Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅತಿಕಿರಿಯ ವಯಸ್ಸಿನಲ್ಲೇ ಅತ್ಯಧಿಕ ಆಸ್ತಿ...

ಅತಿಕಿರಿಯ ವಯಸ್ಸಿನಲ್ಲೇ ಅತ್ಯಧಿಕ ಆಸ್ತಿ ಗಳಿಸಿದ ಅಂಬಿಕಾ ಸುಬ್ರಮಣ್ಯನ್

ಈ ಯುವ ಮಹಿಳೆ ಈಗ ಕೋಟಿ ಕೋಟಿ ರೂ.ನ ಒಡತಿ!

ಮನು ಬಾಲಚಂದ್ರನ್ಮನು ಬಾಲಚಂದ್ರನ್6 Oct 2017 6:39 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅತಿಕಿರಿಯ ವಯಸ್ಸಿನಲ್ಲೇ ಅತ್ಯಧಿಕ ಆಸ್ತಿ ಗಳಿಸಿದ ಅಂಬಿಕಾ ಸುಬ್ರಮಣ್ಯನ್

ಎಂಯು ಸಿಗ್ಮಾ ಕಂಪೆನಿಯ ಡಾಟಾ ಅನಲಿಟಿಕ್ಸ್ ವಿಭಾಗದ ಮಾಜಿ ಸಿಇಒ ಆದ ಅಂಬಿಕಾ ಸುಬ್ರಮಣ್ಯನ್, ಶಾಂಘೈ ಮೂಲದ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿದ ಹುರುಣ್ ಇಂಡಿಯಾ ಶ್ರೀಮಂತರ ಪಟ್ಟಿ-2017ರ ಪ್ರಕಾರ ಇದೀಗ ಸ್ವಯಂ ಸಾಧನೆಯಿಂದ ಅತಿಹೆಚ್ಚು ಸಂಪತ್ತುಗಳಿಸಿರುವ ಎಂಟು ಮಂದಿ ಭಾರತೀಯ ಮಹಿಳೆಯರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂಡಿಯನ್ ಯೂನಿಕಾರ್ನ್ ಮುಖ್ಯಸ್ಥೆಯಾದ ಮೊತ್ತಮೊದಲ ಮಹಿಳೆಯ ಸಾಧನೆ ಶಿಖರಕ್ಕೆ ಮತ್ತೊಂದು ಗರಿ ಸೇರಿದೆ. ಇವರ ಸ್ಟಾರ್ಟ್ ಅಪ್ ಉದ್ಯಮದ ಆಸ್ತಿ ನೂರು ಕೋಟಿ ಡಾಲರ್ ದಾಟಿದೆ. ಎಂಯು ಸಿಗ್ಮಾ ಕಂಪೆನಿಯ ಡಾಟಾ ಅನಾಲಿಟಿಕ್ಸ್ ವಿಭಾಗದ ಮಾಜಿ ಸಿಇಒ ಆದ ಅಂಬಿಕಾ ಸುಬ್ರಮಣ್ಯನ್, ಶಾಂಘೈ ಮೂಲದ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿದ ಹುರುಣ್ ಇಂಡಿಯಾ ಶ್ರೀಮಂತರ ಪಟ್ಟಿ-2017ರ ಪ್ರಕಾರ ಇದೀಗ ಸ್ವಯಂ ಸಾಧನೆಯಿಂದ ಅತಿಹೆಚ್ಚು ಸಂಪತ್ತುಗಳಿಸಿರುವ ಎಂಟು ಮಂದಿ ಭಾರತೀಯ ಮಹಿಳೆಯರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂಬಿಕಾ ಸುಬ್ರಮಣ್ಯನ್‌ರ ನಿವ್ವಳ ಆಸ್ತಿ ಮೌಲ್ಯ 2,500 ಕೋಟಿ ರೂಪಾಯಿ ಆಗಿದ್ದು, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜೂಂದಾರ್ ಶಾ, ಸಾಫ್ಟ್‌ವೇರ್ ಉತ್ಪನ್ನಗಳ ತಯಾರಿಕಾ ಸಂಸ್ಥೆ ಝೊಹೊ ನಿರ್ದೇಶಕಿ ವೆಂಬುರಾಧಾ ಮತ್ತು ಶೀಲಾ ಫೋಮ್ ಅಧ್ಯಕ್ಷೆ ಶೀಲಾ ಗೌತಮ್ ಬಳಿಕ ನಾಲ್ಕನೆ ಸ್ಥಾನದಲ್ಲಿದ್ದಾರೆ. 1000 ಕೋಟಿ ರೂಪಾಯಿಗಿಂತ ಅಧಿಕ ಆಸ್ತಿ ಹೊಂದಿದ ಭಾರತೀಯ ಮಹಿಳೆಯರನ್ನು ಹುರುಣ್ ಪಟ್ಟಿಯಲ್ಲಿ ಸೇರಿಸಲಾಗಿದೆ. 42 ವರ್ಷದ ಅಂಬಿಕಾ ಸುಬ್ರಮಣ್ಯನ್ ಕಳೆದ ವರ್ಷ ವಿಚ್ಛೇದನದ ಬಳಿಕ ಎಂಯು ಸಿಗ್ಮಾದ ಶೇ. 24ರಷ್ಟು ಹಕ್ಕನ್ನು ತಮ್ಮ ಮಾಜಿ ಪತಿ ಹಾಗೂ ಕಂಪೆನಿಯ ಸಂಸ್ಥಾಪಕ ಅಧ್ಯಕ್ಷ ಧೀರಜ್ ರಾಜಾರಾಮ್ ಅವರಿಗೆ ಮಾರಾಟ ಮಾಡಿದ್ದರು. ರಾಜಾರಾಂ ಬಳಿಕ ಉದ್ಯೋಗಿಗಳು ಹೊಂದಿದ್ದ ಷೇರು ಆಯ್ಕೆಯ ಹಕ್ಕನ್ನು ಖರೀದಿಸಿ, 2004ರಲ್ಲಿ ತಾವೇ ಸ್ಥಾಪಿಸಿದ ಕಂಪೆನಿಯ ನಿಯಂತ್ರಕ ಷೇರುದಾರರಾಗಿ ರೂಪುಗೊಂಡಿದ್ದರು. ಎಂಯು ಸಿಗ್ಮಾ ಮೌಲ್ಯವನ್ನು 150 ಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ.

ಅಂಬಿಕಾ ಸುಬ್ರಮಣ್ಯನ್ ಮತ್ತು ರಾಜಾರಾಮ್ ಮೊದಲ ಬಾರಿಗೆ ಭೇಟಿಯಾದದ್ದು 1990ರ ದಶಕದಲ್ಲಿ ಚೆನ್ನೈ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಅಲ್ಲಿ ಇಬ್ಬರೂ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಲಿಯುತ್ತಿದ್ದರು. ಇಬ್ಬರೂ ಆ ಬಳಿಕ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಯನ್ನು ಮಿಚಿಗನ್‌ನ ವೇನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಪಡೆದರು.

ಕಳೆದ ವರ್ಷ ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸೇರಿದ್ದ ಅಂಬಿಕಾ ಸುಬ್ರಮಣ್ಯನ್, ಅಮೆರಿಕದ ಟೆಲಿಕಾಂ ಸಂಸ್ಥೆಯಾದ ಮೋಟರೋಲಾದಲ್ಲಿ 1998ರಲ್ಲಿ ವೃತ್ತಿಜೀವನ ಆರಂಭಿಸಿ, ಎಂಟು ವರ್ಷ ಕರ್ತವ್ಯ ನಿರ್ವಹಿಸಿದರು. ರಾಜಾರಾಂ ಅವರು ಬೂಝ್ ಅಲೆನ್ ಹ್ಯಾಲಿಲ್ಟನ್ ಮತ್ತು ಪಿಡಬ್ಲ್ಯೂಸಿಯಂಥ ಕನ್ಸಲ್ಟೆನ್ಸಿಗಳಲ್ಲಿ ಕೆಲಸ ಮಾಡಿದರು. ಬಳಿಕ ಇಲಿನೋಯಿಸ್‌ನಲ್ಲಿದ್ದ ತಮ್ಮ ಮನೆ ಮಾರಾಟ ಮಾಡಿ ಹಾಗೂ ಉಳಿತಾಯದ ಹಣವಾದ 2 ಲಕ್ಷ ಡಾಲರ್ ಹೂಡಿಕೆ ಮಾಡಿ ಎಂಯು ಸಿಗ್ಮಾ ಕಂಪೆನಿ ಆರಂಭಿಸಿದರು. 2007ರಲ್ಲಿ ಅಂಬಿಕಾ ಸುಬ್ರಮಣ್ಯನ್ ಕಂಪೆನಿ ಸೇರಿದರು.

‘ಯುವರ್ ಸ್ಟೋರಿ’ಗೆ 2013ರಲ್ಲಿ ಅವರು ವಿವರಿಸಿದಂತೆ, ಧೀರಜ್ ಎಂಯು ಸಿಗ್ಮಾ ಆರಂಭಿಸಿದಾಗ, ನಮಗೆ ಒಂದು ವರ್ಷದ ಮಗು ಇದ್ದ ಕಾರಣ ನಾನು ಸೇರಿರಲಿಲ್ಲ. ಜತೆಗೆ ಎಲ್ಲರೂ ಒಂದೇ ಕಡೆ ಇರುವುದು ನಮಗೆ ಇಷ್ಟವಿರಲಿಲ್ಲ. ನನಗೆ ಆಗ ಸ್ಥಿರ ಉದ್ಯೋಗ ಇತ್ತು. ಆದರೆ ಕೆಲವೇ ವರ್ಷಗಳಲ್ಲಿ, ಧೀರಜ್‌ಗೆ ದೊಡ್ಡ ವ್ಯವಹಾರ ಕುದುರಿತು. ಧೀರಜ್ ಹಾಗೂ ಸಹೋದ್ಯೋಗಿಗಳು ಮಾತನಾಡುತ್ತಾ, ಹೊಸ ಗ್ರಾಹಕರನ್ನು ನಿರ್ವಹಿಸುವ ಸಲುವಾಗಿ ಕಂಪೆನಿಗೆ ಸೇರಿಕೊಳ್ಳುವಂತೆ ಸಲಹೆ ಮಾಡಿದರು. ಎಂಯು ಸಿಗ್ಮಾದಲ್ಲಿ ನನ್ನ ಮೊದಲ ಕರ್ತವ್ಯ, ಚಿಕಾಗೋ ಮೂಲದ ಕಕ್ಷಿದಾರರೊಬ್ಬರನ್ನು ನಿರ್ವಹಿಸುವುದಾಗಿತ್ತು

 ಅಂಬಿಕಾ ಸುಬ್ರಮಣ್ಯನ್ 2007ರಲ್ಲಿ ಕಂಪೆನಿಯ ಅನುಶೋಧನೆ ವಿಭಾಗದ ನಿರ್ದೇಶಕರಾಗಿ ವೃತ್ತಿ ಆರಂಭಿಸಿದರು. 2010ರಲ್ಲಿ ಕಂಪೆನಿಯ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರಾಗಿ ಭಡ್ತಿ ಪಡೆದರು. 2012ರಲ್ಲಿ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅವರು, 2016ರ ಜನವರಿವರೆಗೂ ಅದೇ ಹುದ್ದೆಯಲ್ಲಿದ್ದರು. ಆ ಬಳಿಕ ಕಂಪೆನಿಯ ಸಿಇಒ ಆಗಿದ್ದಾರೆ.

ಭಾರತದಲ್ಲಿದ್ದ ವಿವಿಧ ಕೇಂದ್ರಗಳಿಂದ ಬಹುರಾಷ್ಟ್ರೀಯ ಕಾರ್ಪೊರೇಷನ್‌ಗಳಿಗೆ ಬೃಹತ್ ಡಾಟಾ ಅನಾಲಿಸ್ಟಿಕ್ಸ್ ಪೂರೈಸುವ ಮಾದರಿಯಿಂದಾಗಿ ಎಂಯು ಸಿಗ್ಮಾ ಕ್ಷಿಪ್ರ ಪ್ರಗತಿ ಸಾಧಿಸಿತು. ಇಂದು ಇಲ್ಲಿ 4,000 ಉದ್ಯೋಗಿಗಳಿದ್ದು, ಫ್ಯೂಚರ್ 500 ಕಂಪೆನಿಯ ಪಟ್ಟಿಯಲ್ಲಿ 140ನೆ ಸ್ಥಾನದಲ್ಲಿದೆ.

2012ರಲ್ಲಿ ಇದು 100 ದಶಲಕ್ಷ ಡಾಲರ್ ವಾರ್ಷಿಕ ಆದಾಯದ ಮಟ್ಟವನ್ನು ದಾಟಿ, ಮೊತ್ತಮೊದಲ ಭಾರತೀಯ ಲಾಭದಾಯಕ ಯುನಿಕಾರ್ನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2015-16ನೆ ಹಣಕಾಸು ವರ್ಷದಲ್ಲಿ, ಎಂಯು ಸಿಗ್ಮಾದ ಲಾಭ 462.9 ಕೋಟಿ ತಲುಪಿದ್ದು, ಹಿಂದಿನ ವರ್ಷಕ್ಕಿಂತ ಶೇ. 22ರಷ್ಟು ಹೆಚ್ಚು ಲಾಭ ಗಳಿಸಿತ್ತು. ಇದು ಏಳು ಸುತ್ತಿನ ನಿಧಿ ಕ್ರೋಡೀಕರಣದಲ್ಲಿ, 211 ದಶಲಕ್ಷ ಡಾಲರ್ ಸಂಪನ್ಮೂಲ ಸಂಗ್ರಹಿಸಿದ್ದು, ಸಿಕ್ಯೋಯಾ, ಜನರಲ್ ಅಟ್ಲಾಂಟಿಕ್ ಮತ್ತು ಮಾಸ್ಟರ್ ಕಾರ್ಡ್‌ನಂಥ ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಿದ್ದಾರೆ. ವಾಲ್‌ಮಾರ್ಟ್, ಮೈಕ್ರೊಸಾಫ್ಟ್ ಹಾಗೂ ಡೆಲ್‌ನಂಥ ದೈತ್ಯ ಕಂಪೆನಿಗಳು ಇದರ ಗ್ರಾಹಕವರ್ಗದಲ್ಲಿ ಸೇರಿವೆ.

ಆದಾಗ್ಯೂ 2016 ಅಷ್ಟೊಂದು ಆಶಾದಾಯಕವಾಗಿರಲಿಲ್ಲ.

ಆಂತರಿಕ ಕಚ್ಚಾಟ

ಕಳೆದ ವರ್ಷ ಅಂಬಿಕಾ ಸುಬ್ರಮಣ್ಯನ್ ಮತ್ತು ರಾಜಾರಾಂ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದಾಗ ಕಂಪೆನಿಯಲ್ಲಿ ಒಂದಷ್ಟು ತಲ್ಲಣಗಳು ಸಂಭವಿಸಿದವು. ದಂಪತಿ ನಡುವಿನ ಅಧಿಕಾರ ಸಂಘರ್ಷದ ಚರ್ಚೆಯ ನಡುವೆಯೇ ಹಿರಿಯ ಎಕ್ಸಿಕ್ಯೂಟಿವ್‌ಗಳು ಕಂಪೆನಿ ತೊರೆದರು. ಕಂಪೆನಿಯಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಗೌತಮ್ ಎಕೊಲ್ಲು ಕಳೆದ ಮಾರ್ಚ್‌ನಲ್ಲಿ ಕಂಪೆನಿ ತೊರೆದರು. ವಿತರಣೆ ಮುಖ್ಯಸ್ಥ ಸಾಯಂದೇವ ಬ್ಯಾನರ್ಜಿ ಆಗಸ್ಟ್‌ನಲ್ಲಿ ಕಂಪೆನಿಯನ್ನು ತ್ಯಜಿಸಿದರೆ, ಮಧ್ಯಮಹಂತದ ವಿತರಣಾ ವ್ಯವಸ್ಥಾಪಕರು ಕೂಡಾ ದೊಡ್ಡ ಸಂಖ್ಯೆಯಲ್ಲಿ ಹೊರಹೋದರು. ಅರಾಜಕ ಪರಿಸ್ಥಿತಿಯ ಪರಿಣಾಮದಿಂದ ವ್ಯವಹಾರ ನಷ್ಟವಾಯಿತು. 2016ರ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡ ವರ್ಷದಲ್ಲಿ ಎಂಯು ಸಿಗ್ಮಾ ಆದಾಯ 165 ದಶಲಕ್ಷ ಡಾಲರ್‌ಗೆ ಕುಸಿಯಿತು. 2015ರಲ್ಲಿ ಈ ಪ್ರಮಾಣ 184 ದಶಲಕ್ಷ ಡಾಲರ್ ಆಗಿತ್ತು. ಅಂಬಿಕಾ ಸುಬ್ರಮಣ್ಯನ್ ಅವರ ಷೇರು ಹಕ್ಕನ್ನು ರಾಜಾರಾಮ್ ಖರೀದಿಸಿದ ಬಳಿಕ ಕ್ಷೋಭೆ ಅಂತ್ಯ ಕಂಡಿತು.

‘‘ಹನ್ನೊಂದು ವರ್ಷದಲ್ಲಿ ನಾವು ಶ್ರೇಷ್ಠ ಕಂಪೆನಿ ಬೆಳೆಸಿದೆವು’’ ಎಂದು ಅಂಬಿಕಾ ಸುಬ್ರಮಣ್ಯನ್ ಆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ‘‘ವೈಯಕ್ತಿಕ ಪರಿಸ್ಥಿತಿಯಿಂದಾಗಿ ಕಂಪೆನಿಯ ವ್ಯವಸ್ಥಾಪನಾ ತಂಡದಿಂದ ಹೊರಬಂದು ಬೇರೆ ಏನನ್ನಾದರೂ ಮಾಡಬೇಕಾಗಿದೆ. ಇದಕ್ಕೆ ಪೈಪೋಟಿಯಾಗಿ ಮತ್ತೊಂದು ಕಂಪೆನಿ ಆರಂಭಿಸುತ್ತೇನೆ ಎಂಬ ವದಂತಿಗಳು ಸುಳ್ಳು. ಮಾರುಕಟ್ಟೆಯಲ್ಲಿ ಸಾಕಷ್ಟು ಆಸಕ್ತಿ ಇದ್ದು, ಎಂಯು ಸಿಗ್ಮಾದಂಥ ಭರವಸೆಯ ಹಾಗೂ ಲಾಭದಾಯಕ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಇಚ್ಛೆ ಇದೆ. ತನ್ನ ದೂರದೃಷ್ಟಿಯನ್ನು ಈಡೇರಿಸಿಕೊಳ್ಳುವ ಸಲುವಾಗಿ ನನ್ನ ಷೇರುಗಳನ್ನು ಖರೀದಿಸುವಲ್ಲಿ ಧೀರಜ್ ತೋರಿದ ಆಸಕ್ತಿಗೆ ಬೆಂಬಲ ನೀಡುವ ಮೂಲಕ ನಿಯಂತ್ರಕ ಷೇರು ಹಕ್ಕನ್ನು ಅವರು ಪಡೆದು ಕೊಳ್ಳಲು ನಾನು ಒಪ್ಪಿಕೊಂಡಿದ್ದೇನೆ’’ ಎಂದಿದ್ದಾರೆ.

ನಿರ್ಗಮನದ ಬಳಿಕ ಅಂಬಿಕಾ ಸುಬ್ರಮಣ್ಯನ್ ಸಾರ್ವಜನಿಕರ ಕಣ್ಣಿನಲ್ಲಿ ದೂರವೇ ಉಳಿದುಬಿಟ್ಟಿದ್ದರು. ಈ ಮಧ್ಯೆ ಎಂಯು ಸಿಗ್ಮಾ ಮತ್ತೆ ಸರಿಯಾದ ಹಳಿಗೆ ಬಂದಿದ್ದು, 2017ರಲ್ಲಿ 180 ದಶಲಕ್ಷ ಡಾಲರ್‌ಗಿಂತಲೂ ಅಧಿಕ ಆದಾಯ ಗಳಿಸಿದೆ.

ಕೃಪೆ: qz.com

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಮನು ಬಾಲಚಂದ್ರನ್
ಮನು ಬಾಲಚಂದ್ರನ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X