Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಇಂದಿರಾ: ರಾಜಕಾರಣದೊಳಗಿನ ಪ್ರೇಮಕಾರಣ

ಇಂದಿರಾ: ರಾಜಕಾರಣದೊಳಗಿನ ಪ್ರೇಮಕಾರಣ

ಸಾಗರಿಕಾ ಘೋಷ್ಸಾಗರಿಕಾ ಘೋಷ್13 July 2017 6:33 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಇಂದಿರಾ: ರಾಜಕಾರಣದೊಳಗಿನ ಪ್ರೇಮಕಾರಣ

ಮೊದಮೊದಲು ಹಿಂದಿನ ಸಾಲಿನಲ್ಲಿ ಮೌನವಾಗಿ ಕುಳಿತಿರುತ್ತಿದ್ದ ಒಬ್ಬ ವ್ಯಕ್ತಿಯಾಗಿದ್ದರೂ, ಸ್ವಲವೇ ಸಮಯದಲ್ಲಿ ಫಿರೋಝ್ ಗಾಂಧಿ ಒಬ್ಬ ಅತ್ಯುತ್ತಮ ಸಂಸದೀಯ ಪಟುವಾದರು. 1930 ಮತ್ತು 1940ರ ದಶಕಗಳಲ್ಲಿ ನೆಹರೂ ಆಗಿದ್ದಂತೆಯೇ, ಫಿರೋಝ್ ಕಾಂಗ್ರೆಸಿನೊಳಗೇ ಎಡಪಂಥೀಯನಾಗಿ ಉಳಿದರು. 1955ರಲ್ಲಿ ಅವರು ಭಾರತದಲ್ಲಿ ಜೀವ ವಿಮಾ ಕಂಪೆನಿಗಳು ಮತ್ತು ವಾಣಿಜ್ಯ ಮಂಡಳಿಗಳು ನಡೆಸಿದ ಅಕ್ರಮ ವ್ಯವಹಾರಗಳನ್ನು ಬಯಲಿಗೆಳೆದು, ದೇಶದಲ್ಲಿ ಜೀವವಿಮೆಯನ್ನು ಸರಕಾರ ರಾಷ್ಟ್ರೀಕರಣಗೊಳಿಸಲೇ ಬೇಕಾಗುವಂತೆ ಮಾಡಿದರು. ಪತ್ರಿಕಾ ಸ್ವಾತಂತ್ರದ ಪ್ರಬಲ ಪ್ರತಿಪಾದಕರಾಗಿದ್ದ ಫಿರೋಝ್, ಪತ್ರಿಕೆಗಳು ಸಂಸತ್ತಿನಲ್ಲಿ ನಡೆಯುವ ವಾದ-ವಿವಾದಗಳನ್ನು ವರದಿ ಮಾಡಲು ಅವಕಾಶ ನೀಡುವ ಕಾನೂನು ಜಾರಿಯಾಗುವಂತೆ ಮಾಡಿದರು. ಈ ಕಾನೂನನ್ನು ತುರ್ತುಪರಿಸ್ಥಿತಿಯ ವೇಳೆ ಇಂದಿರಾಗಾಂಧಿಯವರು ರದ್ದುಗೊಳಿಸಿದರು.

ಈ ಎಲ್ಲ ಯಶಸ್ಸುಗಳ ಹೊರತಾಗಿಯೂ ಅಥವಾ ಪ್ರಾಯಶಃ ಇವುಗಳಿಂದಾಗಿಯೇ, ಮತ್ತು ದಿಲ್ಲಿಗೆ ಬಂದ ಕಾರಣಕ್ಕಾಗಿ, ಇಂದಿರಾ ಜತೆಗಿನ ಫಿರೋಜ್ ಸಂಬಂಧ ಸುಧಾರಿಸಲಿಲ್ಲ. ನೆಹರೂರವರ ಇರುವಿಕೆಯಿಂದಾಗಿ ಅವರಿಗೆ ಉಸಿರುಕಟ್ಟಿದಂತಾಗುತ್ತಿತ್ತು. ಹಾಗಾಗಿ ತೀನ್ ಮೂರ್ತಿ ಹೌಸ್‌ನಲ್ಲಿನ ವಾಸ ಅವರಿಗೆ ಅಸಹನೀಯವಾಯಿತು. ಫಿರೋಝ್‌ರವರ ಪ್ರಣಯ ವ್ಯವಹಾರಗಳ ಬಗ್ಗೆ ಗಾಳಿಮಾತುಗಳು ಹಬ್ಬಲಾರಂಭಿಸಿದವು. ಸಂಸತ್ತಿನ ಆಕರ್ಷಕ ಸದಸ್ಯೆಯರಾದ ತಾರಕೇಶ್ವರಿ ಸಿನ್ಹಾ, ಮಹ್‌ಮುನಾ ಸುಲ್ತಾನ್ ಮತ್ತು ಸುಭದ್ರಾ ಜೋಶಿಯವರೊಂದಿಗಿನ ತನ್ನ ಗೆಳೆತನವನ್ನು ಅವರು ಸಾರ್ವಜನಿಕ ವಾಗಿಯೇ ಪ್ರದರ್ಶಿಸುತ್ತಿದ್ದರು.

ಫಿರೋಝ್‌ರ ಅಫೇರ್‌ಗಳು ಕೇವಲ ರೊಮ್ಯಾಂಟಿಕ್ ಉತ್ಸಾಹಗಳಾಗಿದ್ದವೋ ಅಥವಾ ಪೂರ್ಣವಾಗಿ ಬೆಳೆದ ಪ್ರಣಯ ಸಂಬಂಧಗಳಾಗಿದ್ದವೋ ಗೊತ್ತಿಲ್ಲ; ಆದರೂ ಅವುಗಳ ಬಗ್ಗೆ ಏಕಪ್ರಕಾರವಾಗಿ ಜನ ಆಡಿಕೊಳ್ಳುತ್ತಿದ್ದರು. ಫಿರೋಝ್‌ರ ಪ್ರೇಮ ವ್ಯವಹಾರಗಳಿಂದಾಗಿ ಅಥವಾ ಇಂದಿರಾ ತನ್ನ ಪತಿ ಫಿರೋಝ್‌ಗೆ ಸಾಕಷ್ಟು ನಿಷ್ಠಳಾದ ಪತ್ನಿಯಲ್ಲ ಎಂಬ ಕಾರಣಕ್ಕಾಗಿ ಅವರಿಬ್ಬರ ಮಧ್ಯೆ ವಿವಾಹ ವಿಚ್ಛೇದನ ನಡೆಯುತ್ತದೆಂಬ ಬಗ್ಗೆ ಬಹಳ ಜನಕ್ಕೆ ಖಚಿತವಾಗಿತ್ತು. ನೆಹರೂರವರ ಕಾರ್ಯದರ್ಶಿ, ಎಂ.ಒ. ಮಥಾಯಿ ಜತೆಗಿನ ಇಂದಿರಾ ಗೆಳೆತನ ಆ ಸಂದರ್ಭದಲ್ಲಿ ಕೆಲವು ಊಹಾಪೋಹಗಳಿಗೆ ಕಾರಣವಾಯಿತು. 1946ರಿಂದ 1959ರ ವರೆಗೆ ನೆಹರೂರವರ ನೆರಳಾಗಿದ್ದ, ‘ಮ್ಯಾಕ್’ ಎಂದೂ ಕರೆಯಲ್ಪಡುತ್ತಿದ್ದ ಮಥಾಯಿ, ಲವಲವಿಕೆಯ ಆಸಕ್ತಿ ಕೆರಳಿಸುವ ವ್ಯಕ್ತಿತ್ವ ಹೊಂದಿದ್ದು ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ಚುರುಕು ಸಂಭಾಷಣಾ ಕಲೆ ಅವರಿಗೆ ಸಿದ್ಧಿಸಿತ್ತು. ಓರ್ವ ಸಮರ್ಥ, ಪ್ರಾಮಾಣಿಕ ಹಾಗೂ ನಿರ್ಭೀತ ದುಡಿಮೆಗಾರರಾಗಿದ್ದ ಮಥಾಯಿಗೆ ನೆಹರೂ ಜತೆಗಿದ್ದ ಆತ್ಮೀಯತೆಯನ್ನು ಇಂದಿರಾ ಇಷ್ಟಪಡುತ್ತಿರಲಿಲ್ಲ. ನೆಹರೂಗೆ ವಿಜಯಲಕ್ಷ್ಮೀ ಮತ್ತು ಎಡ್ವಿನಾ ವೌಂಟ್ ಬ್ಯಾಟನ್ ಜತೆಗೆ ಕೂಡ ಇದ್ದ ನಿಕಟ ಸಂಬಂಧವೂ ಆಕೆಗೆ ಇಷ್ಟವಾಗಿರಲಿಲ್ಲ. ಆದರೆ ಆಕೆ ಮಥಾಯಿ ಬಗ್ಗೆ ಎಷ್ಟೋ ವಿರೋಧ ವ್ಯಕ್ತಪಡಿಸಿದ್ದಿರಬಹುದಾದರೂ, ಜನ ಮಥಾಯಿ ಮತ್ತು ಇಂದಿನಾ ನಡುವಿನ ಗೆಳೆತನದ ಬಗ್ಗೆ ವದಂತಿ ಹಬ್ಬಿಸಿದ್ದರು.

‘ರೆಮಿನಿಸೆನ್ಸರ್(ನೆನಪುಗಳು) ಆಫ್ ದಿ ನೆಹರೂ ಏಜ್’ ಎನ್ನುವ ತನ್ನ ಆತ್ಮಕತೆಯಲ್ಲಿ ಮಥಾಯಿ ‘ಶೀ’ ಎಂಬ ಶೀರ್ಷಿಕೆಯಿರುವ ಒಂದು ಅಧ್ಯಾಯ ಬರೆದರು ಎನ್ನಲಾಗಿದೆ. ಈ ಅಧ್ಯಾಯದಲ್ಲಿ ಅವರು 12 ವರ್ಷಗಳ ದೀರ್ಘಾವಧಿಯ ಒಂದು ಪ್ರೇಮ ವ್ಯವಹಾರದಲ್ಲಿ ತುಂಬ ಭಾವತೀವ್ರಳಾದ ‘ಆಕೆ’ ಯನ್ನು ವಿವರಿಸುತ್ತಾರೆ. ಹಲವು ಬಲಪಂಥೀಯ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ ಮತ್ತು ಮಥಾಯಿ ಆತ್ಮಕತೆಯದ್ದೇ ಎನ್ನಲಾದ ಈ ಅಧ್ಯಾಯದ ಆವೃತ್ತಿ ಆಕೆಯನ್ನು ವಿವಿಧ ರೀತಿಯಲ್ಲಿ ಪ್ರೇಮಪ್ರಧಾನವಾಗಿ ವರ್ಣಿಸುತ್ತದೆ. ‘‘ಆಕೆಯಲ್ಲಿ ಫ್ರೆಂಚ್ ಮಹಿಳೆಯರ ಹಾಗೂ ಕೇರಳದ ನಾಯರ್ ಮಹಿಳೆಯರ ಕಲಾತ್ಮಕತೆ ಇತ್ತು’’ ಎನ್ನುತ್ತದೆ.

ತುಂಬ ಮಾದಕತೆಯ ದೈಹಿಕ ಸಂಬಂಧದ ಹಲವು ವಿವರಗಳುಳ್ಳ ‘ಶೀ’ ಎಂದೂ ಪ್ರಕಟವಾಗಲೇ ಇಲ್ಲ. ಆದರೆ ಮಥಾಯಿ ಅದನ್ನು ಖಂಡಿತವಾಗಿಯೂ ಬರೆದಿದ್ದರು ಮತ್ತು ತನ್ನ ಅತ್ತೆಯೊಂದಿಗೆ ಮುನಿಸಿಕೊಂಡು ಹೊರನಡೆದ ಬಳಿಕ, (ಈಗ ಆನ್‌ಲೈನ್‌ನಲ್ಲಿ ಲಭ್ಯವಿರುವ) ಅದೇ ಅಧ್ಯಾಯವನ್ನು ಮೇನಕಾ ಗಾಂಧಿ ಹಂಚಿದರು.

ಮಥಾಯಿ ಜತೆ ಇಂದಿರಾರವರಿಗಿದ್ದ ಸಂಬಂಧವನ್ನು ಇಷ್ಟರವರೆಗೆ ಎಂದೂ ಸ್ಪಷ್ಟಪಡಿಸಲಾಗಿಲ್ಲ. ಇಂದಿರಾ ಮತ್ತು ಮಥಾಯಿ ‘‘ಪರಸ್ಪರ ದೂಷಿಸುವುದನ್ನು ಬೈಯುವುದನ್ನು ಎಂಜಾಯ್ ಮಾಡುತ್ತಿದ್ದರು’’ ಎಂದು ನೆಹರೂರವರ ಜೀವನ ಚರಿತ್ರೆ ಬರೆದಿರುವ ಸರ್ವೆಪಲ್ಲಿ ಗೋಪಾಲ್ ಹೇಳುತ್ತಾರೆ. ಮತ್ತು ಅವರಿಬ್ಬರ ಸಂಬಂಧವನ್ನು ‘‘ಸಾಮಾನ್ಯ ಮಿತಿಗಳನ್ನು ಮೀರಿ ಇಂದಿರಾ ಅವರನ್ನು(ಮಥಾಯಿಯನ್ನು) ಪ್ರೋತ್ಸಾಹಿಸಿದ್ದ ಒಂದು ಸಂಬಂಧವಾಗಿತ್ತು’’ ಎಂದು ವರ್ಣಿಸುತ್ತಾರೆ.
 ನೆಹರೂ-ಗಾಂಧಿ ಕುಟುಂಬಗಳ ನಿಕಟವರ್ತಿ, ಮಾಜಿ ಕಾಂಗ್ರೆಸ್ ರಾಜಕಾರಣಿ ಮತ್ತು ಇಂದಿರಾಗಾಂಧಿಯವರ ಸೆಕ್ರೆಟೇರಿಯಟ್‌ನಲ್ಲಿ 1966ರಿಂದ 1970ರವರೆಗೆ ಓರ್ವ ಅಧಿಕಾರಿ(ಬ್ಯೂರಾಕ್ರೆಟ್) ಯಾಗಿದ್ದ ನಟವರ್‌ಸಿಂಗ್ ‘‘ಮಥಾಯಿ ನೆಹರೂಗೆ ತುಂಬ ಹಾನಿ ಮಾಡಿದರು’’ ಎನ್ನುತ್ತಾರೆ. ‘‘ಅವರು (ಮಥಾಯಿ) ಅಮೆರಿಕದ ಪಿಐಎಗೆ ನಿಕಟವಾಗಿದ್ದರು. 1946 ಮತ್ತು 1950ರ ನಡುವೆ ನೆಹರೂರವರ ಮೇಜನ್ನು ದಾಟಿದ ಪ್ರತಿಯೊಂದು ದಾಖಲೆಯೂ ಸಿಐಎಗೆ ಹೋಗುತ್ತಿತ್ತು. ಪ್ರೇಮವ್ಯವಹಾರದ ಬಗ್ಗೆ ಹೇಳುವುದಾದರೆ ಆತ(ಮಥಾಯಿ) ಈ ಎಲ್ಲ ಕತೆಗಳನ್ನು ತನ್ನದೇ ಆದ ಕಾರಣಗಳಿಗಾಗಿ ಹರಡಿದ್ದರು.’’ ಫಿರೋಝ್‌ಗಾಂಧಿಯ ಗೆಳೆಯ ನಿಖಿಲ್ ಚಕ್ರವರ್ತಿ ಆಸ್ತಿ ವ್ಯವಹಾರದಲ್ಲಿ ಮಥಾಯಿ ನಡೆಸಿದ ಸಂಶಯಾಸ್ಪದ ವ್ಯವಹಾರಗಳನ್ನು ಮತ್ತು ವಿದೇಶದಲ್ಲಿ ಅವರು ಕೂಡಿಟ್ಟ ನಗದು ಹಣವನ್ನು ಬಯಲು ಮಾಡಿದ ಬಳಿಕ, 1959ರಲ್ಲಿ, ಮಥಾಯಿ ನೆಹರೂರವರ ಸೇವೆಯಿಂದ ಹೊರನಡೆದರು. ಹೀಗಾಗಿ ಅವರು(ಮಥಾಯಿ) ಇಂದಿರಾ ಬಗ್ಗೆ ಬರೆದಿರುವುದು ಹತಾಶ ವ್ಯಕ್ತಿಯೊಬ್ಬ ತನ್ನೊಳಗಿನ ಸಿಟ್ಟನ್ನು ಪ್ರತೀಕಾರರೂಪವಾಗಿ ಹೊರಹಾಕಿದ ಆವೇಶಭರಿತ ಮಾತುಗಳಿರಬಹುದು.

ಇಂದಿರಾ-ಫಿರೋಝ್ ದಾಂಪತ್ಯದ ಅವಧಿಯಲ್ಲಿ, ನೆಹರೂರವರ ಕಾರ್ಯದರ್ಶಿ ಎಂ. ಒ. ಮಥಾಯಿ ಜತೆ ಆಕೆಯ ಸಂಬಂಧದ ಬಗೆಗಿನ ಊಹಾಪೋಹಗಳ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಸಾಗರಿಕಾ ಘೋಷ್ರ ‘ಇಂದಿರಾ ದಿ ಮೋಸ್ಟ್ ಪವರ್‌ಫುಲ್ ಪ್ರೈಮಿನಿಸ್ಟರ್’ ಕೃತಿಯಲ್ಲಿರುವ ಆಯ್ದ ಭಾಗ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಸಾಗರಿಕಾ ಘೋಷ್
ಸಾಗರಿಕಾ ಘೋಷ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X