ಕ್ಯಾಪಿಟೇಶನ್ ಶುಲ್ಕ ವಸೂಲಿ ಕಾನೂನು ಬಾಹಿರ’
ಈ ದಿನ
1992: ಜು.30ರಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ, ಸಂಸ್ಥೆಯ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ರೂ. ವಸೂಲಿ ಮಾಡುವುದನ್ನು ಕಾನೂನು ಬಾಹಿರ, ಅಕ್ರಮ ಎಂದು ತೀರ್ಪು ನೀಡಿತು. ಉತ್ತರಪ್ರದೇಶದ ಮೀರತ್‌ನ ಮೋಹಿನಿ ಜೈನ್ ವರ್ಸಸ್ ಕರ್ನಾಟಕ ರಾಜ್ಯದ ಪ್ರಕರಣದಲ್ಲಿ ಈ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಸಂವಿಧಾನ ಪೀಠಿಕೆಯಲ್ಲಿ ಹೇಳಿದಂತೆ ರಾಜ್ಯದ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸುವುದು ಆ ರಾಜ್ಯದ ಕರ್ತವ್ಯವಾಗಿರುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತು. ಈ ತೀರ್ಪು ಈಗಿರುವ ಶಿಕ್ಷಣ ಹಕ್ಕು ಕಾಯ್ದೆಗೆ ಪ್ರೇರಣೆಯಾಯಿತು.
1957: ಈ ದಿನ ಭಾರತೀಯ ರಫ್ತು ಅಪಾಯ ವಿಮಾ ನಿಗಮವು ಸ್ಥಾಪಿಸಲ್ಪಟ್ಟಿತು.
1935: ಈ ದಿನ ಪ್ರಥಮ ಪೆಂಗ್ವಿನ್ ಬುಕ್ ಪ್ರಕಟಗೊಳ್ಳುವ ಮೂಲಕ ‘ಪೇಪರ್‌ಬ್ಯಾಕ್ ಕ್ರಾಂತಿ’ ಆರಂಭವಾಯಿತು.
1866: ಅಮೆರಿಕದ ನ್ಯೂ ಒರ್ಲಿಯಾನ್ಸ್ ನಲ್ಲಿ ನಡೆಯುತ್ತಿದ್ದ ರಿಪಬ್ಲಿಕನ್ ಪಾರ್ಟಿ ಸಭೆಯ ಮೇಲೆ ಡೆಮಾಕ್ರೆಟಿಕ್ ಪಾರ್ಟಿಯು ಪೊಲೀಸ್ ದಾಳಿಗೆ ಆದೇಶಿಸಿ 40 ಜನರ ಸಾವಿಗೆ ಕಾರಣವಾಯಿತು. ಸುಮಾರು 150 ಜನರು ಗಾಯಗೊಂಡರು.
1870: ಸ್ಟೇಟನ್ ದ್ವೀಪ ಪ್ರದೇಶದಲ್ಲಿ ವೆಸ್ಟ್ ಫೀಲ್ಡ್ ಎಂಬ ಹಡಗು ಆಕಸ್ಮಿಕ ಬೆಂಕಿಗೆ ಆಹುತಿಯಾದ ಪರಿಣಾಮ 100 ಜನ ಸಾವನಪ್ಪಿದ್ದರು.
1909: ಈ ದಿನ ರೈಟ್ ಸಹೋದರರು ಅಮೆರಿಕ ಸೈನ್ಯಕ್ಕಾಗಿ ಪ್ರಥಮ ಮಿಲಿಟರಿ ವಿಮಾನವನ್ನು ಅಭಿವೃದ್ಧಿಪಡಿಸಿದರು.
1942: ಈ ದಿನ ಯಹೂದಿಗಳಿಗೆ ಕರಾಳ ದಿನವಾಗಿದೆ. ಹಿಟ್ಲರ್‌ನ ದ್ವೇಷದ ಭಾಗವಾಗಿ ಜರ್ಮನ್ ಸೈನ್ಯವು 25,000 ಯಹೂದಿಗಳನ್ನು ಬೆಲೊರಷ್ಯದ ಮಿನ್ಸ್ಕ್ ಎಂಬಲ್ಲಿ ಹತ್ಯೆಗೈಯಿತು.