Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಮತ್ತು...

ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಮತ್ತು ಕೆಲವು ಪ್ರಶ್ನೆಗಳು

ಮಂಜುಬಷೀರ್ಮಂಜುಬಷೀರ್27 Aug 2017 11:57 PM IST
share
ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಮತ್ತು ಕೆಲವು ಪ್ರಶ್ನೆಗಳು

ಟಕದಲ್ಲಿ ಸಿದ್ದರಾಮಯ್ಯನವರ ಸರಕಾರ ಆಧುನಿಕ ಕರ್ನಾಟಕದ ಜಾತಿ ಮತ್ತು ಧಾರ್ಮಿಕ ಚರಿತ್ರೆಯ ಸಂಕೀರ್ಣ ಗೊಂದಲಗಳ ಗೂಡಾದ ವೀರಶೈವ- ಲಿಂಗಾಯತ ಜಾತಿರಾಜಕಾರಣಕ್ಕೆ ಕಲ್ಲು ಹೊಡೆದಿದೆ. ಈ ಮೂಲಕ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರದ ಮೂಲಕ ಇದುವರೆಗೂ ಇದ್ದ ಕರ್ನಾಟಕದ ಬಹುಸಂಖ್ಯೆಯ ಜಾತಿ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಚುನಾವಣಾ ರಾಜಕಾರಣದ ಸಾಂಪ್ರದಾಯಿಕ ತರ್ಕಗಳನ್ನು ತಲೆಕೆಳಗೆ ಮಾಡುತ್ತಿದೆ. ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಬಿಂಬಿಸಿಕೊಂಡಿದ್ದ ಯಡಿಯೂರಪ್ಪ ಮತ್ತು ಇನ್ನಿತರ ಲಿಂಗಾಯತ ಸಮುದಾಯದ ರಾಜಕಾರಣಿಗಳಿಗೆ, ಅದರಲ್ಲೂ ಹಿಂದೂ ಧಾರ್ಮಿಕ ರಾಜಕಾರಣದ ಮೂಲಕವೇ ರಾಜಕೀಯ ನಡೆಸುವ ಬಿಜೆಪಿಗೆ ಲಿಂಗಾಯತರ ಸ್ವತಂತ್ರ ಧರ್ಮದ ಬೇಡಿಕೆ ಕರ್ನಾಟಕದ ಮಟ್ಟದಲ್ಲಿ ದೊಡ್ಡ ಮರ್ಮಾಘಾತ ನೀಡಿದೆ.

ಜಾತಿ ವೈರುಧ್ಯಗಳಿಂದಲೇ ತುಂಬಿರುವ ಹಿಂದೂ ಧರ್ಮದ ಪರಿಕಲ್ಪನೆಯನ್ನು 20ನೆ ಶತಮಾನದಲ್ಲಿ ಅಂಬೇಡ್ಕರ್ ಆದಿಯಾಗಿ ಎಲ್ಲ ಜಾತಿ ವಿರೋಧಿ ಚಿಂತಕರು ಪ್ರಶ್ನಿಸುತ್ತಲೇ ಬಂದಿದ್ದಾರೆ. ಆದರೂ ಹಿಂದೂ ಧರ್ಮವೊಂದು ಭಾವನಾತ್ಮಕ ಮತ್ತು ಚಾರಿತ್ರಿಕ ಶತ್ರು ರಾಜಕಾರಣದ ಕಾರಣಕ್ಕೆ ಅಸಮಾನ ಲಕ್ಷಣಗಳಿದ್ದಾಗಿಯೂ ತರ್ಕಾತೀತ ಧರ್ಮವಾಗಿ ಚಲಾವಣೆಯಾಗುತ್ತ, ರಾಜಕೀಯ ಲಾಭಾಪೇಕ್ಷೆಯ ಪರಿಧಿಯೊಳಗೆ ಬಂದು ಕೂತುಬಿಟ್ಟಿದೆ. ಇಂತಹ ಹಿಂದೂ ಧರ್ಮದ ಚಾರಿತ್ರಿಕ ನ್ಯಾಯನ್ಯಾಯಗಳ ಕಲಸುಮೆಲೋಗರವನ್ನೇ ಬಿಜೆಪಿ ರಾಜಕಾರಣದ ಒಡೆದು ಆಳುವ ನೀತಿಯ ಚದುರಂಗದಾಟವನ್ನಾಗಿ ಕಟ್ಟುತ್ತಾ ಬಂದಿದೆ. ಹಿಂದೂ ಧಾರ್ಮಿಕ, ರಾಜಕೀಯ ಲೆಕ್ಕಾಚಾರಗಳ ಈ ಚದುರಂಗದಾಟವನ್ನು ಭಾರತದ ಎಲ್ಲಾ ಕಡೆಯೂ ಬಳಸುತ್ತ ಗೆಲುವಿನ ಮುಖ್ಯ ಕಾರಣವನ್ನಾಗಿಸಿಕೊಂಡಿದೆ.
ಆದರೆ ಈಗ ಕರ್ನಾಟಕದ ಮಟ್ಟದಲ್ಲಿ ಕಾಂಗ್ರೆಸ್ ಅದೇ ಲೆಕ್ಕಾಚಾರದ ಬಾಣವನ್ನು ತಿರುವು ಮಾಡಿ ಬಳಸಿದೆ. ಇದು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಲಾಭವಾಗುತ್ತಲೇ, ಅನೇಕ ಧಾರ್ಮಿಕ ಸಾಂಸ್ಕೃತಿಕ, ಚಾರಿತ್ರಿಕ ಏರುಪೇರುಗಳ ಚಲನೆಗೆ ಕಾರಣವಾಗುವುದಂತು ಖಂಡಿತ. ಕರ್ನಾಟಕದಲ್ಲಿ ಬಹುಸಂಖ್ಯಾತರಾದ ಲಿಂಗಾಯತರು ತಾವು ಹಿಂದೂಗಳಲ್ಲ, ಸ್ವತಂತ್ರ ಧಾರ್ಮಿಕ ನೆಲೆಯವರು ಎನ್ನುವ ರಾಜಕೀಯ ಎಚ್ಚರ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಹಿಂದೂ ಧಾರ್ಮಿಕವಾದದ ಮೂಲಕ ಚುನಾವಣೆ ಗೆಲ್ಲುವ ತರ್ಕಕ್ಕೆ ತಾತ್ಕಾಲಿಕ ತೊಂದರೆಯಾಗುತ್ತದೆ. ಆದರೂ ಲಿಂಗಾಯತರ ಈ ರಾಜಕೀಯ ಎಚ್ಚರ ಬಸವಣ್ಣನ ಸಾಮಾಜಿಕ ಕಳಕಳಿಯ ಆಲೋಚನೆಗಳನ್ನು ಮರು ವ್ಯಾಖ್ಯಾನಿಸಿಕೊಳ್ಳುವ ಎಚ್ಚರವಾಗದೆ ಕೇವಲ ರಾಜಕೀಯ ಲಾಭಗಳಾಗಿ ಪರ್ಯಾವ್ಯಸನವಾಗುವ ಸಾಧ್ಯತೆಗಳೇ ಹೆಚ್ಚಿವೆ.ಏಕೆಂದರೆ ಇದುವರೆಗೂ ಬಸವಣ್ಣನ ಸಾಮಾಜಿಕ ಆಶಯಗಳನ್ನು ವ್ಯಾಪಕವಾಗಿ ಪಾಲಿಸಲಾಗದ, ವೀರಶೈವ ಎಂದು ಕರೆಸಿಕೊಳ್ಳುವ ಪುರೋಹಿತಶಾಹಿ ಸ್ಥಾವರ ಮೌಲ್ಯಗಳಲ್ಲೇ ಬಸವಣ್ಣನ ಆಶಯಗಳನ್ನು ಬಂಧಿಸಿಕೊಂಡು ಬಂದಿರುವ ಲಿಂಗಾಯತ ಸಮುದಾಯದ ಈ ಹಠಾತ್ ರಾಜಕೀಯ ಎಚ್ಚರ ದೂರದೃಷ್ಟಿಯ ಯೋಜನೆಗಳ ಬಗೆಗೆ ಯೋಚಿಸದ ಸೀಮಿತ ಉದ್ದೇಶದ ಹೋರಾಟಗಳಂತೆ ಬಿಡುಗಡೆಯ ದಾರಿಯಾಗದೆ ಈ ಸಮುದಾಯಕ್ಕೆ ಬಂಧನವಾಗುವ ಸಾಧ್ಯತೆಗಳೇ ಹೆಚ್ಚು.

ಜಾತಿ ಅಸ್ಪಶ್ಯತೆಯ ಆಚರಣೆಗಳಲ್ಲಿ, ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಕರ್ನಾಟಕ ಈಗಲೂ ಮೂರನೆ ಸ್ಥಾನದಲ್ಲಿದೆ. ಇದಕ್ಕೆ ಕಾರಣಗಳಾದರು ಏನು? ಬಹುಸಂಖ್ಯಾತ ಮೇಲ್ಜಾತಿಗಳವರ ದೌರ್ಜನ್ಯ. ಸ್ವತಂತ್ರ ಧರ್ಮಕ್ಕಾಗಿ ಬೇಡಿಕೆ ಇಟ್ಟಿರುವ ಲಿಂಗಾಯತ ಸಮುದಾಯ ಸ್ವತಂತ್ರ ಧರ್ಮದ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದದ್ದಕ್ಕಿಂತಲು ಜಾತಿಯಾಗಿ, ಹಲವು ಉಪಜಾತಿಗಳ ಮೇಲುಕೀಳಿನ ಸ್ತರವಿನ್ಯಾಸದ ಹಿಂದೂ ಧರ್ಮದ ಜಾತಿವ್ಯವಸ್ಥೆಯ ಒಂದು ಭಾಗದಂತೆ ಬೆಳೆದಿದೆ. ಬಸವಣ್ಣ ಬ್ರಾಹ್ಮಣ ಎಂಬ ಪಾರ್ಶ್ವಿಕ ಸತ್ಯವನ್ನು ಜೀರ್ಣಿಸಿಕೊಂಡಿದ್ದ ಈ ಸಮುದಾಯ, ಬಸವಣ್ಣ ಮಾದಿಗನಿರಬಹುದು ಎಂಬ ವಾದಕ್ಕೆ ತೋರಿಸಿರುವ ಪ್ರತಿಕ್ರಿಯೆಗಳು ಕೂಡ ಇದಕ್ಕೆ ಸಾಕ್ಷಿ. ಅಲ್ಲಲ್ಲಿ ಆಗಾಗ ಲಿಂಗಾಯತ ಸಮುದಾಯದ ಧಾರ್ಮಿಕ ಅನನ್ಯತೆಯನ್ನ ಮರುಕಟ್ಟುವ ಪ್ರಯತ್ನಗಳು ನಡೆದಿತ್ತಾದರೂ, ಪೂರ್ಣಪ್ರಮಾಣದಲ್ಲೇನು ಆಗಿಲ್ಲ. ಧಾರ್ಮಿಕ ಅನನ್ಯತೆಗಳಿದ್ದಾಗಿಯೂ ಭಾರತದಲ್ಲಿ ಜೈನ, ಸಿಕ್, ಬೌದ್ಧ, ಪಾರ್ಸಿ ಇವೆಲ್ಲ ಹಿಂದೂ ಧರ್ಮದ ಉಪಧರ್ಮಗಳಂತೆ ವರ್ತಿಸುತ್ತಿವೆ. ಧಾರ್ಮಿಕ ಅಲ್ಪಸಂಖ್ಯಾತರಾಗಿ ಸಾಂವಿಧಾನಿಕ ಲಾಭಗಳನ್ನು ಪಡೆಯುತ್ತಲೇ ಕೆಲವು ಧರ್ಮಗಳು ಹಿಂದೂ ಮೂಲಭೂತವಾದದ ಕುಣಿಕೆಯ ಮುಪ್ಪುರಿಗಳಾಗಿವೆ. ಲಿಂಗಾಯತ ಸಮುದಾಯದ ನಾಯಕರ ಇಲ್ಲಿಯವರೆಗಿನ ಕ್ರಿಯೆಗಳನ್ನು ಗಮನಿಸಿದರೆ, ಲಿಂಗಾಯತರು ಮುಂದೆ ಈ ಕುಣಿಕೆಯ ಭಾಗವಾಗದೆ ಉಳಿಯುತ್ತಾರೆ ಎಂದು ಊಹಿಸುವ ಯಾವ ಸಾಧ್ಯತೆಗಳೂ ಸದ್ಯಕ್ಕಂತು ಇಲ್ಲ. ಲಿಂಗಾಯತವು ಸ್ವತಂತ್ರ ಧರ್ಮವಾಗುವುದು ಬಸವಣ್ಣನ ಮತ್ತು 12ನೆ ಶತಮಾನದ ಶರಣ ಚಳವಳಿಯ ಪುನರ್ಮನನದ ಎಚ್ಚರದ ಭಾಗವಾಗಿಯೇ ಹೊರತು, ಕೇವಲ ರಾಜಕೀಯ ಲಾಭಪೇಕ್ಷೆಯಾಗಿ ಉಳಿದರೆ, ಬೇರೆ ಅಲ್ಪಸಂಖ್ಯಾತ ಧರ್ಮಗಳ ಪರಿಸ್ಥಿತಿಗಳಿಗಿಂತ ಭಿನ್ನವೇನು ಆಗುವುದಿಲ್ಲ. ಧಾರ್ಮಿಕ ಅಥವಾ ಸಾಮಾಜಿಕ ಎಚ್ಚರವಲ್ಲದ ಕೇವಲ ರಾಜಕೀಯ ಫಲಾಪೇಕ್ಷೆಯ, ಹಾಗೂ ಸಂವಿಧಾನದಡಿ ಸಿಗುವ ಧಾರ್ಮಿಕ ಅಥವಾ ಜಾತಿ ಮೀಸಲಾತಿಯ ಸೌಲಭ್ಯದ ಅನುಕೂಲದ ಕಾರಣಕ್ಕಾಗಿ ಎಚ್ಚರಗೊಳ್ಳುವ ಜಾತಿ ಮತ್ತು ಧರ್ಮಗಳು ಭಾರತೀಯ ರೋಗಗ್ರಸ್ತ ಸಮಾಜದ ಮುಂದುವರಿದ ಭಾಗವಾಗುತ್ತವೆ ಹೊರತು ಈ ದೇಶದ ಸಾಮಾಜಿಕ ಕಾಯಿಲೆಗಳಿಗೆ ಮದ್ದಾಗಲಾರದು. ಬಸವಣ್ಣನ ಸಾಮಾಜಿಕ ಧಾರ್ಮಿಕ ಬಂಡುಕೋರತನದ ಜಂಗಮಸ್ವರೂಪಿ ಮೌಲ್ಯಗಳ ಲಿಂಗಾಯತ ಧರ್ಮ ಬೇರೆ, ಪುರೋಹಿತಶಾಹಿ ಮೌಲ್ಯಗಳ ವೀರಶೈವ ಬೇರೆ ಎಂದು ವಾದಿಸುತ್ತಲೇ ಬಂದ ಎಂ.ಎಂ ಕಲಬುರ್ಗಿ ಅಂತಹವರನ್ನು ಇದೇ ಧಾರ್ಮಿಕ ಮೂಲಭೂತವಾದ ದೊಡ್ಡ ಮಟ್ಟದಲ್ಲಿ ವಿರೋಧಿಸಿದೆ ಮತ್ತು ಈ ಧಾರ್ಮಿಕ ಮೂಲಭೂತವಾದಿಗಳ ನಿರಂತರ ಹಗೆತನ ಅವರ ಕೊಲೆಯ ಕೊನೆ ಕ್ಷಣದವರೆಗೂ ಬೆನ್ನತ್ತಿದೆ. ಅವರ ಸಾವಿನ ಕಾರಣಗಳ ಪ್ರಬಲ ಶಂಕೆಯಲ್ಲಿ ಈ ಮತೀಯವಾದಿಗಳ ಕೈವಾಡವೇ ಕಾರಣವಾಗಿದೆ ಎಂಬುದು ಎಲ್ಲರು ಒಪ್ಪಿಕೊಳ್ಳುವ ವಿಚಾರ.

ನಿರಂಕುಶ ರಾಜಪ್ರಭುತ್ವಗಳ ಕಾಲದಲ್ಲಿ ಸಾಮಾಜಿಕ ಅಸಮಾನತೆಯ ಪ್ರಶ್ನೆಗಳ ಕಾರಣಕ್ಕೆ ಪ್ರಶ್ನಾರ್ಥಕವಾಗಿ ಸಾವಿಗೀಡಾದ ಬಸವಣ್ಣನ ಸಾವನ್ನು ಚರಿತ್ರೆ ಇವತ್ತಿಗೆ ಜೀರ್ಣಿಸಿಕೊಳ್ಳಬಹುದಾದರೂ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ವ್ಯಕ್ತಿಯೊಬ್ಬ ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದವನ್ನು ಪ್ರಶ್ನಿಸಿದ ಕಾರಣಕ್ಕೆ ಕೊಲೆಯಾಗುವುದು ಪ್ರಜಾಪ್ರಭುತ್ವದ ಮೂಲಭೂತ ಆಶಯಗಳು ಸೋಲುತ್ತಿರುವ ಕೊನೆಯ ಹಂತದಂತೆ ಭಾಸವಾಗುತ್ತಿದೆ. ಪ್ರಜಾಪ್ರಭುತ್ವದ ಅರ್ಥಪೂರ್ಣತೆಯ ಅಂತಿಮ ಪರೀಕ್ಷೆ ಎನಿಸಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಇಲ್ಲಿ ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಂದ ಧಕ್ಕೆ ಬರುವುದಾದರೆ, ಪ್ರಜಾಪ್ರಭುತ್ವದ ಈ ಸೋಲುಗಳನ್ನು ಮುಂದಿನ ಚರಿತ್ರೆ ಮನ್ನಿಸುವುದೇ ಇಲ್ಲ. ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿದ ಬಸವಣ್ಣನಿಗಾದ ಕೊನೆಯ ಪರಿಣಾಮಗಳ ಮುಂದುವರಿದ ಭಾಗದಂತೆ ಕಾಣುವ ಕಲಬುರ್ಗಿಯಂತವರ ವೈಚಾರಿಕವಾದಗಳ ಕಾರಣಕ್ಕಾಗಿ ಆದ ಕೊಲೆಗಳು ಚರಿತ್ರೆಯಿಂದ ಪಾಠ ಕಲಿಯದ ವರ್ತಮಾನದ ದುರಂತ. ಬಸವಣ್ಣನ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ದಾರಿಯಿಂದ ಎಚ್ಚರಗೊಳ್ಳಬೇಕಾದ ಆತನ ಹಿಂಬಾಲಕ ಸಮಾಜ, ಕನಿಷ್ಠಪಕ್ಷ ಕಲಬುರ್ಗಿಯವರ ಕೊಲೆಗೆ ಕಾರಣವಾದ ಸಂಗತಿಗಳ ಬಗೆಗಾದರು ಒಗ್ಗೂಡಿದ್ದಿದ್ದರೆ, ಅದರ ಸಾರ್ಥಕತೆ ಲಿಂಗಾಯತ ಧರ್ಮಕ್ಕೆ ಅರ್ಥಪೂರ್ಣವೆನಿಸುತ್ತಿತ್ತು.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲೂ ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ

ಇದೇ ಅಂತರಂಗ ಶುದ್ಧ್ದಿ,

ಇದೇ ಬಹಿರಂಗ ಶುದ್ಧಿ, ಎನ್ನುವ

ಬಸವಣ್ಣ ಹೇಳುವ ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ಅಂತಃಕರಣದಿಂದ ಪಾಲಿಸದೇ, ಪುರೋಹಿತಶಾಹಿಯ ಕಂದಾಚಾರಗಳೊಳಗೆ ಮುಳುಗಿ ರಾಜಕಾರಣದ ಲಾಭಗಳಿಗಾಗಿ ಸ್ವತಂತ್ರ ಧರ್ಮದ ಬೇಡಿಕೆ ಇಡುವುದು ಬಸವಣ್ಣನ ಮೌಲ್ಯಗಳ ಆಶಯದಿಂದ ರೂಪುಗೊಂಡ ಲಿಂಗಾಯತ ಧರ್ಮಕ್ಕೆ ಅಪಮಾನ ಮಾಡಿದಂತಾಗುತ್ತದೆ. ಸದ್ಯದ ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳ ಆಟದಲ್ಲಿ, ಲಿಂಗಾಯತದ ಸ್ವತಂತ್ರ ಧರ್ಮದ ಬೇಡಿಕೆಯ ಪ್ರಶ್ನೆಗಳು ಕೆಲವು ಪಕ್ಷಗಳಿಗೆ ಲಾಭ ಮತ್ತು ನಷ್ಟವನ್ನುಂಟು ಮಾಡಲಿದೆ. ಕೋಮುವಾದಿ ಮತ್ತು ಜಾತಿ ಲೆಕ್ಕಾಚಾರಗಳ ಆಟವಾಡಿ ಚುನಾವಣೆಯಲ್ಲಿ ಗೆಲ್ಲುವ ಪಕ್ಷಗಳು ಇದರಿಂದ ವಿಚಲಿತಗೊಂಡಿವೆ. ಈ ವಿಚಲಿತತೆಯನ್ನೇ ಬುದ್ಧಿಜೀವಿ, ಮತ್ತು ಲಿಂಗಾಯತರಲ್ಲೇ ಇರುವ ಚಿಂತಕ ವಲಯ ಸಂಭ್ರಮ ಪಟ್ಟುಕೊಳ್ಳದೇ ಲಿಂಗಾಯತರ ಸ್ವತಂತ್ರ ಧರ್ಮದ ಹೋರಾಟದ ಹಿನ್ನೆಲೆಯಲ್ಲಿರುವ ರಾಜಕೀಯ ಕಾರಣಗಳಾಚೆಗೆ, ಸಾಮಾಜಿಕ ಸಮಾನತೆಯ ಬಸವಣ್ಣನ ಕ್ರಾಂತಿಕಾರಿ ಆಶಯಗಳನ್ನು ಈ ಹೋರಾಟ ಮೈಗೂಡಿಸಿಕೊಳ್ಳುವ ತುರ್ತು ಅಗತ್ಯವನ್ನು ಮನಗಂಡು ಆ ದಾರಿಯಲ್ಲಿ ಮುಂದುವರಿಯಬೇಕಿದೆ. ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಿದ 12ನೆ ಶತಮಾನದ ಶಿವಶರಣರ, ಕಲಬುರ್ಗಿಯಂತಹವರ ತ್ಯಾಗಗಳನ್ನು ಲಿಂಗಾಯತ ಸಮುದಾಯ ಈ ಹೋರಾಟಗಳ ಮೂಲಕವಾದರು ಅರ್ಥಮಾಡಿಕೊಳ್ಳುವಂತಾಗಬೇಕು. ಇಲ್ಲವಾದಲ್ಲಿ ಧಾರ್ಮಿಕ ಮೂಲಭೂತವಾದದ ನೇಣಿನ ಕುಣಿಕೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸದ್ಯದ ಪ್ರಜಾಪ್ರಭುತ್ವದಲ್ಲಿ ಇನ್ನು ಅಸಂಖ್ಯಾತ ‘ಕಲಬುರ್ಗಿಗಳು’ ಕೊನೆಯಾಗುವ ದುರಂತಗಳು ಮುಂದಿವೆ.

share
ಮಂಜುಬಷೀರ್
ಮಂಜುಬಷೀರ್
Next Story
X