ಭಿನ್ನಾಭಿಪ್ರಾಯ ಅಪರಾಧವೇ?

ತಂಗಿ ಕವಿತಾ ಜೊತೆಗೆ ಗೌರಿ.
ಲಂಕೇಶ್ ಪತ್ರಿಕೆಯಲ್ಲಿದ್ದಾಗ ಗೌರಿ ಆಗೊಮ್ಮೆ ಈಗೊಮ್ಮೆ ಪತ್ರಿಕೆ ಕಚೇರಿಗೆ ಬರುತ್ತಿದ್ದರು. ಪತ್ರಿಕೆಯ ಸಿಬ್ಬಂದಿಯಲ್ಲಿ ಹೆಚ್ಚಿನವರು ಅವರನ್ನು ಚಿಕ್ಕಂದಿನಿಂದಲೂ ನೋಡಿದವರಾದುದರಿಂದ ಬಹಳ ಸಲಿಗೆಯಿಂದ ಮಾತಾ ಡುತ್ತಿದ್ದರು. ನಾನು ಹೊಸಬನಾದುದರಿಂದ ಅವರೊಂದಿಗೆ ಹೆಚ್ಚು ಮಾತಾಡಿದ್ದಿಲ್ಲ. ಆಗ ಅವರು ಸಂಡೇ ಪತ್ರಿಕೆಗೆ ಬೆಂಗಳೂರು correspondent ಆಗಿದ್ದರು ಅಂತ ನೆನಪು. ಆಗಲೇ ಅವರು ತೀರಾ ಸಣಕಲು ಶರೀರದವ ರಾಗಿದ್ದರು. ಮಾತುಗಳು ತೀಕ್ಷ್ಣವಾಗಿರುತ್ತಿದ್ದವು. ಹೆಚ್ಚಿನ ಇಂಗ್ಲಿಷ್ ಪತ್ರಕರ್ತರಂತೆ ಅವರಿಗೂ ಕನ್ನಡ ಓದಲು ಬರೆ ಯಲು ಬರುತ್ತಿದ್ದಿಲ್ಲ. ಆದರೆ, ಗೌರಿ ವಿಚಾರದಲ್ಲಿ ನನಗದು ತುಸು ಅಭಾಸವಾಗಿ ಕಾಣುತ್ತಿತ್ತು, ಕನ್ನಡದ ಮೇಸ್ಟ್ರು ಲಂಕೇಶರ ಮಗಳು ಎಂಬ ಕಾರಣಕ್ಕೆ. ಆದರೆ, ಯಾವತ್ತೂ ಗೌರಿ ಲಂಕೇಶ್ ಮುಂದೆ ಕನ್ನಡದ ಒಬ್ಬ ಪ್ರಮುಖ ವಿಚಾರ ವಾದಿ, ಬುದ್ಧಿಜೀವಿ, ನೊಂದವರು, ಶೋಷಿತರ ದನಿಯಾಗಿ ಬೆಳೆಯುತ್ತಾರೆ ಎಂದು ಅನಿಸಿರಲಿಲ್ಲ. ಲಂಕೇಶ್ ಪತ್ರಿಕೆ ಬಿಟ್ಟು ಮುಂಬೈ ಸೇರಿದ ನಂತರ ಅವೆಲ್ಲ ಹೆಚ್ಚು ಕಡಿಮೆ ನೆನಪಿನಿಂದ ಮಾಸಿದ್ದವು.
ಕೆಲವು ವರ್ಷಗಳ ಹಿಂದೆ ಗೌರಿಯವರು ಒಂದು ಇ- ಮೈಲ್ ಕಳುಹಿಸಿ ನಾನು ಲಂಕೇಶ್ ಪತ್ರಿಕೆಯಲ್ಲಿದ್ದಾಗ ಧಾರವಾಹಿ ರೂಪದಲ್ಲಿ ಬರೆಯುತ್ತಿದ್ದ ಮೂಲ ಅರೇಬಿ ಯನ್ ನೈಟ್ಸ್ ಕತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಬಹಳ ಸಂತೋಷಪಟ್ಟೆ. ಅವರು ಬಯಸಿದಂತೆ ಪುಸ್ತಕದ ಮುಖಪುಟ ಮಾಡಿ ಕಳುಹಿಸಿದೆ. ಮುಂದೆ ಕೆಲವೇ ವಾರಗಳಲ್ಲಿ ಮುದ್ರಿತ ಪುಸ್ತಕದ ಕೆಲವು ಪ್ರತಿಗಳೊಂದಿಗೆ ಚಿಕ್ಕದೊಂದು ಸಂಭಾವನೆಯನ್ನೂ ಕಳುಹಿಸಿಕೊಟ್ಟರು. ಮುಂದೆ ಯಾವತ್ತಾದರೂ ಬೆಂಗಳೂ ರಿಗೆ ಹೋದಾಗ ಅವರನ್ನು ಕಾಣಬೇಕು ಅಂತಿದ್ದೆ. ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದ್ದಿದ್ದೆನಾದರೂ ಮರು ದಿನವೇ ವಾಪಸು ಹೊರಡಬೇಕಾಯಿತಾದುದರಿಂದ ಅವರನ್ನು ಕಾಣಲಾಗಲಿಲ್ಲ. ಈಗ, ಅವರನ್ನು ಮುಂದೆ ಯಾವತ್ತೂ ಕಾಣಲಾರೆ ಎಂಬ ಆಲೋಚನೆ ಮನಸ್ಸನ್ನು ಮುದುಡಿಸುತ್ತಿದೆ. ನಿನ್ನೆ ರಾತ್ರಿ ಅವರ ಕೊಲೆಯಾದುದು ತಿಳಿದಾಗಿನಿಂದ ಏನೋ ಒಂದು ರೀತಿಯ ತಳಮಳ. She didn't deserve such a violent death! ಪ್ರಶ್ನಿಸುವುದು, ಭಿನ್ನಾಭಿಪ್ರಾಯ ವ್ಯಕ್ತಪಡಿಸು ವುದು ಕ್ರೈಮ್ ಆಗುವುದಾದರೆ ನಾವೆಲ್ಲರೂ ಮುಂದೆ ಗೌರಿಯಾಗಲು ತಯಾರಿರಬೇಕಾಗುತ್ತದೆ...