Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಏರುತ್ತಿರುವ ಜನಸಂಖ್ಯೆ ಸಮಸ್ಯೆಯಾಗದಿರಲಿ

ಏರುತ್ತಿರುವ ಜನಸಂಖ್ಯೆ ಸಮಸ್ಯೆಯಾಗದಿರಲಿ

ಇಂದು ವಿಶ್ವ ಜನಸಂಖ್ಯಾ ದಿನ

ಡಾ. ಮುರಲೀಮೋಹನ್, ಚೂಂತಾರುಡಾ. ಮುರಲೀಮೋಹನ್, ಚೂಂತಾರು10 July 2017 6:43 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಏರುತ್ತಿರುವ ಜನಸಂಖ್ಯೆ ಸಮಸ್ಯೆಯಾಗದಿರಲಿ

ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಏರುತ್ತಿರುವ ಜನಸಂಖ್ಯೆಯಿಂದಾಗುವ ಜಾಗತಿಕ ತೊಂದರೆ, ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ದಿನಾಂಕ ಜುಲೈ 11, 1989ರಿಂದ ಜಾರಿಗೆ ತರಲಾಯಿತು. ಕ್ಷಣಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹುದೊಡ್ಡ ಸಮಸ್ಯೆ ಎಂದರೂ ತಪ್ಪಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತೀ ದಿನ 3,53,000 ಶಿಶುಗಳು ಜನಿಸುತ್ತವೆ. (ಪ್ರತೀ ನಿಮಿಷಕ್ಕೆ 255 ಮತ್ತು ಪ್ರತೀ ಕ್ಷಣಕ್ಕೆ 5 ಶಿಶುಗಳ ಜನನ) ಆದರೆ ಪ್ರತೀ ದಿನ ಜಾಗತಿಕವಾಗಿ 1,53,000 ವ್ಯಕ್ತಿಗಳು ಸಾವನ್ನಪ್ಪುತ್ತಾರೆ. (ಪ್ರತೀ ನಿಮಿಷಕ್ಕೆ 110 ಮತ್ತು ಪ್ರತೀ ಕ್ಷಣಕ್ಕೆ 2 ವ್ಯಕ್ತಿಗಳ ಮರಣ). ಕ್ಷಣಕ್ಷಣಕ್ಕೂ ಏರುತ್ತಿರುವ ಈ ಜನಸಂಖ್ಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇಲ್ಲವಾದಲ್ಲಿ ಪ್ರಾಥಮಿಕ ಮೂಲಭೂತ ಅವಶ್ಯಕತೆಗಳಾದ ಅನ್ನ, ನೀರು, ವಸತಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಅವಶ್ಯಕತೆಗಳನ್ನು ಪೂರೈಸುವುದು ಕಷ್ಟವಾಗಿ, ಭೂಮಂಡಲದಲ್ಲಿ ಜೀವಿಸುವುದೇ ಅಸಾಧ್ಯವಾಗಬಹದು. 1987 ಜುಲೈ 11ರಂದು ನಮ್ಮ ವಿಶ್ವದ ಜನಸಂಖ್ಯೆ ಅಧಿಕೃತವಾಗಿ 5 ಮಿಲಿಯನ್ (500ಕೋಟಿ) ತಲುಪಿತು. ಜನರಲ್ಲಿ ಜನಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಮೆರಿಕ ಆಡಳಿತ ಪರಿಷತ್ತು (UNDP) 1989ರಂದು ವಿಶ್ವ ಜನಸಂಖ್ಯೆ ದಿನದ ಆಚರಣೆಯನ್ನು ಜಾರಿಗೆ ತಂದಿತು. 2014 ಜನವರಿ 1ರ ಅಂಕಿಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆ 7,137,661,030 (ಸುಮಾರು 713 ಕೋಟಿ). 2015 ಜನವರಿ 1ರ ಜನಗಣತಿಯಂತೆ ಈ ಜನಸಂಖ್ಯೆ 7,145,680,000 ಎಂದು ತಿಳಿದು ಬಂದಿದೆ. (ಸುಮಾರು ಏಳುನೂರು ಹದಿನಾಲ್ಕು ಕೋಟಿ) ಈ ಜನಸಂಖ್ಯೆಯಲ್ಲಿ ಸುಮಾರು ಶೇ. 60 ಮಂದಿ ಏಷ್ಯಾ ಖಂಡದಲ್ಲಿ ವಾಸಿಸುತ್ತಾರೆ. ವಿಶ್ವ ಜನಸಂಖ್ಯೆಯ ಶೇ. 19 ಮಂದಿ ಚೀನಾದಲ್ಲಿ ಶೇ. 18 ಮಂದಿ ಭಾರತದಲ್ಲಿ, ಶೇ. 12 ಮಂದಿ ಆಫ್ರಿಕಾ ದೇಶದಲ್ಲಿ, ಶೇ. 11 ಮಂದಿ ಯುರೋಪ್‌ನಲ್ಲಿ, ಶೇ. 8 ಮಂದಿ ಉತ್ತರ ಆಮೆರಿಕದಲ್ಲಿ ಮತ್ತು ಶೇ. 5.5 ಮಂದಿ ದಕ್ಷಿಣ ಅಮೆರಿಕದಲ್ಲಿ ವಾಸಿಸುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ನಮ್ಮ ಕರ್ನಾಟಕದಲ್ಲಿ ಸುಮಾರು 6 ಕೋಟಿ ಜನ ಸಂಖ್ಯೆ ಇದ್ದು, ಭಾರತದ ಜನಸಂಖ್ಯೆ 125 ಕೋಟಿಗಿಂತಲೂ ಜಾಸ್ತಿಯಾಗಿರುವುದಂತೂ ಸತ್ಯ. ಜನಸಂಖ್ಯೆಜಾಸ್ತಿಯಾದಂತೆ ಮೂಲಭೂತ ಆವಶ್ಯಕತೆಗಳು ಮತ್ತು ಸೌಲಭ್ಯಗಳು ದೊರಕದಿರುವುದೇ ಬಹುದೊಡ್ಡ ವಿಪರ್ಯಾಸ. ಇದರಿಂದಾಗಿ ನೂರಾರು ಸಮಸ್ಯೆಗಳಿಗೆ ನಾಂದಿ ಹಾಡಿದೆ. ಒಂದು ದೇಶದ ಪ್ರಗತಿ ಮತ್ತು ಪರಿಪೂರ್ಣ ಬೆಳವಣಿಗೆಗೆ ಮನುಷ್ಯ ಸಾಮರ್ಥ್ಯ (Man Power) ಎಷ್ಟು ಅಗತ್ಯವೋ ಅಷ್ಟೇ ರೀತಿಯಲ್ಲಿ ಏರುತ್ತಿರುವ ಜನಸಂಖ್ಯೆ ಕೂಡಾ ಬೆಳವಣಿಗೆಗೆ ಕಡಿವಾಣ ಹಾಕುತ್ತದೆ ಎನ್ನುವುದು ವಿಪರ್ಯಾಸವಾದರೂ ನಂಬಲೇಬೇಕಾದ ಸತ್ಯ. 1987 ಜುಲೈ 11ರಂದು 500ಕೋಟಿ ತಲುಪಿದ್ದ ವಿಶ್ವದ ಜನಸಂಖ್ಯೆ 2015ರಲ್ಲಿ ಅಂದರೆ ಕೇವಲ 28 ವರ್ಷಗಳಲ್ಲಿ ಏಳುನೂರ ಹದಿನೈದು ಕೋಟಿಗೆ ತಲುಪಿರುವುದು ಬಹಳ ಸೋಜಿಗದ ಸಂಗತಿ ಮತ್ತು ಕಡಿವಾಣ ಹಾಕದಿದ್ದಲ್ಲಿ 2050ರಲ್ಲಿ ಒಂದು ಸಾವಿರ ಕೋಟಿ ತಲುಪಿದರೂ ಆಶ್ಚರ್ಯವಲ್ಲ.

ಕೊನೆಮಾತು 

ಭಾರತದ ಜನಸಂಖ್ಯೆ 2015ರ ಜುಲೈ ತಿಂಗಳ ಆರಂಭದಲ್ಲಿ 128 ಕೋಟಿ ತಲುಪಿದೆ. 1950ರಲ್ಲಿ 40 ಕೋಟಿಯಷ್ಟಿದ್ದ ಜನಸಂಖ್ಯೆ 2000 ಇಸವಿಯ ಹೊತ್ತಿಗೆ 100 ಕೋಟಿಯನ್ನು ದಾಟಿತ್ತು. ಇದೇ ವೇಗದಲ್ಲಿ ಮುನ್ನಡೆದರೆ 2050ರ ಹೊತ್ತಿಗೆ ಭಾರತದ ಜನಸಂಖ್ಯೆ 170 ಕೋಟಿ ತಲುಪಿದರೂ ಆಶ್ಚರ್ಯವೇನಲ್ಲ. ಜನಸಂಖ್ಯೆಯ ಆಧಾರದಲ್ಲಿ ಭಾರತಕ್ಕೆ ಚೀನಾದ ನಂತರದ 2ನೇ ಸ್ಥಾನ ದೊರಕಿದೆ. 2025ರ ಹೊತ್ತಿಗೆ ಭಾರತ ಚೀನಾ ದೇಶವನ್ನು ಹಿಂದಿಕ್ಕಿ ಒಂದನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ ಸಂತಸದ ವಿಚಾರವೆಂದರೆ ಈ ಜನಸಂಖ್ಯೆಯ ಶೇ. 50 ಮಂದಿ 25 ವರ್ಷಗಳಿಗಿಂತ ಕೆಳಗಿನವರು ಮತ್ತು 65ಶೇ. ಮಂದಿ 35 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. 2020ರ ಹೊತ್ತಿಗೆ ಸರಾಸರಿ ಭಾರತೀಯ ಪ್ರಜೆಯ ವಯಸ್ಸು 29 ಆಗಿರುತ್ತದೆ ಎಂಬುದು ಸಮಾಧಾನಕರ ಅಂಶ. (ಸರಾಸರಿ ಚೀನಾ ಪ್ರಜೆಯ ವಯಸ್ಸು 37 ಮತ್ತು ಜಪಾನ್ ದೇಶದ ಸರಾಸರಿ ವಯಸ್ಸು 48) ಭಾರತದ ಈ ಯುವಶಕ್ತಿಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಮಾತ್ರ ಭಾರತ ದೇಶ ವಿಶ್ವದ ಹಿರಿಯಣ್ಣನಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ.

ಜನಸಂಖ್ಯಾ ದಿನಾಚರಣೆಯ ಧ್ಯೇಯಗಳು

1. ಯುವ ಜನರನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ಮತ್ತು ಗಂಡು ಹೆಣ್ಣಿನ ಅನುಪಾತವನ್ನು ಕಾಯ್ದುಕೊಳ್ಳುವ ಸದುದ್ದೇಶ ಹೊಂದಿದೆ.
2. ಬಾಲ್ಯವಿವಾಹವನ್ನು ತಪ್ಪಿಸಿ ತಮ್ಮ ಜೀವನದ ಗುರಿ ಮತ್ತು ಉದ್ದೇಶಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.
3. ಯುವ ಜನರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಸೆಕ್ಸ್ ವಿಚಾರ ಧಾರೆಯನ್ನು ಮನನ ಮಾಡಿಸುವುದಾಗಿದೆ.

4. ಲಿಂಗ ತಾರತಮ್ಯದ ಧೋರಣೆಯನ್ನು ಕಡಿಮೆ ಮಾಡುವುದು 5. ಸಣ್ಣ ವಯಸ್ಸಿನಲ್ಲಿ ಗರ್ಭಧರಿಸದಂತೆ ಜಾಗೃತಿ ಮೂಡಿಸಲು ಮತ್ತು ಬಾಲ್ಯ ವಿವಾಹ ಮತ್ತು ಸಣ್ಣ ವಯಸ್ಸಿನಲ್ಲಿ ತಾಯಿಯಾಗುವುದರಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವುದು.
6. ಅನಾರೋಗ್ಯಕರವಾದ ಸೆಕ್ಸ್‌ನಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು.
7. ಗಂಡು ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡದೆ ಇಬ್ಬರಿಗೂ ಪ್ರಾಥಮಿಕ ಸೌಲಭ್ಯಗಳು ಮತ್ತು ವಿದ್ಯಾಭ್ಯಾಸ ಒದಗಿಸುವ ಬಗ್ಗೆ ಮನವರಿಕೆ ಮಾಡಿಸುವುದು.
8. ಹೆಣ್ಣು ಮಗುವಿನ ಕಾನೂನು ಬಾಹಿರ ಭ್ರೂಣ ಹತ್ಯೆಯನ್ನು ನಿಲ್ಲಿಸಲು ಮತ್ತು ಗಂಡು ಹೆಣ್ಣಿನ ಸರಿಯಾದ ಅನುಪಾತ ಉಂಟಾಗಲು ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಡಾ. ಮುರಲೀಮೋಹನ್, ಚೂಂತಾರು
ಡಾ. ಮುರಲೀಮೋಹನ್, ಚೂಂತಾರು
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X