Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ದಸರಾ ವಿಶೇಷ
  3. ಸೆ.21 ರಿಂದ ರಾಜ್ಯ ಮಟ್ಟದ ದಸರಾ...

ಸೆ.21 ರಿಂದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಜಿಲ್ಲಾಧಿಕಾರಿ ಡಿ.ರಂದೀಪ್

ವಾರ್ತಾಭಾರತಿವಾರ್ತಾಭಾರತಿ15 Sept 2017 10:48 PM IST
share
ಸೆ.21 ರಿಂದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಜಿಲ್ಲಾಧಿಕಾರಿ ಡಿ.ರಂದೀಪ್

ಮೈಸೂರು, ಸೆ.15: ದಸರಾ ಮಹೋತ್ಸವ ಪ್ರಯುಕ್ತ ರಾಜ್ಯ ದಸರಾ ಕ್ರೀಡಾಕೂಟವನ್ನು ಸೆ.21ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದ್ದು, ಸೆ.24ರಂದು ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಹಾಪ್ ಮ್ಯಾರಥಾನ್ ಸ್ಪರ್ಧೆಯನ್ನು ಮತ್ತು ಸೆ.27ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೈಕ್ಲೋಥಾನ್ ಸ್ಪರ್ಧೆಯನ್ನು ನಡೆಸಲು ದಸರಾ ಕ್ರೀಡಾ ಉಪಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪೋಸ್ಟರ್ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದ ಅವರು, ಸೆ.20ರಂದು ನಂಜರಾಜ ಬಹದ್ದೂರ್ ಛತ್ರದಲ್ಲಿ ಕ್ರೀಡಾಪಟುಗಳ ನೋಂದಣಿ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಸೆ.21ರಂದು ಬೆಳಗ್ಗೆ 11ಕ್ಕೆ ಕ್ರೀಡಾ ಜ್ಯೋತಿ ಉದ್ಘಾಟನೆಗೊಂಡು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ನಜರ್ ಬಾದ್ ನಲ್ಲಿರುವ ನಿಂಬುಜಾದೇವಿ ದೇವಸ್ಥಾನಕ್ಕೆ ಮಧ್ಯಾಹ್ನ ತಲುಪಲಿದೆ. ಈ ಸಂದರ್ಭ ವಿವಿಧ ಅಧಿಕಾರಿಗಳು ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂ.ಎಸ್.ತೇಜಸ್ ಕುಮಾರ್, ಉನ್ನತ ಸಾಧನೆಗೈದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ವ್ಯವಸ್ಥಿತವಾಗಿ ನಿರ್ವಹಿಸಲು ಕ್ರೆಡಿಟ್ ಐ ನ ಎಂ.ಪಿ.ವರ್ಷ ಅವರಿಗೆ ನೀಡಲಾಗಿದೆ ಎಂದರು.

21ರಂದು ಸಂಜೆ 4 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಯನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕ್ರಿಕೆಟ್ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಉಪಸ್ಥಿತರಿರುವರು ಎಂದರು. 

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವೈಯುಕ್ತಿಕ ಕ್ರೀಡೆಯಲ್ಲಿ ಮೊದಲನೆ ಬಹುಮಾನ 5,000ರೂ, ಗುಂಪು ಕ್ರೀಡೆ ತಲಾ 2,000ರೂ, ಎರಡನೇ ಬಹುಮಾನ 3,000ರೂ,  ತಲಾ 1,500ರೂ, ಮೂರನೇ ಬಹುಮಾನ 1,500ರೂ, ತಲಾ 1,000ರೂ. ನಗದು ಪುರಸ್ಕಾರವನ್ನು ನೀಡಲಾಗುವುದು. ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವೈಯುಕ್ತಿಕ ದಾಖಲೆ ನಿರ್ಮಿಸಿದವರಿಗೆ 10,000ರೂ.ನಗದು ಪುರಸ್ಕಾರ ನೀಡಲಾಗುವುದು. ನಗದು ಪುರಸ್ಕಾರ ಹಣವನ್ನು ವಿಜೇತ ಕ್ರೀಡಾಪಟುಗಳ ಹೆಸರಿನಲ್ಲಿ ಚೆಕ್ ಮೂಲಕ ಪಾವತಿಸಲಾಗುವುದು. ಉಪಸಮಿತಿ ವತಿಯಿಂದ ಮೆಡಲ್ಸ್, ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಇವುಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ದಸರಾ ಹಾಫ್ ಮ್ಯಾರಥಾನ್ ಓಟವನ್ನು ಸೆ.24ರಂದು ಬೆಳಗ್ಗೆ 6.30ಕ್ಕೆ ಮೈಸೂರು ಓವೆಲ್ ಮೈದಾನದಿಂದ ಆರಂಭಿಸಲಾಗುವುದು. ಮುಕ್ತ ದಸರಾ ಹಾಫ್ ಮ್ಯಾರಥಾನ್ ಓಟ ಪುರುಷ ಮತ್ತು ಮಹಿಳೆಯರಿಗಾಗಿ 21.1ಕಿ.ಮೀ,  ಕಾಲೇಜು ಯುವಕರಿಗಾಗಿ 12,ಕಾಲೇಜು ಯುವತಿಯರಿಗಾಗಿ 6ಕಿ.ಮೀ, ಪ್ರೌಢಶಾಲಾ ಬಾಲಕರಿಗಾಗಿ 6ಕಿ.ಮೀ, ಬಾಲಕಿಯರಿಗಾಗಿ 3ಕಿ.ಮೀ, ಓಟವನ್ನು ಸಂಘಟಿಸಲಾಗುವುದು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಉದ್ಘಾಟನೆಯ ವೇಳೆ ಸಚಿವರು, ಶಾಸಕರು, ವಿಶೇಷಾಧಿಕಾರಿಗಳು, ಬಾಸ್ಕೆಟ್ ಬಾಲ್ ಆಟಗಾರ್ತಿ ನವನೀತ ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ವಿಜೇತರಾದವರಿಗೆ  ಪ್ರಥಮ 6,000, ದ್ವಿತೀಯ 5,000, ತೃತೀಯ 4,000,ನಾಲ್ಕನೇ 3,000, ಐದನೇ 2,000, ಆರನೇ 1,000ವನ್ನು ಪ್ರೌಢಶಾಲಾ ಬಾಲಕಿ-ಬಾಲಕಿಯರಿಗೆ ನೀಡಲಾಗುತ್ತದೆ. ಕಾಲೇಜು ಯುವಕ-ಯುವತಿಯರಿಗೆ ಪ್ರಥಮ 15,000, ದ್ವಿತೀಯ 12,000, ತೃತೀಯ 10,000, ನಾಲ್ಕನೇ 8,000, ಐದನೇ 6,000, ಆರನೇ 4,000 ನೀಡಲಾಗುತ್ತದೆ. ಹಾಪ್ ಮ್ಯಾರಥಾನ್ ನಲ್ಲಿ ವಿಜೇತ ಪುರುಷ ಮಹಿಳೆಯರಿಗೆ ಪ್ರಥಮ 30,000, ದ್ವಿತೀಯ 25,000, ತೃತೀಯ 20,000, ನಾಲ್ಕನೇ 15,000, ಐದನೇ 10,000, ಆರನೇ 5,000ರೂ.ನಗದು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ವೈದ್ಯಕೀಯ ದೃಢೀಕರಣ ಪತ್ರವನ್ನು ಸಲ್ಲಿಸಿ ಸೆ.22 ರಂದು ಬೆಳಗ್ಗೆ 10.30ಕ್ಕೆ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಹೇಲಿದರು.

ಸೈಕ್ಲೋಥಾನ್ ಸ್ಪರ್ಧೆಯನ್ನು ಸೆ.27ರಂದು ಬೆಳಗ್ಗೆ 6.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಿಂದ ಪ್ರಾರಂಭಿಸಲಾಗುವುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ರಾಷ್ಟ್ರೀಯ ಸೈಕ್ಲಿಸ್ಟ್ ಮಹದೇವು ಭಾಗವಹಿಸಲಿದ್ದಾರೆ. ಸೆ.22ರಂದು ಸಂಜೆ 6.30ಕ್ಕೆ ತೂಕ ವಿಭಾಗದ ದೇಹದಾರ್ಢ್ಯ ಸ್ಪರ್ಧೆಯನ್ನು  ಹಾಗೂ ಸೆ.23ರಂದು ಸಂಜೆ 6.30ಕ್ಕೆ ಎತ್ತರದ ವಿಭಾಗದ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಸೆ.24ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

22, 23,24ರಂದು ಅಥ್ಲೆಟಿಕ್ಸ್ ಚಾಮುಂಡಿ ವಿಹಾರ ಸಿಂಥೆಟಿಕ್ಸ್ ಅಥ್ಲೆಟಿಕ್ಸ್ ಟ್ರ್ಯಾಕ್, 22,23,24 ಬ್ಯಾಸ್ಕೆಟ್ ಬಾಲ್ ಚಾಮುಂಡಿ ವಿಹಾರ ಕ್ರೀಡಾಂಗಣ, 22,23,24 ಬಾಲ್ ಬ್ಯಾಡ್ಮಿಂಟನ್ ಚಾಮುಂಡಿ ವಿಹಾರ ಕ್ರೀಡಾಂಗಣ, 22,23,24 ಫೂಟ್ ಬಾಲ್ ಮೈಸೂರು ವಿವಿ ಸ್ಪೋರ್ಟ್ಸ್ ಫೆವಿಲಿಯನ್, 22,23,24, ಜಿಮ್ನಾಸ್ಟಿಕ್ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣ, 22,23,24 ಹಾಕಿ ಚಾಮುಂಡಿ ವಿಹಾರ ಹಾಕಿ ಅಸ್ಟ್ರೋಟರ್ಫ್ ಅಂಕಣ, 22,23,24 ಹ್ಯಾಂಡ್ ಬಾಲ್ ಚಾಮುಂಡಿವಿಹಾರ ಹ್ಯಾಂಡ್ ಬಾಲ್ ಕ್ರೀಡಾಂಗಣ, 22,23,24 ಕಬಡ್ಡಿ ಚಾಮುಂಡಿ ವಿಹಾರ ಕಬಡ್ಡಿ ಕ್ರೀಡಾಂಗಣ, 22,23,24 ಖೋಖೋ ಚಾಮುಂಡಿವಿಹಾರ ಖೋಖೋ ಕ್ರೀಡಾಂಗಣ, 22,23,24 ನಟ್ ಬಾಲ್ ಚಾಮುಂಡಿ ವಿಹಾರ ಕಬಡ್ಡಿ ಕ್ರೀಡಾಂಗಣ, 22,23,24 ಈಜು ಚಾಮುಂಡಿ ವಿಹಾರ ಕ್ರೀಡಾಂಗಣ, 22,23,24 ಶಟಲ್ ಬ್ಯಾಡ್ಮಿಂಟನ್ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣ, 22,23,24 ಟೆನ್ನಿಸ್ ಮೈಸೂರು ಟೆನ್ನಿಸ್ ಕ್ಲಬ್ ಮೈದಾನ, 22,23,224 ಟೇಬಲ್ ಟೆನಿಸ್ ರೋಟರಿ ವೆಸ್ಟ್ ಸ್ಕೂಲ್, 22,23,24 ಥ್ರೋಬಾಲ್ ಚಾಮುಂಡಿ ವಿಹಾರ ಕ್ರೀಡಾಂಗಣ, 22,23,24, ವಾಲಿಬಾಲ್ ಚಾಮುಂಡಿ ವಿಹಾರ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ,ಸೆ.22 ದೇಹದಾರ್ಢ್ಯ ತೂಕ ವಿಭಾಗ ಚಾಮುಂಡಿ ವಿಹಾರ ಕ್ರೀಡಾಂಗಣ, 23, ದೇಹದಾರ್ಢ್ಯ ಎತ್ತರ ವಿಭಾಗ ಚಾಮುಂಡಿ ವಿಹಾರ ಕ್ರೀಡಾಂಗಣ, 24 ಹಾಫ್ ಮ್ಯಾರಥಾನ್ ಓವಲ್ ಮೈದಾನ, 27 ಸೈಕ್ಲೋಥಾನ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X