Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಬಡ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು...

ಬಡ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಾಗುವಂತೆ ಮಾಡಿದ ಮುರುಗಾನಂತಮ್

ವಾರ್ತಾಭಾರತಿವಾರ್ತಾಭಾರತಿ12 July 2017 11:59 PM IST
share
ಬಡ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಾಗುವಂತೆ ಮಾಡಿದ ಮುರುಗಾನಂತಮ್

‘‘ಅದೆಲ್ಲ ಆರಂಭವಾದದ್ದು ನನ್ನ ಹೆಂಡತಿಯಿಂದ’’, ಆರುಣಾಚಲಂ ಮುರುಗಾನಂತಮ್ ಬಿಬಿಸಿಗೆ ಹೇಳಿದರು. 1998ರಲ್ಲಿ, ತನ್ನ ಪತ್ನಿ ಸ್ತ್ರೀಯರ ನೈರ್ಮಲ್ಯಕ್ಕಾಗಿ ಚಿಂದಿ ಬಟ್ಟೆಗಳನ್ನು ಬಳಸುತ್ತಿದ್ದಾಳೆಂದು ತಿಳಿದಾಗ ಅವರಿಗೆ ಆಘಾತವಾಯಿತು. ತಾನು ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಂಡುಕೊಂಡರೆ ಮನೆಯಲ್ಲಿ ಎಲ್ಲರ ಊಟಕ್ಕೆ ಬೇಕಾಗುವಷ್ಟು ಹಣ ಉಳಿಯಲಾರದೆಂದು ಪತ್ನಿ ಅವರಿಗೆ ತನ್ನ ಸ್ಥಿತಿಯನ್ನು ವಿವರಿಸುತ್ತಾ ಹೇಳಿದಳು.

 ಆ ಕ್ಷಣದಿಂದ ಮುರುಗಾನಂತಮ್ ಒಂದು ಪರಮೋದ್ದೇಶದ ಅಭಿಯಾನಕ್ಕೆ ವ್ಯಕ್ತಿಯಾದರು. ತುಂಬ ದುಬಾರಿಯಾದ ವೈಯಕ್ತಿಕ ಬೆಲೆತೆತ್ತು, ಆತ ಭಾರತದ ಬಡ ಮಹಿಳೆಯರು ಕೊಂಡುಕೊಳ್ಳಬಹುದಾದ, ಅಗ್ಗದ ಬೆಲೆಗೆ ಒದಗಿಸುವ ಬಗೆ ಹೇಗೆಂದು ಯೋಚಿಸತೊಡಗಿ ಕಾರ್ಯೋನ್ಮುಖನಾದರು.

ಬಡ ಮಹಿಳೆಯರು ನೈರ್ಮಲ್ಯಕ್ಕಾಗಿ ತೆರಬೇಕಾಗಿರುವ ದುಬಾರಿ ಬೆಲೆ

ಮುರುಗಾನಂತಮ್ ತನ್ನ ಮುಂದಿದ್ದ ಸಮಸ್ಯೆಯನ್ನು ಹೆಚ್ಚು ಹೆಚ್ಚು ಪರಿಶೀಲಿಸಿದಂತೆ ಅವರಿಗೆ ತನ್ನ ಹುಡುಕಾಟ ಎಷ್ಟು ಮುಖ್ಯವೆಂದು ಮನವರಿಕೆಯಾಯಿತು. ದಕ್ಷಿಣ ಭಾರತದಲ್ಲಿದ್ದ ತನ್ನ ಮನೆಯ ಸಮೀಪದ ಹಳ್ಳಿಗಳಲ್ಲಿ, ಪ್ರತೀ ಹತ್ತು ಮಹಿಳೆಯರಲ್ಲಿ ಒಬ್ಬಳು ಮಾತ್ರ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಾಳೆಂದು ಮತ್ತು ದೇಶದಲ್ಲಿ ಕೇವಲ ಶೇ.12 ಮಹಿಳೆಯರು ಮಾತ್ರ ಅವುಗಳನ್ನು ಬಳಸುತ್ತಿದ್ದಾರೆಂದು ಅವರಿಗೆ ಗೊತ್ತಾಯಿತು.

ಮಹಿಳೆಯರು ಮರಳು (ಹೊಗೆ), ಮರದ ಪುಡಿ, ಎಲೆಗಳು ಮತ್ತು ಬೂದಿಯಂತಹ ಅಗ್ಗದ, ಆದರೆ ಆರೋಗ್ಯಕರವಲ್ಲದ, ನೈರ್ಮಲ್ಯಕ್ಕೆ ಹಾನಿಕಾರಕವಾದ ಬದಲಿ ವ್ಯವಸ್ಥೆಗೆ ಶರಣಾಗುತ್ತಾರೆ. ಇದಕ್ಕಿಂತ ಹೆಚ್ಚು ಚಿಂತಿಸಬೇಕಾದ ವಿಷಯವೆಂದರೆ, ಹಲವಾರು ಮಹಿಳೆಯರು ಬಟ್ಟ್ಟೆಗಳನ್ನು ಬಳಸುತ್ತಾರೆ. ಆದರೆ ಬಿಸಿಲಿನಲ್ಲಿ ಅವುಗಳನ್ನು ಅವರು ಒಣಹಾಕುವುದಿಲ್ಲ; ಹೀಗೆ ಅವುಗಳನ್ನು ಒಣಗಿಸಲು ಅವರಿಗೆ ಇರಿಸುಮುರಿಸಾಗುತ್ತದೆ; ಯಾರು ಏನೆಂದುಕೊಳ್ಳ್ಳುತ್ತಾರೋ ಎಂದು ಅವರು ನಾಚಿಕೊಳ್ಳುತ್ತಾರೆ. ಪರಿಣಾಮವಾಗಿ ಆ ಬಟ್ಟೆಗಳು ಬ್ಯಾಕ್ಟೀರಿಯಾ ಇತ್ಯಾದಿಗಳಿಂದ ಮುಕ್ತವಾಗುವುದಿಲ್ಲ; ಇನ್‌ಫೆಕ್ಷನ್‌ನ ಸಾಧ್ಯತೆ ಹೆಚ್ಚುತ್ತದೆ. ಮಹಿಳೆಯರಿಗೆ ಬಹಳ ಸಂದರ್ಭಗಳಲ್ಲಿ ಮಾರಣಾಂತಿಕವಾಗುವ, ಜನನಸಂಬಂಧಿ (ರಿಪ್ರೊಡೆಕ್ಟಿವ್) ಕಾಯಿಲೆಗಳಲ್ಲಿ ಶೇ.70ರಷ್ಟು ಕಾಯಿಲೆಗಳಿಗೆ ಅವರು ಮುಟ್ಟಾಗುವಾಗ ಬಳಸುವ ಕಳಪೆ ನೈರ್ಮಲ್ಯ ವ್ಯವಸ್ಥೆ (ಹೈಜೀನ್)ಯೇ ಕಾರಣ ಎನ್ನಲಾಗಿದೆ.

ಸ್ಯಾನಿಟರಿ ಪ್ಯಾಡ್‌ಗಳ ಕುರಿತಾದ ಕಳಂಕದ ವಿರುದ್ಧ ಹೋರಾಟ

ಭಾರತದಲ್ಲಿ ಹೆಣ್ಣು ರಜಸ್ವಲೆಯಾಗುವ ಬಗ್ಗೆ ಇನ್ನೂ ಕೂಡ ಒಂದು ನಿಷೇಧ (ಟ್ಯಾಬೂ) ಉಳಿದುಕೊಂಡಿದೆ. ಬಿಬಿಸಿಯ ಪ್ರಕಾರ ಮುಟ್ಟಾದ ಹೆಂಗಸರನ್ನು ಅಸ್ಪಶ್ಯರೆಂದು ಪರಿಗಣಿಸಲಾಗುತ್ತೆ (ಅವರನ್ನು ಮುಟ್ಟಿದರೆ ಮೈಲಿಗೆಯಾಗುತ್ತದೆ ಎಂದು ತಿಳಿಯಲಾಗುತ್ತದೆ) ಅಂತಹ ಹೆಂಗಸರು ದೇವಸ್ಥಾನ ಪ್ರವೇಶಿಸುವಂತಿಲ್ಲ; ಸಾರ್ವಜನಿಕ ಸ್ಥಳಗಳಿಗೆ, ಸಮಾರಂಭಗಳಿಗೆ ಹೋಗುವಂತಿಲ್ಲ. ಅಡುಗೆ ಮಾಡುವಂತಿಲ್ಲ ಅಥವಾ ಕುಡಿಯುವ ನೀರನ್ನು ಮುಟ್ಟುವಂತಿಲ್ಲ, ಮುಟ್ಟಾಗಲಾರಂಭಿಸಿದೊಡನೆ ಹಲವು ಹುಡಗಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ.

ಹಾಗಾಗಿ ಮುರುಗಾನಂತಮ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ತನ್ನ ಹುಡುಕಾಟವನ್ನು ಆರಂಭಿಸಿದಾಗ ಅವರ ಹಳ್ಳಿಯ ಜನ ಅವರನ್ನು ಬಹಿಷ್ಕರಿಸಿದರು. ಅವರು ತನ್ನ ಕೈಗಳಿಂದ ತಾನೇ ತಯಾರಿಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ತನ್ನ ಮೇಲೆಯೇ ಪ್ರಯೋಗಿಸಿಕೊಂಡಾಗ ಹಳ್ಳಿಯ ಜನ ಅವರಿಗೇನಾದರೂ ದೆವ್ವ ಹಿಡಿದಿದೆಯೇ ಅಥವಾ ಏನಾದರೂ ಕಾಯಿಲೆ ಬಂದಿದೆಯೇ? ಎಂದು ಅವರನ್ನು ಪ್ರಶ್ನಿಸಲಾರಂಭಿ ಸಿದರು. ಮುರುಗಾನಂತಮ್ ತಾನು ತಯಾರಿಸಿದ ಸ್ಯಾನಿಟರಿ ಪ್ಯಾಡ್‌ಗಳು ದ್ರವವನ್ನು ಹೀರುವ ಸಾಮರ್ಥ್ಯವನ್ನು ಪರೀಕ್ಷಿಸಲು ಪುಟ್‌ಬಾಲ್‌ನ ಒಳಗೆ ಆಡಿನ ರಕ್ತವನ್ನು ತುಂಬಿ ಪರೀಕ್ಷಿಸಿದ್ದರು.

ಇವೆಲ್ಲದರ ಪರಿಣಾಮವಾಗಿ ಆತನ ಬಗ್ಗೆ ಉಂಟಾದ ಹಗರಣ, ಇರಿಸುಮುರಿಸಿನಿಂದಾಗಿ ಅವರ ಪತ್ನಿಗೆ ಮತ್ತು ತಾಯಿಗೆ ಕೂಡ ಸಹಿಸಲಸಾಧ್ಯವಾಗಿ, ಅವರಿಬ್ಬರೂ ಮನೆಬಿಟ್ಟು ಹೊರನಡೆದರು ಆದರೂ ಆತ ಬಡಮಹಿಳೆಯರ ಕೈಗೆ ಎಟಕುವ ದರದಲ್ಲಿ ದೊರಕಬಹುದಾದ ಸ್ಯಾನಿಟರಿ ಪ್ಯಾಡನ್ನು ತಯಾರಿಸುವ ತನ್ನ ಹುಡುಕಾಟವನ್ನು ಮುಂದುವರಿಸಿದರು.

ಹತ್ತಿಯ ಪ್ಯಾಡ್‌ಗಳ ಅವರ ಪ್ರಯತ್ನ, ಪರೀಕ್ಷೆ ಚಿಂತಾಜನಕ ಪರಿಣಾಮಗಳೊಂದಿಗೆ ವಿಫಲವಾಯಿತು. ಬಳಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ಯಾವುದರಿಂದ ತಯಾರಿಸುತ್ತಾರೆ ಎಂದು ಪತ್ತೆಹಚ್ಚುವುದು ಅಗತ್ಯವೆಂದು ಮುರುಗಾನಂತಮ್‌ಗೆ ಮನವರಿಕೆಯಾಯಿತು.

ಬಿಬಿಸಿ ಹೇಳುವ ಪ್ರಕಾರ, ಮುರುಗಾನಂತಮ್ ತನ್ನ ಜೇಬಿನಲ್ಲಿದ್ದ ಕೊನೆಯ ರೂಪಾಯಿ ಖಾಲಿಯಾಗುವವರೆಗೂ ಈ ಕುರಿತು ಸ್ಯಾನಿಟರಿ ಪ್ಯಾಡ್ ತಯಾರಿಸುವ ಕಂಪೆನಿಗಳಿಗೆ ಪೋನ್ ಮಾಡಿ ವಿಚಾರಿಸಿದರು. ತನ್ನದೇ ಸ್ವಂತ ಕಾರ್ಖಾನೆಯಿಲ್ಲದ ಮೇಲೆ ಅವರಿಗೆ ಈ ವಿಷಯ ತಿಳಿದುಕೊಂಡು ಏನಾಗಬೇಕೆಂದು ಆ ಕಂಪೆನಿಗಳಿಗೆ ಅರ್ಥವಾಗಲಿಲ್ಲ. ಎರಡು ವರ್ಷಗಳ ಪ್ರಯತ್ನಗಳ ಬಳಿಕ ಆತ ಒಂದು ಜವಳಿಗಿರಣಿಯ ಮಾಲಕನಂತೆ ನಟಿಸಿ ಅದನ್ನು ಮರವೊಂದರ ತೊಗಟೆಯ ಸೆಲ್ಯುಲೋಸ್‌ನಿಂದ ತಯಾರಿಸುತ್ತಾರೆ ಎಂದು ತಿಳಿದುಕೊಂಡರು.

ಆ ಬಳಿಕ, ನಾಲ್ಕುವರೆ ವರ್ಷಗಳ ನಂತರ ಕಡಿಮೆ ಬೆಲೆಗೆ ಬಡ ಮಹಿಳೆಯರಿಗೆ ದೊರಕಬಹುದಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸುವ ಒಂದು ಯಂತ್ರವನ್ನು ಶೋಧಿಸುವುದರಲ್ಲಿ ಮುರುಗಾನಂತಮ್ ಯಶಸ್ವಿಯಾದರು. ಆ ಯಂತ್ರವು ಸೆಲ್ಯೂಲೋಸನ್ನು ಹತ್ತಿಯಂತೆ ಮಿದುವಾದ ಸಾಮಗ್ರಿಯಾಗಿ ಮಾಡಿ ಕೇಕ್‌ಗಳೊಗೆ ಪ್ಯಾಕ್ ಮಾಡಿ ಬಟ್ಟೆಯಲ್ಲಿ ಸುತ್ತಿ ಅವುಗಳನ್ನು ಕೀಟಾಣು ಮುಕ್ತಗೊಳಿಸುತ್ತದೆ.

ನಂತರ ಮುರುಗಾನಂತಮ್ ಮಹಿಳೆಯರಿಗೆ ತನ್ನ ಯಂತ್ರಗಳು ಲಭ್ಯವಾಗುವಂತೆ ಮಾಡಲು ತನ್ನ ಪ್ರಯತ್ನ ಆರಂಭಿಸಿದರು. ಬಿಬಿಸಿಯ ವರದಿಯ ಪ್ರಕಾರ, ಮುರುಗಾನಂತಮ್‌ರವರ ಹೆಚ್ಚಿನ ಗಿರಾಕಿಗಳು ಎನ್‌ಜಿಒಗಳು ಮತ್ತು ಮಹಿಳೆಯರ ಸ್ವಸಹಾಯ ಗುಂಪುಗಳು. 18 ತಿಂಗಳುಗಳಲ್ಲಿ ಅವರು 250 ಯಂತ್ರಗಳನ್ನು ನಿರ್ಮಿಸಿ ಉತ್ತರ ಭಾರತದ ಅತ್ಯಂತ ಬಡ ಪ್ರದೇಶಕ್ಕೆ ಕೊಂಡು ಹೋದರು.

ಅವರ ಪ್ರತಿಯೊಂದು ಯಂತ್ರ 10 ಜನರಿಗೆ ಉದ್ಯೋಗ ಒದಗಿಸುತ್ತದೆ ಮತ್ತು ಕಡಿಮೆ ಉತ್ಪಾದನಾ ವೆಚ್ಚದ 200-250 ಪ್ಯಾಡ್‌ಗಳನ್ನು ಒಂದು ದಿನದಲ್ಲಿ ಉತ್ಪಾದಿಸುತ್ತದೆ.

ಸಂತಸದ ಸಂಗತಿ ಎಂದರೆ ಅವರ ಯಶಸ್ಸಿನ ಬಳಿಕ ಅವರ ಪತ್ನಿ ಮತ್ತು ಅವರ ತಾಯಿ ಮನೆಗೆ ಮರಳಿ ಬಂದಿದ್ದಾರೆ. ಈಗ ಅವರು ವಿಶ್ವದ ಇತರ ಭಾಗಗಳ ಮೇಲೆ ತನ್ನ ದೃಷ್ಟಿ ಹರಿಸಿದ್ದಾರೆ.

‘‘ಬಡ ಮಹಿಳೆಯರಿಗೆ ಒಂದು ಮಿಲಿಯ ಉದ್ಯೋಗಗಳನ್ನು ಸೃಷ್ಟಿಸುವುದು ನನ್ನ ಉದ್ದೇಶವಾಗಿತ್ತು, ಆದರೆ ವಿಶ್ವದಾದ್ಯಂತ ಹತ್ತು ಮಿಲಿಯ ಉದ್ಯೋಗಗಳನ್ನು ಯಾಕೆ ಸೃಷ್ಟಿಸಬಾರದು?’’ ಎಂದು ಅವರು ಪ್ರಶ್ನಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X