Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಯಾಕೆ ಕ್ಷಯ ನಿಯಂತ್ರಣ ಎಡವುತ್ತಿದೆ?

ಯಾಕೆ ಕ್ಷಯ ನಿಯಂತ್ರಣ ಎಡವುತ್ತಿದೆ?

ಕಳಪೆ ರೋಗ ಪರೀಕ್ಷಾ ವಿಧಾನ, ಔಷಧಿ ಪೂರೈಕೆಯಲ್ಲಿ ಅವ್ಯವಸ್ಥೆ ಮತ್ತು ಸಲಹೆಯ ಕೊರತೆ.

ಮೇನಕಾ ರಾವ್ಮೇನಕಾ ರಾವ್15 July 2017 12:10 AM IST
share
ಯಾಕೆ ಕ್ಷಯ ನಿಯಂತ್ರಣ ಎಡವುತ್ತಿದೆ?

ಭಾರತ ಇನ್ನೂ ಕೂಡಾ ಕ್ಷಯರೋಗ ಪತ್ತೆ ಹಚ್ಚಲು ಅತ್ಯಂತ ಹಳೆಯದಾದ ವಿಧಾನಗಳಲ್ಲೊಂದಾದ ‘ಸ್ಮಿಯರ್ ಮೈಕ್ರೊಸ್ಕೋಪಿ’ ವಿಧಾನವನ್ನೇ ಬಳಸುತ್ತದೆ. ಈ ವಿಧಾನದಲ್ಲಿ ಶೇ. 70ರಷ್ಟು ಪ್ರಕರಣಗಳಲ್ಲಿ (ರೋಗಿಗಳಲ್ಲಿ) ಮಾತ್ರ ಕ್ಷಯರೋಗ ಇದೆ ಎಂದು ಪತ್ತೆ ಹಚ್ಚಬಹುದು.

ಭಾರತದ ಕ್ಷಯರೋಗ(ಟಿಬಿ) ನಿಯಂತ್ರಣ ಕಾರ್ಯಕ್ರಮವು ಟಿಬಿ ಬರದಂತೆ ತಡೆಯಲು ಮತ್ತು ಬಂದಾಗ ಸರಿಯಾಗಿ ರೋಗ ಪರೀಕ್ಷೆ(ಡಯಾಗ್ನಸಿಸ್) ಮಾಡಲು, ಮತ್ತು ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಂಪೂರ್ಣವಾಗಿ ಸಜ್ಜುಗೊಂಡಿಲ್ಲ. ‘ಸ್ಟಾಪ್ ಟಿಬಿ ಪಾರ್ಟ್‌ನರ್‌ಶಿಪ್’ ಮತ್ತು ‘ಮೆಡಿಸನ್ ಪ್ಲಾನ್ಸ್ ಫ್ರಾಂಟಿಯರ್ಸ್’ ಕಳೆದ ವಾರ ಬಿಡುಗಡೆ ಮಾಡಿದ ‘ಜಾಟ್ ಆಫ್ ಸ್ಟೆಪ್’ ವರದಿಯ ಪ್ರಕಾರ, ನಮ್ಮ ದೇಶದ ‘ದಿ ರಿವೈಸ್ಡ್ ನ್ಯಾಷನಲ್ ಟ್ಯುಬರ್ ಕ್ಯುಲೊಸಿಸ್ ಕಂಟ್ಟ್ರೋಲ್ ಪ್ರೋಗ್ರಾಂ’ ಓಬೀರಾಯನ ಕಾಲದ ರೋಗ ಪರೀಕ್ಷಣಾ ವಿಧಾನಗಳನ್ನು ಬಳಸುತ್ತದೆ.

ಔಷಧಿಗಳ ದಾಸ್ತಾನು ಮುಗಿದು ಹೋಗುವ ಸಮಸ್ಯೆ ಆಗಾಗ ಕಾಣಿಸುತ್ತದೆ, ಮತ್ತು ಕ್ಷಯರೋಗಿಗಳಿಗೆ ಸಲಹೆ ನೀಡುವ, ಅವರೊಂದಿಗೆ ಆಪ್ತವಾಗಿ ಸಮಾಲೋಚಿಸುವ (ಕೌನ್ಸೆಲಿಂಗ್ ನಡೆಸುವ) ಸಾಮರ್ಥ್ಯದ ಕೊರತೆಯಿಂದ ಬಳಲುತ್ತಿದೆ.

ಹೆಚ್ಚಾಗಿ ಶ್ವಾಸಕೋಶಗಳಿಗೆ ಸೋಂಕು ತರುವ ಒಂದು ಬ್ಯಾಕ್ಟೀರಿಯಾದಿಂದ ಕ್ಷಯರೋಗ ಉಂಟಾಗುತ್ತದೆ.

ಮೇಲೆ ಉಲ್ಲೇಖಿಸಿರುವ ವರದಿಯು ಭಾರತವೂ ಸೇರಿದಂತೆ 29 ದೇಶಗಳ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮಗಳನ್ನು ವಿಶ್ಲೇಷಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳಿಗನುಗುಣವಾಗಿ ರೋಗ ಪರೀಕ್ಷೆ ಮತ್ತು ಚಿಕಿತ್ಸೆಯ ನಿಟ್ಟಿನಲ್ಲಿ ಈ ದೇಶಗಳ ಸಾಧನೆಗಳನ್ನು ಪರೀಕ್ಷಿಸುತ್ತದೆ, ಮತ್ತು ಪ್ರತೀ ದೇಶಕ್ಕೆ ಎಷ್ಟನೆ ಸ್ಥಾನವೆಂದು ರ್ಯಾಂಕ್ ನೀಡುತ್ತದೆ.

ಅಸಮರ್ಪಕ ರೋಗ ಪರೀಕ್ಷೆ

ಭಾರತ ಇನ್ನೂ ಕೂಡಾ ಕ್ಷಯರೋಗ ಪತ್ತೆ ಹಚ್ಚಲು ಅತ್ಯಂತ ಹಳೆಯದಾದ ವಿಧಾನಗಳಲ್ಲೊಂದಾದ ‘ಸ್ಮಿಯರ್ ಮೈಕ್ರೊಸ್ಕೋಪಿ’ ವಿಧಾನವನ್ನೇ ಬಳಸುತ್ತದೆ. ಈ ವಿಧಾನದಲ್ಲಿ ಶೇ. 70ರಷ್ಟು ಪ್ರಕರಣಗಳಲ್ಲಿ (ರೋಗಿಗಳಲ್ಲಿ) ಮಾತ್ರ ಕ್ಷಯರೋಗ ಇದೆ ಎಂದು ಪತ್ತೆ ಹಚ್ಚಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕ್ಷಯದ ಸೋಂಕು ತಗಲಿದೆ ಎಂಬ ಅನುಮಾನವಿರುವ ಎಲ್ಲ ರೋಗಿಗಳನ್ನು ಕಾರ್ಟ್ ರಿಜ್ ಬೇಸ್ಡ್ ನ್ಯೂಕ್ಲಿಯಿಕ್ ಆ್ಯಸಿಡ್ ಆ್ಯಂಪ್ಲಿಫಿಕೇಶನ್ ಟೆಸ್ಟ್ ಅಥವಾ ಸಿಬಿ-ಎನ್‌ಎಎಟಿ ಪರೀಕ್ಷಾ ವಿಧಾನವನ್ನು ಬಳಸಿಯೇ ಪರೀಕ್ಷಿಸಬೇಕು. ಕಳೆದ ವರ್ಷ ಭಾರತ ಇಂತಹ 628 ಸಿಬಿ-ಎನ್‌ಎಎಟಿ ಯಂತ್ರಗಳನ್ನು ದೇಶಾದ್ಯಂತ ಬಳಸುವ ಉದ್ದೇಶದಿಂದ ಪಡೆದುಕೊಂಡಿತು. ಆದರೆ ದೇಶದ ಹೊಸ ಕ್ಷಯರೋಗ ಪರೀಕ್ಷಾ ಮಾರ್ಗದರ್ಶಿ ಸೂತ್ರಗಳು ಮಕ್ಕಳನ್ನೂ ಎಚ್‌ಐವಿ-ಪಾಸಿಟಿವ್ ಜನರನ್ನು ಮತ್ತು ಎಕ್ಸ್‌ಟ್ರಾಪಲ್ಮನರಿ ಕ್ಷಯರೋಗದಿಂದ ಬಳಲುತ್ತಿರಬಹುದೆಂದು ಸಂಶಯವುಳ್ಳ ರೋಗಿಗಳನ್ನು ಮಾತ್ರ ಸಿಬಿ-ಎನ್‌ಎಎಟಿ ಯಂತ್ರ ಬಳಸಿ ಪರೀಕ್ಷಿಸಬೇಕು ಎನ್ನುತ್ತವೆ. ಅಂದರೆ, ಇತರ ಎಲ್ಲ ರೀತಿಯ ಕ್ಷಯರೋಗ ಪ್ರಕರಣಗಳಲ್ಲಿ ಕ್ಷಯರೋಗಕ್ಕೆ ನೀಡಲಾದ ಔಷಧಿಗೆ ನಿರೋಧವಾದ (ಡ್ರಗ್-ರೆಸಿಸ್ಟಂಟ್) ಬ್ಯಾಕ್ಟೀರಿಯಾಗಳಿಂದ ಬಂದ ಕ್ಷಯರೋಗವೇ ಎಂದು ಪರೀಕ್ಷೆ ನಡೆಸಲಾಗುವುದಿಲ್ಲ.

ದೇಶದ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಇನ್ನೊಂದು ದೋಷ ಯಾವುದೆಂದರೆ, ರಿಫಾರಿಪಿಸಿನ್ ಎಂಬ ಔಷಧಿಗೆ ನಿರೋಧ ತೋರುವ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡು ಬಂದ ರೋಗಿಗಳಿಗೆ ಮಾತ್ರ ಅವರು ಇತರ ಔಷಧಿಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ಪರೀಕ್ಷೆ ಮಾಡಲಾಗುತ್ತದೆ; ಇತರ ರೋಗಿಗಳಿಗಲ್ಲ.

ಔಷಧಿ ಪೂರೈಕೆ ಅಸ್ತವ್ಯಸ್ತ

ಪ್ರತಿ ವರ್ಷ ಭಾರತದ ಕೆಲವು ಭಾಗಗಳಲ್ಲಿ ಔಷಧಿ ಪೂರೈಕೆ ಅಸ್ತವ್ಯಸ್ತವಾಗಿದೆ. ಹೀಗಾದಾಗ ರೋಗಗಳ ಚಿಕಿತ್ಸೆ ಆಗಾಗ ನಿಂತುಹೋಗಿ ರೋಗಿಗಳಲ್ಲಿ ಔಷಧಿಗೆ ನಿರೋಧ (ರೆಸಿಸ್ಟನ್ಸ್) ಉಂಟಾಗಬಹುದು. ಪ್ರತಿದಿನ ರೋಗಿಗೆ ಔಷಧಿ ನೀಡದೆ ಇದ್ದಲ್ಲಿ ರೋಗಿಯು ಆ ಔಷಧಿಗೆ ಪ್ರತಿಕ್ರಿಯಿಸುವ ಗುಣವನ್ನೇ ಕಳೆದು ಕೊಂಡು, ಆತನಲ್ಲಿ ಡ್ರಗ್ ರೆಸಿಸ್ಟೆನ್ಸ್ ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗ ಲಾಡಿಸಲು ಭಾರತದಾದ್ಯಂತ ಕ್ಷಯರೋಗಿಗಳಿಗೆ ಪ್ರತಿದಿನ ಔಷಧಿ ದೊರಕುವಂತೆ ನೋಡಿಕೊಳ್ಳುವುದು ಮತ್ತು, ಪ್ರತಿವಾರ ಮೂರು ಡೋಸ್ ಔಷಧಿಗಳನ್ನು ಮಾತ್ರ ಕೊಡುವ ಇನ್‌ಟರ್ಮಿಟೆಂಟ್ ಔಷಧಿ ಕ್ರಮವನ್ನು ನಿವಾರಿಸುವುದು ಸರಕಾರದ ಕಾರ್ಯಕ್ರಮದ ಉದ್ದೇಶವಾಗಿದೆ. ರೋಗಿಗೆ ಪ್ರತಿದಿನ ಔಷಧಿ ನೀಡುವ ಬದಲು ವಾರಕ್ಕೆ ಕೇವಲ ಮೂರು ಬಾರಿ ಮಾತ್ರ ನೀಡಿದಾಗ ರೋಗಿಯಲ್ಲಿ ಔಷಧಿ ನಿರೋಧ ಮೂರು ಪಟ್ಟು ಹೆಚ್ಚುತ್ತದೆ. ಈಗ, ಇನ್‌ಟರ್ಮಿಟೆಂಟ್ ಔಷಧಿ ಕ್ರಮವನ್ನು ಅನುಸರಿಸುತ್ತಿರುವ 29 ದೇಶಗಳಲ್ಲಿ ಭಾರತ ಮತ್ತು ಚೀನಾ ಮಾತ್ರ ಈ ಕ್ರಮವನ್ನು ಅನುಸರಿಸುತ್ತಿರುವ ದೇಶಗಳು. ಈ ವರ್ಷದ ಆರಂಭದಿಂದ ಭಾರತದಲ್ಲಿ ಎಚ್‌ಐವಿ-ಪಾಸಿಟಿವ್ ರೋಗಿಗಳಿಗೆ ಮಾತ್ರ ಪ್ರತಿದಿನ ಔಷಧಿಯ ಡೋಸ್ ಸಿಗುತ್ತದೆ. ಅಲ್ಲದೆ, ಹೊಸ ಎರಡು ಔಷಧಿಗಳು (ಬೆಡಕ್ಟಿಲಿನ್ ಮತ್ತು ಡಿಲಮನಿಡ್) ಭಾರತದಲ್ಲಿ ಇನ್ನೂ ವ್ಯಾಪಕವಾಗಿ ಬಳಕೆಗೆ ಬಂದಿಲ್ಲ.

ಆಪ್ತ ಸಮಾಲೋಚನೆಯ ಕೊರತೆ

ಎಚ್‌ಐವಿ ರೋಗಿಗಳಿಗೆ ನೆರವು ನೀಡುವ ಒಂದು ನಾನ್-ಪ್ರಾಫಿಟ್ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಿಯಾ ಗುಪ್ತ (ಹೆಸರು ಬದಲಿಸಲಾಗಿದೆ) ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಲವು ಔಷಧಿಗಳಿಗೆ ನಿರೋಧ ತೋರುವ ಕ್ಷಯರೋಗಕ್ಕೆ ತುತ್ತಾದರು. ‘‘ಅವರು ನನಗೆ ಔಷಧಿಯ ಯಾವುದೇ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಿಲ್ಲ. ನನ್ನ ಸಂಧಿಗಳು ಗಟ್ಟಿಯಾದವು. ನನಗೆ ಕೈ ಎತ್ತಲು ಆಗುತ್ತಿರಲಿಲ್ಲ. ಬಹಳ ಸಮಯದವರೆಗೆ ಅವರು ಏನನ್ನೂ ಹೇಳಲಿಲ್ಲ. ಕೊನೆಗೆ ಅದು ಪೈರಜಿನಮೈಡ್ ಔಷಧಿಯ ಅಡ್ಡ ಪರಿಣಾಮವಿರಬಹುದೆಂದು ಹೇಳಿದರು’’

ಭಾರತದಲ್ಲಿ ಕ್ಷಯರೋಗಿಗಳಿಗೆ ಸಮರ್ಪಕ ಆಪ್ತ ಸಮಾಲೋಚನೆ ವ್ಯವಸ್ಥೆಯಿಲ್ಲ. ಅಲ್ಲದೆ 2025ರ ವೇಳೆಗೆ ಭಾರತವು ಕ್ಷಯರೋಗ ನಿರ್ಮೂಲನೆ ಮಾಡುವ ಯೋಜನೆ ಹೊಂದಿದೆ ಎಂದು ಈ ವರ್ಷ ಫೆಬ್ರವರಿಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದರಾದರೂ, ಕಳೆದ ವರ್ಷಕ್ಕೆ ಹೋಲಿಸಿದರೆ 2017-2018ರಲ್ಲಿ, ಕ್ಷಯರೋಗವೂ ಸೇರಿದಂತೆ ಸೋಂಕುರೋಗಗಳ ನಿಯಂತ್ರಣಕ್ಕೆ ಬಜೆಟ್‌ನಲ್ಲಿ 13 ಕೋಟಿ ರೂ. ಕಡಿತ ಮಾಡಲಾಗಿದೆ.

ಕೃಪೆ: scroll.in

share
ಮೇನಕಾ ರಾವ್
ಮೇನಕಾ ರಾವ್
Next Story
X