ಸಾಹಸ ಕ್ರೀಡೆಗೆ ಎಸ್ಪಿ ರವಿ ಡಿ.ಚನ್ನಣ್ಣನವರ್ ಚಾಲನೆ
ಮೈಸೂರು, ಸೆ.25: ದಾರದ ಮೇಲೆ ಸಾಗುವ ಕ್ರೀಡೆ ನೋಡುಗರ ಮೈ ಜುಮ್ಮೆನ್ನಿಸಲಿದೆ. ದೂರದಿಂದ ನೋಡಿದರೆ ದಾರದಲ್ಲಿ ಬಾವಲಿ ಯಂತೆ ಗೋಚರಿಸುವ ಕ್ರೀಡಾಪಟುಗಳ ಈ ಸಾಹಸಕ್ರೀಡೆಯನ್ನು ದಸರಾ ಕ್ರೀಡಾ ಉಪಸಮಿತಿ ಆಯೋಜಿಸಿದೆ.
ದಸರಾ ಕ್ರೀಡಾ ಉಪಸಮಿತಿ ವತಿಯಿಂದ ಸಾಹಸ ಕ್ರೀಡಾಕೂಟವನ್ನು ಆಯೋಜಿಸಿದ್ದು, ಜಿಲ್ಲಾ ಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ಪಾಲಿಕೆ ಆಯುಕ್ತ ಜಿ. ಜಗದೀಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಸಾಹಸ ಕ್ರೀಡೆಗಳಲ್ಲಿ ಯುವಜನತೆ ಪಾಲ್ಗೊಳ್ಳಬೇಕು. ಯುವಕರು ಇಂಥಹ ಸಾಹಸ ಕ್ರೀಡೆಗಳಲ್ಲಿ ಮೈಚಳಿ ಬಿಟ್ಟು ಪಾಲ್ಗೊಳ್ಳುವಂತೆ ಹುರಿದುಂಬಿಸಬೇಕು ಎನ್ನುವ ಉದ್ದೇಶದಿಂದ ಸಾಹಸಕ್ರೀಡೆ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಸಾಹಸ ಕ್ರೀಡಾಕೂಟಗಳಲ್ಲಿ ಜಾರ್ಮಿಂಗ್ ಬಾಲ್, ಜಿಪ್ ಲೈನ್, ಮೊಬೈಲ್ ವಾಲ್, ಕೇಬಲ್ ಲ್ಯಾಡರ್ ಕ್ಲೇಮಿಂಗ್, ಜೂಮ್ ರಿಂಗ್, ಬ್ಯಾಲೆನ್ಸ್ ವಾಕ್ ಕ್ರೀಡೆಗಳ ಆಯೋಜನೆ ಮಾಡಲಾಗಿದ್ದು, ದಸರಾ ಕ್ರೀಡಾ ಉಪಸಮಿತಿಯ ಅಧ್ಯಕ್ಷ ಜಿ.ಸೋಮಶೇಖರ್ ಪಾಲ್ಗೊಂಡಿದ್ದಾರೆ. ನಗರದ ಲಲಿತ್ ಮಹಲ್ ಹೆಲಿಪ್ಯಾಡ್ ಬಳಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಪ್ರತೀ ಇವೆಂಟ್ ಗಳಿಗೂ ತಲಾ 50 ರೂ. ನಿಗದಿಪಡಿಸಲಾಗಿದೆ. ದಸರಾ ಕ್ರೀಡಾ ಕೂಟದ ಉಪಸಮಿತಿಯ ಉಪಾಧ್ಯಕ್ಷೆ ಶಾರದಾ ಸಂಪತ್ ಸಾಹಸಕ್ರೀಡೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಸರಾ ಕ್ರೀಡಾ ಉಪಸಮಿತಿ ವಿಶೇಷಾಧಿಕಾರಿ ಸತೀಶ್, ಸ್ಪೋರ್ಟ್ ಡಿಡಿ ಕೆ.ಸುರೇಶ್ ಇತರರು ಪಾಲ್ಗೊಂಡಿದ್ದರು.