅಂಬೇಡ್ಕರ್‌ರ ಮೇಲೆ ಕೇಂದ್ರೀಕೃತವಾ ದಂತಿದೆ. ಆರೆಸ್ಸೆಸ್‌ಗೆ ತನ್ನದೇ ಆದ ನಾಯಕ ಹೀರೋ(ಐಕಾನ್) ಇಲ್ಲ. ಆದ್ದರಿಂದ ಇನ್ಯಾರದೋ ಐಕಾನನ್ನು ತನ್ನದಾಗಿ ಮಾಡಿಕೊಳ್ಳಬೇಕಾಗಿದೆ ಎಂದು ಕೆಲವು ಜನ ಬರೆದರು. ಈ ಎಲ್ಲಾ ಐಕಾನ್‌ಗಳಿಗೆ ನೆಹರೂ ಮತ್ತು ಗಾಂಧಿ ಜತೆ ಭಿನ್ನಾಭಿಪ್ರಾಯಗಳಿದ್ದಿರಬಹುದು. ಆದರೆ ಅವರೆಲ್ಲರು ಕೂಡ ಎಲ್ಲರನ್ನೂ ಒಳಗೊಳ್ಳುವ (ಇನ್‌ಕ್ಲೂಸಿವ್) ಸೆಕ್ಯುಲರ್, ಸಮಾಜವಾದಿ ಭಾರತದ ಒಂದು ವಿಚಾರ(ಐಡಿಯಾ)ವನ್ನು ಪ್ರತಿನಿಧಿಸುತ್ತಿದ್ದರು; ಆ ವಿಚಾರ(ಐಡಿಯಾ)ಕ್ಕೆ ಬದ್ಧರಾಗಿದ್ದರು. ಸಂಘಪರಿ ವಾರಕ್ಕೆ ನೆಹರೂ ಯಾಕೆ ಅಷ್ಟೊಂದು ಮುಖ್ಯರಾಗಿದ್ದಾರೆ; ಅವರ ಸಮಕಾಲೀನ ನಾಯಕರೊಂದಿಗೆ ಅವರಿಗೆ ಇದ್ದಿರಬಹುದಾದ ಭಿನ್ನಾಭಿಪ್ರಾಯಗಳನ್ನು ಬಳಸಿ ಕೊಂಡು ಅವರ ಹೆಸರನ್ನು ಯಾಕೆ ಅಪವೌಲ್ಯಗೊಳಿಸಲು, ಅಮುಖ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಆರ್‌ಪಿ: ಸ್ವಾತಂತ್ರ ಚಳವಳಿಯ ಈ ಹೀರೋಗಳನ್ನು, ನಾಯಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಹಲವಾರು ಕಾರಣಗಳಿವೆ. ತನ್ನ ಹಿಂದೂ ರಾಷ್ಟ್ರದ ಕಾರ್ಯಸೂಚಿ(ಅಜೆಂಡಾ)ದಿಂದಾಗಿ ಆರೆಸ್ಸೆಸ್ ಸ್ವಾತಂತ್ರ ಚಳವಳಿಯಿಂದ ದೂರ ಉಳಿದಿತ್ತು. ಇದು ಈ ನಾಯಕರ ಭಾರತದ ರಾಷ್ಟ್ರೀಯ ಅಜೆಂಡಾಕ್ಕೆ ವ್ಯತಿರಿಕ್ತವಾಗಿತ್ತು. ಆರೆಸ್ಸೆಸ್ ತನ್ನ ಸ್ವಯಂಸೇವಕರನ್ನು ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಿಲ್ಲ. ಅಂಬೇಡ್ಕರರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುವು ದು ಚುನಾವಣಾ ಉದ್ದೇಶಗಳಿಗಾಗಿ. ಮುಖ್ಯವಾಗಿ ದಲಿತ ಸಮುದಾಯಗಳನ್ನು ಬಳಸಿಕೊಳ್ಳುವುದಕ್ಕಾಗಿ.

ಮುಂದುವರಿಯುವುದು...

share
ವಾರ್ತಾಭಾರತಿ
ವಾರ್ತಾಭಾರತಿ
Next Story
X