Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ದಸರಾ ವಿಶೇಷ
  3. ಮೈಸೂರು ದಸರಾ: ಗಜಪಡೆಯಲ್ಲಿ...

ಮೈಸೂರು ದಸರಾ: ಗಜಪಡೆಯಲ್ಲಿ ಅರ್ಜುನನಿಗಿಂತಲೂ ಧೈರ್ಯವಂತ ಅಭಿಮನ್ಯು!

ದಸರಾ ವಿಶೇಷ

ವಾರ್ತಾಭಾರತಿವಾರ್ತಾಭಾರತಿ18 Sept 2017 7:18 PM IST
share
ಮೈಸೂರು ದಸರಾ: ಗಜಪಡೆಯಲ್ಲಿ ಅರ್ಜುನನಿಗಿಂತಲೂ ಧೈರ್ಯವಂತ ಅಭಿಮನ್ಯು!

ಮೈಸೂರು,ಸೆ.18: ಅವರ ಪ್ರಕಾರ ದಸರಾ ಗಜಪಡೆಯಲ್ಲಿ ಎಲ್ಲವೂ ಧೈರ್ಯವಂತ ಆನೆಗಳೇ. ಆದರೂ. ಎಲ್ಲಕ್ಕಿಂತ ಹೆಚ್ಚು ಧೈರ್ಯ ಸ್ವಭಾವದ ಆನೆಯೊಂದಿದೆ. ಅದೂ... ಅಭಿಮನ್ಯು...!

ಇದೇನಿದು ಅರ್ಜುನ ಅಲ್ಲ, ಬಲರಾಮನೂ ಅಲ್ಲ... 52 ವರ್ಷದ ಅಭಿಮನ್ಯುವೇ? ಎಂದ ಆಶ್ಚರ್ಯ ಪಡದಿರಿ. ನಾಗರಾಜ್ ಅವರೇ ಅದನ್ನು ದೃಷ್ಟಾಂತದ ಮೂಲಕ ದೃಢಪಡಿಸಿದ್ದಾರೆ.

ಮತ್ತಿಗೂಡು ಶಿಬಿರ ನಿವಾಸಿ ಅಭಿಮನ್ಯು, ಕಾಡಾನೆಗಳು, ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅದರ ಧೈರ್ಯ ಸಾಹಸ ನೋಡಿದ್ದೇನೆ. 2002ರಲ್ಲಿ ಸುಂಕದ ಕಟ್ಟೆ ಕಾಡಿನಲ್ಲಿ ಹುಲಿಯೊಂದು ಟ್ರ್ಯಾಪ್ ಜಾಕ್‍ಗೆ ಕಾಲು ಸಿಕ್ಕಿಕೊಂಡು ಗಾಯಗೊಂಡಿತ್ತು. ಅದು ಕಬಿನಿ ಅಣೆಕಟ್ಟೆ ಹಿನ್ನೀರಿನ ಡಿ.ಬಿ.ಕುಪ್ಪೆ ಬಳಿ ಹಳೆ ಮಾಸ್ತಿಗುಡಿ ಸಮೀಪ ಕರಡಿ ಗುಹೆಯಲ್ಲಿ ಸೇರಿಕೊಂಡಿತ್ತು. ಆ ಸುಳಿವು ತಿಳಿದು ಅರ್ಜುನ, ಭರತ, ಅಭಿಮನ್ಯು ಇನ್ನೆರಡು ಹೆಣ್ಣಾನೆಗಳ ಸಹಿತ ಕಾರ್ಯಾಚರಣೆ ಶುರು ಮಾಡಿದ್ದರಂತೆ.

ಹುಲಿ ಇದ್ದ ಕರಡಿ ಗುಹೆಯ ಸಮೀಪ ಹೋಗುತ್ತಿದ್ದಂತೆ ಅದರ ಗರ್ಜನೆ ಮೊಳಗಿತು. ಅಷ್ಟೇ ಅಭಿಮನ್ಯು ಹೊರತಾಗಿ ಉಳಿದ ಎಲ್ಲ ಆನೆಗಳು ದಿಕ್ಕಾಪಾಲಾಗಿ ಚದುರಿದವು. ಅಭಿಮನ್ಯು ಮಾತ್ರ ಒಂದು ಹೆಜ್ಜೆಯನ್ನು ಹಿಂದಿಡದೆ ಮುನ್ನುಗ್ಗಿತ್ತಂತೆ. ಮಾವುತರು ನಿಯಂತ್ರಿಸಿದ್ದರೆ ಹುಲಿಯ ಜೊತೆ ಕಾದಾಟಕ್ಕೆ ಇಳಿಯವುದಕ್ಕೂ ಅಭಿಮನ್ಯು ಹೆದರುವುದಿಲ್ಲ ಎಂಬುದು ಡಾ.ನಾಗರಾಜ್ ಅವರ ಅಭಿಮಾನದ ನುಡಿ.

ಸೆರೆ ಹಿಡಿದು ವಾಹನಗಳಲ್ಲಿ ಸಾಗಿಸುವ ಕಾಡಾನೆಗಳನ್ನು ಪಳಗಿಸುವುದಕ್ಕಾಗಿ ಶಿಬಿರದಲ್ಲಿ `ಕ್ರಾಲ್'ಗೆ ಇಳಿಸುವಾಗ ಈ ನಮ್ಮ ಆನೆಗಳ ಸಹಾಯ ಮುಖ್ಯವಾಗಿರುತ್ತದೆ. ಮತ್ತು ಅದು ಒಂದು ಕಲೆ ಇದ್ದಹಾಗೆ. ಅದರಲ್ಲಿ ಇತರೆಲ್ಲ ಆನೆಗಳಿಗಿಂತ ಅಭಿಮನ್ಯು ತಜ್ಞನಾಗಿದ್ದಾನೆ.

ಜಂಬೂಸವಾರಿಯಲ್ಲಿ ಅಭಿಮನ್ಯು ಪೊಲೀಸ್ ವಾದ್ಯ ವೃಂದ ಇರುವ ಆನೆಗಾಡಿಯನ್ನು ಎಳೆದೊಯ್ಯುತ್ತಿತ್ತು. ಎರಡು ವರ್ಷಗಳ ಹಿಂದೆ ತಾಲೀಮಿನ ಸಂದರ್ಭದಲ್ಲಿ ಆನೆಗಾಡಿ ಕಬ್ಬಿಣದ ಸರಳುಗಳು ದೇಹಕ್ಕೆ ತಾಗಿ ಗಾಯವಾಗಿದ್ದರಿಂದ ಅಭಿಮನ್ಯುಗೆ ಆ ಕೆಲಸದಿಂದ ವಿನಾಯಿತಿ ನೀಡಲಾಯಿತು. ಆದರೆ, ಪ್ರತಿವರ್ಷ ಉತ್ಸವದ ಜತೆಯಲ್ಲಿ ಸಾಗುತ್ತಾನೆ.

ಧೈರ್ಯವಂತ ಅಭಿಮನ್ಯು ಹೆದರುವುದೇತಕ್ಕೆ? 
ದಸರಾ ಗಜಪಡೆಯಲ್ಲಿ ಅತ್ಯಂತ ಧೈರ್ಯವಂತ ಅಭಿಮನ್ಯು ಹೆದರುವುದೇತಕ್ಕೆ ಗೊತ್ತಾ? ಕೇವಲ ಒಂದು ಸೂಜಿಗೆ! ಆನಾರೋಗ್ಯ ನಿಮಿತ್ತ ಅದಕ್ಕೆ ಚುಚ್ಚುಮದ್ದು ನೀಡುವಾಗ ಮಾತ್ರ ಬಹಳ ಅಂಜುತ್ತದೆ.
 -ಡಾ.ನಾಗರಾಜ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X