Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಸಾವಿನ ಮನೆಯಾದ ಗೋರಖ್‌ಪುರ

ಸಾವಿನ ಮನೆಯಾದ ಗೋರಖ್‌ಪುರ

ಮೇನಕಾರಾವ್ಮೇನಕಾರಾವ್20 Aug 2017 11:51 PM IST
share
ಸಾವಿನ ಮನೆಯಾದ ಗೋರಖ್‌ಪುರ

ಭಾಗ-2

ಕಳೆದ ವಾರ ಕೆಲವು ಮಕ್ಕಳನ್ನು ಸುರಕ್ಷಿತ (ಸೇಫ್) ಎಂದು ಪರಿಗಣಿಸುವಷ್ಟು ಅವುಗಳು ಗುಣಮುಖವಾಗಿಲ್ಲದಿದ್ದರೂ, ಅವುಗಳನ್ನು ‘ಸ್ಟೆಪ್ ಡೌನ್ ವಾರ್ಡ್’ಗೆ ಕೊಂಡೊಯ್ಯುಲಾಯಿತು, ಇದಕ್ಕೆ ಆಮ್ಲಜನಕದ ಪೂರೈಕೆ ಸಾಕಷ್ಟು ಇರದಿದ್ದುದೂ ಕಾರಣವಿರಬಹುದು ಎಂದು ಮಕ್ಕಳ ಪೋಷಕರು ಹೇಳಿದ್ದಾರೆ. ಹೀಗೆ ಅವಧಿಗೆ ಮುಂಚಿತವಾಗಿಯೇ ಜನಿಸಿದ ರಂಜಿತ್ ಮಹತೋರ ಹೆಣ್ಣು ಮಗುವಿಗೆ ದುರ್ಬಲ ಶ್ವಾಸಕೋಶಗಳಿದ್ದವು. ಆಗಸ್ಟ್ 11ರಂದು ಈ ಮಗುವನ್ನು ಸ್ಟೆಪ್ ಡೌನ್ ವಾರ್ಡ್ ಗೆ ಒಯ್ಯಲಾಯಿತು. ಮಹತೋಗೆ ಆಂಬು ಬ್ಯಾಗ್ ನೀಡಿ ಅದನ್ನು ಪಂಪ್ ಮಾಡುವಂತೆ ಹೇಳಲಾಯಿತು. ‘‘ನಾನು ಎರಡು- ಮೂರು ಗಂಟೆ ಪಂಪ್ ಮಾಡಿದೆ. ಆದರೆ ಮಗುವಿನ ಸ್ಥಿತಿ ಹದಗೆಡುತ್ತ ಹೋಯಿತು. ಪುನಃ ಮಗುವನ್ನು ಐಸಿಯುಗೆ ಮರಳಿ ತರಲಾಯಿತು. ಈಗಲೂ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ’’ ಎಂದಿದ್ದಾರೆ ಮಹತೊ.

ಆಮ್ಲಜನಕ ಪೂರೈಕೆ ಅಸ್ತವ್ಯಸ್ತಗೊಂಡ ಬಳಿಕ ರೋಗಿಗಳ ಆರೈಕೆಯನ್ನು ಹೇಗೆ ನಿಭಾಯಿಸಿದಿರಿ? ಎಂಬ ಬಗ್ಗೆ ಕೇಳಲಾದ ಎಲ್ಲ ಪ್ರಶ್ನೆಗಳಿಗೆ ಮಕ್ಕಳ ವಿಭಾಗದ ವೈದ್ಯರು ಮತ್ತು ದಾದಿಯರು ನುಣುಚಿಕೊಂಡರು. ಕೆಲವು ರೋಗಿಗಳಿಗೆ ಆಮ್ಲಜನಕ ಪೂರೈಕೆಯ ಮಟ್ಟಗಳನ್ನು ಕಡಿಮೆ ಮಾಡಿದೆವು ಎಂದಷ್ಟೇ ಹೇಳಿದ ವೈದ್ಯ ರೊಬ್ಬರು ‘‘ಇದರಿಂದಾಗಿ ಸಾವುಗಳು ಸಂಭವಿಸಲು ಸಾಧ್ಯವಿಲ್ಲ.’’ ಎಂದು ಅವಸರದಲ್ಲಿ ಹೇಳಿ ಹೋದರು. ಪತ್ರಿಕಾಗೋಷ್ಠಿಯೊಂದರಲ್ಲಿ ಉತ್ತರಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥ ನಾಥ್‌ಸಿಂಗ್ ಆಗಸ್ಟ್ 10ರಂದು ಸಂಭವಿಸಿದ ಎಲ್ಲ ಸಾವುಗಳಿಗೆ ಕಾರಣಗಳನ್ನು ಪಟ್ಟಿಮಾಡಿ ಹೇಳಿದರು.

ಆ ತೊಂದರೆಗಳ ವೈದ್ಯಕೀಯ ಪರಿಸ್ಥಿಯನ್ನು ಹೇಳುವ ಪಟ್ಟಿ: ನ್ಯುಮೋನಿಯಾ, ಸೆಪ್ಸಿಸ್, ಕಿಡ್ನಿ ತೊಂದರೆ, ಜಠರದ ಸೋಂಕು ಇತ್ಯಾದಿ. ಮಕ್ಕಳು ತಮಗೆ ಬಂದ ಆನಾರೋಗ್ಯದಿಂದಾಗಿಯೇ ಸತ್ತದ್ದು ಎಂದಾಗಿದ್ದಲ್ಲಿ ಆಗಸ್ಟ್ 7ರಂದು ಸಾವುಗಳ ಸಂಖ್ಯೆಯಲ್ಲಿ ದಿಢೀರನೆ ಯಾಕೆ ಏರಿಕೆಯಾಯಿತು?

ಈ ವರ್ಷ, ನವಜಾತ ಶಿಶುಗಳ ಘಟಕವೂ ಸೇರಿದಂತೆ, 8 ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ 6,264 ಮಕ್ಕಳನ್ನು ಸೇರಿಸಲಾಗಿದ್ದು, ಅವುಗಳಲ್ಲಿ 1,527 ಮಕ್ಕಳು ಮೃತಪಟ್ಟಿವೆ. ಆಗಸ್ಟ್ 12ರ ಮಧ್ಯಾಹ್ನ ರಾಜ್ಯದ ವೈದ್ಯಕೀಯ ಶಿಕ್ಷಣ ನಿರ್ದೇಶಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಈ ಅಂಕಿ ಸಂಖ್ಯೆಗಳ ಪ್ರಕಾರ, ಈ ವರ್ಷ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ದಿನವೊಂದಕ್ಕೆ 7 ಮಕ್ಕಳು ಮೃತ ಹೊಂದಿವೆ. ಆದರೆ ಆಗಸ್ಟ್ 10ರಂದು ಮಕ್ಕಳ ಸಾವಿನ ಸಂಖ್ಯೆ 23ಕ್ಕೆ ಏರಿತು. ಇದು ಪ್ರತಿದಿನದ ಸರಾಸರಿ (7)ಕ್ಕಿಂತ ಮೂರುಪಟ್ಟಿಗೂ ಹೆಚ್ಚು. ಈ 23ರಲ್ಲಿ 14 ಸಾವುಗಳು ನವಜಾತ ಶಿಶುಗಳ ಐಸಿಯುನಲ್ಲಿ ಸಂಭವಿಸಿದ ಸಾವುಗಳು. ಈ ವಿಭಾಗದಲ್ಲಿ ವರ್ಷದ ಸಾವುಗಳ ಸರಾಸರಿ ಸಂಖ್ಯೆ ದಿನವೊಂದರ 4 ಎಂಬುದು ಗಮನಾರ್ಹ. ಆಗಸ್ಟ್ 10ರಂದು ಸಂಭವಿಸಿದ ಸಾವುಗಳ ಸಂಖ್ಯೆಯ ಹೆಚ್ಚಳಕ್ಕೆ ಇನ್ನಷ್ಟು ಸಮರ್ಪಕವಾದ ವಿವರಣೆ ಬೇಕಾಗಿದೆ. ಅಂದು ಸಂಭವಿಸಿದ ಸಾವುಗಳ ಸಮರ್ಥನೆಯಾಗಿ, ‘‘ಆಗಸ್ಟ್ 10ರಂದು ಘಟಿಸಿದ ಸಾವುಗಳ ಸಂಖ್ಯೆ ಭಾರೀ ಹೆಚ್ಚೇನೂ ಅಲ್ಲ’’ ಎಂದು ಉತ್ತರಪ್ರದೇಶ ಸರಕಾರ ಹೇಳಿಕೊಂಡಿದೆ. ‘‘ಕಳೆದ 4 ವರ್ಷಗಳಲ್ಲಿ ಆಗಸ್ಟ್ ತಿಂಗಳಲ್ಲಿ ದಿನವೊಂದರ ಸರಾಸರಿ 20 ಸಾವುಗಳು ಸಂಭವಿಸಿವೆ’’ ಎಂದು ರಾಜ್ಯದ ಆರೋಗ್ಯ ಸಚಿವರು ಸಮಜಾಯಿಸಿ ನೀಡಿದ್ದಾರೆ. ಮಳೆಗಾಲದ ತಿಂಗಳಲ್ಲಿ ಸಾಮಾನ್ಯವಾಗಿ ಶಿಶುಮರಣ ಮಟ್ಟಗಳಲ್ಲಿ ಏರಿಕೆಯಾಗುತ್ತದೆ. ಆದರೆ ಮಕ್ಕಳ ವಿಭಾಗದಲ್ಲಿ ಆಗಸ್ಟ್ ತಿಂಗಳ ಮೊದಲ ಆರು ದಿನಗಳಲ್ಲಿ ಸಾವುಗಳ ಸರಾಸರಿ ಸಂಖ್ಯೆ 10 ರಿಂದ 11 ಇರುತ್ತದೆ. ಇದು ಆಗಸ್ಟ್ 10ರಂದು ವರದಿಯಾದ ಸಾವುಗಳ ಸಂಖ್ಯೆಯ ಅರ್ಧಕ್ಕಿಂತಲೂ ಕಡಿಮೆ. ಇದಕ್ಕಿಂತ ಹೆಚ್ಚು ಮಹತ್ವದ ವಿಷಯವೆಂದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸಾವುಗಳ ಸಂಖ್ಯೆ ಮಕ್ಕಳ ಐಸಿಯುನಲ್ಲಿ ಹೆಚ್ಚಿತ್ತೇ ಹೊರತು ನವಜಾತ ಶಿಶುಗಳ ಐಸಿಯುನಲ್ಲಿ ಅಲ್ಲ. ಆದ್ದರಿಂದ ಆಗಸ್ಟ್ 10 ರಂದು ಸಂಭವಿಸಿದ 14 ನವಜಾತ ಶಿಶುಗಳ ಸಾವುಗಳಿಗೆ ಕಾರಣಗಳನ್ನು ತುಂಬಾ ಸೂಕ್ಷ್ಮವಾಗಿ ಶೋಧಿಸಬೇಕಾಗಿದೆ.

ಸ್ಥಳದ ಆಭಾವ, ಸೂಕ್ಷ್ಮತೆಯ ಅಭಾವ

ಆಮ್ಲಜನಕದ ಪೂರೈಕೆಯನ್ನು ಮರು ಸ್ಥಾಪಿಸಲಾಯಿ ತಾದರೂ, ಮಕ್ಕಳ ವಿಭಾಗವನ್ನು ಕಾಡುತ್ತಿರುವ ಇತರ ಸವಾಲುಗಳು, ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಐಸಿಯುವಿನಲ್ಲಿ 10 ಹಾಸಿಗೆಗಳಿವೆ. ಆದರೆ ಯಾವಾಗ ನೋಡಿದರೂ ಅಲ್ಲಿ 100ಕ್ಕಿಂತಲೂ ಹೆಚ್ಚು ಮಕ್ಕಳಿರುತ್ತವೆ ಎನ್ನುತ್ತಾರೆ ಆಸ್ಪತ್ರೆಯ ಓರ್ವ ವೈದ್ಯರು.

ಆಗಸ್ಟ್ 9ರಂದು ಇಶ್ರತ್ ಅಹ್ಮದ್ ತನ್ನ 4 ದಿನಗಳ ಗಂಡು ಮಗುವನ್ನು ಆಸ್ಪತ್ರೆಗೆ ತಂದಾಗ ಆ ಮಗುವಿಗೆ ಅಲ್ಲಿ ಸ್ಥಳಾವಕಾಶವಿಲ್ಲ ಎಂದು ಆತನಿಗೆ ಹೇಳಲಾಯಿತು. ಮಗುವಿಗೆ ಉಸಿರಾಡಲು ಕಷ್ಟವಾದಾಗ ಅಹ್ಮದ್ ಉತ್ತರಪ್ರದೇಶದ ಸಂತಕಬೀರ್ ನಗರ ಜಿಲ್ಲೆಯಿಂದ ಮಗುವನ್ನು ಅಲ್ಲಿಗೆ ತಂದಿದ್ದರು. ‘‘ಒಂದೇ ಹಾಸಿಗೆ ಯಲ್ಲಿ ಅದಾಗಲೇ ನಾಲ್ಕು ಮಕ್ಕಳಿವೆ. ಆದ್ದರಿಂದ ಅಲ್ಲಿ ಸೋಂಕು ತಗಲುವ ಅಪಾಯವಿದೆ ಎಂದು ಅವರು ನನ್ನೊಡನೆ ಹೇಳಿದರು. ಆದರೆ ನನ್ನ ಮಗುವನ್ನು ಸೇರಿಸಿಕೊಳ್ಳುವಂತೆ ನಾನು ಅವರನ್ನು ಆಗ್ರಹಪಡಿಸಿದೆ. ಹಾಗೆ ಮಾಡದೆ ನನಗೆ ಬೇರಿ ದಾರಿ ಇರಲಿಲ್ಲ’’ ಎಂದಿದ್ದಾರೆ ಅಹ್ಮದ್. ಅದಾಗಲೇ ಮೂರು ಮಕ್ಕಳಿರುವ ಹಾಸಿಗೆಯಲ್ಲಿ ತಮ್ಮ ಮಕ್ಕಳನ್ನು ಮಲಗಿಸಲಾಯಿತೆಂದು ಹೆಚ್ಚಿನ ಪೋಷಕರು ಹೇಳಿದರು.

ವೈದ್ಯಕೀಯ ಕಾಲೇಜಿನ ಓರ್ವ ಮಾಜಿ ಪ್ರಾಂಶುಪಾಲ ಡಾ. ಕೋಮಲ್ ಪ್ರಸಾದ್ ಹೇಳುವಂತೆ ಆಸ್ಪತ್ರೆಯ ಮಕ್ಕಳ ವಿಭಾಗವು ಯಾವಾಗಲೂ ಅಸ್ವಸ್ಥ ಮಕ್ಕಳಿಂದ ತುಂಬಿ ತುಳುಕುತ್ತಿರುತ್ತದೆ. ‘‘ಖಾಸಗಿ ರಂಗದಲ್ಲಿ ಇಲ್ಲಿ ನವಜಾತಶಿಶುಗಳ ತೀವ್ರ ನಿಗಾ ಘಟಕಗಳಿಲ್ಲ. ರೋಗಿಗಳಿಗೆ ಇಲ್ಲಿಗೆ ಬರದೆ ಬೇರೆ ಆಯ್ಕೆಗಳಿಲ್ಲ ಈ ಮಕ್ಕಳನ್ನು ಸೇರಿಸಿಕೊಳ್ಳದೆ ನಮಗೆ ಅನ್ಯ ಮಾರ್ಗವಿಲ್ಲ.’’

‘‘ಆಸ್ಪತ್ರೆಯು ಸರಕಾರದಿಂದ ಬರುವ ಹಣದಿಂದ ನಡೆಯುವು ದರಿಂದ, ಅದು ನಿಜವಾಗಿ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಉಚಿತವಾಗಿ ಔಷಧಿಗಳನ್ನು ನೀಡಬೇಕು. ಆದರೆ ತಾವು ಸಿರಿಂಜ್‌ಗಳನ್ನು ಹತ್ತಿ ಮತ್ತು ಔಷಧಿಗಳನ್ನು ಆಸ್ಪತ್ರೆಯ ಹೊರಗಿನಿಂದ ಕೊಂಡು ತರಲೇಬೇಕಾಯಿತು’’ ಎಂದು ರೋಗಿಗಳ ಬಂಧುಗಳು ದೂರಿದ್ದಾರೆ. ಜ್ವರ ಮತ್ತು ಸೆಳೆತದಿಂದ ಬಳಲುತ್ತಿದ್ದ ತನ್ನ 7 ವರ್ಷದ ಮಗನನ್ನು ಮಕ್ಕಳ ಐಸಿಯುವಿಗೆ ಸೇರಿಸಿದ್ದ ತಾಜ್ ಮುಹಮ್ಮದ್ ತನ್ನ ಮಗನ ಚಿಕಿತ್ಸೆಗಾಗಿ 11 ಸಾವಿರಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿರುವುದಾಗಿ ಹೇಳಿದ್ದಾರೆ.

ನ್ಯುಮೋನಿಯಾದಿಂದ ಬಳಲುತ್ತಿರುವ ತನ್ನ 4 ವರ್ಷದ ಮಗಳನ್ನು ಐಸಿಯುಗೆ ಸೇರಿಸಿರುವ ಅನಿಲ್‌ಕುಮಾರ್, ‘‘ಹತ್ತಿಯಿಂದ ಹಿಡಿದು ಸಿರಿಂಜ್‌ಗಳವರೆಗೆ ಎಲ್ಲದಕ್ಕೂ ವೈದ್ಯರುಗಳು ಒಂದು ಚಿಕ್ಕ ಚೀಟಿ ಬರೆದುಕೊಡುತ್ತಾರೆ.’’ ಎಂದು ಹೇಳಿದ್ದಾರೆ. ತಮ್ಮ ಮಕ್ಕಳಿಗೆ ಯಾವ ಕಾಯಿಲೆ ಬಂದಿದೆ ಮತ್ತು ಅವುಗಳು ನಿಜವಾಗಿಯೂ ಕಾಯಿಲೆಯಿಂದ ಗುಣಮುಖವಾಗುತ್ತಿವೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಗದಿರುವುದು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ‘‘ವೈದ್ಯರು ಮತ್ತು ನರ್ಸ್‌ಗಳು ನಮ್ಮ ಪ್ರಶ್ನೆಗಳಿಗೆ ಉತ್ತರವನ್ನೇ ಕೊಡುತ್ತಿಲ್ಲ’’ ಎನ್ನುತ್ತಾರೆ ಪೋಷಕರು.

ಆಗಸ್ಟ್ 8ರಂದು ಗೋವರ್ಧನ್ ಕುಶ್ವಾಹ 6 ದಿನಗಳ ತನ್ನ ಗಂಡು ಮಗುವನ್ನು ಆಸ್ಪತ್ರೆಗೆ ತಂದರು. ಐಸಿಯುವಿನಲ್ಲಿ ಸೇರಿಸಿಕೊಂಡ ಕ್ಷಣದಿಂದ ಅವರು ತನ್ನ ಮಗುವನ್ನು ಕಂಡಿಲ್ಲ. ಮಗುವಿನ ಪರಿಸ್ಥಿತಿ ಹೇಗಿದೆ ಎಂದು ವೈದ್ಯರು ಅವರಿಗೆ ಏನನ್ನೂ ಹೇಳಿಲ್ಲ. ‘‘ನೋಡಬಹುದೇ ಎಂದು ಕೇಳಿದಾಗ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಕಾದಷ್ಟು ಹೊತ್ತು ಅದನ್ನು ನೋಡುತ್ತಾ ಇರಿ ಎಂದು ಆಸ್ಪತ್ರೆಯ ನರ್ಸ್ ನನಗೆ ಹೇಳಿದಳು.’’ ಎಂದಿದ್ದಾರೆ ಕುಶ್ವಾಹ. ಆಸ್ಪತ್ರೆಯ ಸಿಬ್ಬಂದಿಯ ಒರಟು ವರ್ತನೆಯ ಹೊರತಾಗಿಯೂ ಕನಿಷ್ಠ ಪಕ್ಷ ತನ್ನ ಮಗು ಇನ್ನೂ ಜೀವಂತವಾಗಿದೆಯಲ್ಲ ಎಂದು ಆತ ಕೃತಜ್ಞನಾಗಿದ್ದಾನೆ.

ಕೃಪೆ: scroll.in

share
ಮೇನಕಾರಾವ್
ಮೇನಕಾರಾವ್
Next Story
X