Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಗೌರಿ ಲಂಕೇಶ್ ರನ್ನು ಯಾಕೆ ಕೊಂದರು?

ಗೌರಿ ಲಂಕೇಶ್ ರನ್ನು ಯಾಕೆ ಕೊಂದರು?

ಸುದೀಪ್ತೊ ಮೊಂಡಲ್ಸುದೀಪ್ತೊ ಮೊಂಡಲ್18 Sept 2017 11:52 PM IST
share
ಗೌರಿ ಲಂಕೇಶ್ ರನ್ನು ಯಾಕೆ ಕೊಂದರು?

ದಾಭೋಳ್ಕರ್, ಕಲಬುರ್ಗಿ ಮತ್ತು ಪನ್ಸಾರೆಯವರನ್ನು ಹೆಲ್ಮೆಟ್‌ಧಾರಿಗಳಾಗಿ, ಮುಖಮುಚ್ಚಿಕೊಂಡು, ಬೈಕ್‌ಗಳಲ್ಲಿ ಬಂದ ಹಂತಕರು ಹತ್ಯೆಗೈದು ಕೊಲೆಯ ನಂತರ ಪಲಾಯನಗೈದಿದ್ದರು. ಗೌರಿ ಲಂಕೇಶ್‌ರವರನ್ನೂ ಅದೇ ರೀತಿಯಾಗಿ ಕೊಲ್ಲಲಾಯಿತು.
ಕೊಲೆಯಾದ ಬುದ್ಧಿಜೀವಿಗಳು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುತ್ತಿದ್ದರು ಮತ್ತು ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಎಡಪಂಥೀಯ ಗುಂಪುಗಳಿಗೆ ಹಾಗೂ ದಲಿತ ಗುಂಪುಗಳಿಗೆ ಸ್ವೀಕಾರಾರ್ಹರಾಗಿದ್ದರು. ಬಲಪಂಥೀಯ ಹಿಂದೂ ವಿಚಾರಧಾರೆಯನ್ನು ವಿರೋಧಿಸುತ್ತಿದ್ದ ಸಮುದಾಯಗಳನ್ನು ಅವರು ಒಂದುಗೂಡಿಸಬಲ್ಲವರಾಗಿದ್ದರು.

ಸೆಪ್ಟಂಬರ್ 5ರ ಸಂಜೆ ಬೆಂಗಳೂರಿನಿಂದ ನನ್ನ ಪತ್ರಕರ್ತೆ ಪತ್ನಿಯಿಂದ ಒಂದು ಕರೆ ಬಂತು. ‘‘ಗೌರಿ ಲಂಕೇಶ್‌ರ ಮನೆಯ ಹೊರಗೆ ಅವರಿಗೆ ಗುಂಡು ಹೊಡೆಯಲಾಗಿದೆ. ಆಕೆ ಮೃತಪಟ್ಟಿದ್ದಾರೆ.’’

ನನಗೆ ಗೌರಿ ಹತ್ತು ವರ್ಷಗಳ ಪರಿಚಯ. ನಾನು ಆಕೆಯೊಡನೆ ಮಾಡಿದ ಒಂದೇ ಒಂದು ಕೆಲಸ ಅಂದರೆ, ವಾದಿಸುವುದು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದು, ಭಾರತದ ಬಹುಸಂಖ್ಯಾಕವಾದ (ಮೆಜಾರಿಟೇರಿಯನಿಸಂ) ಅಸಹನೆಯ ಕಡೆಗೆ ತಿರುಗಿದ ಬಳಿಕ ನಮ್ಮ ವಾದಗಳಿಗೆ ತೀವ್ರತೆ ಹೆಚ್ಚುತ್ತಾ ಹೋಯಿತು. ಪ್ರಧಾನಿ ಮೋದಿಯ ಹಿಂದೂ ರಾಷ್ಟ್ರೀಯವಾದಿ ಸರಕಾರದ ಉಗ್ರ ಟೀಕಾಕಾರಳಾಗಿದ್ದ ಗೌರಿ ತನ್ನ ಕೊನೆಯ ಸಂಪಾದಕೀಯದಲ್ಲಿ, ಸುಳ್ಳು ಸುದ್ದಿ ಹರಡುವುದೇ ಮೋದಿ ಮತ್ತು ಅವರ ಪಕ್ಷದ ಯಶಸ್ಸಿಗೆ ಕಾರಣವಾಗಿದೆ ಎಂದು ಬರೆದಿದ್ದರು.

ಓರ್ವ ದಲಿತ ಪದವೀಧರ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ, ತೀವ್ರ ಸ್ವರೂಪದ ಜಾತಿ ತಾರತಮ್ಯಕ್ಕೊಳಗಾಗಿ, ಅದನ್ನು ಸಹಿಸದೆ 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ, ನಾನು ಗೌರಿ ಬಳಿ ಮಾತಾಡುತ್ತಾ ಭಾರತದ ಎಡಪಕ್ಷ ಹೇಗೆ ಬಹುಪಾಲು ಸಂಪೂರ್ಣವಾಗಿ ಮೇಲ್ಜಾತಿ ಹಿಂದುಗಳ ನಾಯಕತ್ವದಲ್ಲಿದೆ ಎಂದು ನನ್ನ ಕಳವಳ ತೋಡಿಕೊಂಡಿದ್ದೆ. ಆಗ ಆಕೆ ಅಣಕಿಸುವ ಧ್ವನಿಯಲ್ಲಿ ಕೇಳಿದರು: ‘‘ದಲಿತ ಮಹಾ ನಾಯಕಿಯರು ಎಲ್ಲಿದ್ದಾರೆ?’’

ನಾನು ಸವಲತ್ತುಗಳ ಬಗ್ಗೆ ಏನೋ ಹೇಳುತ್ತಾ, ವ್ಯಂಗ್ಯವಾಗಿ ಉತ್ತರಿಸಿದೆ. ಆಕೆಗೆ ವಿಪರೀತ ಸಿಟ್ಟು ಬಂತು. ‘‘ಹೌದು ನಾನು ಶ್ರೀಮಂತಳು, ನಾನು ಒಂದು ದೊಡ್ಡ ಮನೆಯಲ್ಲಿದ್ದೇನೆ. ನಾನು ತುಂಬಾ ಸವಲತ್ತುಗಳನ್ನು ಪಡೆದವಳು, ಅನುಕೂಲಸ್ಥಳು. ಒಬ್ಬಳು ಹೆಣ್ಣಾಗಿ ನಾನ್ಯಾಕೆ ಜಾತಿವಿರೋಧಿ ಹೋರಾಟದ ಒಂದು ಭಾಗವಾಗಬಾರದು ಎಂಬುದಕ್ಕೆ ಇದಕ್ಕಿಂತ ಉತ್ತಮವಾದ ಒಂದು ವಾದ ಮಂಡಿಸಿ. ಹೋಗಿ ಅಂಬೇಡ್ಕರ್‌ರನ್ನು ಸರಿಯಾಗಿ ಓದಿ.’’

ಸಂಭಾಷಣೆ ಕೊನೆಗೊಂಡಿತು. ನಾವು ಇನ್ನು ಮುಂದಕ್ಕೆ ಎಂದಿಗೂ ಪರಸ್ಪರ ಮಾತನಾಡುವುದಿಲ್ಲವೆಂದು ನನಗನ್ನಿಸಿತು.

ಸ್ವಲ್ಪ ಸಮಯದ ಬಳಿಕ ನಾನು ಅವರನ್ನು ಒಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಭೇಟಿಯಾದೆ. ಉಪನ್ಯಾಸ ಮುಗಿದ ಬಳಿಕ, ಬಹಳ ಹೊತ್ತಿನವರೆಗೆ ಅವರು ನನ್ನ ಕೈ ಹಿಡಿದುಕೊಂಡು, ಪ್ರತಿಯೊಬ್ಬರಿಗೂ ನನ್ನನ್ನು ಆಕೆಯ ಮಗ ಮಗ ಎಂದು ಪರಿಚಯಿಸಿದರು.

ಆಕೆ ಸಾಮಾಜಿಕ ಮತ್ತು ರಾಜಕೀಯ ಗುಂಪುಗಳನ್ನು ಒಟ್ಟು ಗೂಡಿಸಬಲ್ಲ ಓರ್ವ ದಕ್ಷ ರಾಜಕೀಯ ಸಂಘಟಕರು ಕೂಡಾ ಆಗಿದ್ದರು.

ಹಿಂದೂ ರಾಷ್ಟ್ರೀಯವಾದಿ ಚಳವಳಿಯ ಒಂದು ಭದ್ರಕೋಟೆಯಾಗಿರುವ ದಕ್ಷಿಣ ಭಾರತದ ಒಂದು ಪಟ್ಟಣ ಉಡುಪಿಯ ಪುರೋಹಿತಶಾಹಿಗಳು ಕೆಳಜಾತಿಗಳನ್ನು, ವಿಶೇಷವಾಗಿ ದಲಿತರನ್ನು, ಮೇಲ್ಜಾತಿ ಹಿಂದುಗಳಿಂದ ಬೇರೆ ಮಾಡಿ, ಪ್ರತ್ಯೇಕಿಸಿ ತಾರತಮ್ಯ ಮಾಡುತ್ತಿದ್ದರು. ಇದರ ವಿರುದ್ಧವಾಗಿ ಕಲೆದ ಸೆಪ್ಟಂಬರ್‌ನಲ್ಲಿ ಗೌರಿ ಲಂಕೇಶ್ ಅನೇಕ ಪ್ರಗತಿಪರ, ದಲಿತ ಮತ್ತು ಎಡಪಂಥೀಯ ಗುಂಪುಗಳನ್ನು ಮತ್ತು ಸರಕಾರೇತರ ಸಂಘಟನೆಗಳನ್ನು ಒತ್ತಾಯಿಸಿ, ಒಂದು ರ್ಯಾಲಿ ನಡೆಸಿ, ಉಡುಪಿ ಚಲೋ ಸಂಘಟಿಸಿದ್ದರು. ಇದಕ್ಕೆ ಒಂದು ತಿಂಗಳ ಮೊದಲು, 2016ರಜುಲೈಯಲ್ಲಿ ಉಗ್ರ ಹಿಂದೂ ಕಾರ್ಯಕರ್ತರು ಗುಜರಾತ್‌ನಲ್ಲಿ ಹಸುವಿನ ಚರ್ಮ ತೆಗೆದದ್ದಕ್ಕಾಗಿ ನಾಲ್ವರು ದಲಿತರನ್ನು ನಗ್ನಗೊಳಿಸಿ ಥಳಿಸಿದ್ದರು. ಆಗ ಓರ್ವ ದಲಿತ ಯುವ ವಕೀಲ, ಜಿಗ್ನೇಶ್ ಮೇವಾನಿ, ಗೋ ರಕ್ಷಕರ ವಿರುದ್ಧ ಗುಜರಾತ್‌ನಲ್ಲಿ ಬೃಹತ್ ಪ್ರತಿಭಟನೆಗಳನ್ನು ಸಂಘಟಿಸಿ, ಅವುಗಳ ನಾಯಕತ್ವ ವಹಿಸಿದ್ದರು.

‘ಉಡುಪಿ ಚಲೋ’ ರ್ಯಾಲಿಯ ನಾಯಕತ್ವ ಸಿಗುತ್ತದೋ ಅಥವಾ ಮೇಲ್ಜಾತಿಯ ಎಡಪಂಥೀಯರಿಗೆ ಸಿಗುತ್ತದೋ ಎಂಬ ಪ್ರಶ್ನೆಯನ್ನು ಗೌರಿ ಬಗೆಹರಿಸಿದರು. ಮೇವಾನಿ ಪ್ರತಿಭಟನಾ ನೇತೃತ್ವ ವಹಿಸುವಂತೆ ಆಕೆ ಎಲ್ಲರ ಮನ ಒಪ್ಪಿಸಿದರು. ಆ ರ್ಯಾಲಿಯಲ್ಲಿ ಸುಮಾರು 10,000 ಜನ ಭಾಗವಹಿಸಿದ್ದರು.

ಇದಾದ ಬಳಿಕ ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಲಂಕೇಶ್, ಮೇವಾನಿ ಮತ್ತು ಕನ್ಹಯ್ಯ, ಉಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್‌ರನ್ನು ತಬ್ಬಿಕೊಂಡ ಫೋಟೊಗಳನ್ನು ನಾನು ನೋಡಿದೆ. ಅವರನ್ನು ಆಕೆ ‘‘ನನ್ನ ಮಕ್ಕಳು’’ ಎಂದು ಕರೆದರು.

ಅವರ ಕೊಲೆಯಾದ ರಾತ್ರಿ, ನಾನು ನಮ್ಮ ಮಾಮೂಲಿ ಗೆಳೆಯರೊಡನೆ ಅವರ ಮನೆಯ ಹೊರಗೆ ನಿಂತಿದ್ದೆ. ಯಾರಾದರೂ ಆಕೆಯನ್ನು ಯಾಕೆ ಕೊಲ್ಲಬೇಕು? ಕೊಲ್ಲಲು ಏನು ಕಾರಣವಿರಬಹುದೆಂದು ನಾವು ಯೋಚಿಸುತ್ತಿದ್ದೆವು. ಮೋದಿ ಸರಕಾರ ಮತ್ತು ಹಿಂದೂ ರಾಷ್ಟ್ರೀಯವಾದಿಗಳನ್ನು ಟೀಕಿಸುತ್ತಿದ್ದ ಆಕೆಯ ಪತ್ರಿಕೆಗೆ ಕೆಲವು ಸಾವಿರಗಳಿಗಿಂತ ಹೆಚ್ಚಿನ ಪ್ರಸಾರವಿರಲಿಲ್ಲ. ಆಕೆ ಲಿಂಗಾಯತಳೆಂಬ ಕಾರಣಕ್ಕೆ ಕೊಂದಿರಬಹುದೇ?

ಬ್ರಾಹ್ಮಣವಾದಿ ಹಿಂದೂ ಧರ್ಮಕ್ಕಿಂತ ತಮ್ಮದು ಪ್ರತ್ಯೇಕ ಧರ್ಮವೆನ್ನುತ್ತಿರುವ ಲಿಂಗಾಯತ ಧರ್ಮದ ಚಳವಳಿಗೆ ಬೆಂಬಲವಾಗಿ ಆಕೆ ನಿಂತದ್ದಕ್ಕೆ ಆಕೆಯನ್ನು ಕೊಂದಿರಬಹುದೇ? ಅಂತ ಯೋಚಿಸುತ್ತಿದ್ದೆ. ಕಳೆದ ಕೆಲವು ತಿಂಗಳುಗಳಲ್ಲಿ, ಲಿಂಗಾಯತ ನಾಯಕರು ತಮ್ಮ ಬೇಡಿಕೆಗೆ ಬೆಂಬಲವಾಗಿ ಸಾವಿರಾರು ಬೆಂಬಲಿಗರನ್ನು ಸಾರ್ವಜನಿಕ ರ್ಯಾಲಿಗಳಲ್ಲಿ ಸಂಘಟಿಸಿದ್ದರು. ಈ ಸಂಘಟನೆ ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಹಿಂದೂ ರಾಷ್ಟ್ರೀಯವಾದಿ ಬಿಜೆಪಿಯ ಗೆಲುವಿನ ಅವಕಾಶಗಳಿಗೆ ಬೆದರಿಕೆಯೊಡ್ಡುತ್ತಿದೆ. ಗೌರಿ ಲಿಂಗಾಯತರ ಕರೆಗೆ ಬೆಂಬಲ ನೀಡಿದರಾದರೂ, ಲಿಂಗಾಯತ ಚಳವಳಿಯಲ್ಲಿ ಇವರಲ್ಲದೆ ಇತರ ಭಾರೀ ಪ್ರಬಲ ನಾಯಕರೂ ಇದ್ದರು.

2013ರ ಆಗಸ್ಟ್‌ನಲ್ಲಿ, ಧಾರ್ಮಿಕ ಮೂಢನಂಬಿಕೆಗಳ ವಿರುದ್ಧ ಚಳವಳಿ ನಡೆಸಿದ್ದ ನರೇಂದ್ರ ದಾಭೋಳ್ಕರ್‌ರನ್ನು ಹತ್ಯೆಗೈಯಲಾಯಿತು. 2015ರ ಆಗಸ್ಟ್‌ನಲ್ಲಿ, ಓರ್ವ ವಿದ್ವಾಂಸ ಹಾಗೂ ಹಿಂದುಗಳಲ್ಲಿರುವ ಮೂರ್ತಿಪೂಜೆಯ ಟೀಕಾಕಾರ ಎಂ. ಎಂ. ಕಲಬುರ್ಗಿಯವರನ್ನು ಅವರ ಮನೆಯ ಬಾಗಿಲಲ್ಲೇ ಗುಂಡಿಕ್ಕಿ ಕೊಲ್ಲಲಾಯಿತು. 2015ರ ಫೆಬ್ರವರಿಯಲ್ಲಿ, ಓರ್ವ ಕಮ್ಯುನಿಸ್ಟ್ ನಾಯಕ, ಸಮುದಾಯ ಸಂಘಟಕ ಮತ್ತು ಅಂಕಣಕಾರ ಗೋವಿಂದ ಪನ್ಸಾರೆಯವರನ್ನು ಮುಂಬೈ ಸಮೀಪದ ಒಂದು ಪುಟ್ಟ ಪಟ್ಟಣದಲ್ಲಿ ಹತ್ಯೆಗೈಯಲಾಯಿತು.

ದಾಭೋಳ್ಕರ್, ಕಲಬುರ್ಗಿ ಮತ್ತು ಪನ್ಸಾರೆಯವರನ್ನು ಹೆಲ್ಮೆಟ್‌ಧಾರಿಗಳಾಗಿ, ಮುಖಮುಚ್ಚಿಕೊಂಡು, ಬೈಕ್‌ಗಳಲ್ಲಿ ಬಂದ ಹಂತಕರು ಹತ್ಯೆಗೈದು ಕೊಲೆಯ ನಂತರ ಪಲಾಯನಗೈದಿದ್ದರು. ಗೌರಿ ಲಂಕೇಶ್‌ರವರನ್ನೂ ಅದೇ ರೀತಿಯಾಗಿ ಕೊಲ್ಲಲಾಯಿತು.

ಕೊಲೆಯಾದ ಬುದ್ಧಿಜೀವಿಗಳು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುತ್ತಿದ್ದರು ಮತ್ತು ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಎಡಪಂಥೀಯ ಗುಂಪುಗಳಿಗೆ ಹಾಗೂ ದಲಿತ ಗುಂಪುಗಳಿಗೆ ಸ್ವೀಕಾರಾರ್ಹರಾಗಿದ್ದರು. ಬಲಪಂಥೀಯ ಹಿಂದೂ ವಿಚಾರಧಾರೆಯನ್ನು ವಿರೋಧಿಸುತ್ತಿದ್ದ ಸಮುದಾಯಗಳನ್ನು ಅವರು ಒಂದುಗೂಡಿಸಬಲ್ಲವರಾಗಿದ್ದರು.

ಗೌರಿ ಲಂಕೇಶ್‌ರನ್ನು ಕೊಂದವರು ಯಾರೆಂದು ನಮಗಿನ್ನೂ ತಿಳಿದಿಲ್ಲ. ಆದರೆ ಮೋದಿಯವರ ಹಲವಾರು ಬೆಂಬಲಿಗರು, ಬಿಜೆಪಿ ಮತ್ತು ಅದರ ಪೋಷಕ ಸಂಘಟನೆ, ಹಿಂದೂ ರಾಷ್ಟ್ರೀಯವಾದಿ ಮೂಲ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಕೊಲೆಯನ್ನು ಸಂಭ್ರಮಿಸಿದರು.

ಕೃಪೆ: ದಿ ನ್ಯೂಯಾರ್ಕ್ ಟೈಮ್ಸ್ 

share
ಸುದೀಪ್ತೊ ಮೊಂಡಲ್
ಸುದೀಪ್ತೊ ಮೊಂಡಲ್
Next Story
X