Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಸೇವೆಯಲ್ಲೇ ಸಾರ್ಥಕ್ಯ ಕಾಣುತ್ತಿರುವ...

ಸೇವೆಯಲ್ಲೇ ಸಾರ್ಥಕ್ಯ ಕಾಣುತ್ತಿರುವ ಭಾರತದ ಅತೀ ದೊಡ್ಡ ಉಚಿತ ನೇತ್ರ ಚಿಕಿತ್ಸಾಲಯ ಶಂಕರ್ ಐ ಫೌಂಡೇಶನ್

1977ರಲ್ಲಿ ಒಂದು ಸಣ್ಣ ಚಿಕಿತ್ಸಾಲಯವಾಗಿ ಆರಂಭಗೊಂಡ ಶಂಕರ್ ಐ ಫೌಂಡೇಶನ್ 40 ವರ್ಷಗಳಲ್ಲಿ ಅದು 1.5 ಮಿಲಿಯಕ್ಕಿಂತಲೂ ಹೆಚ್ಚು ಉಚಿತ ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದೆ!.

ಶಿವಕಾಮಿ ಕುಮಾರಮಂಗಲಂಶಿವಕಾಮಿ ಕುಮಾರಮಂಗಲಂ30 Aug 2017 6:44 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಸೇವೆಯಲ್ಲೇ ಸಾರ್ಥಕ್ಯ ಕಾಣುತ್ತಿರುವ ಭಾರತದ ಅತೀ ದೊಡ್ಡ ಉಚಿತ ನೇತ್ರ ಚಿಕಿತ್ಸಾಲಯ ಶಂಕರ್ ಐ ಫೌಂಡೇಶನ್

ಬಡ ಕುಟುಂಬಗಳಿಂದ ಬರುವ ಶೇ. 80 ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ನೇತ್ರ ಚಿಕಿತ್ಸೆ ನೀಡಲು ಮತ್ತು ಹಣತೆರುವ ಸಾಮರ್ಥ್ಯವಿರುವ ಉಳಿದ ಶೇ. 20 ರೋಗಿಗಳಿಂದ ಮಾತ್ರ ವೈದ್ಯಕೀಯ ಶುಲ್ಕಗಳನ್ನು ಪಡೆಯಲು ಫೌಂಡೇಶನ್ ನಿರ್ಧರಿಸಿ ತನ್ನ ಸಾಧನೆಯ ಹಾದಿಯಲ್ಲಿ ಮುಂದುವರಿಯಿತು. ಇದರ ಪರಿಣಾಮವಾಗಿ, ಶಂಕರ್ ಐ ಫೌಂಡೇಶನ್ ಭಾರತದಲ್ಲಿ ಮತ್ತು ವಿಶ್ವದಲ್ಲೇ ನೇತ್ರಚಿಕಿತ್ಸೆ ಒದಗಿಸುವ ಅತ್ಯಂತ ಬೃಹತ್ತಾದ ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕುಮಾರಿ, ಉತ್ತರ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಒಂದು ದೊಡ್ಡ ಪಟ್ಟಣವಾಗಿರುವ ಅಮಿಯಲ್ಲಿ ವಾಸಿಸುತ್ತಾಳೆ. ಅವಳ ಗಂಡ ಅವಳನ್ನು ಬಿಟ್ಟುಹೋದ ಬಳಿಕ ಅವಳು ಕುಟುಂಬದ ಏಕೈಕ ಆರ್ಥಿಕ ಆಸರೆಯಾಗಿದ್ದಾಳೆ. ಗಂಡ ತೊರೆದ ಬಳಿಕ ದಿನಕೂಲಿ ಮಾಡುವ ಅವಳ ಕಣ್ಣಿನಲ್ಲಿ ಪೊರೆ(ಕ್ಯಾಟರ್ಯಾಕ್ಟ್) ಕಾಣಿಸಿಕೊಂಡಿತು. ಅವಳು ಕೆಲಸಕ್ಕೆ ಹೋಗದಂತೆ ಅಥವಾ ಕುಟುಂಬವನ್ನು ನೋಡಿಕೊಳ್ಳದಂತೆ ಅದು ತಡೆಯಿತು. ಕ್ಯಾಟರ್ಯಾಕ್ಟ್ ಸಾಮಾನ್ಯವಾಗಿ 60 ವರ್ಷ ದಾಟಿದವರಲ್ಲಿ ಕಾಣಿಸಿಕೊಳ್ಳುವ ಕಣ್ಣಿನ ಸಮಸ್ಯೆ. ಆದರೆ 50ರ ಹರೆಯದ ಕುಮಾರಿಯಂತಹ ಕೆಲವರಲ್ಲಿ ಅದು ಮೊದಲೇ ಕಾಣಿಸಿಕೊಳ್ಳಬಹುದು. ಕೊಯಮುತ್ತೂರಿನ ಶಂಕರ್ ಐ ಫೌಂಡೇಶನ್ ಇಲ್ಲವಾಗಿದ್ದಲ್ಲಿ ಕುಮಾರಿ ಭಾರತದ 12 ಮಿಲಿಯ ಕುರುಡರಲ್ಲಿ ಒಬ್ಬಳಾಗುತ್ತಿದ್ದಳು.

1977ರಲ್ಲಿ ಕೊಯಮುತ್ತೂರಿನಲ್ಲಿ ಡಾ. ಆರ್.ವಿ. ರಮಣಿ ಮತ್ತು ಅವರ ಪತ್ನಿ ಡಾ. ರಾಧಾರಮಣಿಯವರ ಒಂದು ಚಿಕ್ಕ, ಕಡಿಮೆ ವೆಚ್ಚದ ಚಿಕಿತ್ಸಾಲಯವಾಗಿ ಶಂಕರ್ ಐ ಫೌಂಡೇಶನ್ ಆರಂಭಗೊಂಡಿತು. ನಂತರದ 40 ವರ್ಷಗಳಲ್ಲಿ ಅದು ಬಹುಪಾಲು ಗ್ರಾಮೀಣ ಪ್ರದೇಶದ ಬಡವರಿಗೆ 1.5 ಮಿಲಿಯ ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ನಡೆಸಿದೆ. ಫೌಂಡೇಶನ್‌ನ ಸ್ಥಾಪಕರು ಮತ್ತು ಆಡಳಿತ ಟ್ರಸ್ಟಿಯಾಗಿರುವ ಡಾ. ರಮಣಿಯವರು ತಮ್ಮ ಸಂಸ್ಥೆ ಸಾಗಿಬಂದ ಬಗ್ಗೆ ಹೀಗೆ ವರ್ಣಿಸುತ್ತಾರೆ.

‘‘ನಮಗಿಬ್ಬರಿಗೂ ಖಾಸಗಿ ಪ್ರಾಕ್ಟಿಸ್ ಚೆನ್ನಾಗಿಯೇ ಇತ್ತು ಮತ್ತು ಸಾಕಷ್ಟು ಅನುಕೂಲಸ್ಥರಾದ ರೋಗಿಗಳೂ ನಮ್ಮಲ್ಲಿಗೆ ಬರುತ್ತಿದ್ದರು. ಹಾಗಾಗಿ ಆರ್ಥಿಕವಾಗಿ ನಾವು ಸುದೃಢವಾಗಿಯೇ ಇದ್ದೆವು. ಆದರೆ ವೈದ್ಯಕೀಯ ಸೇವೆಗೆ ಹಣ ತೆರಲಾರದ ಬಡವರಿಗೆ ನಾವು ಸಹಾಯ ಮಾಡಬಯಸಿದೆವು. ಭಾರತದ ಆರೋಗ್ಯ ಸೇವೆ ಎರಡು ತೀರಾ ಭಿನ್ನ ದಿಕ್ಕಿನಲ್ಲಿವೆ. ಒಂದು ತೀರಾ ದುಬಾರಿಯಾದ ಖಾಸಗಿ ಆಸ್ಪತ್ರೆಗಳು ಮತ್ತು ಇನ್ನೊಂದು ಗುಣಮಟ್ಟದ ಕೊರತೆ ಇರುವ ಸರಕಾರಿ ಆಸ್ಪತ್ರೆಗಳು’’.

1970ರ ದಶಕದಲ್ಲಿ ತಮಿಳುನಾಡು ಸರಕಾರ ಪ್ರತೀ ಜಿಲ್ಲೆಯಲ್ಲೂ ಸಾಮಾನ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ಅದಾಗಲೇ ಸ್ಥಾಪಿಸಿತ್ತು; ಆದ್ದರಿಂದ ರಮಣಿ ದಂಪತಿ ವೈದ್ಯಕೀಯ ಸೇವೆಯ ಒಂದು ವಿಶೇಷ ಶಾಖೆಯನ್ನು ಆಯ್ದುಕೊಳ್ಳಲು ನಿರ್ಧರಿಸಿದರು. ಅವರಿಗೆ ನೇತ್ರ ಚಿಕಿತ್ಸೆ ಆದರ್ಶ ಅನ್ನಿಸಿತು; ಯಾಕೆಂದರೆ ಈ ರಂಗದಲ್ಲಿ ಯಶಸ್ವಿ ಚಿಕಿತ್ಸೆಯ ಫಲಿತಾಂಶ ತತ್‌ಕ್ಷಣ ಇರುತ್ತದೆ. ಅಲ್ಲದೆ ಭಾರತದ ಗ್ರಾಮೀಣ ಭಾಗಗಳಲ್ಲಿ ವಾಸಿಸುವವರಿಗೆ ಕಣ್ಣಿನ ಉತ್ತಮ ದೃಷ್ಟಿ ಅಮೂಲ್ಯವಾಗಿದೆ.

‘‘ಆರಂಭದಲ್ಲಿ, ಖಾಸಗಿ ವೈದ್ಯರ ಒಂದು ತಂಡಕ್ಕೆ ಪ್ರತೀ ವಾರ ಅವರು ನಮ್ಮ ನೇತ್ರ ಚಿಕಿತ್ಸಾಲಯಕ್ಕೆ ಕೆಲವೇ ಗಂಟೆಗಳ ಸೇವೆ ಸಲ್ಲಿಸುವಂತೆ ನಾವು ಅವರ ಮನವೊಲಿಸಿದೆವು ಮತ್ತು ಔಷಧಿಗಳಿಗಾಗಿ ಹಾಗೂ ಚಿಕಿತ್ಸಾಲಯವನ್ನು ಸ್ವಚ್ಛಗೊಳಿಸುವ ಕೆಲಸದಾಕೆಗೆ ನೀಡುವುದಕ್ಕಾಗಿ ಪ್ರತೀ ರೋಗಿಯಿಂದ ನಾವು 50ಪೈಸೆ ಸಂಗ್ರಹಿಸುತ್ತಿದ್ದೆವು.’’

ವೇಗವಾಗಿ ಬೆಳೆದ ಸಂಸ್ಥೆ

1977ರ ಮೇ ತಿಂಗಳಲ್ಲಿ, ಒಂದು ಧಾರ್ಮಿಕ ದಾನ ಸಂಘಟನೆಯಾದ ಶ್ರೀಕಾಂಚಿ ಕಾಮಕೋಟಿ ಟ್ರಸ್ಟ್ ನೀಡಿದ ಒಂದು ಚಿಕ್ಕ ಕಟ್ಟಡದಲ್ಲಿ ರಮಣಿ ದಂಪತಿ ತಮ್ಮ ಚಿಕಿತ್ಸಾಲಯವನ್ನು ಆರಂಭಿಸಿದರು. ಅದು ಬಹಳ ಬೇಗ ಯಶಸ್ವಿಯಾಯಿತು. ಪರಿಣಾಮವಾಗಿ, ರಮಣಿಯವರು ಶಂಕರ್ ಐ ಫೌಂಡೇಶನ್‌ನನ್ನು 1981ರಲ್ಲಿ ಒಂದು ಸಾರ್ವಜನಿಕ ದಾನ ಟ್ರಸ್ಟ್ ಆಗಿ ನೋಂದಾವಣೆ ಮಾಡಿಸಿದರು. 1980ರ ದಶಕದ ಮಧ್ಯಭಾಗದ ವೇಳೆಗೆ ರಮಣಿಯವರ ಚಿಕ್ಕ ಸಾಮಾಜಿಕ ಸಂಸ್ಥೆಗೆ ದಾನಿಗಳಿಂದ ಹಾಗೂ ವೈದ್ಯಕೀಯ ಸಮುದಾಯದಿಂದ ಅದ್ಭುತ ಪ್ರೋತ್ಸಾಹ ದೊರಕಿತು. ಪರಿಣಾಮವಾಗಿ ಬಹುಸಂಖ್ಯೆಯ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವುದು ರಮಣಿ ದಂಪತಿ ಮತ್ತು ಅವರ ತಂಡಕ್ಕೆ ಸಾಧ್ಯವಾಯಿತು. ಬಡ ಕುಟುಂಬಗಳಿಂದ ಬರುವ ಶೇ. 80 ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ನೇತ್ರ ಚಿಕಿತ್ಸೆ ನೀಡಲು ಮತ್ತು ಹಣತೆರುವ ಸಾಮರ್ಥ್ಯವಿರುವ ಉಳಿದ ಶೇ. 20 ರೋಗಿಗಳಿಂದ ಮಾತ್ರ ವೈದ್ಯಕೀಯ ಶುಲ್ಕಗಳನ್ನು ಪಡೆಯಲು ಫೌಂಡೇಶನ್ ನಿರ್ಧರಿಸಿ ತನ್ನ ಸಾಧನೆಯ ಹಾದಿಯಲ್ಲಿ ಮುಂದುವರಿಯಿತು. ಇದರ ಪರಿಣಾಮವಾಗಿ, ಶಂಕರ್ ಐ ಫೌಂಡೇಶನ್ ಭಾರತದಲ್ಲಿ ಮತ್ತು ವಿಶ್ವದಲ್ಲೇ ನೇತ್ರಚಿಕಿತ್ಸೆ ಒದಗಿಸುವ ಅತ್ಯಂತ ಬೃಹತ್ತಾದ ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ದೊಡ್ಡ ಪಟ್ಟಣದಲ್ಲಿ ಉಚಿತ ನೇತ್ರ ಶಿಬಿರಗಳನ್ನು ನಡೆಸಿ, ಅವಶ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಒಮ್ಮೆ ನಗರಗಳಲ್ಲಿ ತನ್ನ ಕೀರ್ತಿ ಹರಡಿತೆಂದರೆ ಪಟ್ಟಣದ ಸುತ್ತಲಿರುವ ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ಶಿಬಿರಗಳನ್ನು ಆಯೋಜಿಸಲು ಆರಂಭಿಸುತ್ತಾರೆ. ಕ್ಯಾಟರ್ಯಾಕ್ಟ್ ಇರುವ ರೋಗಿಗಳಿಗೆ ‘ದೃಷ್ಟಿಕೊಡುಗೆ’ ಕಾರ್ಯಕ್ರಮದಂತೆ ಸಾವಿರಾರು ಮಂದಿಗೆ ನೇತ್ರಚಿಕಿತ್ಸೆ ದೊರಕುತ್ತದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಪಂಚಾಯತ್, ಜಿಲ್ಲಾ ಪರಿಷತ್, ರೋಟರಿ ಮತ್ತು ಲಯನ್ಸ್ ಕ್ಲಬ್ ಹಾಗೂ ಪ್ರತೀ ಸಮುದಾಯದ ಗೌರವಾನ್ವಿತ ಸದಸ್ಯರ ನೆರವು ಕರೆತರುತ್ತಾರೆ. ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಫೌಂಡೇಶನ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತದೆ. ಅಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

ಫೌಂಡೇಶನ್‌ನ ನೇತೃತ್ವದಲ್ಲಿ ಶಂಕರ್ ನೇತ್ರಾಲಯ ಮತ್ತು ಅರವಿಂದ ಐ ಕೇರ್‌ನಂತಹ ಇಷ್ಟು ಬೃಹತ್ ಕಣ್ಣಿನ ಆಸ್ಪತ್ರೆಗಳೂ ಕಾರ್ಯವೆಸಗುತ್ತಿವೆ. ಶಂಕರ್ ನೇತ್ರಾಲಯದಲ್ಲಿ ಶೇ.40 ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.

ಕುರುಡು ಚುಕ್ಕಿ

ಕುರುಡು ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದ ಪ್ರಕಾರ, ಭಾರತದಲ್ಲಿ ಕುರುಡುತನದಿಂದ ಬಳಲುವ 12 ಮಿಲಿಯ ಮಂದಿಯಲ್ಲಿ ಶೇ. 60 ಅಥವಾ 7.2 ಮಿಲಿಯ ಮಂದಿಯ ಕುರುಡುತನ ಚಿಕಿತ್ಸೆಯ ಮೂಲಕ ನಿವಾರಿಸಬಹುದಾದಂತಹ, ಕೆಟರ್ಯಾಕ್ಟ್ ಮತ್ತು ಗ್ಲೌಕೊಮಾದಂತಹ ಕಣ್ಣಿನ ಸಮಸ್ಯೆಗಳು. ಶಂಕರ್ ಐ ಫೌಂಡೇಶನ್ ಇಂತಹ ಜನರಿಗೆ ಚಿಕಿತ್ಸೆ ನೀಡುತ್ತ, ಕಳೆದ 40 ವರ್ಷಗಳಲ್ಲಿ 23,020ಕ್ಕಿಂತ ಹೆಚ್ಚು ಗ್ರಾಮೀಣ ನೇತ್ರ ಶಿಬಿರಗಳನ್ನು ಆಯೋಜಿಸಿದೆ. 4.5 ಮಿಲಿಯ ಮಂದಿಯ ನೇತ್ರ ಪರೀಕ್ಷೆ ನಡೆಸಿದೆ ಮತ್ತು 1.5 ಮಿಲಿಯ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದೆ. ಕೊಯಮುತ್ತೂರಿನಲ್ಲಿ ಇರುವ ಮುಖ್ಯ ಕೇಂದ್ರದಲ್ಲಿ ಭಾರತದಲ್ಲೇ ಮೊತ್ತಮೊದಲ ನೇತ್ರ ಬ್ಯಾಂಕ್‌ಗಳಲ್ಲಿ ಒಂದು ನೇತ್ರ ಬ್ಯಾಂಕನ್ನು ಅದು ಹೊಂದಿದೆ.

 ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ನೇತ್ರ ಚಿಕಿತ್ಸೆಗೆ, ಪುರುಷರ ನೇತ್ರ ಚಿಕಿತ್ಸೆಗೆ ನೀಡುವ ಮಹತ್ವ ನೀಡಲಾಗುತ್ತಿಲ್ಲ ಎಂದು ಹೇಳುತ್ತಾರೆ ಶಂಕರ್ ಫೌಂಡೇಶನ್‌ನ ವೈದ್ಯರು. ಫೌಂಡೇಶನ್‌ನ ಒಟ್ಟು ನೇತ್ರ ರೋಗಿಗಳಲ್ಲಿ ಶೇ. 60 ಮಂದಿ ಮಹಿಳೆಯರು. ಆರ್ಮಿಯಲ್ಲಿ ಕೃಷಿ ಕಾರ್ಮಿಕಳಾಗಿ ದುಡಿಯುವ ರಾಣಿ ಇಂತಹ ಒಬ್ಬ ಮಹಿಳೆ. ಅವಳ ಗಂಡ, ಶಂಕರ್ ಆಸ್ಪತ್ರೆಯಲ್ಲಿ ಕ್ಯಾಟರ್ಯಾಕ್ಟ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು ಶೀಘ್ರ ಗುಣಮುಖನಾಗಿದ್ದ. ಇದರಿಂದ ಪ್ರೋತ್ಸಾಹಗೊಂಡ ರಾಣಿ ಏಕಾಂಗಿಯಾಗಿ 400 ಕಿ.ಮೀ. ದೂರದ ಕೊಯಮುತ್ತೂರಿಗೆ ಪ್ರಯಾಣಿಸಿ ತನ್ನ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಳು.

‘‘ಅಂಧ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಣ್ಣು ಕಾಣಿಸುವಂತೆ ಮಾಡುವುದೇ ನಮ್ಮ ಗುರಿ’’ ಎನ್ನುತ್ತಾರೆ. ಫೌಂಡೇಶನ್‌ನ ಶಸ್ತ್ರ ಚಿಕಿತ್ಸಾ ಘಟಕದ ಮುಖ್ಯಸ್ಥ ಭರತ್ ಬಾಲಸುಬ್ರಮಣಿಯಮ್.

ಈಗ ಶಂಕರ್ ಸಂಸ್ಥೆ ತನ್ನ ಸೇವೆಯನ್ನು ಆಂಧ್ರ, ಕರ್ನಾಟಕ, ಗುಜರಾತ್, ಪಂಜಾಬ್ ಮತ್ತು ಉತ್ತರಪ್ರದೇಶವೂ ಸೇರಿದಂತೆ ಇತರ ರಾಜ್ಯಗಳಿಗೂ ವಿಸ್ತರಿಸಿದೆ.

ಕೃಪೆ: scroll.in

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಶಿವಕಾಮಿ ಕುಮಾರಮಂಗಲಂ
ಶಿವಕಾಮಿ ಕುಮಾರಮಂಗಲಂ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X